ಇತಿಹಾಸಪ್ರಚಲಿತ

ಗೌಪ್ಯ CIA ಕಡತಗಳು ನೆಹರೂ ಭಾರತದ ಏಕೀಕರಣ ಪಿತಾಮಹ ಪಟೇಲರನ್ನು ಕೋಮುವಾದಿ ಮತ್ತು ಭ್ರಷ್ಟಾಚಾರಿ ಎಂದು ಪರಿಗಣಿಸುತ್ತಿದ್ದರೆನ್ನುವ ರಹಸ್ಯ ಬಹಿರಂಗಪಡಿಸಿವೆ

ಈ ದೇಶದ ಪ್ರಥಮ ಪ್ರಧಾನಮಂತ್ರಿಯಾಗುವ ನಿಜವಾದ ಅರ್ಹತೆ-ಯೋಗ್ಯತೆ ಇದ್ದದ್ದು ಸುಭಾಷ್ ಚಂದ್ರ ಬೋಸರಿಗೆ. ಆದರೆ ನೆಹರೂ ಕುತಂತ್ರದಿಂದಾಗಿ ನೇತಾಜಿಯವರು ಪ್ರಧಾನಿಯಾಗುವುದು ಬಿಡಿ, ಬದುಕಿದ್ದರೋ ಸತ್ತಿದ್ದರೋ ಎನ್ನುವುದೂ ದೇಶಕ್ಕೆ ಗೊತ್ತಾಗಲಿಲ್ಲ. ನೇತಾಜಿಯವರನ್ನು ಹೊರತು ಪಡಿಸಿ ಪ್ರಧಾನಿ ಗಾದಿಗೆ ಅರ್ಹರಾಗಿದ್ದ ಮತ್ತೊಬ್ಬ ವ್ಯಕ್ತಿ ಪಟೇಲರು. ಆದರೆ ಅಲ್ಲಿಯೂ ಕುತಂತ್ರ ನಡೆಸಿದ ನೆಹರೂ ಪಟೇಲರಿಗೆ ದಕ್ಕಬೇಕಾಗಿದ್ದ ಪ್ರಧಾನಿ ಪಟ್ಟವನ್ನು ಮೋಸದಿಂದ ಕಿತ್ತುಕೊಂಡರು.

ಪಟೇಲರ ಮತ್ತು ನೆಹರೂವಿನ ಸಂಬಂಧಗಳು ಚೆನ್ನಾಗಿರಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಪಟೇಲರ ಪ್ರತಿ ನೆಹರೂನ ದ್ವೇಷ ಎದ್ದು ಕಾಣುತ್ತಿತ್ತು, ಆದರೆ ಸಂಸ್ಕಾರವಂತ ಪಟೇಲರು ಮಾತ್ರ ನೆಹರೂಗೆ ಅವಮಾನವಾಗುವಂತೆ ಯಾವತ್ತೂ ನಡೆದುಕೊಳ್ಳುತ್ತಿರಲಿಲ್ಲ. ಕಾಂಗ್ರೆಸ್ ಚೇಲಾಗಳು ನೆಹರೂ-ಪಟೇಲರು ಅಣ್ಣ-ತಮ್ಮಂದಿರಂತೆ ಇರುತ್ತಿದ್ದರು ಎಂದು ಎಷ್ಟು ಬೇಕಾದರೂ ಹೇಳಿಕೊಳ್ಳಲಿ ಆದರೆ ಸತ್ಯ ಮಾತ್ರ ಬೇರೆಯದೆ ಆಗಿತ್ತು.

CIA ಯ ಗೌಪ್ಯ ಕಡತಗಳ ಪ್ರಕಾರ ನೆಹರೂ , ಪಟೇಲರನ್ನು ಕೋಮುವಾದಿ ಮತ್ತು ಭಷ್ಟ್ರ ಎಂದು ತಿಳಿದಿದ್ದರು.

ನವೆಂಬರ್ 10, 1950 ರ ಗೌಪ್ಯ CIA ವರದಿಯ ‘ಎಸ್ಟಾಬ್ಲಿಷ್ಮೆಂಟ್ ಆಫ್ ಎ “ಡೆಮಾಕ್ರಟಿಕ್” ಗ್ರೂಪ್ ಆಫ್ ಇಂಡಿಯನ್ ಕಾಂಗ್ರೆಸ್ಸ್ ‘ ಈ ಕೆಳಗಿನವುಗಳನ್ನು ವರದಿ ಮಾಡಿದೆ:

ನೆಹರೂ ಸಲಹೆಯ ಮೇರೆಗೆ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಮತ್ತು ಸರ್ದಾರ್ ಪಟೇಲರ ತೀಕ್ಷ್ಣ ಟೀಕಾಕಾರರಾದ ಆಚಾರ್ಯ ಕ್ರಿಪಲಾನಿಯವರು ಕಾಂಗ್ರೆಸ್ಸಿನ “ಪ್ರಜಾಪ್ರಭುತ್ವದ “ಗುಂಪನ್ನು ಆಯೋಜಿಸಿದ್ದರು. ಕ್ರಿಪಲಾನಿ ಜೊತೆಗೆ ಪಶ್ಚಿಮ ಬಂಗಾಳದ ಡಾ. ಪ್ರಾಫುಲಾ ಘೋಸ್ ಮತ್ತು ಗಾಂಧಿಯವರ ಸೇನಾಪಡೆಗಳಿಂದ ಕೆಲವು ನಿಷ್ಠಾವಂತ ಜನರು ಈ ಗುಂಪಲ್ಲಿದ್ದರು.

ಪುರುಷೋತ್ತಮ ಟಂಡನ್ ಮತ್ತು ವಲ್ಲಭಭಾಯಿ ಪಟೇಲ್ ವಿರುದ್ಧ ಪರಿಣಾಮಕಾರಿ ಸಾಧನವಾಗಿ ನೋಡುತ್ತಿರುವ ನೆಹರೂನ ಈ ಗುಂಪು, ಪಟೇಲ್ ಮತ್ತು ಅವರ ಅನುಯಾಯಿಗಳ “ಭ್ರಷ್ಟ ಅಭ್ಯಾಸಗಳನ್ನು” ಬಲವಾಗಿ ವಿರೋಧಿಸುತ್ತಿದೆ. ಪಟೇಲರ “ಕೋಮು ಪಕ್ಷಪಾತವನ್ನು” ಕೂಡ ಈ ಗುಂಪು ಖಂಡಿಸುತ್ತದೆ. ಎಂದು ವರದಿಯಲ್ಲಿ ಬರೆಯಲಾಗಿದೆ.

CIA ವರದಿಯಲ್ಲಿ ಇನ್ನೂ ಎರಡು ಉಲ್ಲೇಖಗಳು ದಾಖಲಾಗಿವೆ ಅದೆಂದರೆ, ಮೂಲ ವರದಿಯ ದಿನಾಂಕಗಳು ಅಸ್ಪಷ್ಟವಾಗಿವೆ, ಆದರೆ ಇತ್ತೀಚೆಗೆ ನಾಸಿಕ್ ಕಾಂಗ್ರೆಸ್ಸಿನ ಸಮಯದಲ್ಲಿ ಅಥವಾ ಅದರ ನಂತರ ಈ ಸಂಘಟನೆಯು ಕಂಡುಬಂದಿದೆ. ಎರಡನೆಯದಾಗಿ, ಕಲ್ಕತ್ತಾದ ಚೀನೀ ವ್ಯಾಪಾರಿಯೊಬ್ಬ ದೆಹಲಿಗೆ ಬೇಟಿ ನೀಡಿದ್ದ ಸಂಧರ್ಭದಲ್ಲಿ ನೆಹರೂ ಪ್ರಗತಿಶೀಲ-ಪ್ರಜಾಪ್ರಭುತ್ವ-ಸಮಾಜವಾದಿ ಪರ ಪಕ್ಷವನ್ನು ಕಟ್ಟುವ ಯೋಚನೆಯಲ್ಲಿದ್ದಾರೆ ಎಂದಿದ್ದ ಎನ್ನಲಾಗಿದೆ.

ಅಂದರೆ ಪಟೇಲರ ಮೇಲೆ ನಿಗಾ ಇರಿಸಲು ನೆಹರೂ ತನ್ನ ಬಾಲ ಬಡುಕ ಚಮಚಾಗಳ ಒಂದು ಗುಂಪನ್ನು ನಿಯೋಜಿಸಿದ್ದರು. ಈ ಗುಂಪು ಪಟೇಲರು ಕೋಮುವಾದಿ ಮತ್ತು ಭ್ರಷ್ಟ ಎಂದು ಪ್ರತಿಪಾದಿಸುತ್ತಿತ್ತು. ಇದನ್ನೆ ನೆಪವಾಗಿಟ್ಟುಕೊಂಡು ನೆಹರೂ ಬೇರೆಯದೆ ಒಂದು ಪಕ್ಷ ಕಟ್ಟುವ ಹುನ್ನಾರದಲ್ಲಿದ್ದರು ಎನ್ನುವುದು ಈ ವರದಿಯ ತಾತ್ಪರ್ಯ. ದೇಶ ಒಡೆದವರಿಗೆ ಪಕ್ಷ ಒಡೆಯುವುದು ದೊಡ್ಡ ವಿಷಯವೆ? ಒಡೆದಾಳುವ ನೀತಿ ಮುಗಲ-ಬ್ರಿಟಿಷ್ ಸಂತಾನಗಳಲ್ಲದೆ ಅಪ್ಪಟ ರಾಷ್ಟ್ರವಾದಿಗಳಿಗೆ ಬರದು.

ಸರ್ದಾರ್ ಪಟೇಲರು 1950 ರ ಡಿಸೆಂಬರ್ 15 ರಂದು ನಿಧನರಾದರು. ಪುರುಷೋತ್ತಮ್ ದಾಸ್ ಟಂಡನ್ 1950 ರ ಸೆಪ್ಟೆಂಬರ್ 21-22 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ 56 ನೇ ಅಧಿವೇಶನದಲ್ಲಿ ಅಧ್ಯಕ್ಷರಾಗಿದ್ದರು. CIA ವರದಿಯನ್ನು 1950 ರ ನವೆಂಬರ್ 10 ರಂದು ಸಲ್ಲಿಸಲಾಗಿತ್ತು.

ನೆಹರೂ ನೀಚ ಬುದ್ದಿ ಎಂಥದ್ದು ಎನ್ನುವುದು ಎಲ್ಲರಿಗೂ ಗೊತ್ತು. ವಾಸ್ತವವಾಗಿ ಕಾಂಗ್ರೆಸ್ಸಿನೊಳಗೆಯೆ ನೆಹರೂರವರ ನಾಯಕತ್ವಕ್ಕೆ ವಿರೋಧಗಳು ವ್ಯಕ್ತವಾಗುತ್ತಿದ್ದವು. ನೆಹರೂ ಪ್ರಕಾರ ಪಟೇಲ್ ಮತ್ತು ಪುರುಷೋತ್ತಮ್ ದಾಸ್ “ಬಲಪಂಥೀಯ” ವಿಚಾರಧಾರೆ ಉಳ್ಳವರಾಗಿದ್ದರು. ಬಲಪಂಥೀಯ ವಿಚಾರವಾದಿಗಳೆಲ್ಲ ಕೋಮುವಾದಿಗಳು! ಬಹುಸಂಖ್ಯಾತರ ಮಾರಣ ಹೋಮ ಮಾಡುತ್ತಾ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವವರು ಜಾತ್ಯಾತೀತರು.

ಎಂಥ ದೌರ್ಭಾಗ್ಯ ನೋಡಿ ನಮ್ಮದು. ಬಹುಸಂಖ್ಯಾತ ಸನಾತನಿಗಳಿರುವ ನಾಡಿನಲ್ಲಿ ಬಲಪಂಥೀಯ ವಿಚಾರಧಾರೆ ಹೊಂದಿದ್ದರೆ ಅವರು ಕೋಮುವಾದಿಗಳಂತೆ! ಬಲಪಂಥೀಯರಿಗೆ ಈ ದೇಶವನ್ನು ಆಳುವ ಹಕ್ಕಿಲ್ಲವಂತೆ! ಈ ದೇಶದ ಮೇಲೆ ಆಡಳಿತ ನಡೆಸುವ ಹಕ್ಕು ಕೇವಲ ನೆಹರೂ-ಗಾಂಧಿ ಪರಿವಾರಕ್ಕೆ ಮಾತ್ರವಂತೆ. ದೇಶವನ್ನು ಒಗ್ಗೂಡಿಸಿದ ಮಹಾನಾಯಕ ಸರ್ದಾರ್ ಪಟೇಲರನ್ನು ಕಡೆವರೆಗೂ ಅವಮಾನಿಸುತ್ತಲೆ ಬಂದರು ನೆಹರೂ. ಪಟೇಲರ ಮಗಳು ಮಣಿಬೇನ್ ಎಂತಹ ಕಷ್ಟಕರವಾದ ಜೀವನವನ್ನು ಕಳೆದಿದ್ದರೆನ್ನುವುದನ್ನು ಯೋಚಿಸಿದಾಗ ಕರುಳು ಕಿತ್ತು ಬರುತ್ತದೆ.

ದೇಶದ ಮಹಾನಾಯಕರನ್ನು ಅವಮಾನ ಮಾಡಿದ ಪರಿವಾರದವರು ಸಕಲ ಸವಲತ್ತುಗಳನ್ನು ಅನುಭವಿಸುತ್ತಾ ಸುಖವಾಗಿದ್ದರು. ಆದರೆ ದೇಶಕ್ಕಾಗಿ ಪ್ರಾಣತೆತ್ತವರ ಪರಿವಾರದವರು ಎಪ್ಪತ್ತು ವರ್ಷಗಳಿಂದಲೂ ಅಜ್ಞಾತ ಜೀವನ ನಡೆಸುತ್ತಿದ್ದರು. ಆದರೆ ಒಬ್ಬ ಮೋದಿ ಇದೆಲ್ಲವನ್ನೂ ಬದಲಾಯಿಸಿಬಿಟ್ಟರು. ಈ ದೇಶದ ನಿಜವಾದ ನಾಯಕರಿಗೆ ಸಲ್ಲಬೇಕಾಗಿದ್ದ ಗೌರವವನ್ನು ತಡವಾಗಿಯಾದರೂ ದೊರಕಿಸಿಕೊಟ್ಟ ಮೋದಿ ಅವರಿಗೆ ಧನ್ಯವಾದಗಳು

-Postcard team

organiser.org

Tags

Related Articles

FOR DAILY ALERTS
 
FOR DAILY ALERTS
 
Close