ಅಂಕಣ

ತನ್ನ ಹದಿನಾರನೇಯ ವಯಸ್ಸಿನಲ್ಲಿ ಕ್ರಾಂತಿಕಾರಿ ಸೈನಿಕನಾಗಿದ್ದ ಈ ವೀರನಿಗೆ ಕಾಂಗ್ರೆಸ್ ನ ಮಾಜಿ ಶಾಸಕನಿಂದಲೇ ನಡೆದೇ ಹೋಗಿತ್ತು ಹತ್ಯೆಯ ಸಂಚು!!

ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಳಿಸಬೇಕೆಂದು ಪಣತೊಟ್ಟಿರುವ ಅದೆಷ್ಟೋ ಕ್ರಾಂತಿಕಾರಿ ನಾಯಕರು ದುಷ್ಟರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೋ ಅದಕ್ಕೆ ಲೆಕ್ಕವೇ ಇಲ್ಲ ಎಂಬಂತಾಗಿದ್ದು ಮಾತ್ರ ಅಕ್ಷರಶಃ ನಿಜ!! ಆದರೆ ತನ್ನ 15ನೇ ವಯಸ್ಸಿನಲ್ಲಿ ನನ್ನ ಹೆಸರೇ “ಸ್ವತಂತ್ರ”, ನನ್ನ ತಂದೆಯ ಹೆಸರೇ “ಸ್ವಾಧೀನತೆ”, ನನ್ನ ವಿಳಾಸವೇ “ಸೆರೆಮನೆ” ಎಂದು ಆಂಗ್ಲರು ಎಸೆಯುವ ರೊಟ್ಟಿಯ ತುಣುಕಿಗಾಗಿ ತನ್ನನ್ನೇ ಮಾರಿಕೊಂಡಿರುವ ದೇಶ ದ್ರೋಹಿ ನ್ಯಾಯಾಧೀಶನಿಗೆ ನೀಡಿದ ದಿಟ್ಟ ಉತ್ತರ ಇದಾಗಿತ್ತು!!

ಅಷ್ಟಕ್ಕೂ ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲ ಉಗ್ರ ಶಿಕ್ಷೆ ವಿಧಿಸುತ್ತಿದ್ದ ಈ ನ್ಯಾಯಾಧೀಶನನ್ನೇ, ತನ್ನ 15ನೇ ವಯಸ್ಸಿನಲ್ಲಿ ಎದುರಿಸಿದಂತಹ ಆ ವೀರನಾದರೂ ಯಾರು ಗೊತ್ತೇ?? ಆತ ಬೇರಾರು ಅಲ್ಲ ವಿಭಿನ್ನ ಆಲೋಚನಾ ಶಕ್ತಿ, ವಾಕ್ಚಾತುರ್ಯ, ಸಾಹಸ ಪ್ರವೃತ್ತಿ ಮತ್ತು ಯುದ್ಧಭೂಮಿಯಲ್ಲಿ ಹೋರಾಡಿದ್ದಲ್ಲದೇ, ಯೋಧ ಎಂದಿಗೂ ತನ್ನ ಆಯುಧವನ್ನು ತ್ಯಜಿಸುವುದಿಲ್ಲ’ ಎಂದು ಹೇಳಿರುವ ವೀರ ಯೋಧನೇ…… ಚಂದ್ರಶೇಖರ ಸೀತಾರಾಮ್ ತಿವಾರಿ ಅರ್ಥಾತ್ ಚಂದ್ರಶೇಖರ್ ಆಜಾದ್.

“ದುಷ್ಮನೋಂಕಿ ಗೋಲಿಯೋಂ ಕಾ ಹಮ್ ಸಾಮ್ನಾ ಕರೇಂಗೆ, ಆಜಾದ್ ಹೀ ರಹೇ ಹೆ ಹಮ್, ಆಜಾದ್ ಹೀ ರಹೇಂಗೆ!” ಎಂದು ಬಾಲ್ಯದಲ್ಲೇ ಪ್ರತಿಜ್ಞೆ ಮಾಡಿ, ಬ್ರಿಟಿಷರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ, ಪೆÇಲೀಸರಿಗೆ ಸಿಗದೇ, ಆಂಗ್ಲರಿಗೆ ಸಿಂಹ ಸ್ವಪ್ನರಂತೆ ಕಾಡಿದ ಅಜೇಯ ಕ್ರಾಂತಿಕಾರಿ ಚಂದ್ರಶೇಖರ ಆಜಾದ್.

ಹೌದು… ಅಂದು ವಾರಣಾಸಿಯ ಬೀದಿಯಲ್ಲಿ ಸ್ವಾತಂತ್ರ ಹೋರಾಟಗಾರರ ಜಾಥಾ!! ಹದಿನೈದನೇ ವಯಸ್ಸಿಗಾಗಲೇ ತಾಯ್ನಾಡಿನ ಹಂಬಲ ಹತ್ತಿಸಿಕೊಂಡಿದ್ದ ಚಂದ್ರಶೇಖರ ಸೀತಾರಾಮ್ ತಿವಾರಿ ಅರ್ಥಾತ್ ಚಂದ್ರಶೇಖರ್ ಆಜಾದ್ ಚಳುವಳಿಗಾರರ ಆಗಮನವನ್ನು ದೂರದಿಂದಲೇ ನೋಡುತ್ತ, ಕಾತರನಾಗಿ ಕಾಯುತ್ತಿದ್ದ. ಆ ಗುಂಪು ಹತ್ತಿರ ಬರುತ್ತಿದ್ದಂತೆ ತಾನೂ ಅವರಲ್ಲೊಂದಾಗಿ ನಡೆದ. ಅದೇ ಹೊತ್ತಿಗೆ “ಬೋಲೋ ಭಾರತ್ ಮಾತಾ ಕೀ ಜೈ”, “ವಂದೇ ಮಾತರಂ” ಎನ್ನುವ ಕೂಗು ಬ್ರಿಟಿಷರನ್ನು ಬಡಿದೆಬ್ಬಿಸಿತ್ತು!!

ಸಮುದ್ರವೇ ಬಂದು ಅಪ್ಪಳಿಸಿದಂತೆ ಬ್ರಿಟಿಷರಿಗೆ ಸ್ವಾತಂತ್ರ್ಯದ ಕೂಗು ಕೇಳಲಾರಂಭಿಸಿತು. ಆದರೆ ಈ ಬಾಲಕ ಹದಿನೈದಿಪ್ಪತ್ತು ಹೆಜ್ಜೆ ಸರಿದಿರಬೇಕಷ್ಟೇ ಪೆÇೀಲಿಸರ ದಂಡು ಕ್ರಾಂತಿಕಾರಿಗಳ ಮೇಲೆ ಎಗರಿಯೇ ಬಿಟ್ಟಿತ್ತು!! ಘೋಷಣೆ ಕೂಗುತ್ತ ತನ್ನ ಪಾಡಿಗೆ ಸಾಗುತ್ತಿದ್ದ ಚಳುವಳಿಗಾರರನ್ನು ಮನಬಂದಂತೆ ಥಳಿಸಲಾಯ್ತು. ಎಂಭತ್ತರ ಆಸುಪಾಸಿನ ವೃದ್ಧರೊಬ್ಬರ ಎದೆಯ ಮೇಲೆ ಆಂಗ್ಲರ ಗುಲಾಮನೊಬ್ಬ ಲಾಠಿ ಬೀಸಿದ. ಆ ಹಿರಿಯ ಜೀವ ನೋವಿನಿಂದ ಚೀರುತ್ತ ಕೆಳಗುರುಳಿತು. ಆದರೆ ಪೆಟ್ಟು ತಿನ್ನುತ್ತಿದ್ದ ಹಿರಿಯರನ್ನು ನೋಡುತ್ತಿದ್ದ ಬಾಲಕ ಚಂದ್ರಶೇಖರ ಸೀತಾರಾಮ್ ತಿವಾರಿಗೆ ಈ ದೃಶ್ಯ ಬಾರೀ ನೋವನ್ನುಂಟು ಮಾಡಿತು!! ಆಗ ಅಲ್ಲೇ ಕಾಲಬುಡದಲ್ಲಿ ಬಿದ್ದಿದ್ದ ಕಲ್ಲನ್ನೆತ್ತಿ ಒಡೆದೇ ಬಿಟ್ಟ… ಅದು ನೇರವಾಗಿ ಕ್ರೂರ ಗುಲಾಮನ ಹಣೆಯೊಡೆಯಿತು ಅಷ್ಟೇ…… ಮರು ಘಳಿಗೆಯಲ್ಲಿ ಬಾಲಕ ಜೈಲು ಪಾಲಾಗಿದ್ದ.

ಎದೆಗಾರಿಕೆಯ ಮಾತಿನಿಂದಾಗಿ ಬಾಲಕನಿಗೆ 15 ಛಡಿಯೇಟಿನ ಶಿಕ್ಷೆ!! ಅಲ್ಲೂ………. ಮೊಳಗಿತ್ತು ದೇಶಪ್ರೇಮ!!

ಮರುದಿನ ಅವನನ್ನು ನ್ಯಾಯಾಲಯದಲ್ಲಿ ಹಾಜರು ಮಾಡಿದರು. ಅಲ್ಲಿನ ನ್ಯಾಯಾಧೀಶ ಬಹಳ ಕ್ರೂರಿಯಾಗಿದ್ದನಲ್ಲದೇ ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲ ಉಗ್ರ ಶಿಕ್ಷೆ ವಿಧಿಸುತ್ತಿದ್ದ. ಅವನು ಚಂದ್ರಶೇಖರನನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾ ಅಬ್ಬರಿಸಿದ. “ಹೇಳೋ, ಏನೋ ನಿನ್ನ ಹೆಸರು” ಎಂದಾಗ ಆತನನ್ನು ನೋಡಿಯೇ ಚಂದ್ರಶೇಖರನಿಗೆ ಸಿಟ್ಟು ಬಂತು. ಆಂಗ್ಲರು ಎಸೆಯುವ ರೊಟ್ಟಿಯ ತುಣುಕಿಗಾಗಿ ತನ್ನನ್ನೇ ಮಾರಿಕೊಂಡಿರುವ ಈ ಗುಲಾಮನು ದೇಶ ದ್ರೋಹಿ, ಅವನಿಗೆ ಸ್ವಲ್ಪವೂ ಗೌರವ ಕೊಡಬಾರದು ಎಂದು ನಿರ್ಧರಿಸಿಬಿಟ್ಟ. ಅದೇ ಸಂದರ್ಭದಲ್ಲಿ ಅದಕ್ಕೆ ಉತ್ತರ ನೀಡಿದ ಈ ಬಾಲಕ, “ಹೊಂ ನನ್ನ ಹೆಸರು ಆಜಾದ್” ಎಂದು ಗಟ್ಟಿಯಾಗಿ ಘರ್ಜಿಸಿದ.

ಅಜಾದ್ ಎಂದರೆ “ಸ್ವತಂತ್ರ” ಎಂದು ಅರ್ಥ!! ನಾನು ಯಾರಿಗೂ ಗುಲಾಮನಲ್ಲ ಎಂದು ಅರ್ಥ. ಇದನ್ನು ಕೇಳಿ ಕೆಂಡಾಮಂಡಲನಾದ ನ್ಯಾಯಾಧೀಶ ಇನ್ನೊಂದು ಪ್ರಶ್ನೆ ಕೇಳಿದ: “ನಿನ್ನಪ್ಪನ ಹೆಸರು ಏನು?”, “ನಿನ್ನ ವಿಳಾಸ ಯಾವುದು? ” ಎಂದು ಕೇಳಿದ್ದಕ್ಕೆ “ನನ್ನ ಅಪ್ಪನ ಹೆಸರೇ ಸ್ವಾಧೀನತೆ, ನನ್ನ ವಿಳಾಸವೇ ಸೆರೆಮನೆ” ಎಂದ!! ಆ ದುಷ್ಟ ನ್ಯಾಯಾಧೀಶನಿಗೆ ದಿಟ್ಟ ಉತ್ತರವನ್ನು ನೀಡಿದ ಪುಟ್ಟ ಬಾಲಕನನ್ನು ನೋಡಿ ಅಲ್ಲಿದ್ದವರೆಲ್ಲ ಖುಷಿಪಟ್ಟರು. ಅಬ್ಬಾ!! ಎಂಥಹ ಎದೆಗಾರಿಕೆಯ ಮಾತು ಎಂದು ಹೇಳಿ ಆತನ ಬಗ್ಗೆ ಹೆಮ್ಮೆ ಪಟ್ಟರು!!

ಆದರೆ, ಈ ಮಾತಿನಿಂದಾಗಿ ಬಾಲಕನಿಗೆ 15 ಛಡಿಯೇಟುಗಳ ಶಿಕ್ಷೆ ವಿಧಿಸಲಾಯಿತು. ಬ್ರಿಟಿಷರು ಹೊಡೆದ ಒಂದೊಂದು ಏಟಿಗೂ ಆ ಬಾಲಕ “ಭಾರತ್ ಮಾತಾ ಕೀ ಜೈ” , “ವಂದೇ ಮಾತರಂ” ಎಂದು ಜೈಕಾರ ಕೂಗಿದ!! ಹೀಗೆ ದೇಶಕ್ಕಾಗಿ ತನ್ನ ಹೆಸರನ್ನೇ ಬದಲಾಯಿಸಿಕೊಂಡ ಧೀರ ಮುಂದೆ ಚಂದ್ರಶೇಖರ್ ಆಜಾದ್ ಎಂದು ಎಲ್ಲೆಡೆ ಪ್ರಖ್ಯಾತಿ ಪಡೆದರು!! ಆದರೆ ಇಂತಹ ಕ್ರಾಂತಿಕಾರಿಗೆ, ಮಿತ್ರದ್ರೋಹಿ ಕಾಂಗ್ರೆಸ್ಸಿಗನೊಬ್ಬನ ಕುತಂತ್ರ ಬುದ್ದಿಯಿಂದಲೇ ತನ್ನ ಜೀವವನ್ನೇ ಅರ್ಪಿಸಬೇಕಾಯಿತು!! ಅಂತಹ ಕಾಂಗ್ರೆಸ್ಸಿಗ, ಮುಂದೆ ಸ್ವಾತಂತ್ರ್ಯ ನಂತರ ಶಾಸಕನಾಗಿಯೂ ಮೆರೆದಿದ್ದ ಎಂದರೆ ನಂಬ್ತೀರಾ?? ಆದರೆ ಅದನ್ನು ನಂಬಲೇ ಬೇಕು!!

ಹದಿನಾರನೇಯ ವಯಸ್ಸಿನ ವೇಳೆಗೆ ಕ್ರಾಂತಿಕಾರಿ ಸೈನಿಕನಾದರು ಚಂದ್ರಶೇಖರ ಅಜಾದ್!!

1906ರ ಜುಲೈ 23ರಂದು ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಭವ್ರಾ ಎಂಬ ಹಳ್ಳಿಯಲ್ಲಿ ಪಂಡಿತ್ ಸೀತಾರಾಮ್ ತಿವಾರಿ ಮತ್ತು ಜಾಗ್ರಣೀದೇವಿಯವರ ಮಗನಾಗಿ ಜನಿಸಿದ ಚಂದ್ರಶೇಖರ ಆಜಾದ್, ಬಾಲ್ಯದಿಂದಲೂ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿದ್ದರು. 1919ರ ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ಬಳಿಕ ಬ್ರಿಟಿಷರ ವಿರುದ್ಧ ಅವರ ಆಕ್ರೋಶ ಇನ್ನಷ್ಟು ಹೆಚ್ಚಾಯಿತು. ಹಿಂದುಸ್ತಾನ್ ರಿಪಬ್ಲಿಕನ್ ಆರ್ಮಿ ಎಂಬ ಕ್ರಾಂತಿಕಾರಿ ಸಂಸ್ಥೆಗೆ ರಾಮಪ್ರಸಾದ್ ಬಿಸ್ಮಿಲ್ ಎನ್ನುವ ಧೀರ ನಾಯಕರಿಂದಾಗಿ ತನ್ನ ಹದಿನಾರನೆ ವಯಸ್ಸಿನ ವೇಳೆಗೆ ಕ್ರಾಂತಿಕಾರಿ ಸೈನಿಕನಾದರು.

ಇಲ್ಲಿ ಕ್ರಾಂತಿ ಚಟುವಟಿಕೆಗಳನ್ನು ಹೇಗೆ ನಡೆಸುವುದು ಎಂಬುದನ್ನು ಕಲಿತ ಚಂದ್ರಶೇಖರ್ ಅಜಾದ್, ರಾಮ್ ಪ್ರಸಾದ್ ಬಿಸ್ಮಿಲ್ ಅವರ ಕಟ್ಟಾ ಶಿಷ್ಯನಾಗಿ ಹಿಂದೂಸ್ಥಾನ್ ರಿಪಬ್ಲಿಕನ್ ಆರ್ಮಿ ಗೆ ಸದಸ್ಯನೂ ಆದರು. ಆದರೆ ಈ ಹಿಂದುಸ್ತಾನ್ ರಿಪಬ್ಲಿಕನ್ ಆರ್ಮಿಗೆ ಬಂದೂಕು, ಪಿಸ್ತೂಲು, ಕಾಡತೂಸು ಮುಂತಾದವು ಬೇಕಾಗಿತ್ತು. ಅದಕ್ಕಾಗಿ ಬಿಸ್ಮಿಲ್ಲರ ನೇತೃತ್ವದಲ್ಲಿ ಒಂಬತ್ತು ಜನರ ದಂಡು ಸಿದ್ಧವಾಯಿತು. ಅದರಲ್ಲಿ ಚಂದ್ರಶೇಖರ ಆಜಾದರೂ ಒಬ್ಬರಾಗಿದ್ದು, 1925 ನೇ ಇಸವಿ ಆಗಸ್ಟ್ 9 ನೇ ತಾರೀಖು ಉತ್ತರಪ್ರದೇಶದ ರಾಜಧಾನಿ ಲಕ್ನೋ ಬಳಿಯ ಕಾಕೋರಿ ಎಂಬ ರೈಲು ನಿಲ್ದಾಣದ ಹತ್ತಿರ ರೈಲು ನಿಲ್ಲಿಸಿ ಅದರಲ್ಲಿ ರವಾನೆ ಆಗುತ್ತಿದ್ದ ಸರಕಾರಿ ಖಜಾನೆಯನ್ನು ಕ್ರಾಂತಿಕಾರಿಗಳು ಲೂಟಿ ಮಾಡಿದರು.

ಆದರೆ ಬೇಗ ಎಚ್ಚರಗೊಂಡ ಪೆÇಲೀಸರು ಬಿಸ್ಮಿಲ್ಲರನ್ನು ಸೇರಿಸಿ ದಂಡಿನಲ್ಲಿದ್ದ ಎಲ್ಲಾ ಸದಸ್ಯರನ್ನು ಬಂದಿಸಿದ್ದರೆ ಚಂದ್ರಶೇಖರ ಆಜಾದ್ ಅವರನ್ನು ಏನೂ ಮಾಡಿದರೂ ಕೂಡ ಹಿಡಿಯಲಾಗಲೇ ಇಲ್ಲ!! ಸಂನ್ಯಾಸಿಯ ಹಾಗೆ, ಕೂಲಿಯ ಹಾಗೆ, ಸಾಹುಕಾರನ ಹಾಗೆ, ಡ್ರೈವರನ ಹಾಗೆ, ಕೊನೆಗೆ ಪೆÇಲೀಸರ ಹಾಗೆ ವೇಷ ಧರಿಸಿಕೊಂಡು ಪೆÇಲೀಸರಿಗೆ, ಗುಪ್ತಚಾರರಿಗೆ ಮಂಕುಬೂದಿ ಎರಚುತ್ತಾ ಆಜಾದ್ ತಪ್ಪಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೇ ಲಕ್ನೋ, ಕಾನಪುರ, ಝಾನ್ಸಿ, ದಿಲ್ಲಿ, ಲಾಹೋರ್, ಕಾಶಿ ಮುಂತಾದ ಕಡೆಯಲೆಲ್ಲ ಓಡಾಡುತ್ತಿದ್ದರು.

ಆದರೆ ಕಾಕೋರಿ ದರೋಡೆಯ ಪ್ರಕರಣದಲ್ಲಿ ರಾಮಪ್ರಸಾದ್ ಮತ್ತು ಮೂರು ಕ್ರಾಂತಿಕಾರಿಗಳನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು. ಹಿಂದೂಸ್ತಾನ್ ರಿಪಬ್ಲಿಕನ್ ಆರ್ಮಿಯ ಸಂಪೂರ್ಣ ಜವಾಬ್ದಾರಿ ಆಜಾದ್ ಅವರ ಮೇಲೆ ಬಿತ್ತು. ಈ ವೇಳೆಗೆ ಮತ್ತೊಬ್ಬ ತರುಣ ಕ್ರಾಂತಿಕಾರಿ ಬೆಳೆಯುತ್ತಿದ್ದ!! ಆತನ ಹೆಸರೇ ಭಗತ್ ಸಿಂಗ್. ಭಗತ್ ಸಿಂಗ್ ಹಿಂದೂಸ್ತಾನ್ ರಿಪಬ್ಲಿಕನ್ ಆರ್ಮಿ ಸೇರಿ ಅದಕ್ಕೆ ಹೊಸ ರೂಪ ಕೊಟ್ಟರು. ತದನಂತರದಲ್ಲಿ ಈ ಸಂಸ್ಥೆಯ ಹೆಸರು ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ ಆಯಿತು. ಇದಕ್ಕೆ ಚಂದ್ರಶೇಖರ್ ಅಜಾದ್ ಅವರೇ ಸೇನಾಪತಿಯಾದರು.

ಈ ವೇಳೆಗೆ ಬ್ರಿಟಿಷ್ ಸರ್ಕಾರ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಸೈಮನ್ ಎಂಬ ಆಯೋಗವನ್ನು ರಚಿಸಿತು. ಅದರ ವಿರುದ್ದ ಲಾಹೋರ್ ನಲ್ಲಿ ಪ್ರತಿಭಟನೆ ಮಾಡಬೇಕೆಂದು ಭಗತ್ ಸಿಂಗ್ ಮತ್ತು ಅಜಾದ್ ನಿರ್ಧರಿಸಿದರು. ಕ್ರಾಂತಿಕಾರಿ ನಾಯಕ ಲಾಲ ಲಜಪತ್ ರಾಯ್ ಶಾಂತಿಯುತ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪೆÇಲೀಸರು ಅನಾಗರಿಕವಾಗಿ ವರ್ತಿಸಿದರು. ಸ್ಕಾಟ್ ಎಂಬ ಅಧಿಕಾರಿ ಲಾಲ ಲಜಪತ್ ರಾಯ್ ಅವರಿಗೆ ಬಲವಾಗಿ ಹೊಡೆದ. ಇದೇ ಸಂದರ್ಭದಲ್ಲಿ ಲಾಲ ಲಜಪತ್ ರಾಯ್ ಅವರು ನಿಧನರಾದರು. ಈ ಘಟನೆಯಿಂದ ಭಗತ್ ಸಿಂಗ್, ಆಜಾದ್ ಮತ್ತು ಗೆಳೆಯರಿಗೆ ದುಃಖವಾಯಿತಲ್ಲದೇ ಸ್ಕಾಟ್ ನನ್ನು ಕೊಂದು ಸೇಡು ತೀರಿಸಿಕೊಳ್ಳಬೇಕೆಂದು ನಿರ್ಧರಿಸಿದರು.

ಸ್ಕಾಟ್ ನನ್ನು ಕೊಲ್ಲುವ ಯೋಜನೆಯನ್ನು ಆಜಾದ್ ರೂಪಿಸಿದರು. ಆಜಾದ್ , ಭಗತ್ ಸಿಂಗ್, ರಾಜಗುರು ಸಜ್ಜಾಗಿ ಲಾಹೋರ್ ನ ಪೆÇೀಲಿಸ್ ಮುಖ್ಯ ಕಚೇರಿಯ ಬಳಿ ಸೇರಿದರು. ಆದರೆ ಸ್ಯಾಂಡರ್ಸ್ ಎಂಬ ಅಧಿಕಾರಿಯನ್ನೇ ಸ್ಕಾಟ್ ಎಂದು ಭಾವಿಸಿದ ಕ್ರಾಂತಿಕಾರಿಗಳು ಸ್ಯಾಂಡರ್ಸ್ ನನ್ನು ಕೊಂದು ಪರಾರಿಯಾದರು. ಇದರಿಂದ ಬ್ರಿಟಿಷ್ ಸರ್ಕಾರ ಕ್ರಾಂತಿಕಾರಿಗಳನ್ನು ಹಿಡಿಯಲು ತೀವ್ರ ಪ್ರಯತ್ನ ನಡೆಸಿದರು. ಆದರೆ ಪೆÇೀಲೀಸರ ಕೈಗೆ ಯಾವ ಕ್ರಾಂತಿಕಾರಿಯೂ ಸಿಗಲಿಲ್ಲ.

ಅಜಾದ್ ಮಾರ್ಗದರ್ಶನದಲ್ಲಿ ನಡೆದಿತ್ತು ಅಸ್ಸೆಂಬ್ಲಿಯಲ್ಲಿನ ಬಾಂಬ್ ಸ್ಪೋಟ!!

ಬ್ರಿಟಿಷ್ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಲು ಪಾರ್ಲಿಮೆಂಟಿನಲ್ಲಿ ಬಾಂಬ್ ಸ್ಪೋಟಿಸಲು “ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ” ನಿರ್ಧರಿಸಿತು. ಭಗತ್ ಸಿಂಗ್ ಮತ್ತು ಬುಟುಕೇಶ್ವರ ದತ್ತ ಅಸ್ಸೆಂಬ್ಲಿಯಲ್ಲಿ ಬಾಂಬ್ ಸ್ಪೋಟಿಸಿ ಬ್ರಿಟಿಷರ ವಿರುದ್ದ ಪ್ರತಿಭಟಿಸಿ ಪೆÇಲೀಸರಿಗೆ ಶರಣಾದರು. ಆದರೆ ಈ ಯೋಜನೆಯು ಅಜಾದ್ ಮಾರ್ಗದರ್ಶನದಲ್ಲಿ ನಡೆದಿದ್ದು, ಆಜಾದನನ್ನು ಹುಡುಕಲು ತೀರ್ವ ಪ್ರಯತ್ನವನ್ನು ಪೆÇಲೀಸರು ನಡೆಸಿದರು. ಆಜಾದ್ ಪೆÇಲೀಸರಿಗೆ ಸಿಗದೇ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ. ಕೈಗೆ ಸಿಕ್ಕರೂ ಸಿಗದಂತೆ ತಪ್ಪಿಸಿಕೊಂಡು ಬಿಡುತ್ತಿದ್ದ.

ಆಜಾದನನ್ನು ಹುಡುಕುವ ಪ್ರಯತ್ನವಂತೂ ನೂರು ಪಟ್ಟು ಹೆಚ್ಚಾಯಿತು. ಅವನೇ ಕ್ರಾಂತಿಕಾರಿಗಳ ಸೇನಾಪತಿ. ಅವನೇ ಕ್ರಾಂತಿ ಕಾರ್ಯಚರಣೆಗಳ ಯೋಜಕ. ಅವನೇ ಯಾವಾಗಲೂ ತಮಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಚಾಣಕ್ಯ ಎಂದು ಸರ್ಕಾರಕ್ಕೆ ಚೆನ್ನಾಗಿ ಗೊತ್ತಿತ್ತು. ಆದರೆ ಆಜಾದ್ ಅವರ ಕೈಗೆ ಅಷ್ಟು ಸುಲಭವಾಗಿ ಸಿಕ್ಕಿ ಬೀಳುವ ಮೂರ್ಖನಾಗಿರಲಿಲ್ಲ. ಎಷ್ಟೋ ಸಲ ಅವರ ಕೈಗೆ ಸಿಕ್ಕಿಬಿಟ್ಟಂತೆ ಅವರಿಗೆ ಕಂಡರೂ ಕ್ಷಣಾರ್ಧದಲ್ಲಿ ನುಣುಚಿಕೊಂಡು ಹೋಗಿಬಿಡುತ್ತಿದ್ದ ಸಾಮಥ್ರ್ಯವನ್ನು ಹೊಂದಿದ್ದಂತಹ ಚತುರನಾಗಿದ್ದರು.

ಹೊಂಚುಹಾಕುತ್ತಿದ್ದ ಬ್ರಿಟಿಷರಿಗೆ ಕಾಂಗ್ರೆಸ್ಸಿನ ಮಾಜಿ ಶಾಸಕ ಅಜಾದ್ ಗೆ ಮಾಡಿದ ಅನ್ಯಾಯವಾದರೂ ಏನು ಗೊತ್ತೇ??

ಅಂದು 1931 ನೇ ಇಸವಿ ಫೆಬ್ರವರಿ 27ನೇ ತಾರೀಖು ಬೆಳಗ್ಗೆ ಚಂದ್ರ ಶೇಖರ್ ಅಜಾದ್ ಒಬ್ಬರನ್ನು ಭೇಟಿ ಮಾಡಲು ಅಲಹಾಬಾದಿನಲ್ಲಿ ಆಲ್ಫ್ರೆಡ್ ಪಾರ್ಕಿನ ಕಡೆ ಹೆಜ್ಜೆ ಹಾಕಿದ್ದರು. ಆದರೆ ಮಿತ್ರದ್ರೋಹಿ ಕಾಂಗ್ರೆಸ್ಸಿಗನೊಬ್ಬ ಈ ಸುದ್ದಿಯನ್ನು ಬ್ರಿಟಿಷ್ ಪೆÇೀಲಿಸರಿಗೆ ಮುಟ್ಟಿಸಿ, ಅವರ ಬಳಿ ಹಣ ಪಡೆದು ತನ್ನ ಮನೆಗೆ ತೆರಳುತ್ತಾನೆ. ಆತ ಬೇರಾರು ಅಲ್ಲ…. ದೇಶದ್ರೋಹಿ ಎಂದೆ ಕರೆಸಿಕೊಳ್ಳುತ್ತಿರುವ “ವೀರಭದ್ರ ತಿವಾರಿ”!! ಎಂಜಲು ಕಾಸಿಗಾಗಿ ಅಜಾದ್ ರ ಸುಳಿವನ್ನು ನೀಡಿ ಹಣ ಪಡೆದಿದ್ದ ಇದೇ ದೇಶದ್ರೋಹಿ, ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ಸಿನಲ್ಲಿ ಶಾಸಕನಾಗಿಯೂ ಮೆರೆದಿದ್ದ. ಎಂತಹ ದುರ್ವಿಧಿ ನೋಡಿ!! ಕ್ರಾಂತಿಕಾರಿಯನ್ನು ಕೊಂದು ಶಾಸಕನ ಪಟ್ಟವನ್ನು ಅಲಂಕರಿಸಿದ ಈ ದೇಶದ್ರೋಹಿಯಿಂದ ನಡೆಯಬಾರದ ಘಟನೆಯೊಂದು ನಡೆದೇ ಹೋಗಿತ್ತು!!

ಕೆಲವೇ ನಿಮಿಷಗಳಲ್ಲಿ ಪೆÇಲೀಸ್ ಅಧಿಕಾರಿ ಹಾಲಿನ್ಸ್ ನೇತೃತ್ವದಲ್ಲಿ ಬ್ರಿಟಿಷ್ ಪೆÇಲೀಸರು ಉದ್ಯಾನವನ್ನು ಸುತ್ತುವರಿದರು. ಕಾರಿನಲ್ಲಿ ಬಂದ ನಾಟಬಾಪರ್ ಎಂಬ ಅಧಿಕಾರಿ ಆಜಾದ್ ತೊಡೆಗೆ ಗುರಿಯಿಟ್ಟು ಹೊಡೆದ. ಆ ಗುಂಡು ಆಜಾದ್ ಗೆ ತಾಕಿತು. ಅಪಾಯದ ಅರಿವಾದ ಕೂಡಲೇ ಆಜಾದ್ ತನ್ನ ಸ್ನೇಹಿತನನ್ನು ರಕ್ಷಿಸಿ ಹೋರಾಟಕ್ಕೆ ಸಜ್ಜಾದ. ಕೈಯಲ್ಲಿ ಬಂದೂಕು ಹಿಡಿದು ಒಂದೇ ಸಮನೆ ಗುಂಡು ಹಾರಿಸಿದ. 80 ಪೆÇಲೀಸರು ಮತ್ತು ಒಬ್ಬ ಆಜಾದ್. ಆಜಾದ್ ಚಿರತೆಯಂತೆ ಓಡಾಡುತ್ತಾ ಪೆÇಲೀಸರಿಗೆ ತಕ್ಕ ಉತ್ತರ ನೀಡಿದ. ಅರ್ಧ ಗಂಟೆಗೂ ಹೆಚ್ಚು ಕಾಲ ಯುದ್ದ ಮಾಡಿದ ಆಜಾದ್ ಗೆ ತನ್ನ ಬಳಿಯಿರುವ ಗುಂಡಿನ ಲೆಕ್ಕವಿತ್ತು.

ಆಜಾದ್ ಅವರ ನಿಶ್ಚಿತ ಗುರಿ ಮತ್ತು ಚಾಕಚಕ್ಯತೆಯನ್ನು ಕಂಡು ಬ್ರಿಟಿಷ್ ಅಧಿಕಾರಿ ಹಾಲಿನ್ಸ್ ದಂಗುಬಡಿದ. ಆದರೂ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿದ್ದ ಪೆÇಲೀಸರೊಂದಿಗೆ ಏಕಾಂಗಿಯಾಗಿ ಹೋರಾಟ ನಡೆಸುವುದು ಆಜಾದ್ ಗೆ ಅಸಾಧ್ಯವೇ ಆಗಿತ್ತು. ಪೆÇಲೀಸರು ತನಗೆ ಹತ್ತಿರವಾಗುತ್ತಿರುವುದನ್ನು ಆಜಾದ್ ಗಮನಿಸಿದರು. ಆದರೆ ಅವನ ಬಳಿ ಕೊನೆಯಲ್ಲಿ ಉಳಿದದ್ದು ಒಂದೇ ಒಂದು ಗುಂಡು !!

ಆಗ ಅವನಿಗೆ ಬಾಲ್ಯದ ಪ್ರತಿಜ್ಞೆ ಜ್ಞಾಪಕಕ್ಕೆ ಬಂತು; “ದುಷ್ಮನೋಂಕಿ ಗೋಲಿಯೋಂ ಕಾ ಹಮ್ ಸಾಮ್ನಾ ಕರೇಂಗೆ” ಅಂದರೆ ಶತ್ರುಗಳಿಗೆ ಜೀವಂತವಾಗಿ ನಾನು ಎಂದೂ ಸಿಕ್ಕಿ ಬೀಳುವುದಿಲ್ಲ ಎಂದು!! ಮತ್ತೇನೂ ಆಲೋಚಿಸದ ಆಜಾದ್ ಬಂದೂಕನ್ನು ನೇರವಾಗಿ ತನ್ನ ಹಣೆಗೆ ಗುರಿಯಾಗಿಸಿಕೊಂಡರಲ್ಲದೇ ಭಾರತ ಮಾತೆಯನ್ನು ಮನದಲ್ಲೇ ನೆನೆದು ಬಂದೂಕಿನ ಟ್ರಿಗರ್ ಒತ್ತಿದರು. ಒಮ್ಮೆಲೇ ರಕ್ತದೋಕುಳಿ ಹರಿಯಿತು. ಆದರೆ, ಆಜಾದ್ ಮುಖದ ಮೇಲಿನ ಮಂದಹಾಸ ಮಾತ್ರ ಹಾಗೆಯೇ ಇತ್ತು. ಸೇನಾನಿಯಂತೆ ತನ್ನ ತಾಯಿ ಭಾರತಿಗೆ ಕುಸುಮದಂತೆ ತನ್ನ ಪ್ರಾಣವನ್ನು ಅರ್ಪಿಸಿದರು. ಅಷ್ಟೇ ಅಲ್ಲದೇ, ಯೋಧ ಎಂದಿಗೂ ತನ್ನ ಆಯುಧವನ್ನು ತ್ಯಜಿಸುವುದಿಲ್ಲ’ ಎಂದು ಹೇಳಿದ ಅಜಾದ್, ಬ್ರಿಟಿಷರೊಂದಿಗೆ ಕಾದಾಡುತ್ತ ತನ್ನ ಪ್ರಾಣ ತ್ಯಜಿಸಿದರೂ ಕೈಯಲ್ಲಿನ ಆಯುಧವನ್ನು ಮಾತ್ರ ಬಿಡಲಿಲ್ಲ.

ಹೀಗೆ ಭಾರತದ ಕ್ರಾಂತಿಯ ದೀಪವೊಂದು ಆರಿ ಹೋಯಿತು. ತನ್ನ ತಾಯಿ ಭಾರತಿಗೆ ಕುಸುಮದಂತೆ ತನ್ನ ಪ್ರಾಣವನ್ನು ಅರ್ಪಿಸಿದ ಆಜಾದ್ ನ ಅಂತಿಮ ದರ್ಶನಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾರ್ಕ್ ಬಳಿ ಸೇರಿದರು. ಆದರೆ, ಬ್ರಿಟಿಷರು ಯಾರಿಗೂ ಅಂತಿಮ ದರ್ಶನ ಪಡೆಯಲು ಅವಕಾಶ ನೀಡಲಿಲ್ಲ. ಗಂಗೆಯ ದಡದಲ್ಲಿ ಆಜಾದರ ಅಂತ್ಯಕ್ರಿಯೆ ರಹಸ್ಯವಾಗಿ ನಡೆದೇ ಹೋಯಿತು.

ಆದರೆ ಪ್ರಚಂಡ ರಣ ಪರಾಕ್ರಮಿ, ಧ್ಯೇಯಜೀವಿ, ಸಾಹಸಿ, ಧೀರೋದಾತ್ತ ಕ್ರಾಂತಿಪುರುಷನಾಗಿ ಸ್ವಾತಂತ್ರ್ಯಯಜ್ಞದಲ್ಲಿ ಪೂರ್ಣಾಹುತಿಯಾದ ರಾಷ್ಟ್ರಭಕ್ತ ಚಂದ್ರಶೇಖರ ಅಜಾದ್ ಇಂದಿಗೂ ಕೂಡ ಇತಿಹಾಸದ ಪುಟಗಳಲ್ಲಿ ಅಚ್ಚಲಿಯಾಗಿಯೇ ಉಳಿದಿರುವಂತಹ ಕ್ರಾಂತಿಕಾರಿ!!

“ಬೋಲೋ ಭಾರತ್ ಮಾತಾ ಕೀ ಜೈ”!!!

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close