ಪ್ರಚಲಿತ

ಮತ್ತೆ ಕಾಂಗ್ರೆಸ್ಸಿಗೆ ಛಾಟಿ ಬೀಸಿದ ನಮೋ! ರೈತರಿಗೆ ಧನ್ಯವಾದಗಳನ್ನು ಅರ್ಪಿಸಿದ ಮೋದಿ “ನಿಮಗೆ ತಲೆ ಬಾಗುತ್ತೇನೆ” ಎಂದಿದ್ಯಾಕೆ?

ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದಾಗಿಸಿದಾನಿಂದ ರೈತರು ದೇಶದ ಬೆನ್ನೆಲುಬು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಕೂಡಾ ನೀಡುತ್ತಾ ಬರುತ್ತಿದ್ದಾರೆ!! ನರೇಂದ್ರ ಮೋದಿ ತಾನು ಭಾರತದ ಪ್ರಧಾನ ಪಟ್ಟ ಅಲಂಕರಿಸುತ್ತಲೇ ತಾನು ಪ್ರಧಾನಮಂತ್ರಿ ಅಲ್ಲ , ಭಾರತೀಯರ ಪ್ರಧಾನ ಸೇವಕ ಎಂದು ಇಡೀ ದೇಶದ ಜನರನ್ನು ನಿಬ್ಬೆರಗಾಗುವಂತೆ ಮಾಡಿದ್ದರು. ಅದೇ ರೀತಿ ನಡೆದುಕೊಂಡು ಬಂದ ಮೋದಿ ಭಾರತದ ವಿಕಾಸಕ್ಕೆ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಾ ಬಂದರು. ರೈತರ ಪಾಲಿಗೆ ವಿಶೇಷ ಯೋಜನೆಗಳನ್ನು ಕೂಡಾ ಕಾರ್ಯರೂಪಕ್ಕೆ ತಂದರು… ರೈತರು ದೇಶದ ಬನ್ನೆಲುಬು, ಅವರಿಂದಲೇ ನಾವು ಎಂಬುವುದನ್ನು ಈಗಾಗಲೇ ನಿರೂಪಿಸಿದ್ದರು!! ಆದರೆ ಕಾಂಗ್ರೆಸ್ ಮಾತ್ರ ತನ್ನ ಓಟ್ ಬ್ಯಾಂಕ್‍ಗಾಗಿ ಸುಖಾಸುಮ್ಮನೆ ರೈತರಿಗೆ ಎಲ್ಲಾ ಸೌಲಭ್ಯಗಳನ್ನೂ ನೀಡುತ್ತೇವೆ ಎಂದು ಓಟು ಗಿಟ್ಟಿಸಿಕೊಳ್ಳುತ್ತಾರೆ!! ಇಂದು ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್‍ನಲ್ಲಿ ನಡೆದ ಸಮಾವೇಶದಲ್ಲಿ ಮೋದಿಜೀ ಕಾಂಗ್ರೆಸ್ಸನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡರು!!

ಕಾಂಗ್ರೆಸ್ಸಿಗೆ ಛಾಟಿ ಬೀಸಿದ ನಮೋ…

ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಸುಳ್ಳು ಭರವಸೆ ನೀಡುತ್ತಾ ಬಂದಿದೆ. ರೈತರ ಏಳಿಗೆಗಾಗಿ ಆ ಪಕ್ಷ ಏನನ್ನೂ ಮಾಡಿಲ್ಲ!! ಕೇವಲ ಅವರನ್ನು ಓಟ್ ಬ್ಯಾಂಕ್‍ಗಳನ್ನಾಗಿ ಮಾಡಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ!! ಪಂಜಾಬ್‍ನ ಮಲೌತ್‍ನಲ್ಲಿ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ ಅವರು 70 ವರ್ಷಗಳಿಂದ ನಮ್ಮ ರೈತರು ನಂಬಿಕೆಯಿರಿಸಿದ್ದ ಪಕ್ಷ ಅವರ ಪರಿಶ್ರಮಕ್ಕೆ ತಕ್ಕ ಫಲವನ್ನು ನೀಡಿಲ್ಲ ಎಂದರು!!

ರೈತರಿಗೆ ತಲೆ ಬಾಗುತ್ತೇನೆ ಎಂದ ಮೋದಿಜೀ!!

ಕೇವಲ ರೈತರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿದೆ ಆ ಪಕ್ಷ ಒಂದು ಕುಟುಂಬಕ್ಕಾಗಿ ಸಾಕಷ್ಟು ಕಾರ್ಯಗಳನ್ನು ಮಾಡಿದೆ.. ಪ್ರಸ್ತುತ ಎನ್‍ಡಿಎ ಸರಕಾರ ರೈತರಿಗಾಗಿ ಸಾಕಷ್ಟು ಕಾರ್ಯಗಳನ್ನು ಮಾಡಿದೆ ಹೀಗಾಗಿ ರೈತರು ನೆಮ್ಮದಿಯಿಂದ ನಿದ್ರಿಸುತ್ತಿದ್ದಾರೆ ಎಂದರು.. ಭಾರತವನ್ನು ಕೃಷಿ ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ಪಂಜಾಬ್ ರೈತರ ಪಾತ್ರ ಮಹತ್ವದ್ದು .. ಕೃಷಿ ಉತ್ಪಾದನೆಯಲ್ಲಿ ಎಲ್ಲಾ ದಾಖಲೆಗಳನ್ನು ಮುರಿದಿರುವ ಅವರ ಪರಿಶ್ರಮಕ್ಕೆ ನಾನು ತಲೆಬಾಗುತ್ತೇನೆ ಎಂದರು!! ಯುಪಿಎ ಸರಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ಅದೆಷ್ಟೋ… ರೈತರುಗಳು ಆತ್ಮಹತ್ಯೆ ಮಾಡಿಕೊಂಡದ್ದೇ ಜಾಸ್ತಿ!! ಆದರೆ ಈಗ ನಮ್ಮ ಸರಕಾರ ರೈತರ ಬಗ್ಗೆ ಹೆಚ್ಚಿನ ಕಾಳಜಿ ಯನ್ನು ವಹಿಸುತ್ತಿದೆ !! ಈಗ ಭಾರತ ಇಷ್ಟರ ಮಟ್ಟಿಗೆ ಬೆಳೆಯಬೇಕೆಂದರೆ ಕಾರಣ ನಮ್ಮ ರೈತರು ಎಂದು ರೈತರ ಪ್ರಾಮುಖ್ಯತೆ ಎಷ್ಟಿದೆ ಎಂದು ಮತ್ತೊಂದು ವಿವರಿಸಿದರು!!

2020 ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆ ನೀಡಿದ ಮೋದಿ!!

ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ಈಗ ನಿದ್ದೆ ಬರುತ್ತಿಲ್ಲ, ಕಾರಣ ದೇಶದ ರೈತರು ನೆಮ್ಮದಿಯ ನಿದ್ದೆ ಮಾಡುವಂತಾಗಿದೆ. ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ರೈತರಿಗೆ ಪೊಳ್ಳು ಭರವಸೆಗಳನ್ನು ನೀಡಿ ವೋಟ್ ಬ್ಯಾಂಕ್ ಮಾಡಿಕೊಂಡಿತ್ತು, ಆದರೆ ಈಗ ಕಾಲ ಬದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  ಕೃಷಿ ಉತ್ಪನ್ನಗಳನ್ನು ದಾಖಲೆ ಸಂಖ್ಯೆಯಲ್ಲಿ ಉತ್ಪಾದಿಸಿ ನೀಡಿದ ರೈತರಿಗೆ ನಾನು ಶಿರಬಾಗಿ ನಮಿಸುತ್ತೇನೆ ಎಂದರು. ಅವರ ಕಠಿಣ ಶ್ರಮಕ್ಕೆ ನಾನು ಗೌರವ ನೀಡುತ್ತೇನೆ. ಕೊಟ್ಟ ಮಾತಿನಂತೆ 2020 ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇನೆ ಎಂದರು. ರೈತರು ಕಾಂಗ್ರೆಸ್ ಮೇಲೆ ವಿಶ್ವಾಸವಿರಿಸಿದ್ದರು ಆದರೆ ಅವರ ಶ್ರಮಕ್ಕೆ ಕಾಂಗ್ರೆಸ್ ಬೆಲೆ ಕೊಟ್ಟಿಲ್ಲ. ರೈತರನ್ನು ವೋಟ್ ಬ್ಯಾಂಕ್ ಆಗಿ ಮಾತ್ರ ನೋಡಿ ಕೊಂಡಿತ್ತು, ಆದರೆ ಈಗಿನ ಕೇಂದ್ರ ಸರ್ಕಾರ ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ ಎಂದರು. ರಾಜ್ಯದ ರೈತರು ಪಂಜಾಬನ್ನು ಭಾರತದ ಕೃಷಿ ಶಕ್ತಿಯನ್ನಾಗಿ ರೂಪಿಸಿದ್ದಾರೆ ಇದಕ್ಕಾಗಿ ಅಭಿನಂದನೆಗಳು ಎಂದರು.ಕೇಂದ್ರ ಸರ್ಕಾರ 14 ಮಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿದ್ದುದಕ್ಕಾಗಿ ಪ್ರಧಾನಿ ಅವರನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು…

ಈಗಾಗಲೇ ದೇಶದಲ್ಲಿ ರೈತರ ಸಂಖ್ಯೆಗಳು ದಿನೇ ದಿನೇ ಕಡಿಮೆಯಾಗುತ್ತಿದೆಯಲ್ಲದೇ, ಮಾರುಕಟ್ಟೆಯಲ್ಲಿ ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿ ಹೋಗಿದ್ದ ರೈತರ ಪಾಲಿಗೆ ನರೇಂದ್ರ ಮೋದಿ ಸರಕಾರದಿಂದ ಹೊಸ ಆಶಾಕಿರಣವೊಂದು ಮತ್ತೆ ಮೂಡಿ ಬಂದಾಗಿತ್ತು!! ಭತ್ತ ಸೇರಿದಂತೆ 14 ಮುಂಗಾರು ಬೆಳೆಗಳಿಗೆ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ ರೈತರಿಗೆ ಭರವಸೆ ಕೂಡಾ ನೀಡಿದ್ದರು!!

ಇದೀಗಾಗಲೇ ರಾಜ್ಯದಲ್ಲಿ ಅಧಿಕಾರ ಸ್ವೀಕರಿಸಿದ ಕುಮಾರಸ್ವಾಮಿ ಸಾಲಮನ್ನಾ ಮಾಡುತ್ತೇವೆ ಎಂದು ಕೇವಲ ಭರಸೆ ನೀಡುವ ಮೂಲಕ ರೈತರ ಸಾಲಮನ್ನ ಮಾಡದೆ ರೈತರಿಗೆ ದಿನ ದಿನೇ ಚಳ್ಳೆ ತಿನ್ನಿಸುತ್ತನೇ ಬರುತ್ತಿದ್ದಾರೆ!! ಆದರೆ ಮೋದಿ ಸರಕಾರ ಮಾತ್ರ ರೈತರನ್ನು ದೇಶದ ಬೆನ್ನೆಲೆಬು ಎಂದು ಪರಿಗಣಿಸುವ ಮೂಲಕ ರೈತರಿಗೆ ಬೇಕಾದ ಸವಲತ್ತುಗಳನ್ನು ನೀಡುತ್ತಲೇ ಬರುತ್ತಿದ್ದಾರೆ!!  ಕಾಂಗ್ರೆಸ್ ಮಾತ್ರ 70 ವರ್ಷಗಳ ಕಾಲ ದೇಶವನ್ನು ಆಳ್ವಿಕೆ ನಡೆಸಿದರು ಕೂಡಾ ದೇಶದ ರೈತರಿಗೆ ಬೇಕಾದ ಯಾವುದೇ ಸವಲತ್ತುಗಳನ್ನು ನೀಡದೆ ಅವರನ್ನು  ಕಡೆಗಣಿಸುತ್ತನೇ ಬಂದಿದೆ!!

  • ಪವಿತ್ರ
Tags

Related Articles

FOR DAILY ALERTS
 
FOR DAILY ALERTS
 
Close