ಅಂಕಣ

ಪ್ರಭು ಶ್ರೀರಾಮನ ನಂತರ ಸೂರ್ಯವಂಶದ ಕಥೆ ಏನಾಯಿತು? ಶ್ರೀ ಭಾಗವತದಲ್ಲಿದೆ ಸೂರ್ಯವಂಶದ ಸಂಪೂರ್ಣ ಸ್ಟೋರಿ…!

ಶ್ರೀರಾಮನ ಅವತಾರ, ಮಹಾವಿಷ್ಣುವಿನ ದಶಾವತಾರಗಳ ಪೈಕಿ 7ನೆಯದು ಎನ್ನುವ ವಿಚಾರ ಗೊತ್ತೇ ಇದೆ!! ಮನುಕುಲ ತಿಲಕನಾದ ರಾಮನ ವಂಶ ಸೂರ್ಯವಂಶದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದರೂ ಶ್ರೀರಾಮನ ನಂತರದ ಸೂರ್ಯವಂಶದ ಭವಿಷ್ಯದ ಕುರಿತು ಬಂದಿರುವ ಹಲವಾರು ಪ್ರಶ್ನೆಗಳಿಗೆ ಉತ್ತರ ಮಾತ್ರ ಕಂಡುಕೊಳ್ಳಲಾಗಲಿಲ್ಲ!! ಆದರೆ ಶ್ರೀರಾಮನ ನಂತರದ ಸೂರ್ಯವಂಶದ ಭವಿಷ್ಯ ಶ್ರೀ ಭಾಗವತದಲ್ಲಿ ಉತ್ತರವಿದೆಯಂತೆ!!! ಅಷ್ಟಕ್ಕೂ ಆ ಉತ್ತರವಾದರೂ ಏನು??

ಪರಂಬ್ರಹ್ಮದ ಆಶಯವನ್ನು ಚತುರ್ಮುಖ ಬ್ರಹ್ಮ ಕೈಗೆತ್ತಿಕೊಂಡ!! ಮೊದಲು ಅನಂತವಾದ ಕಾಲವನ್ನು ಸೃಷ್ಟಿಸಿ ಅನಂತರ ಸಪ್ತ ಊರ್ಧ್ವಲೋಕ, ಸಪ್ತ ಅಧೋಲೋಕಗಳನ್ನು ಸೃಷ್ಟಿಸಿದನಲ್ಲದೇ ಅಸಂಖ್ಯ ಜೀವಕೋಟಿಗಳನ್ನು ಸೃಷ್ಟಿಸಿದ. ದೇವತೆಗಳು, ಗಂಧರ್ವರು, ಯಕ್ಷರು, ರಕ್ಷರು, ಕಿನ್ನರ, ಕಿಂಪುರುಷ, ಮನುಷ್ಯ ಹೀಗೆ ವಿಶಾಲ ಜಗತ್ತನ್ನೊಮ್ಮೆ ಸೃಷ್ಟಿಸಿದ. ಬ್ರಹ್ಮನ ಅಂಗಗಳಿಂದ, ವಿಕಾರಗಳಿಂದ ಬೇರೆ ಬೇರೆ ಜೀವಿಗಳು ಜನಿಸಿದವು. ಹಾಗೆ ಸೃಷ್ಟಿಯಾಗುವಾಗ ಆತನ ಮನಸ್ಸಿನಿಂದ ಅನೇಕ ಮಹರ್ಷಿಗಳು ಜನಿಸಿದರು. ಅವರೇ ಬ್ರಹ್ಮಮಾನಸಪುತ್ರರು. ಅವರು ಬ್ರಹ್ಮರ್ಷಿಗಳೂ ಕೂಡ ಹೌದು. ಜಗತ್ತನ್ನು ಸೃಷ್ಟಿಸಿದ ಚತುರ್ಮುಖ ಬ್ರಹ್ಮನ ಸಾಮರ್ಥ್ಯ ಅವರಿಗಿದೆ. ಅಷ್ಟೇ ಅಲ್ಲದೇ, ಮನುಷ್ಯರ ಮಧ್ಯದಲ್ಲಿ ಇದ್ದು, ಸೃಷ್ಟಿಯಲ್ಲಾಗುವ ತಪ್ಪುಗಳನ್ನು ತಿದ್ದುತ್ತಾ ಜೀವಿಸುವವರವರು!! ಅಂತಹ ಶ್ರೇಷ್ಠ ಬ್ರಹ್ಮರ್ಷಿಗಳಲ್ಲಿ ವಸಿಷ್ಠರೂ ಒಬ್ಬರು.

Image result for dashavatar

ವಸಿಷ್ಠರು ಸೃಷ್ಟಿಯ ಮೊದಲ ವಂಶವೆಂದು ಕರೆಸಿಕೊಂಡ ಸೂರ್ಯವಂಶದ ಕುಲಪುರೋಹಿತರು. ರಾಜರು ಅಧರ್ಮಮಾರ್ಗ ಹಿಡಿದ ಸಂದರ್ಭಎದುರಾದಾಗ ಅವರನ್ನು ಸನ್ಮಾರ್ಗದಲ್ಲಿ ಕೈಹಿಡಿದು ನಡೆಸಿದವರು. ದಿಲೀಪನು ಕಾಮಧೇನುವನ್ನು ಅಲಕ್ಷಿಸಿದ ತಪ್ಪಿನಿಂದ ಆತನಿಗೆ ಸಂತಾನಭಾಗ್ಯವಿರಲಿಲ್ಲ. ಅದನ್ನು ತಿಳಿದ ವಸಿಷ್ಠರು ತಮ್ಮ ದಿವ್ಯದೃಷ್ಟಿಯಿಂದ ಪೂರ್ವವೃತ್ತಾಂತವನ್ನು ಕಂಡರು. ದಿಲೀಪನ ತಪ್ಪುನ್ನು ಹೇಳಿ ಅವನಿಗೆ ನಂದಿನಿಯ ಸೇವೆಯ ಪ್ರಾಯಶ್ಚಿತ್ತವನ್ನು ಆದೇಶಿಸಿದರು. ವಸಿಷ್ಠರ ಆದೇಶವನ್ನು ಶಿರಸಾ ವಹಿಸಿದ. ಅದರಿಂದ ಅವನಿಗೆ ರಘು ಎಂಬ ಮಗು ಜನಿಸಿತು. ಸೂರ್ಯವಂಶಕ್ಕೆ ರಘುವಂಶ ಎಂದು ಬರಲು ಇವನೇ ಕಾರಣನಾದ ಎನ್ನುವುದನ್ನು ಪುರಾಣಗಳಲ್ಲಿ ಓದಿದ್ದೇವೆ!!

ನಮಗೆಲ್ಲ ಗೊತ್ತಿರುವಂತೆ ಸೂರ್ಯವಂಶದಲ್ಲಿ ಆದಿಬ್ರಹ್ಮನ ಅಂಗದಿಂದ ಮರೀಚಿ ಹುಟ್ಟಿದನಂತೆ, ಈ ಮರೀಚಿಯ ಮಗ ಕಶ್ಯಪ!! ಕಶ್ಯಪನಿಗೆ ಹುಟ್ಟಿದವ ವಿವತ್ಸು, ವಿವತ್ಸನ ಮಗ ವೈವಸ್ವತ (ಇವನಿಗೆ ವೈವಸ್ವತ ಮನು ಎಂದೂ ಕರೆಯುವರು)!! ಈ ವೈವಸ್ವತನಿಗೆ ಹುಟ್ಟಿದವೇ ಇಕ್ಷಾಕು. ಇನ್ನು ಈ ಇಕ್ಷಾಕುವಿಗೆ ನಿಮಿ, ವಿಕುಕ್ಷಿಗಳು ಮಕ್ಕಳು!! ಅದರಲ್ಲಿ ವಿಕುಕ್ಷಿ ವಿಗೆ ಪುರಂಜಯ ಹುಟ್ಟಿದ, ಪುರಂಜಯನ ಮಗನೇ ನೇನಸ್ಸು, ನೇನಸ್ಸುವಿನ ಮಗ ಪೃಥು. ಈ ಪೃಥುವಿನ ವಂಶದಲ್ಲಿ ಕುವಲಾಂಶ ಹಾಗೇ ಯೌವನಾಶ್ವರೂ ಜನಿಸಿದರು!!

ಈ ಯೌವನಾಶ್ವನ ಮಗ ಮಾಧಾಂತ. ಮಾಧಾಂತನಿಗೆ ಅಂಬರೀಷ ಮತ್ತು ಪುರುಕುತ್ಸರು ಮಕ್ಕಳು!! ಇದರಲ್ಲಿ ಈ ಪುರುಕುತ್ಸನ ಸಂತತಿಯಲ್ಲಿ ಹುಟ್ಟಿದ ಸತ್ಯವೃತ, ಈ ಸತ್ಯವೃತನ ಮಗನೇ ತ್ರಿಶಂಕು!! ಈ ತ್ರಿಶಂಕುವಿನ ಮಗ ಸತ್ಯ ಹರಿಶ್ಚಂದ್ರ. ಈತನ ಮಗ ಲೋಹಿತಾಶ್ವ ಎನ್ನುವುದನ್ನು ಪುರಾಣಗಳಲ್ಲಿ ಓದಿದ್ದೇವೆ!! ತದನಂತರ ಈ ಲೋಹಿತಾಶ್ವನ ಸಂತತಿಯಲ್ಲಿ ಸಗರ ರಾಜ ಜನ್ಮತಳೆದ!! ಸಗರನಿಗೆ- ಸಮಂಜಸ, ಸಮಂಜಸನಿಗೆ-ಅಂಶುಮಾನ್, ಈ ಅಂಶುಮಾನ್ ಗೆ ದಿಲೀಪ ಹುಟ್ಟಿದರು!! ಈ ದಿಲೀಪನ ಮಗನೇ ಭಗೀರಥ.

ಭಗೀರಥನ ವಂಶದಲ್ಲಿ ಹುಟ್ಟಿದವನೇ ಸ್ಥೂಲಬಾಹು. ಈ ಸ್ಥೂಲಬಾಹುವಿನ ಮಗ ರಘು ಮತ್ತು ಇವನ ಮಗ ಅಜ!! ಅಜನ ಮಗ ದಶರಥ. ಈ ದಶರಥನ ಮಗನೇ ನಮ್ಮ ಸೀತಾಪತಿ ರಘುರಾಮ. ಇವನ ಮಕ್ಕಳು ಕುಶ-ಲವರು ಅನ್ನೋದನ್ನು ನಾವು ಪುರಾಣಗಳಲ್ಲಿ ಕೇಳಿದ್ದೇವೆ. ಆದರೆ ಇದರ ನಂತರ ರಾಮನ ವಂಶಸ್ಥರ ಬಗ್ಗೆ ಉತ್ತರವನ್ನೇ ಕಂಡುಕೊಳ್ಳಲಿಲ್ಲ!! ಆದರೆ ಶ್ರೀರಾಮನ ನಂತರದ ಸೂರ್ಯವಂಶದ ಭವಿಷ್ಯದ ಕುರಿತು ಬಂದಿರುವ ಹಲವಾರು ಪ್ರಶ್ನೆಗಳಿಗೆ ಶ್ರೀ ಭಾಗವತದಲ್ಲಿ ಉತ್ತರವಿದೆ!!

ಹೌದು… ಪ್ರಭು ಶ್ರೀರಾಮಚಂದ್ರನಿಗೆ ಲವ-ಕುಶರೀರ್ವರು ಮಕ್ಕಳು!! ಭರತನಿಗೆ ತಕ್ಷ-ಪುಷ್ಕಲರು!! ಲಕ್ಷ್ಮಣನಿಗೆ ಅಂಗದ-ಚಂದ್ರಕೇತುಗಳು!! ಇನ್ನು, ಶತ್ರುಘ್ನನಿಗೆ ಸುಬಾಹು-ಶತ್ರುಪಾತಿಗಳು ಎನ್ನುವ ಮಕ್ಕಳು!!

ಇವರಲ್ಲಿ ಸೀತಾರಾಮರ ಹಿರಿಯ ಮಗನಾದ ಕುಶನು ಕುಮುದ್ವತಿಯನ್ನು ವರಿಸಿ ಕುಶಾವತಿ ಅಥವಾ ಕುಶಸ್ಥಲಿಯಲ್ಲಿ ರಾಜ್ಯವಾಳುತ್ತಾನೆ. ಲವನು ಶ್ರಾವಸ್ತಿ ಅಥವಾ ಲವಸ್ಥಲಿಯಲ್ಲಿ ರಾಜ್ಯವಾಳುತ್ತಾನೆ!! ಭರತನ ಹಿರಿಯ ಪುತ್ರ ತಕ್ಷನು ತಕ್ಷಶಿಲೆಯಲ್ಲಿ, ಕಿರಿಯ ಪುತ್ರನಾದ ಪುಷ್ಕಲನು ಪುಷ್ಕಲಾವತದಲ್ಲಿ!! ಇನ್ನು, ಲಕ್ಷಣ ಮಕ್ಕಳಾದ ಅಂಗದನು ಕಾರುಪಥದಲ್ಲಿ, ಚಂದ್ರಕೇತುವು ಚಂದ್ರಕಾಂತದಲ್ಲಿ ರಾಜ್ಯವಾಳಿದರೆ ಶತ್ರುಘ್ನನ ಮಕ್ಕಳಾದ ಸುಬಾಹು ಮಧುರಾನಗರಿಯಲ್ಲಿ, ಶತ್ರುಪಾತಿಯು ವಿದಿಶಾನಗರಿಯಲ್ಲಿ ರಾಜ್ಯವಾಳಿದರು..

ಇನ್ನು, ಈ ಕುಶ-ಕುಮುದ್ವತೀ ದಂಪತಿಗಳಿಂದ ಅತಿಥಿ ಜನಿಸಿದ!! ಅವನಿಂದ ನಿಷಧ ಜನಿಸಿದ, ಈತನೇ ಮಗನೇ ನಭ. ನಭನಿಗೆ ಪುಂಡರೀಕ ಜನಿಸಿದರೇ ಪುಂಡಲೀಕನ ಮಗನೇ ಕ್ಷೇಮಧನ್ವಾ!! ತದನಂತರದಲ್ಲಿ ಈತನಿಗೆ ದೇವಾನೀಕ, ದೇವಾನೀಕನಿಗೆ ಅನೀಹ ಹುಟ್ಟಿದ!! ತದನಂತರದಲ್ಲಿ ಪಾರಿಯಾತ್ರ, ಈತನಿಗೆ ಬಲಸ್ಥಲ ಜನಿಸಿದ!! ಇವನಿಗೆ ಸೂರ್ಯನ ಅಂಶವನ್ನು ಪಡೆದ ವಜ್ರನಾಭನು ಮಗನಾಗಿ ಹುಟ್ಟಿದ. ಇವನ ಮಗ ಖಗಣ ಈತನ ನಂತರ ವಿಧೃತಿ ಜನಿಸಿದ!!

ವಿಧೃತಿಗೆ ಹಿರಣ್ಯನಾಭ. ಇವನು ಮಹರ್ಷಿಜೈಮಿನಿಯ ಶಿಷ್ಯನಾಗಿ ಯೋಗಾಚಾರ್ಯನೆಂದು ಖ್ಯಾತನಾಗಿದ್ದ. ಕೋಸಲದೇಶದ ಯಾಜ್ಞವಲ್ಕ್ಯ ಮಹರ್ಷಿಯು ಹಿರಣ್ಯನಾಭನಿಂದ ಆಧ್ಯಾತ್ಮ ಶಿಕ್ಷಣವನ್ನು ಪಡೆದ. ಹಿರಣ್ಯನಾಭನ ಮಗ ಪುಷ್ಯ. ಈತನಿಗೆ ಧ್ರುವಸಂಧಿ ಮಗ!! ಈತನ ನಂತರದಲ್ಲಿ ಸುದರ್ಶನ – ಅಗ್ನಿವರ್ಣ – ಶೀಘ್ರ – ಮರು – ಈ ಮರುವು ಯೋಗಸಮಾಧಿಯಲ್ಲಿ ಸಿದ್ಧಿಯನ್ನು ಪಡೆದಿದ್ದ. ಈಗಲೂ ಈ ಮರುಮಹಾರಾಜನು ಕಲಾಪವೆಂಬ ಗ್ರಾಮದಲ್ಲಿ ವಾಸಿಸುತ್ತಿದ್ದಾನೆ. ಕಲಿಯುಗದ ಅಂತ್ಯದಲ್ಲಿ ಸೂರ್ಯವಂಶವು ನಷ್ಟವಾದಾಗ ಇವನು ಪುನರಪಿ ಸೂರ್ಯವಂಶವನ್ನು ಬೆಳೆಸುತ್ತಾನೆ.

ಮರುವಿನ ಮಗ ಪ್ರಸುಶ್ರುತ. ಈ ಪ್ರಸುಶ್ರುತನ ಮಗನೇ ಸಂಧಿ. ತದನಂತರ ಸಂಧಿಯ ಮಗ ಅಮರ್ಷಣ. ಈತನ ನಂತರದಲ್ಲಿ ಮಹಸ್ವಂತ – ವಿಶ್ವಸಾಹ್ವ – ಪ್ರಸೇನಜಿತ್ – ತಕ್ಷಕ – ಬೃಹದ್ಬಲ – ಈ ಬೃಹದ್ಬಲನನ್ನು ಕುರುಕ್ಷೇತ್ರಯುದ್ಧದಲ್ಲಿ ಅಭಿಮನ್ಯುವು ಸಂಹರಿಸಿದ!! ಬೃಹದ್ಬಲನ ಮಗ ಬೃಹದ್ರಣ. ಈತನ ನಂತರದಲ್ಲಿ ಉರುಕ್ರಿ – ವತ್ಸವೃದ್ಧ – ಪ್ರತಿವ್ಯೋಮ – ಭಾನು – ದಿವಾಕ – ಸಹದೇವ – ಬೃಹದಶ್ವ – ಭಾನುಮಂತ – ಪ್ರತೀಕಾಶ್ವ – ಸುಪ್ರತೀಕ – ಮರುದೇವ – ಸುನಕ್ಷತ್ರ – ಪುಷ್ಕರ – ಅಂತರಿಕ್ಷ – ಸುತಪಸ – ಅಮಿತ್ರಜಿತ್ – ಬೃಹದ್ರಾಜ – ಬರ್ಹಿ – ಕೃತಂಜಯ – ರಣಂಜಯ – ಸಂಜಯ – ಶಾಕ್ಯ- ಶುದ್ಧೋದ – ಲಾಂಗಲ – ಪ್ರಸೇನಜಿತ್ – ಕ್ಷುದ್ರಕ – ರಣಕ – ಸುರಥ ನವರೆಗೆ ಸೂರ್ಯವಂಶವು ಮುಂದುವರೆಯುತ್ತಿರುತ್ತದೆ!!

ಇನ್ನು ಈ ಸುರಥನಿಗೆ ಸೂರ್ಯವಂಶದ ಕೊನೆಯ ರಾಜನಾದ ಸುಮಿತ್ರನು ಮಗನಾಗಿ ಹುಟ್ಟಿದನು. ಇವರೆಲ್ಲರೂ ಇಕ್ಷ್ವಾಕು ವಂಶಸಂಭೂತರು. ಆದರೆ ಈ ಸುಮಿತ್ರನ ನಂತರ ಕಲಿಯುಗದಲ್ಲಿ ಈ ವಂಶವು ಮರೆಯಾಯಿತು. ಆದರೆ ಸೂರ್ಯವಂಶವು ನಾಶವಾಗಿ ಹೋಯಿತೆಂದೇನಲ್ಲ..! ಸೂರ್ಯ ಹೇಗೆ ಶಾಶ್ವತನೋ ಸೂರ್ಯವಂಶವೂ ಅಂತೆಯೇ ಶಾಶ್ವತವಾದುದು.. ಈ ಹಿಂದೆ ಪ್ರಸ್ತಾಪಿಸಿದಂತೆ ಈಗಲೂ ಕಲಾಪವೆಂಬ ಗ್ರಾಮದಲ್ಲಿ ಅಂತರ್ಹಿತನಾದ ಮರುಮಹಾರಾಜನು ಪುನಃ ಈ ಯುಗದ ಅಂತ್ಯದಲ್ಲಿ ಸೂರ್ಯವಂಶವನ್ನು ಉದ್ಧರಿಸುತ್ತಾನೆ ಎನ್ನುವ ನಂಬಿಕೆ ಶ್ರೀ ಭಾಗವತದಲ್ಲಿದೆ!!

ಮೂಲ: http://hareraama.in/articles/

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close