ಪ್ರಚಲಿತ

ಮುಸ್ಲಿಮರ ಕ್ರೈಸ್ತರ ಅಭಿವೃದ್ಧಿಗೆ ಕೋಟಿ ಕೋಟಿ ಮೀಸಲಿಟ್ಟ ಕುಮಾರಸ್ವಾಮಿ ಹಿಂದೂಗಳಿಗೆ ಏನು ಕೊಟ್ಟರು? ಬೋಗಸ್ ಬಜೆಟ್ ಮಂಡನೆ ಮಾಡಿದ ಸಿಎಂ ಸಾಹೇಬ್ರು!

ಹಿಂದೂಗಳು ಎಂದರೆ ಈ‌ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಕೇವಲ ಚುನಾವಣೆಗೆ ಮಾತ್ರ ಬೇಕಾಗುವ ಒಂದು ಅಸ್ತ್ರ. ಚುನಾವಣೆಯ ಸಂದರ್ಭದಲ್ಲಿ ಹಿಂದೂ ದೇವಾಲಯಗಳಿಗೆ ಭೇಟಿ ನೀಡುವುದು, ಪೂಜೆ ಹೋಮ ಹವನ ನಡೆಸಿ ಬೇಡಿಕೊಳ್ಳುವುದು, ಆದರೆ ಚುನಾವಣೆಯ ನಂತರ ಹಿಂದೂಗಳ ಕಡೆಗಣನೆ. ಛೇ, ಏನ್ ಕುಮಾರಸ್ವಾಮಿ ಅವರೇ ಇದೆಲ್ಲಾ? ಈ‌ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೂಗಳನ್ನು ಯಾವ ರೀತಿ ನರಕದಲ್ಲಿರುವಂತೆ ಮಾಡಿದ್ದಾರೆ ಎಂಬುದು ಗೊತ್ತೇ ಇದೆ, ಆದರೆ ಇದೀಗ ನೀವೂ ಕೂಡ ಇದೇ ದಾರಿಯಲ್ಲಿ ಸಾಗುತ್ತಿದ್ದೀರಾ?

ಬಜೆಟ್ ಮಂಡನೆ ಮಾಡುವ ಮೂಲಕ ಇಡೀ ರಾಜ್ಯದ ಅಭಿವೃದ್ಧಿ ಮಾಡುತ್ತೀರಿ ಎಂದು ನಂಬಿದ್ದ ಜನರಿಗೆ ಚಿಪ್ಪು ಕೊಟ್ಟು ಬಿಟ್ರಿ. ಕೇವಲ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ಅಭಿವೃದ್ಧಿಯೇ ನಿಮಗೆ ಮುಖ್ಯವಾಯಿತೇ? ಹಿಂದೂಗಳು ಎಂದರೆ ಅಷ್ಟೊಂದು ಕೀಳಾಗಿ ಕಾಣುವುದೇ? ಹೌದು ಈ ಪ್ರಶ್ನೆ ಕೇಳಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಯಾಕೆಂದರೆ ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡನೆ ಮಾಡಿದ ಬಜೆಟ್‌ನಿಂದ‌ ರಾಜ್ಯದ ಅಭಿವೃದ್ಧಿ ಅಥವಾ ಹಿಂದೂಗಳ ಅಭಿವೃದ್ಧಿಗೆ ಯಾವುದೇ ಯೋಜನೆ ನಿರ್ಮಿಸಲಿಲಲ್ಲ ಮತ್ತು ರೈತರ ಸಾಲಮನ್ನಾ ಮಾಡುತ್ತೇನೆ ಎಂದ ಕುಮಾರಸ್ವಾಮಿ ಈ ಬಾರಿಯೂ ತಮ್ಮ ಮಾತು ಮರೆತಿದ್ದಾರೆ. ರಾಜ್ಯದ ಜನರ ಕೈಗೆ ಚೆಂಬು ನೀಡುವ ಮೂಲಕ ಬೋಗಸ್ ಬಜೆಟ್ ಮಂಡನೆ ಮಾಡಿದ್ದು, ರಾಜ್ಯಾದ್ಯಂತ ಭಾರೀ ಟೀಕೆಗೆ ಗುರಿಯಾಗಿದ್ದಾರೆ.!

ಮುಸ್ಲಿಂ-ಕ್ರೈಸ್ತರ ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ!

ಕುಮಾರಸ್ವಾಮಿ ಕೂಡ ತಾನೊಬ್ಬ ಹಿಂದೂ ವಿರೋಧಿ ಎಂಬುದನ್ನು ನಿರೂಪಿಸಿಬಿಟ್ಟರು. ಯಾಕೆಂದರೆ ಈ ಬಾರಿಯ ಬಜೆಟ್ ಒಂದು ಬೋಗಸ್ ಬಜೆಟ್ ಎಂದು ಈಗಾಗಲೇ ಟೀಕಿಸಿದ ರಾಜ್ಯ ಬಿಜೆಪಿ, ಕುಮಾರಸ್ವಾಮಿ ಅವರು ಕೇವಲ ಘೋಷಣೆಗಳನ್ನಷ್ಟೇ ಮಾಡಿದ್ದಾರೆ ಎಂದು ಹೇಳಿಕೊಂಡಿದೆ. ಈ ಮಧ್ಯೆ ಬಜೆಟ್ ಅಂಶ ಗಮನಿಸಿದರೆ ಇದೊಂದು ಹಿಂದೂ ವಿರೋಧಿ ಬಜೆಟ್ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಯಾಕೆಂದರೆ ಇಂದು ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಮುಸ್ಲಿಮರ ಸಮಗ್ರ ಅಭಿವೃದ್ಧಿಗೆ ನಿಗಮ‌ ಸ್ಥಾಪನೆ ಮಾಡಿದ್ದು, ಬರೋಬ್ಬರಿ 400 ಕೋಟಿ ಮೀಸಲಿಟ್ಟಿದ್ದಾರೆ ಮತ್ತು ಮುಸ್ಲಿಮರ ಖಬರ್‌ಸ್ಥಾನ ಅಭಿವೃದ್ಧಿಗೆ 10 ಕೋಟಿ‌ ಮೀಸಲಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಕ್ರೈಸ್ತರ ಮೂಲಸೌಕರ್ಯಕ್ಕಾಗಿ 200 ಕೋಟಿ ಮೀಸಲಿಟ್ಟಿದ್ದಾರೆ. ಆದರೆ ಹಿಂದೂಗಳಿಗೆ ಎಂದು ಎಲ್ಲೂ ಪ್ರಸ್ತಾಪ ಮಾಡದ ಮುಖ್ಯಮಂತ್ರಿಗಳು ಬಜೆಟ್‌ನಲ್ಲೂ ತಾನೊಬ್ಬ ಹಿಂದೂ ವಿರೋಧಿ ಎಂಬುದನ್ನು ಪ್ರದರ್ಶಿಸಿದ್ದಾರೆ.!

ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲೇ ಹಿಂದೂಗಳ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದ ಕುಮಾರಸ್ವಾಮಿ ಇದೀಗ ಅಧಿಕಾರ ವಹಿಸಿಕೊಂಡ ನಂತರ ಕೂಡ ಅದನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ. ಬಜೆಟ್‌ನಲ್ಲಿ ಮುಸ್ಲಿಮರಿಗೆ ಮತ್ತು ಕ್ರೈಸ್ತರಿಗೆ ಪ್ರತ್ಯೇಕ ಅನುದಾನ ನೀಡಿದ ಮುಖ್ಯಮಂತ್ರಿಗಳು ಹಿಂದೂಗಳಿಗೆ ಯಾವುದೇ ಯೋಜನೆ ಘೋಷಿಸದೆ ಇರುವುದು ಖೇದಕರ ವಿಚಾರವಾಗಿದೆ. ಹಾಗಾದರೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಹಿಂದೂಗಳು ಮತ ಹಾಕಿಲ್ಲವೇ ಮುಖ್ಯಮಂತ್ರಿಗಳೇ??

-ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close