ಅಂಕಣಪ್ರಚಲಿತ

60 ವರ್ಷದ ಆಡಳಿತ ಅವಧಿಯಲ್ಲಿ ಶ್ರೀಗಳಿಗೆ ಗೌರವಿಸದ ಕಾಂಗ್ರೆಸ್ ಪ್ರಧಾನಿ ಮೋದಿ ಮೇಲೆ ಆರೋಪ ಮಾಡುತ್ತಿದೆ! ಶ್ರೀಗಳ ವಿಚಾರದಲ್ಲೂ ರಾಜಕೀಯಕ್ಕೆ ಇಳಿಯಿತು ಕಾಂಗ್ರೆಸ್

ತಮ್ಮ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೂ ಇಳಿಯುತ್ತದೆ ಎಂಬುದು ನಾವು ಹೊಸದಾಗಿ ನೋಡುತ್ತಿಲ್ಲ. ತಮಗೇನಾದರೂ ರಾಜಕೀಯಕ್ಕೆ ಲಾಭ ಆಗುತ್ತದೆ ಎಂದರೆ ಕಾಂಗ್ರೆಸ್ ಖಂಡಿತಾ ಅಲ್ಲಿ‌ ಹಾಜರಿರುತ್ತದೆ. ಯಾರನ್ನು ಬೇಕಾದರೂ ತುಳಿದು ತಮ್ಮ ತೀಟೆ ತೀರಿಸಿಕೊಳ್ಳುವ ಕಾಂಗ್ರೆಸ್ ಇದೀಗ ಶತಾಯುಷಿ ಶ್ರೀ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯ ವಿಚಾರದಲ್ಲೂ ರಾಜಕೀಯ ಮಾಡಲು ಆರಂಭಿಸಿದ್ದಾರೆ. ಶ್ರೀಗಳು ಬದುಕಿದ್ದಾಗ ಅವರಿಗೆ ಯಾವ ಗೌರವ ಕೂಡ ನೀಡದ ಕಾಂಗ್ರೆಸ್ ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಶ್ರೀಗಳಿಗೆ ಅವಮಾನ ಮಾಡಿದ್ದಾರೆ ಎನ್ನುತ್ತಿದೆ ಮತ್ತು ದೇಶದ ಜನರಿಗೆ ತಪ್ಪು ಮಾಹಿತಿ ನೀಡಿ , ಗೊಂದಲ ಸೃಷ್ಟಿಸುತ್ತಿದೆ. ಸಿದ್ದಗಂಗಾ ಮಠದ ಶ್ರೀಗಳು ಇಡೀ ದೇಶ ಮಾತ್ರವಲ್ಲದೆ ವಿದೇಶದಲ್ಲೂ ಹೆಸರುವಾಸಯಾಗಿದ್ದಾರೆ, ಆದರೆ ಅವರಿಗೆ ಮೋದಿ ಸರಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕಿತ್ತು, ಆದರೆ ಮೋದಿ ಹಾಗೆ ಮಾಡಲಿಲ್ಲ ಎನ್ನುವ ಕಾಂಗ್ರೆಸ್ ತನ್ನ. 60 ವರ್ಷದ ಆಡಳಿತದಲ್ಲಿ ಶ್ರೀಗಳಿಗೆ ಯಾವ ಗೌರವ ಸಲ್ಲಿಸಿದೆ ಎಂಬುದು ದೇಶದ ಜನರಿಗೆ ಗೊತ್ತಾಗಬೇಕಿದೆ. ಇದರಿಂದ‌ ಕಾಂಗ್ರೆಸ್‌ನ ನಾಟಕ ಕೂಡ ಬಯಲಾಗುತ್ತದೆ ಮತ್ತು ಮೋದಿಯವರನ್ನು ಪದೇ ಪದೇ ವಿರೋಧಿಸುವುದು ಕೂಡ ಕಡಿಮೆ‌ ಆಗಲಿದೆ.!

ಶ್ರೀಗಳನ್ನು ವಿಶೇಷವಾಗಿ ಗೌರವಿಸಿದ್ದೇ ಬಿಜೆಪಿ!

ಸಿದ್ದಗಂಗಾ ಮಠದ ಶ್ರೀಗಳ ಸೇವೆಗೆ ಯಾವ ಪ್ರಶಸ್ತಿ ನೀಡಿದರೂ ಅದು ಕಡಿಮೆಯೇ. ಆದರೆ ನಮ್ಮಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸುವುದು ಒಂದು ಕ್ರಮ. ಅದೇ ರೀತಿ ಶ್ರೀಗಳು ಇದೀಗ ಶಿವೈಕ್ಯರಾದ ನಂತರದಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧಿಗಳು ಮೋದಿ ವಿರುದ್ಧ ಬೊಬ್ಬಿಡಲು ಪ್ರಾರಂಭಿಸಿವೆ. ಮೋದಿ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುತ್ತಾರೆ ಎಂಬ ನಂಬಿಕೆ ಎಲ್ಲರಲ್ಲೂ ಇತ್ತು. ಆದರೆ ಹಾಗಾಗಲಿಲ್ಲ, ಭಾರತ ರತ್ನ ಪ್ರಶಸ್ತಿಗೆ ಅದಾಗಲೇ ಹೆಸರು ಆಯ್ಕೆ ಮಾಡಲಾಗಿತ್ತು. ನಾನಾಜಿ ದೇಶ್‌ಮುಖ್, ಭೂಪೇನ್ ಹಝಾರಿಕಾ, ಪ್ರಣಬ್ ಮುಖರ್ಜಿ ಇವರುಗಳಿಗೆ ಭಾರತ ರತ್ನ‌ ನೀಡುವುದಾಗಿ ನಿರ್ಧಾರ ಆಗಿತ್ತು. ಆದರೆ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ವಿರೋಧಿಗಳು ಒಂದೇ ಸಮನೆ ಮೋದಿ ವಿರುದ್ಧ ಟೀಕೆ ಮಾಡಲು ಆರಂಭಿಸಿದ್ದಾರೆ. ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕಿತ್ತು, ಆದರೆ ಮೋದಿ‌‌ ಸರಕಾರ ಶ್ರೀಗಳನ್ನು ಕಡೆಗಣಿಸಿದೆ ಎಂದು ಆರೋಪ ಹೊರಿಸಿ ಬಹಳ ಕೀಳಾಗಿ ಮಾತನಾಡಲು ಆರಂಭಿಸಿದರು.‌ ಪ್ರಶಸ್ತಿ ಯಾಕೆ ಪ್ರಧಾನ ಮಾಡಲಿಲ್ಲ ಎಂಬ ಸತ್ಯಾಂಶವನ್ನು ತಿಳಿಯದೆ, ಕಾನೂನಿನ ಪ್ರಕಾರ ಏನು ಮಾಡಬೇಕೆಂದು ಅರ್ಥ ಮಾಡಿಕೊಳ್ಳದೆ ಒಟ್ಟಾರೆಯಾಗಿ ಮಾತನಾಡುವ ಮೋದಿ ವಿರೋಧಿಗಳಿಗೆ ಇದೊಂದು ತಮ್ಮ ತೀಟೆ ತೀರಿಸಿಕೊಳ್ಳಲು ಇರುವ ಅವಕಾಶವಷ್ಟೆ.!

ಆದರೆ ನಿಜವಾಗಿಯೂ ಕಾಂಗ್ರೆಸ್‌ಗೆ ಈ ಪ್ರಶ್ನೆ‌ ಕೇಳುವ ನೈತಿಕತೆ ಇದೆಯೇ ? ಎಂಬುದನ್ನು ಸ್ವತಃ ಕಾಂಗ್ರೆಸಿಗರೇ ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಸ್ವಾತಂತ್ರ್ಯ ನಂತರದಲ್ಲಿ ೬೦ ವರ್ಷ ದೇಶವನ್ನಾಳಿದ ಕಾಂಗ್ರೆಸ್ ಶ್ರೀಗಳಿಗೆ ಯಾವ ಗೌರವ ಸಲ್ಲಿಸಿದೆ? ಶ್ರೀಗಳ ಮರಣದ ನಂತರ ಅವರಿಗೆ ಪ್ರಶಸ್ತಿ ನೀಡಬೇಕು, ಮೋದಿ ಶ್ರೀಗಳನ್ನು ಕಡೆಗಣಿಸಿದ್ದಾರೆ ಎನ್ನುತ್ತಾ ತಮ್ಮ ರಾಜಕೀಯ ಲಾಭ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ ಈ ಕಾಂಗ್ರೆಸಿಗರು. ಶ್ರೀಗಳು ಸಮಾಜ ಸೇವೆ ಎಂಬುದನ್ನು ಮೋದಿ ಆಡಳಿತಕ್ಕೆ ಬಂದ ನಂತರ ಮಾಡಿದವರಲ್ಲ, ತಮ್ಮ ಸಣ್ಣ ವಯಸ್ಸಿನಿಂದಲೇ ಮಠದ ಮೂಲಕ ಜನರಿಗಾಗಿ ಜೀವನ‌ ಮುಡಿಪಾಗಿಟ್ಟವರು. ಆದರೆ ಅವರ ಸೇವೆಗೆ ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ ಮತ್ತು ಶ್ರೀಗಳನ್ನು ವಿಶೇಷವಾಗಿ ಗೌರವಿಸಿದ್ದೇ ಬಿಜೆಪಿ ಸರಕಾರ. ಶ್ರೀಗಳಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದು ಬಿಜೆಪಿ, ಮೈಸೂರು ದಸರಾ ಉದ್ಘಾಟನೆಗೆ ಅವಕಾಶ ನೀಡಿದ್ದು ಬಿಜೆಪಿ ಸರಕಾರ, ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದು ಕೂಡ ಬಿಜೆಪಿಯೇ ಹೊರತು ಈಗ ವಿರೋಧಿಸುತ್ತಿರುವ ಕಾಂಗ್ರೆಸ್ ಅಲ್ಲ.!

ಕಾನೂನಿನ ಪ್ರಕಾರ ಪ್ರಶಸ್ತಿ ನೀಡಲು ಕೆಲವು ಅಡೆತಡೆ ಇರುವುದರಿಂದಲೇ ಮೋದಿ‌ ಸರಕಾರ ಶ್ರೀಗಳಿಗೆ ಈ ಬಾರಿ ಭಾರತ ರತ್ನ‌ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಸತ್ಯಾಂಶ ತಿಳಿಯದೆ ಕನ್ನಡಿಗರನ್ನು ಮೋದಿ ಸರಕಾರದ ವಿರುದ್ಧ ಎತ್ತಕಟ್ಟಲು ಪ್ರಯತ್ನಿಸುತ್ತಿದ್ದಾರೆ ಈ‌ ಕಾಂಗ್ರೆಸಿಗರು. ‌ ಶ್ರೀಗಳ ವಿಚಾರದಲ್ಲೂ ರಾಜಕೀಯ ಮಾಡುವ ಈ ಕಾಂಗ್ರೆಸ್ ನಾಯಕರಿಗೆ ಏನನ್ನಬೇಕೋ….ಛೇ!

 

Tags

Related Articles

FOR DAILY ALERTS
 
FOR DAILY ALERTS
 
Close