ಪ್ರಚಲಿತ

ಶಾಸಕರ ಎದುರೇ ಹೊಡೆದಾಡಿಕೊಂಡ ಕರಾವಳಿ ಕಾಂಗ್ರೆಸ್ ಕಾರ್ಯಕರ್ತರು! ಯುವ ಕಾಂಗ್ರೆಸ್ ಅಧ್ಯಕ್ಷನ ಗುಂಡಾಗಿರಿಗೆ ತತ್ತರಿಸಿದ ಕಾಂಗ್ರೆಸ್ ಶಾಸಕ!

ಕಾಂಗ್ರೆಸ್ ಎಂದರೆ ನಾಲ್ಕು ಜನರಿಗೆ ಒಳಿತು ಮಾಡುವ ಬದಲು ಹತ್ತು ಜನರಿಗೆ ಕೇಡು ಉಂಟು ಮಾಡಲೆಂದೇ ಹುಟ್ಟಿಕೊಂಡ ಪಕ್ಷ. ಯಾಚ ಮಟ್ಟಕ್ಕೆ ಎಂದರೆ ಸಾರ್ವಜನಿಕರ ಮೇಲೆ ದಬ್ಬಾಳಿಕೆ ನಡೆಸಿದ್ದಾಯಿತು, ಇದೀಗ ಸ್ವತಃ ತಮ್ಮ ಪಕ್ಷದ ಕಾರ್ಯಕರ್ತರಿಗೆ ಹಲ್ಲೆ ನಡೆಸುವಷ್ಟರ ಮಟ್ಟಿಗೆ ಬೆಳೆದಿದ್ದಾರೆ ಎಂದರೆ ಜನರು ಕಾಂಗ್ರೆಸ್ ಮೇಲೆ ಇನ್ಯಾವ ನಂಬಿಕೆ ಇಟ್ಟುಕೊಳ್ಳಬೇಕು. ಕೈಯಲ್ಲಿ ಪವರ್ ಇದೆ ಎಂಬ ಮಾತ್ರಕ್ಕೆ ಗೂಂಡಾಗಿರಿ ನಡೆಸಿದರೆ ಸಾರ್ವಜನಿಕವಾಗಿ ಹೊಡೆತ ಬೀಳುವುದು ಗ್ಯಾರಂಟಿ. ಈ ಘಟನೆ ಎಲ್ಲೋ ನಡೆದ ವಿಚಾರವಲ್ಲ, ರಾಜ್ಯದ ಕರಾವಳಿ ಭಾಗವಾದ ಮಂಗಳೂರಿನಲ್ಲಿ. ಕರಾವಳಿ ಕಾಂಗ್ರೆಸ್‌ನ ಭದ್ರಕೋಟೆ ಎಂದು ಬೀಗುತ್ತಾ ಹೋದಂತೆ ಇಡೀ ಕರಾವಳಿಯನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡು ಸದ್ಯ ಕ್ಷೇತ್ರದಲ್ಲಿ ಆಡಳಿತ ಆರಂಭಿಸಿದೆ. ಆದರೆ ಈ ಕಾಂಗ್ರೆಸ್ ಮುಖಂಡರ ನೆತ್ತಿಗೆ ಹತ್ತಿಕೊಂಡಿರುವ ಮದ ಇನ್ನೂ ಇಳಿಯುವಂತೆ ಕಾಣುತ್ತಿಲ್ಲ, ಏಕೆಂದರೆ ಮಂಗಳೂರಿನಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷನ ಗೂಂಡಾಗಿರಿ ಮತ್ತೊಮ್ಮೆ ಬಯಲಾಗಿದ್ದು, ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಇದೀಗ ಅಧ್ಯಕ್ಷನಿಗೆ ಛೀಮಾರಿ ಹಾಕಿದ್ದಾರೆ..!

Image result for mithun rai
ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಅಧ್ಯಕ್ಷನಾದ ಮಿಥುನ್ ರೈ ಅವರು ತನ್ನ ಗೂಂಡಾಗಿರಿಯಿಂದಲೇ ಜಿಲ್ಲೆಯಲ್ಲಿ ಹೆಸರು ಗಳಿಸಿದವರು. ತನ್ನ ಜೊತೆ ಪುಂಡು ಯುವಕರ ಗುಂಪು ಜೊತೆಗಿದೆ, ಕಾಂಗ್ರೆಸ್‌ನ ಕೆಲ ದೊಡ್ಡ ದೊಡ್ಡ ಕೈಗಳ ಬೆಂಬಲ ಇದೆ ಎಂಬ ಕಾರಣಕ್ಕೆ ರಂಪಾಟ ನಡೆಸುವ ಈತನ ವಿರುದ್ಧ ಸ್ವತಃ ಕಾಂಗ್ರೆಸ್ ಕೆಲ ಮುಖಂಡರೇ ತಿರುಗಿಬಿದ್ದಿದ್ದಾರೆ. ಯಾಕೆಂದರೆ ಕಾಂಗ್ರೆಸ್ ಮುಖಂಡ , ಐವನ್ ಡಿಸೋಜ ಅವರ ಬೆಂಬಲಿಗರ ಮೇಲೆ ಇಂದು ಮಿಥುನ್ ರೈ ಅವರ ಬೆಂಬಲಿಗರು ಹಲ್ಲೆ ನಡೆಸಿ ಸಾರ್ವಜನಿಕವಾಗಿ ಗೂಂಡಾಗಿರಿ ಮೆರೆದಿದ್ದಾರೆ.!

ಕ್ವಿಟ್ ಇಂಡಿಯಾ ಚಳುವಳಿ ಕಾರ್ಯಕ್ರಮದಲ್ಲಿ ನಡೆಯಿತು ಮಾರಾಮಾರಿ..!

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕ್ವಿಟ್ ಇಂಡಿಯಾ ಚಳುವಳಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಿದ ಈ ಕಾರ್ಯಕ್ರಮ ನಡೆಯುತ್ತಿದ್ದಂತೆ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮತ್ತು ಐವಾನ್ ಡಿಸೋಜ ಅವರ ಬೆಂಬಲಿಗರಾದ ಪುನಿತ್ ಶೆಟ್ಟಿ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಹಿಂದೆ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಟಿಕೆಟ್ ವಿಚಾರದಲ್ಲೂ ಈ ಇಬ್ಬರ ನಡುವೆ ಭಾರೀ ಪೈಪೋಟಿ ಉಂಟಾಗಿ ಕೊನೆಗೆ ಇಬ್ಬರಿಗೂ ಟಿಕೆಟ್ ಕೈತಪ್ಪಿತ್ತು. ಆದ್ದರಿಂದಲೇ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ತಲೆದೂರುತ್ತಲೇ ಇತ್ತು. ಇದೀಗ ನಡೆದ ಕಾರ್ಯಕ್ರಮದಲ್ಲಿ ಇಬ್ಬರ ನಡುವೆಯೂ ಪರಸ್ಪರ ವಾಗ್ವಾದ ನಡೆದಿದ್ದು ಪರಿಸ್ಥಿತಿ ಅತೀರೇಕಕ್ಕೆ ಹೋಗಿದೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರ ಎದುರೇ ಹೊಡೆದಾಡಿಕೊಂಡಿದ್ದಾರೆ.

ಮಿಥುನ್ ರೈ ತನ್ನ ಕೈಗೆ ಅಧಿಕಾರ ಸಿಗುವುದಕ್ಕೂ ಮೊದಲು ವಿದ್ಯಾರ್ಥಿ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಅಲ್ಲೂ ಕೂಡ ಗೂಂಡಾಗಿರಿಯನ್ನೇ ನಡೆಸುತ್ತಿದ್ದವರು. ಇದನ್ನೇ ಮುಂದುವರಿಸಿಕೊಂಡು ಬಂದಿದ್ದ ಈತನಿಗೆ ಕಾಂಗ್ರೆಸ್‌ನಲ್ಲಿ ಪಟ್ಟ ಸಿಕ್ಕಿತ್ತು. ಅಧಿಕಾರವೂ ಕೈಯಲ್ಲಿ, ದೊಡ್ಡ ದೊಡ್ಡ ನಾಯಕರ ಬೆಂಬಲವೂ ಇತ್ತು, ಆದ್ದರಿಂದಲೇ ತನ್ನನ್ನು ಯಾರೂ ಏನೂ ಮಾಡಲಾಗುವುದಿಲ್ಲ ಎಂಬ ಅಹಂಕಾರದಿಂದ ಮೆರೆಯುತ್ತಿದ್ದ ಈತ ಇದೀಗ ಸ್ವಪಕ್ಷದ ಕಾರ್ಯಕರ್ತರಿಗೆ ಹಲ್ಲೆ ನಡೆಸುವಷ್ಟು ಬೆಳೆದಿದ್ದಾರೆ ಎಂದರೆ ಸಾಮಾನ್ಯ ಜನರು ಇವರಿಂದ ಶಾಂತಿಯಿಂದ ಇರಲು ಹೇಗೆ ಸಾಧ್ಯ..?

–ಸಾಮ್ರಾಟ್

Tags

Related Articles

FOR DAILY ALERTS
 
FOR DAILY ALERTS
 
Close