ಪ್ರಚಲಿತ

ಕಾಂಗ್ರೆಸ್ ಬಂದೊಡನೇ ಸಿಬಿಐಗೆ ನಿಷೇಧ.! ಅಧಿಕಾರಕ್ಕೇರುತ್ತಲೇ ಶುರುವಾಯ್ತು ರಾಜಕೀಯ ಧ್ವೇಷ.!

ನ್ನ ಅಧಿಕಾರಾವಧಿಯಲ್ಲಿ ಸಿಬಿಐ ಸಂಸ್ಥೆಯನ್ನು ಮನಬಂದಂತೆ ನಡೆಸಿಕೊಳ್ಳುತ್ತಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರ ಇದೀಗ ಪ್ರಧಾನಿ ಮೋದಿ ಆಡಳಿತದಲ್ಲಿ ಸಿಬಿಐ ವಿರುದ್ಧ ಕೆಂಡ ಕಾರುತ್ತಿದೆ. ಹೆಜ್ಜೆ ಹೆಜ್ಜೆಗೂ ಸಿಬಿಐ ಸಂಸ್ಥೆಯನ್ನು ದುರಪಯೋಗಪಡಿಸಿಕೊಳ್ಳುತ್ತಿದ್ದ ಕಾಂಗ್ರೆಸ್ ಇದೀಗ ಸಿಬಿಐ ಸಂಸ್ಥೆಯೊಳಗೆ ದುರ್ವರ್ತನೆ ತೋರಿದರೆಂದು ಸಿಬಿಐ ಸಂಸ್ಥೆಯಿಂದಲೇ ಅಮಾನತಿಗೊಳಗಾದ ಅಲೋಕ್ ವರ್ಮಾರಿಗಾಗಿ ಕಾಂಗ್ರೆಸ್ ಮಿಡಿಯುತ್ತಿದೆ.

ಇದೀಗ ಇತ್ತೀಚೆಗೆ ಅಧಿಕಾರಕ್ಕೇರಿದ ಛತ್ತೀಸ್ ಗಢ ಕಾಂಗ್ರೆಸ್ ಸರ್ಕಾರ ಸಿಬಿಐ ಗೆ ನಿಷೇಧ ಹೇರಿದೆ. ತನ್ನ ರಾಜ್ಯದಲ್ಲಿ ಯಾವುದೇ ರೀತಿಯ ತನಿಖೆ ಅಥವಾ ದಾಳಿಗಳನ್ನು ನಡೆಸಕೂಡದು ಎಂದು ಛತ್ತೀಸ್ ಗಢ ಸರ್ಕಾರ ಆದೇಶಿಸಿದೆ. ಈ ಮೂಲಕ ಮೋದಿ ಮೋದಿ ಸರ್ಕಾರದ ವಿರುದ್ಧ ದ್ವೇಷ ಕಾರುವ ಮೊರೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

ದೇಶದಲ್ಲಿ ಯಾವುದೇ ತನಿಖೆಯನ್ನೂ ಸಮರ್ಪಕವಾಗಿ ನಡೆಸುವ ಒಂದು ಸಂಸ್ಥೆಯಿದ್ದರೆ ಅದು ಸಿಬಿಐ ಮಾತ್ರ. ಇಂತಹಾ ಸಂಸ್ಥೆಯನ್ನು ಕಾಂಗ್ರೆಸ್ ಸರ್ಕಾರ ದೂರವಿಟ್ಟಿರುವುದು ಅಲ್ಲಿನ ರಾಜಕೀಯ ಭಯ ಹಾಗೂ ಹಿನ್ನೆಡೆಯನ್ನು ಕಾಣಬಹುದು. ಈ ಹಿಂದೆ ಪಶ್ಚಿಮ ಬಂಗಾಳ ಸಹಿತ ಕೆಲ ರಾಜ್ಯಗಳೂ ಇಂತಹಾ ನಿರ್ಧಾರಗಳನ್ನು ಪ್ರಕಟಿಸಿದ್ದರೂ ನಂತರ ಇದರ ಪರಿಣಾಮ ಕೆಟ್ಟದ್ದಾಗಿದ್ದರಿಂದ ಇಂತಹ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದವು.

ಛತ್ತೀಸ್ ಗಢ ಸರ್ಕಾರ ಇಂತಹಾ ನಿರ್ಧಾರಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇದು ಆ ಸರ್ಕಾರಕ್ಕೆ ಸಿಬಿಐ ಮೇಲಿನ ಭಯವೇ ಇವುಗಳಿಗೆಲ್ಲಾ ಕಾರಣವಾಗಿದೆ ಎಂದು ಛತ್ತೀಸ್ ಘಡ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close