ಅಂಕಣಪ್ರಚಲಿತ

ಚಮಚಾಗಿರಿ ಬಿಡಿ, ಮೈತ್ರಿ ಸರ್ಕಾರ ಉಳಿಸಿ-ಕಾಂಗ್ರೆಸ್ ನಾಯಕರ ವಿದುದ್ಧ ಜೆಡಿಎಸ್ ಗರಂ.! ಈ ಬಾರಿ ಪತನ ಗ್ಯಾರಂಟಿ?

ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಇದೀಗ ಮತ್ತೆ ಮತ್ತೆ ಸಾಭೀತಾಗುತ್ತಿದೆ. ಲೋಕಸಭಾ ಚುನಾವಣೆಯ ನಂತರ ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಪತನಗೊಳ್ಳಲಿದೆ ಎಂದು ಸರ್ಕಾರ ಆರಂಭಿಸಿದ್ದ ದಿನದಿಂದಲೂ ಕೇಳಿಬರುತ್ತಿತ್ತು. ಆದರೆ ಮೈತ್ರಿ ನಾಯಕರ ಪದೇ ಪದೇ ಒಗ್ಗಟ್ಟಿನ ಪ್ರದರ್ಶನದಿಂದ ಸರ್ಕಾರ ಸೇಫ್ ಎಂದು ಹೇಳಲಾಗುತ್ತಿತ್ತು. ಇದೀಗ ಯಾವುದೇ ಒಗ್ಗಟ್ಟು ಫಲಕಾಣದೆ ಲೋಕಸಭಾ ಚುನಾವಣೆಯ ಬೆನ್ನಲ್ಲೇ ಸರ್ಕಾರ ಪತನಗೊಳ್ಳುತ್ತೆ ಎಂದು ಹೇಳಲಾಗುತ್ತಿದೆ.

ಪದೇ ಪದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಅವರ ಬೆಂಬಲಿಗರು ನೀಡುತ್ತಿರುವ ಹೇಳಿಕೆಗಳಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕಿಡಿ ಕಾರಿದ್ದಾರೆ. ಗೃಹ ಮಂತ್ರಿ ಎಂಬಿ ಪಾಟೀಲ್, ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಸೋಮಶೇಖರ್ ಸಹಿತ ಕಾಂಗ್ರೆಸ್ ಶಾಸಕರು ನೀಡುತ್ತಿರುವ ಹೇಳಿಕೆಗಳಿಗೆ ಹೆಚ್.ವಿಶ್ವನಾಥ್ ಕಿಡಿಕಾರಿದ್ದು ಮೊದಲು ಚಮಚಾ ಗಿರಿ ಬಿಡಲಿ ಎಂದು ಹೇಳಿದ್ದಾರೆ.

“ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ನೀವೇ ಆಯ್ಕೆ ಆಗಬೇಕು ಹಾಗೂ ಮುಂದುವರೆಯಬೇಕು ಎಂದು ಕುಮಾರಸ್ವಾಮಿಯವರ ಮನೆಯ ಬಾಗಿಲನ್ನು ತಟ್ಟಿದ್ದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅವರ ತಾಯಿ ಸೋನಿಯಾ ಗಾಂಧಿ. ಈ ಸರ್ಕಾರ ಐದು ವರ್ಷಗಳ ಕಾಲ ಸುಭದ್ರವಾಗಿ ಇರಬೇಕೆಂದರೆ ಮೊದಲು ಕಾಂಗ್ರೆಸ್ ಶಾಸಕರು ಚಮಚಾಗಿರಿ ಬಿಡಬೇಕು. ಸಿದ್ದರಾಮಯ್ಯ ಆನೆ ಇದ್ದಂತೆ. ಅವರು ನಡೆದದ್ದೇ ದಾರಿ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಅವರು ಆನೆಯೋ ಅಥವಾ ನಾಯಿಯೋ ಎಂದು ಮತ್ತೆ ನೋಡೋಣ. ಮೊದಲು ಸರ್ಕಾರ ಉಳಿಸೋಣ” ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

ಮೇ 23ಕ್ಕೆ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು ಅಂದೇ ಮೈತ್ರಿ ಸರ್ಕಾರ ಪತನವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಹೇಳಿದ್ದರು. ನಂತರ ಮೈತ್ರಿ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ ಭುಗಿಲೆದ್ದಿದ್ದು ಯಾವ ಕ್ಷಣದಲ್ಲೂ ಸರ್ಕಾರ ಪತನಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close