ಅಂಕಣಪ್ರಚಲಿತ

ಕಾಂಗ್ರೆಸ್‌ನ ದೇಶಪ್ರೇಮದ ಅಸಲಿಯತ್ತು ಬಯಲು! ದೇಶದ ಬಾವುಟ ಯಾವುದೆಂದೇ ಗೊತ್ತಿಲ್ಲದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?

ನಿಜಕ್ಕೂ ಕಾಂಗ್ರೆಸ್ ಪಕ್ಷ ಭಾರತದ ಹಿತದೃಷ್ಟಿಯಿಂದ ಮಾರಕವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ಈ ದೇಶಕ್ಕೆ ಯಾವ ರೀತಿ ದ್ರೋಹ ಬಗೆದಿದೆ ಎಂಬುದು ಇನ್ನೂ ನಮ್ಮ ಕಣ್ಣ ಮುಂದೆಯೇ ಇದೆ, ಇದೀಗ ಮತ್ತೆ ಕಾಂಗ್ರೆಸ್ ತನ್ನ ಅಸಲಿಯತ್ತು ಏನೆಂಬುದನ್ನು ಪ್ರದರ್ಶಿಸಿದೆ. ಕಾಂಗ್ರೆಸ್‌ ಪಕ್ಷ ಕೇವಲ ಒಂದು ಕುಟುಂಬದ ಸದಸ್ಯರ ಕೈಯಲ್ಲಿ ಇದೆ ಎಂಬುದು ಎಷ್ಟು ಸತ್ಯವೋ, ಅದೇ ರೀತಿ ಆ ಕುಟುಂಬಕ್ಕೂ ಭಾರತಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಯಾಕೆಂದರೆ ತಾವು ಗಾಂಧಿ ಪರಿವಾರ ಎಂದು ಹೇಳಿಕೊಂಡು ಭಾರತವನ್ನು ಲೂಟಿ ಮಾಡಿದ ಕಾಂಗ್ರೆಸ್ ತಮ್ಮ ವಂಶವನ್ನೇ ಉದ್ಧಾರ ಮಾಡುತ್ತಾ ಬಂದಿದ್ದಾರೆ ಹೊರತು ದೇಶವನ್ನಲ್ಲ. ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಕೂಡ ಇದಕ್ಕೆ ಹೊರತಾಗಿಲ್ಲ. ‌ಯಾಕೆಂದರೆ ಯಾವುದೇ ಅಧಿಕಾರ ಇಲ್ಲದೇ ಇದ್ದರೂ ಕೂಡ ರಾಬರ್ಟ್ ವಾದ್ರಾ ಕೋಟ್ಯಾಂತರ ಆಸ್ತಿಯ ಒಡೆಯ, ಅದು ಕೂಡಾ ಅಕ್ರಮವಾಗಿ ಸಂಪಾದಿಸಿದ ಆಸ್ತಿಗಳು ಎಂಬುದು ಸ್ಪಷ್ಟ. ಅಷ್ಟೇ ಅಲ್ಲದೆ ಅನೇಕ ಕೇಸ್, ವಿಚಾರಣೆಗಳು ನಡೆಯುತ್ತಿರುವ ಹೊತ್ತಲ್ಲೇ ಇದೀಗ ರಾಬರ್ಟ್ ವಾದ್ರಾ ಮತ್ತೊಮ್ಮೆ ಸುದ್ಧಿಯಾಗಿದ್ದಾರೆ. ಅದೇನೆಂದರೆ ನಿನ್ನೆ ನಡೆದ ೬ನೇ ಸುತ್ತಿನ ಚುನಾವಣೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಬರ್ಟ್ ವಾದ್ರಾ ಕೂಡ ಮತದಾನ ಮಾಡಿದ್ದು ಇದನ್ನು ಫೋಟೋ ಸಮೇತ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಆದರೆ ಎಡವಟ್ಟು ಆಗಿದ್ದು ಇಲ್ಲೇ, ಹೌದು ಪ್ರತಿಯೊಬ್ಬರು ಕೂಡ ಫೋಟೋ ಹಾಕುತ್ತಾರೆ ಎಂಬ ಕಾರಣಕ್ಕೆ ತಾನೂ ಫೋಟೋ ಹಂಚಿಕೊಂಡ ರಾಬರ್ಟ್ ವಾದ್ರಾ ಇದೀಗ ವಿವಾದಕ್ಕೆ ಕಾರಣರಾಗಿದ್ದಾರೆ.!

ರಾಬರ್ಟ್ ವಾದ್ರಾ ಅವರು ಹಂಚಿಕೊಂಡ ಫೋಟೋದ ಮೇಲೆ ‘ನಮ್ಮ‌ ಹಕ್ಕು ನಮ್ಮ ಶಕ್ತಿ, ಪ್ರತಿಯೊಬ್ಬರು ಕೂಡ ಮತ ಚಲಾಯಿಸಿ, ಪ್ರಜಾಪ್ರಭುತ್ವ ಉಳಿವಿಗಾಗಿ ಭಾರತದ ಸುರಕ್ಷತೆಗಾಗಿ ಮತದಾನ ಮಾಡಿ’ ಎಂದು ಶೀರ್ಷಿಕೆ ಬರೆದು ಹಂಚಿಕೊಂಡಿದ್ದರು. ಆದರೆ ತಾನು ಬರೆದ ಶೀರ್ಷಿಕೆಯ ಮುಂದೆ ಭಾರತದ ಬಾವುಟ ಹಾಕುವ ಬದಲು ಪೆರಾಗ್ವೆ ದೇಶದ ಬಾವುಟ ಹಾಕಿಕೊಂಡಿದ್ದು ಎಡವಟ್ಟು ಮಾಡಿಕೊಂಡಿದ್ದಾರೆ. ಅದಾಗಲೇ ರಾಬರ್ಟ್ ವಾದ್ರಾ ಅವರ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು ವಾದ್ರಾ ಕೂಡಲೇ ಟ್ವೀಟ್ ಡಿಲಿಟ್ ಮಾಡಿದ್ದಾರೆ. ಈ ಬಗ್ಗೆ ಭಾರೀ ವಿವಾದ ಹುಟ್ಟು ಹಾಕಿದ ವಾದ್ರಾ, ಇದೀಗ ಯಾವ ಪ್ರಶ್ನೆಗೂ ಉತ್ತರಿಸದೆ ತಬ್ಬಿಬ್ಬಾಗಿದ್ದಾರೆ. ಯಾಕೆಂದರೆ ಭಾರತದಲ್ಲೇ ಇದ್ದರು ಕೂಡ ದೇಶದ ಬಾವುಟ ಯಾವುದು ಎಂಬುದು ತಿಳಿಯದ ಇಂತಹ ಕುಟುಂಬದವರಿಂದ ದೇಶಕ್ಕೆ ಒಳಿತಾಗುತ್ತದೆ ಎಂಬುದನ್ನು ನಿರೀಕ್ಷಿಸಲು ಹೇಗೆ ಸಾಧ್ಯ?

ಅಷ್ಟಕ್ಕೂ ಕಾಂಗ್ರೆಸಿಗರು ಎಡವಟ್ಟು ಮಾಡುತ್ತಿರುವುದು ಇದೇ ಮೊದಲಲ್ಲ.‌ ಪದೇ ಪದೇ ಏನಾದರೊಂದು ವಿವಾದ ಹುಟ್ಟು ಹಾಕುವ ಕಾಂಗ್ರೆಸಿಗರು ಅನೇಕ ದೇಶದ್ರೋಹದ ಆರೋಪದಲ್ಲೂ ಭಾಗಿಯಾಗಿದ್ದಾರೆ. ಅದರಲ್ಲೂ ಒಂದೆಡೆ ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ದೇಶಪ್ರೇಮವೇ ಇಲ್ಲ, ಎಲ್ಲಾ ಚುನಾವಣೆಗಾಗಿ ನಾಟಕ ಎಂದು ಹೇಳಿಕೊಂಡು ತಿರುಗುತ್ತಿದ್ದು ಜನರ ಎದುರು ಸಿಂಪತಿ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ತನ್ನ ಗಂಡ ಮಾಡಿದ ಇಂತಹ ಕೀಳು ಮಟ್ಟದ ಕೆಲಸದ ಬಗ್ಗೆ ಏನೂ ಮಾತನಾಡದೇ ಇರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.!

ಅದೇನೇ ಇರಲಿ ಕಾಂಗ್ರೆಸ್ ಅಕ್ಷರಶಃ ದೇಶಕ್ಕೆ ಮಾರಕ ಎಂಬುದು ಸ್ಪಷ್ಟ. ಯಾಕೆಂದರೆ ತಮಗೆ ಬೇಕಾದ ರೀತಿಯಲ್ಲಿ ದೇಶವನ್ನು ಬಳಸಿಕೊಂಡ‌ ಕಾಂಗ್ರೆಸಿಗರ ಯಾವ ಆಟವೂ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ನಡೆಯುತ್ತಿಲ್ಲ. ಅದೇ ಕಾರಣಕ್ಕೆ ಮೋದಿಯವರ ಪ್ರತಿಯೊಂದು ನಿರ್ಧಾರವನ್ನು ಕೂಡ ಕಾಂಗ್ರೆಸ್ ವಿರೋಧಿಸುತ್ತಿದೆ. ಆದರೆ ಇದೀಗ ಸ್ವತಃ ರಾಬರ್ಟ್ ವಾದ್ರಾ ಅವರೇ ವಿವಾದಕ್ಕೆ ಕಾರಣರಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close