ಅಂಕಣ

ಕಮ್ಯೂನಿಷ್ಟರ ಮಾತೃ ದೇಶ ಚೀನಾದಲ್ಲಿ ಶವಗಳನ್ನು ಹೂಳುವಂತಿಲ್ಲ!! ಮುಸಲ್ಮಾನರನ್ನು ಕಂಡರೆ ಕೆಂಡಾಮಂಡಲನಾಗುವ ಡ್ರಾಗನ್ ಬಗ್ಗೆ ಭಾರತದ ಸೆಕ್ಯೂಲರ್ ಬುದ್ದಿಜೀವಿಗಳು ಗಪ್ ಚುಪ್!

ನಮ್ಮ ಬುದ್ದಿವಂತಿಕೆಗಳೇನಿದ್ದರೂ ಅದು “ಜಾತ್ಯಾತೀತ” ಭಾರತದಲ್ಲಿ ಮಾತ್ರ. ಮಾವೋ-ಲೆನಿನ್-ಚಿಗುವೆರ-ಮಾರ್ಕ್ಸ್ ‘ವ್ಯಾಧಿ’ಗಳೇನಿದ್ದರೂ ಅದು ಇಲ್ಲಿನ ಬುದ್ದಿಜೀವಿಗಳ ತಲೆಯಲ್ಲಿ ಮಾತ್ರ. ಈ ಕಮ್ಮಿನಿಷ್ಟರ ರಾಷ್ಟ್ರದಲ್ಲಿ ಇಸ್ಲಾಂ-ಮುಸಲ್ಮಾನರ ಜೊತೆ ಯಾವ ರೀತಿ ನಡೆದುಕೊಳ್ಳಲಾಗುತ್ತಿದೆ ಎನ್ನುವ ವಿಚಾರದ ಬಗ್ಗೆ ಒಬ್ಬೇ ಒಬ್ಬ ಕಮ್ಯೂನಿಷ್ಟ್-ಜಾತ್ಯಾತೀತ-ಬುದ್ದಿಜೀವಿ ಬಾಯಿ ಬಿಡುವುದಿಲ್ಲ!

ಇವರ ಕಮ್ಯೂನಿಷ್ಟ್ ನಾಡಾದ ಚೀನಾಕ್ಕೆ ಇಸ್ಲಾಂ ಮತ್ತು ಮುಸಲ್ಮಾನರನ್ನು ಕಂಡರಾಗುವುದಿಲ್ಲ. ಭಾರತದಲ್ಲಿ ಮುಸಲ್ಮಾನರು “ಭಯ”ದಿಂದ ಬದುಕುತ್ತಿದ್ದಾರೆ ಎನ್ನುವ ಇವರು ಚೀನಾದಲ್ಲಿ ಇಸ್ಲಾಂ ಮತ್ತು ಮುಸಲ್ಮಾನರನ್ನು “ಪುನಃ-ಶಿಕ್ಷಣ”ದ ಹೆಸರಿನಲ್ಲಿ ಗೋಳು ಹೊಯ್ಯುವ ಬಗ್ಗೆ ಚಕಾರ ಎತ್ತುವುದಿಲ್ಲ.

ಇಸ್ಲಾಮೀಕರಣದ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದ ಚೀನಾ

ಚೀನಾದಲ್ಲಿ ಇಸ್ಲಾಮಿನ ಆಚರಣೆ ಮತ್ತು ಪದ್ದತಿಗಳನ್ನು ಸುತರಾಂ ಪಾಲಿಸುವಂತಿಲ್ಲ. ಅಲ್ಲಿ ಇಸ್ಲಾಮಿನ ಹೆಸರುಗಳನ್ನು ಇಡುವಂತಿಲ್ಲ. ಸಾರ್ವಜನಿಕ ಜಾಗಗಳಲ್ಲಿ ನಮಾಜು ಮಾಡುವಂತಿಲ್ಲ, ಹೆಚ್ಚು ಕಡಿಮೆ ಎಲ್ಲಾ ಮಸೀದಿಗಳನ್ನು ಒಡೆದು ಹಾಕಲಾಗಿದೆ. ಗಂಡಸರು ಗಡ್ಡ ಬಿಡುವಂತಿಲ್ಲ, ಹೆಂಗಸರು ಮುಖ ಮುಚ್ಚುವ ಬುರ್ಖಾ ತೊಡುವಂತಿಲ್ಲ. ಚೀನಾದ ಮಸೀದಿಗಳಲ್ಲಿ ರಾಷ್ಟ್ರದ್ವಜವನ್ನು ಹಾರಿಸುವುದು ಖಡ್ಡಾಯ. ಈ ಎಲ್ಲಾ ನಿಯಮಗಳನ್ನು ತಪ್ಪಿದವರಿಗೆ ಮರಣ ದಂಡನೆಯೆ ಶಿಕ್ಷೆ.

ಚೀನಾದ ಕ್ಸಿನಜಿಯಾಂಗ್ ಪ್ರಾಂತ್ಯದಲ್ಲಿರುವ ಉಯಿಗರ್ ಮುಸಲ್ಮಾನರು ಪ್ರತೇಕತಾವಾದದ ಚಳುವಳಿಯಲ್ಲಿ ಮತ್ತು ಭಯೋತ್ಪಾದನಾ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಎನ್ನುವ ಆರೋಪ ಹೊಂದಿದ್ದಾರೆ. ಚೀನಾದ ಈ ಪ್ರಾಂತ್ಯದಲ್ಲಿ “ಪುನಃ ಶಿಕ್ಷಣ” ಕೇಂದ್ರಗಳನ್ನು ಅಲ್ಲಿನ ಸರಕಾರ ನಡೆಸುತ್ತಿದೆ. ಈ ಕೇಂದ್ರಗಳಲ್ಲಿ ಮುಸ್ಲಿಮರು ಇಸ್ಲಾಮನ್ನು ತ್ಯಜಿಸುವಂತೆ ಮತ್ತು ಕಮ್ಯೂನಿಸಂ ಅನ್ನು ಒಪ್ಪಿಕೊಳ್ಳುವಂತೆ ಒತ್ತಡ ಹಾಕಲಾಗುತ್ತದೆ ಮತ್ತು ಮುಸ್ಲಿಮರಿಗೆ ಹಂದಿ ಮಾಂಸ ತಿನ್ನುವಂತೆ ಹಾಗೂ ಮದ್ಯಪಾನ ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿತ್ತು. ಇಸ್ಲಾಮಿನಲ್ಲಿ ಹಂದಿ ಮಾಂಸ ಸೇವಿಸುವುದು ಮತ್ತು ಮದ್ಯಪಾನ ಮಾಡುವುದು “ಹರಾಮ್” ಎಂದು ಹೇಳಲಾಗಿದೆ.

ಚೀನಾ ಸರಕಾರ ಈ ಆರೋಪಗಳನ್ನೆಲ್ಲಾ ಅಲ್ಲಗಳೆದ ಒಂದು ತಿಂಗಳ ಬಳಿಕ ಈ ಪುನಃ ಶಿಕ್ಷಣ ಕೇಂದ್ರಗಳನ್ನು ಕಾನೂನು ರೀತ್ಯ ಮಾನ್ಯ ಮಾಡಲಾಗಿದೆ ಮತ್ತು ಹಲಾಲ್ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಸಿ.ಎನ್.ಎನ್ ವರದಿ ಮಾಡಿದೆ. ಹೊಸ ಕಾನೂನಿನ ಪ್ರಕಾರ “ವೃತ್ತಿಪರ ಕೌಶಲ್ಯ ಶಿಕ್ಷಣ ತರಬೇತಿ ಕೇಂದ್ರಗಳಂತಹ ಸಂಸ್ಥೆಗಳು ಸಾಮಾನ್ಯ ರಾಷ್ಟ್ರೀಯ ಭಾಷೆ, ಕಾನೂನುಗಳು ಮತ್ತು ನಿಬಂಧನೆಗಳು ಮತ್ತು ವೃತ್ತಿಪರ ಕೌಶಲ್ಯಗಳ ಮೇಲೆ ತರಬೇತಿಯನ್ನು ಕೈಗೊಳ್ಳಬೇಕು. ಉಗ್ರಗಾಮಿ ವಿರೋಧಿ ಸೈದ್ಧಾಂತಿಕ ಶಿಕ್ಷಣವನ್ನು ಮತ್ತು ತರಬೇತಿಯ ಚಿಂತನೆಯ ರೂಪಾಂತರವನ್ನು ಉತ್ತೇಜಿಸಲು ಮಾನಸಿಕ ಮತ್ತು ವರ್ತನೆಯ ತಿದ್ದುಪಡಿಯನ್ನು ನಡೆಸಿ ಅವರು ಸಮಾಜಕ್ಕೆ ಮತ್ತು ಕುಟುಂಬಕ್ಕೆ ಹಿಂದಿರುಗುವಂತೆ ಸಹಾಯ ಮಾಡಬೇಕು. ”

ಈ ಪ್ರಾಂತ್ಯದಲ್ಲಿ ಹಲಾಲ್ ವಿರೋಧಿ ಕಾನೂನಿನ್ವಯ ಪೊಲೀಸರು ಸೇರಿದಂತೆ ಎಲ್ಲಾ ಅಧಿಕಾರಿಗಳು ಅವರು “ನಿಷ್ಠಾವಂತ ಕಮ್ಯುನಿಸ್ಟ್ ಪಕ್ಷದ ಸದಸ್ಯರು” ಮತ್ತು “ಯಾವುದೇ ಧಾರ್ಮಿಕ ನಂಬಿಕೆಗೆ ಚಂದಾದಾರರಾಗಿಲ್ಲ” ಎಂದು ಘೋಷಣೆ ಮಾಡಬೇಕು. ಅವರು ಕೇವಲ “ಮಾರ್ಕ್ಸಿಸಂ ಮತ್ತು ಲೆನಿನ್ ಸಿದ್ಧಾಂತ” ಕ್ಕೆ ನಿಷ್ಠೆಯನ್ನು ಹೊಂದಿರಬೇಕು ಮತ್ತು ಅವರು ಸಂಪೂರ್ಣವಾಗಿ ‘ಪ್ಯಾನ್-ಹಲಾಲೈಸೇಷನ್’ ವಿರುದ್ಧವಾಗಿ ಹೋರಾಡಲು ಒಪ್ಪಬೇಕು ಎಂದು ತಿಳಿಸಲಾಗಿದೆ. ಈ ಬಗ್ಗೆ ಭಾರತದ ಕಮ್ಮಿನಿಷ್ಠರು ಏನು ಹೇಳುತ್ತಾರೋ ಕಾದು ನೋಡಬೇಕು. ಇಲ್ಲಿ ಒಬ್ಬ ಭಯೋತ್ಪಾದಕನನ್ನು ಸೇನೆ ಗುಂಡಿಟ್ಟು ಕೊಂದರೆ ಅತ್ತು ಕರೆದು ರಂಪ ಮಾಡುವ ಬುದ್ದಿ ಜೀವಿಗಳು ಚೀನಾದಲ್ಲಿ ಈ ಉಗ್ರಗಾಮಿಗಳಿಗೆ ಯಾವ ರೀತಿ “ಸನ್ಮಾನ” ಮಾಡುತ್ತಾರೆನ್ನುವುದನ್ನು ಒಮ್ಮೆ ನೋಡಬೇಕು.

ಚೀನಾದಲ್ಲಿ ಹೆಣಗಳನ್ನು ಹೂಳುವಂತಿಲ್ಲ ಬದಲಿಗೆ ಸುಡಬೇಕು ಇಲ್ಲವೆ ಸಮುದ್ರಕ್ಕೆ ಎಸೆಯಬೇಕು!!

ಚೀನಾದ ದಕ್ಷಿಣ ಪೂರ್ವ ಪ್ರಾಂತ್ಯದಲ್ಲಿ “zero burial” ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ. ತನ್ನ ಭೂಮಿಯನ್ನು ಸಂರಕ್ಷಿಸುವ ಚೀನಾದ ಹೊಸ ನೀತಿಯ ಪ್ರಕಾರ ಮೃತ ಶರೀರಗಳನ್ನು ಭೂಮಿಯಲ್ಲಿ ಹೂಳುವಂತಿಲ್ಲ, ಬದಲಿಗೆ ಸನಾತನ ಧರ್ಮದ ಆಚರಣೆಯಂತೆ ಸುಡಬೇಕು ಇಲ್ಲವೆ ಎತ್ತಿ ಸಮುದ್ರಕ್ಕೆ ಒಗೆಯಬೇಕು!! ಚೀನಾದ “ಕಮ್ಯೂನಿಷ್ಟರ” ಪ್ರಕಾರ ಹೆಣಗಳನ್ನು ಸುಡುವುದು “ಪರಿಸರ ಸ್ನೇಹಿ” ಪದ್ದತಿ ಮತ್ತು ಅತ್ಯಂತ ಪರಿಣಾಮಕಾರಿ ಆಚರಣೆಯಂತೆ!

ಚೀನಾದ ಜಿಯಾಂಗ್ಸಿ ಪ್ರಾಂತ್ಯದಲ್ಲಿ ಹೆಣಗಳನ್ನು ಹೂಳುವಂತೆಯೆ ಇಲ್ಲ. ಈಗಾಗಲೇ ಹೂಳಿರುವ ಶವ ಮತ್ತು ಪೆಟ್ಟಿಗೆಗಳ ಮೇಲೆ ಬುಲ್ಡೋಜರ್ ಚಲಾಯಿಸಲಾಗಿದೆ. ಇದುವರೆಗೂ ಆರುಸಾವಿರಕ್ಕೂ ಮಿಕ್ಕಿ ಶವಪೆಟ್ಟಿಗೆಗಳನ್ನು ನಷ್ಟ ಮಾಡಲಾಗಿದೆ. ಕಾನೂನು ಮೀರಿ ಯಾರಾದರೂ ಹೆಣವನ್ನು ಹೂತರೆ ತಕ್ಷಣವೆ ಹೆಣವನ್ನು ಭೂಮಿಯಡಿಯಿಂದ ಬಗೆದು ಹೊರತೆಗೆದು ಸುಡಲಾಗುತ್ತದೆ!! ಈ ವರ್ಷ ಸೆಪ್ಟೆಂಬರ್ ಬಳಿಕ “cremation only” ಕಾನೂನು ಜಾರಿಗೆ ಬಂದಿದೆ. ಈ ಕಾನೂನಿನ ಪ್ರಕಾರ ಶವಪೆಟ್ಟಿಗೆಗಳನ್ನು ತಯಾರಿಸುವುದು ಅಥವಾ ಮನೆಯಲ್ಲಿಡುವುದು ಶಿಕ್ಷಾರ್ಹ ಅಪರಾಧ!

ನೆರೆಯ ಚೀನಾ ದೇಶದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ನಮ್ಮ “ಕಮ್ಮಿನಿಷ್ಟರದ್ದು” ಜಾಣ ಕಿವುಡು-ಕುರುಡು-ಮೌನ!! ಅವರದ್ದು ಏನಿದ್ದರೂ ಮೋದಿ ಧ್ಯಾನ…..ಇಂಥಾ ಕಮ್ಯೂನಿಷ್ಟರು ಜಾತ್ಯಾತೀತ-ಅಭಿವ್ಯಕ್ತಿ ಸ್ವಾತಂತ್ರ್ಯ-ಸಮಾನತೆ ಬಗ್ಗೆ ಮಾತನಾಡುತ್ತಾರೆ! ಇವರ ತಾಯ್ನಾಡು ಚೀನಾದಲ್ಲಿ ಕೇವಲ ಸರ್ವಾಧಿಕಾರ ಮಾತ್ರ ನಡೆಯುತ್ತದೆ. ಇಂತಹ ಕಟುಕರ ಕೈಯಲ್ಲಿ ಭಾರತದ ಆಡಳಿತದ ಚುಕ್ಕಾಣಿಯನ್ನು ಕೊಟ್ಟರೆ ದೇಶದ ಭವಿಷ್ಯ ಏನಾಗಬುದು ಯೋಚಿಸಿ

CNN

-Postcard team

Tags

Related Articles

FOR DAILY ALERTS
 
FOR DAILY ALERTS
 
Close