ಅಂಕಣದೇಶಪ್ರಚಲಿತರಾಜ್ಯ

ರಮ್ಯನಿಗೂ ಪಂಜಾಬ್ ನ್ಯಾಷನಲ್ ಬ್ಯಾಂಕಿನ ನೀರವ್ ಮೋದಿಗೂ ಇರುವ ಸಂಭಂದವೇನು ?!

ನೀರವ್ ಮೋದಿ ಮತ್ತು ಚೋಕ್ಸಿಯ ಹಗರಣ ದಿನೇ ದಿನೇ ಹೊಸ ಹೊಸ ತಿರುವುಗಳನ್ನು ತೆಗೆದುಕೊಂಡು ಸಾಗುತ್ತಿದೆ! ನೀರವ್ ಮೋದಿಯ ಕಚೇರಿಯಿಂದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ, ಅಕ್ರಮವಾದ ಲೆಕ್ಕ ಪತ್ರಗಳಿಂದ ಹಿಡಿದು, ಅಕ್ರಮವಾಗಿ ಹಣ ವರ್ಗಾವಣೆ ವಹಿವಾಟುಗಳೂ ಕೂಡ ಬಹಿರಂಗಗೊಳ್ಳುತ್ತಿದೆ! ಅದರಲ್ಲಿಯೂ, ದೊಡ್ಡ ಮೊತ್ತದ ಹಣಕಾಸು ವ್ಯವಹಾರಗಳನ್ನು ನಡೆಸಿರುವುದು ಕಾಂಗ್ರೆಸ್ ನ ಹಿರಿಯ ಪ್ರಭಾವೀ ಮುಖಂಡ ಅಭಿಷೇಕ್ ನ ಹೆಂಡತಿ, ಅನಿತಾ ಸಿಂಗ್ವಿ!

ಉಳಿದ ಕಾಂಗ್ರೆಸ್ ನಾಯಕರಂತೆ, ತನಗೂ ತನ್ನ ಕುಟುಂಬಕ್ಕೂ ನೀರವ್ ಮೋದಿ ಅಥವಾ ಅವರ ಗೀತಾಂಜಲಿ ವ್ಯವಹಾರಕ್ಕೆ ಸಂಬಂಧವೇ ಇಲ್ಲ ಎಂದು ಹೇಳಿರುಗ ಅಭಿಷೇಕ್ ಮನು ಸಿಂಗ್ವಿ, ಬಿಜೆಪಿ ಕೆಳಮಟ್ಟದ ರಾಜಕೀಯ ನಡೆಸುತ್ತಿದೆ ಎಂದು ಬೊಬ್ಬಿಡುತ್ತಿರುವುದಲ್ಲದೇ, ರಕ್ಷಣಾ ಸಚಿವೆಯಾದ ನಿರ್ಮಲಾ ಸೀತಾರಾಮನ್ ರವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಬೆದರಿಸಿರುವ ಅಭಿಷೇಕ್ ಮನು ಸಿಂಗ್ವಿ, ನಿರ್ಮಲಾ ಸೀತಾರಾಮನ್ ಮಿಥ್ಯಾರೋಪ ಮಾಡಿದ್ದಾರೆ ಎಂದು ಅರಚುತ್ತಿದ್ದಾರೆ ಅಷ್ಟೇ! ಆದರೆ, ಸಾಕ್ಷ್ಯಾಧಾರಗಳನ್ನು ಹಿಡಿದೇ ಆರೋಪಿಸಿರುವ ನಿರ್ಮಲಾ ಸೀತಾರಾಮನ್ ತನಿಖೆಯನ್ನು ಚುರುಕುಗೊಳಿಸಿರುವುದಲ್ಲದೇ, ಪ್ರಕರಣದ ಬುಡಕ್ಕೇ ಕೈ ಇಟ್ಟಿದ್ದಾರೆ!

ಅಭಿಷೇಕ್ ಮನು ಸಿಂಗ್ವಿ,ಇದ್ಯಾವ ಆಧಾರಗಳನ್ನೂ ಒಪ್ಪುವುದಕ್ಕೆ ಸಾಧ್ಯವೇ ಇಲ್ಲವೆಂದು ಹೇಳಿದ್ದಲ್ಕದೇ, ಸೀತಾರಾಮನ್ ರವರ ಹೇಳಿಕೆಗಳನ್ನು ಸರಿಯೆನ್ನುವುದಕ್ಕೆ ಯಾವ ದಾಖಲೆಯೂ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ! ಆದರೆ. . . .

ತನಿಖಾಧಿಕಾರಿಗಳ ಪ್ರಕಾರ, ಮೇ 20, 2014 ; ಆಗಸ್ಟ್ 21, 2014; ಮತ್ತು ಜನವರಿ 17, 2015 ರಂದು ನಡೆದ ದೊಡ್ಡ ಮೊತ್ತದ ವ್ಯವಹಾರದ ದಾಖಲೆಗಳನ್ನು ಮರುವಶಪಡಿಸಿಕೊಳ್ಳಲಾಗಿದೆ! ಅನಿತಾ ಸಿಂಗ್ವಿಯ ಪಾನ್ ಕಾರ್ಡ್ ನ ಆಧಾರದ ಮೇಲೆ, 1.5 ಕೋಟಿ ರೂ ಬೆಲೆಯುಳ್ಳ ಆಭರಣವನ್ನು ತೆಗೆದುಕೊಂಡಿದ್ದಾಗಿ ದಾಖಲೆಗಳಲ್ಲಿ ತಿಳಿಸಿದೆ! ಚೆಕ್ ಮುಖಾಂತರ ಹಣ ಪಾವತಿಸಲಾಗಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ!

ನೀರವ್ ಮೋದಿ ಮತ್ತು ಆತನ ಬಳಗ ನಿರ್ವಹಿಸುವ ಡೈರಿಯ ದಾಖಲೆಗಳನ್ನೂ ವಶಪಡಿಸಿಕೊಂಡಿದ್ದು, “Unaccounted Payment” ಫೈಲುಗಳನ್ನು ಬಹಿರಂಗ ಗೊಳಿಸಿ್ುವುದಲ್ಲದೇ, ಜ್ಯುವೆಲ್ಲರಿ ಮಾರಾಟದ ಅಥವಾ ಹಣಕಾಸು ವ್ಯವಹಾರದ ಮಾಹಿತಿಗಳನ್ನು ಒಳಗೊಂಡಿರುವ ಈ Unaccounted Payment ಗಳು ಅಕ್ರಮವಾಗಿ, 4.8 ಕೋಟಿ ರೂಗಳ ವ್ಯವಹಾರದ ದಾಖಲೆಗಳನ್ನು ಹೊಂದಿದೆ!

ಎಂಟು ನಿಮಿಷಗಳ ಉದ್ದದ ಮಾತುಕಥೆಯಲ್ಲಿ ಅಭಿಷೇಕ್ ಸಿಂಗ್ವಿ ಮಾತ್ರ ಬಹಳ ನಯವಾಗಿ ನುಣುಚಿಕೊಳ್ಳಲು ನೋಡಿದ್ದಾರೆ!

“ನನಗೆ ಆಕೆಯ ಆಭರಣಗಳ ಕೊಂಡುಕೊಳ್ಳುವಿಕೆಯ ಬಗ್ಗೆ ಗೊತ್ತಿಲ್ಲ! ಅದಲ್ಲದೇ, ಯಾರದೋ ಕಂಪ್ಯೂಟರಿನಲ್ಲಿ ಸಿಕ್ಕ ದಾಖಲೆಗಳೆಲ್ಲ ಸರಿ ಎಂಬುವುದಕ್ಕೆ ಮಾಹಿತಿಯೂ ಇಲ್ಲ ಮತ್ತು ನಾನದನ್ನು ಒಪ್ಪುವುದಿಲ್ಲ! ಇಂತಹ ವ್ಯವಹಾರ ನಡೆದಿದೆ ಎಂಬುದನ್ನೇ ನಾನು ಮೊದಲ ಬಾರಿ ಕೇಳುತ್ತಿರುವುದು ಮತ್ತು, ನನಗೆ ಅದರ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಈ ರೀತಿಯ ವ್ಯಾಪಾರ ವಹಿವಾಟು ನಡೆದಿದೆ ಎಂಬುದನ್ನು ನಾನು ಒಪ್ಪುವುದಿಲ್ಲ!” ಎಂದು ಹೇಳಿಕೆ ನೀಡಿರುವ ಸಿಂಗ್ವಿಗೆ ತನ್ನ ಹೆಂಡತಿಯ ಖರ್ಚು ವೆಚ್ಚದ ಬಗ್ಗೆ ನಿಗಾ ವಹಿಸಲಾಗದಷ್ಡು ಬ್ಯುಸಿಯೇ?! ಅಥವಾ ಹೆಂಡತಿಯ ಮೇಲಿನ ನಂಬಿಕೆಯೇ?!

ಅದಕ್ಕೇ, ನಿರ್ಮಲಾ ಸೀತಾರಾಮನ್ ಪ್ರಕರಣದ ಹಿಂದೆ ಬಿದ್ದಿದ್ದಾರೆ! ಈ ಹಿಂದೆಯೇ ಸೀತಾರಾಮನ್, ಕಾಂಗಿಗಳ ಮೈ ಚಳಿ ಬಿಡಿಸಿದ್ದರು!

“Five Star Diomond International Pvt Ltd ಎನ್ನುವುದು ನೀರವ್ ಮೋದಿಯ ಕಂಪೆನಿಗಳಲ್ಲೊಂದು! ಕಂಪೆನಿಯನ್ನು, 2002 ರಿಂದಲೂ ಶೇರು ಪಾಲುದಾರರಾಗಿದ್ದ ಹಿರಿಯ ಕಾಂಗ್ರೆಸ್ ಮುಖಂಡರಾದ ಅಭಿಷೇಕ್ ಮನು ಸಿಂಗ್ವಿಯ ಹೆಂಡತಿಯಾದ ಅನಿತಾ ಸಿಂಗ್ವಿಯಿಂದ ಮತ್ತು ಅದ್ವೈತ್ ಹೋಲ್ಡಿಂಗ್ಸ್ ನಿಂದ ಲೀಸ್ ಗೆ ತೆಗೆದುಕೊಳ್ಳಲಾಗಿತ್ತು!

ಅದ್ವೈತ್ ಹೋಲ್ಡಿಂ‌ಗ್ಸ್ ಕಂಪೆನಿಯ ಪ್ರಾಪರ್ಟಿಗಳನ್ನು, ಅದರ ಡೈರೆಕ್ಟರ್ ಗಳಾದ ಅನಿತಾ ಸಿಂಗ್ವಿ ಮತ್ತು ಮಗ ಅವಿಷ್ಕಾರ್ ಸಿಂಗ್ವಿಯವರು ಮುಂಬೈನಲ್ಲಿ ನೀರವ್ ಮೋದಿಗೆ ಲೀಸ್ ಗೆ ಕಟ್ಟಡವನ್ನು ಬಿಟ್ಟುಕೊಟ್ಟಿದ್ದರು! ಎರಡೂ ಕಂಪೆನಿಗಳು ಲೋನ್ ಟ್ರಾನ್ಸಾಕ್ಷನ್ನುಗಳನ್ನು ನಡೆಸಿವೆ! ಅವೆರಡು ಕಂಪೆನಿಗಳ ಮಧ್ಯದ ವ್ಯವಹಾರ ಮತ್ತು ಅವ್ಯವಹಾರಗಳನ್ನು ಸರಿಯಾಗಿ ನೋಡದೇ, ಕಾಂಗ್ರೆಸ್ ಪಕ್ಷ ಸುಲಭವಾಗಿ ಬಿಜೆಪಿಯ ಸರಕಾರಕ್ಕೆ ಬೆಟ್ಟು ತೋರಿಸಿದೆ! ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ!

ಆ ಕಂಪೆನಿಗಳ ಪಾಲುದಾರರು, ಲಾಭವನ್ನು ಹಂಚಿಕೊಳ್ಳುವವರು, ಕಟ್ಟಟದ ಮಾಲೀಕರು ಮತ್ತು ಇಡೀ ಹಗರಣ ನೇರವಾಗಿ ಕಾಂಗ್ರೆಸ್ಸಿಗರಿಗೇ ತಾಗುತ್ತದೆಯಾದರೂ ಸಹ, ಕೇವಲ ಹತರಣಗಳನ್ನು ಪ್ರಶ್ನೆ ಮಾಡಿತು ಬಿಜೆಪಿ ಸರಕಾರ ಎನ್ನುವ ಕಾರಣಕ್ಕೆ, ಮೋದಿಯೆಡೆಗೆ ಬೆಟ್ಟು ಮಾಡಿ ತೋರಿಸಿ ನುಣುಚಿಕೊಳ್ಳಲು ತಯಾರಾಗುತ್ತಿದೆ ಕಾಂಗ್ರೆಸ್ ಎಂಬ ಹಗರಣಗಳ ಪಕ್ಷ!! ”

ಅದಲ್ಲದೇ, “ಬಿಜೆಪಿ ಈಗ ಯಾವ ಮಟ್ಟದ ರಾಜಕಾರಣಕ್ಕೂ ಇಳಿಯಬಲ್ಲದು! ನನಗಾಗಲಿ, ನನ್ನ ಹೆಂಡತಿಗಾಗಲಿ, ಅಥವಾ ನನ್ನ ಮಗನಿಗಾಗಲಿ, ಗೀತಾಂಜಲಿ ಜ್ಯುವೆಲ್ಲರಿಗಳಿಗೂ ಮತ್ತು ನೀರವ್ ಮೋದಿಗೂ ಯಾವುದೇ ಸಂಬಂಧವಿಲ್ಲ. ನಮ್ಮ ಕಂಪೆನಿಯ ಆಡಳಿತಕ್ಕೊಳಲ್ಪಟ್ಟ ಪ್ರಾಪರ್ಟಿಯಲ್ಲಿ ಗೀತಾಂಜಲಿ ತಲೆ ಎತ್ತಿತ್ತಷ್ಟೆ! ನಮಗೆ ಅವರಿಗೆ ಇದ್ದದ್ದು, ಕೇವಲ ಕಮರ್ಷಿಯಲ್ ವ್ಯವಹಾರ ಮತ್ತು ಪರಿಚಯ! ಡಿಸೆಂಬರ್ 2017 ರಲ್ಲಿಯೇ, ನಮ್ಮ ವೃತ್ತಿಪರ ಒಪ್ಪಂದಗಳೂ ಕೊನೆಯಾಗಿವೆ! ಅವರಿಗೂ, ನಮ್ಮ ಕುಟುಂಬಕ್ಕೂ ಯಾವ ಸಂಬಂಧವೂ ಇಲ್ಲ ಮತ್ತು ನಾವೇನೂ ಮಾಡುವುದಕ್ಕಿಲ್ಲ!”

“ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನಮ್ಮ ಮೇಲೆ ಇಲ್ಕ ಸಲ್ಲದ ಅಪವಾದ ಹೊರಿಸಿ, ಅಪಪ್ರಚಾರ ಮಾಡುತ್ತಿರುವುದರಿಂದ,. ನಾನು ಖಂಡಿತವಾಗಿಯೂ ಕಾನೂನಿನ ಮೂಲಕವೇ ಉತ್ತರಿಸುತ್ತೇನೆ” ಎಂದ ರೀತಿಗೆ ಬಿಜೆಪಿ ಬಿದ್ದು ಬಿದ್ದು ನಕ್ಕಿದೆ ಬಿಡಿ! ಯಾಕೆಂದರೆ, ಅವರ ವೃತ್ತಿಪರ ಸಂಬಂಧ ಕಳೆದ ವರ್ಷದ ಕೊನೆಯವರೆಗೂ ಇತ್ತು ಎಂಬುದನ್ನು ಅವರೇ ಹೇಳಿದ್ದಾರೆ!

ಅಲ್ಲದೇ, ಉಳಿದಂತೆ ಇನ್ನೇನಿಲ್ಲ! ಈ ಕೆಳಗಿನ ಟ್ವೀಟ್ ನೋಡಿ ಸಾಕು!

– ಪೃಥು ಅಗ್ನಿಹೋತ್ರಿ

Tags

Related Articles

FOR DAILY ALERTS
 
FOR DAILY ALERTS
 
Close