ಪ್ರಚಲಿತ

ಕೇರಳದ ದೇವಸ್ವಂ ಬೋರ್ಡಿಗೆ ಸರಿಯಾದ ಪಾಠ ಕಲಿಸಿದ ಅಯ್ಯಪ್ಪ ಭಕ್ತರು!! ದೇವಸ್ಥಾನದ ಹುಂಡಿಯಲ್ಲಿ ಹಣವೆ ಇಲ್ಲ !! ಭಕ್ತರನ್ನು ಆಕರ್ಷಿಸಲು ಜಾಹೀರಾತು ನೀಡಲು ಮುಂದಾದ ದೇವಸ್ಥಾನದ ಆಡಳಿತ ಮಂಡಳಿ!!

ಸುಮ್ಮನಿರುವ ವಿಷ ಸರ್ಪವನ್ನು ಕೆಣಕಲು ಹೋದರೆ ಅದು ಕಚ್ಚದೆ ಬಿಡುವುದೆ? ಎಡ ಎಕ್ಕಡಾಗಳು ನಿರುಪದ್ರವಿ ಹಿಂದೂಗಳನ್ನು ಸುಖಾ ಸುಮ್ಮನೆ ಕೆಣಕುತ್ತಿದ್ದರೆ ಸುಮ್ಮನೆ ಬಿದ್ದುಕೊಂಡಿರಲು ಹಿಂದೂಗಳೇನು ನಪುಂಸಕರೆ? ಸನಾತನ ಧರ್ಮ ಹಿಂಸೆ ಮಾಡಬಾರದೆಂದು ಹೇಗೆ ಕಲಿಸಿಕೊಡುತ್ತದೋ ಅಂತೆಯೆ ಹಿಂಸೆ ಮಾಡುವವರನ್ನು ಸುಮ್ಮನೆ ಬಿಡಬೇಡಿ ಎಂದೂ ಹೇಳುತ್ತದೆ. ಒಬ್ಬ ಸನಾತನಿ ತಾನಾಗೇ ಯಾರಿಗೂ ಅನ್ಯಾಯ ಮಾಡಲು ಹೋಗಲಾರ ಆದರೆ ಇನ್ನೊಬ್ಬರ ಮೇಲೆ ಅನ್ಯಾಯ ಆಗುತ್ತಿದ್ದರೆ ಅದನ್ನು ಕಂಡೂ ಕಾಣದಂತೆ ಸುಮ್ಮನೆ ಕುಳಿತಿರಲಾರ. ಧರ್ಮ ರಕ್ಷಣೆಗಾಗಿ ಶಸ್ತ್ರ ಹಿಡಿಯಲೇ ಬೇಕು. ಆದರೆ ಈ ಬಾರಿ ಅಯ್ಯಪ್ಪ ಭಕ್ತರು ಶಸ್ತ್ರ ಎತ್ತದೆಯೆ ಕಮ್ಯೂನಿಷ್ಟರಿಗೆ ಬುದ್ದಿ ಕಲಿಸಿದ್ದಾರೆ.

ಶಬರಿಮಲೆಯ ಕಾಣಿಕೆ ಹುಂಡಿ ಖಾಲಿ ಖಾಲಿ

ಇಂತಹ ಒಂದು ಸಾತ್ವಿಕ ಪ್ರತಿಭಟನೆಯನ್ನು ಅಯ್ಯಪ್ಪ ಭಕ್ತರು ಕೈಗೊಳ್ಳಬಹುದೆನ್ನುವುದನ್ನು ಪಿಣರಾಯಿ ಸರ್ಕಾರ ಕನಸಿನಲ್ಲೂ ಕಂಡಿರಲಿಕ್ಕಿಲ್ಲ. ಸದಾ ಭಕ್ತರಿಂದ ಗಿಜಿಗುಡುವ ಮಂದಿರ ಈ ಬಾರಿ ಅತಿ ಕಡಿಮೆ ಭಕ್ತರನ್ನು ಕಂಡಿದೆ. ಝಣ ಝಣ ಕಾಂಚಾಣದಿಂದ ತುಂಬಿ ತುಳುಕುತ್ತಿದ್ದ ಕಾಣಿಕೆ ಹುಂಡಿಯಲ್ಲಿ ಹಣವೆ ಇಲ್ಲದಾಗಿದೆ! ಇದು ಹಿಂದೂಗಳ ಒಗ್ಗಟ್ಟಿನ ಪ್ರತೀಕ. ನಿದ್ದೆಯಲ್ಲಿದ್ದ ಹಿಂದೂಗಳು ಜಾಗೃತಾವಸ್ಥೆಗೆ ಮರಳುತ್ತಿರುವ ಪ್ರತೀಕ.

ತಮ್ಮ ನಂಬಿಕೆಗಳನ್ನು ಘಾಸಿಗೊಳಿಸಿದ ಕೇರಳ ಸರ್ಕಾರಕ್ಕೆ ಸರಿಯಾದ ಪಾಠವನ್ನೆ ಕಲಿಸಿದ್ದಾರೆ ಹಿಂದೂಗಳು. ಈ ಹಿಂದೆ ಕಾಣಿಕೆ ಹುಂಡಿಯೊಳಗೆ “ಶಬರಿಮಲೆಯನ್ನು ರಕ್ಷಿಸಿ” ಎನ್ನುವ ಚೀಟಿ ಹಾಕಿ ತಮ್ಮ ಅಸಹನೆಯನ್ನು ತೋರಿದ್ದ ಭಕ್ತರು ಈ ಬಾರಿ ಕಾಣಿಕೆ ಹುಂಡಿಗೆ ಅತ್ಯಲ್ಪ ಹಣವನ್ನು ಹಾಕಿದ್ದಾರೆ ಮಾತ್ರವಲ್ಲ ಅರವಣ ಪಾಯಸದ ಮಾರಾಟದಲ್ಲೂ ಹಿಂದೆಂದೂ ಕಂಡಿರದ ಕಡಿತ ದಾಖಲಾಗಿದೆ.

ಪರಿಸ್ಥಿತಿ ಹೀಗೇ ಮುಂದುವರಿದರೆ ದೇವಸ್ವಂನ ಅಧಿಕಾರಿಗಳಿಗೆ ಸಂಬಳ ಕೊಡಲೂ ಹಣವಿರುವುದಿಲ್ಲ ಎಂದು ಆಡಳಿತ ಮಂಡಳಿ ಕಣ್ಣೀರು ಹಾಕುತ್ತಿದೆ. ಭಕ್ತರ ಕಣ್ಣಲ್ಲಿ ನೀರು ತರಿಸಿದ ಕೆಂಪು ಉಗ್ರರಿಗೆ ಇದು ಆಗಬೇಕಾದ್ದೆ. ಹಿಂದೂಗಳನ್ನು ಕೆಣಕಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವ ಸತ್ಯದ ಅರಿವು ಎಲ್ಲರಿಗೂ ಆಗಬೇಕು. ಹಿಂದೂಗಳ ಹಣ ತಿಂದು ಕೊಬ್ಬಿದವರೆಲ್ಲರೂ ರಕ್ತ ಕಣ್ಣೀರು ಸುರಿಸಬೇಕು. ಶಬರಿಮಲೆ ಮಾತ್ರವಲ್ಲ ಸರಕಾರದ ಸುಪರ್ದಿಯಲ್ಲಿರುವ ಎಲ್ಲಾ ದೇವಸ್ಥಾನದ ಹುಂಡಿಗಳೂ ಹೀಗೆ ಭಣಗುಟ್ಟ ಬೇಕು. ಹಿಂದೂಗಳ ಒಗ್ಗಟ್ಟು, ಓಲೈಕೆ-ಭಾಗ್ಯದಾತ ಸರಕಾರಗಳ ಸೊಕ್ಕು ಮುರಿಯಬೇಕು.

ಭಕ್ತರನ್ನು ಆಕರ್ಷಿಸಲು ಜಾಹಿರಾತಿನ ಮೊರೆ ಹೋಗಲಿರುವ ಆಡಳಿತ ಮಂಡಳಿ

ಕೇರಳ ಸರಕಾರದ ಅಮಾನವೀಯ ವರ್ತನೆಯಿಂದ ಬೇಸತ್ತು, ಮತ್ತು ಪ್ರತಿಭಟನೆಯ ಅಂಗವಾಗಿ ಈ ಬಾರಿ ಶಬರಿಮಲೆ ಯಾತ್ರೆ ಕೈಗೊಳ್ಳುವವರ ಸಂಖ್ಯೆಯಲ್ಲಿ 60 ಶೇಕಡಾದಷ್ಟು ಇಳಿಕೆ ದಾಖಲಾಗಿದೆ. ಹೀಗಾಗಿ ಶಬರಿಮಲೆಗೆ ಭಕ್ತರನ್ನು ಆಕರ್ಷಿಸಲು ದೇವಾಲಯದ ಆಡಳಿತವು ದೇವಾಲಯವು “ಸುರಕ್ಷಿತ” ಎಂದು ಹೇಳುವ ಒಂದು ಪ್ರಚಾರ ಅಭಿಯಾನವನ್ನು ಪ್ರಾರಂಭಿಸಲು ಚಿಂತಿಸಿದೆ. ಈ ಪ್ರಚಾರ ಅಭಿಯಾನವನ್ನು ನೆರೆಯ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿಯೂ ಚಲಾಯಿಸಲು ನಿರ್ಧರಿಸಲಾಗಿದೆ.

2016-17ರಲ್ಲಿ ಕೇವಲ ಅರವಣ ಪಾಯಸದಿಂದಲೆ 300 ಕೋಟಿ ರೂಪಾಯಿ ಆದಾಯ ಬಂದಿತ್ತು. ದಿನವೊಂದಕ್ಕೆ 48,000 ಕ್ಯಾನ್ ಗಳು ಮಾರಾಟವಾಗುತ್ತಿದ್ದವು. ಆದರೆ ಈ ಬಾರಿ ಭಕ್ತರೂ ಇಲ್ಲದೆ, ಪ್ರಸಾದ ಕೊಳ್ಳುವ ಆಸಕ್ತಿಯೂ ಇಲ್ಲದೆ ಕೇವಲ 10,000 ಕ್ಯಾನ್ ಗಳಷ್ಟೆ ಪ್ರಸಾದ ತಯಾರಿಸಲಾಗುತ್ತಿದೆ. ಹಿಂದೂಗಳು ಒಗ್ಗಟ್ಟಾದರೆ ಉಳಿದವರೆಲ್ಲ ತಿನ್ನೋಕು ಗತಿಯಲ್ಲೆ ಬೀದಿಗೆ ಬೀಳುತ್ತಾರೆ ಎನ್ನುವುದು ಇದರಲ್ಲೆ ಗೊತ್ತಾಗುತ್ತದೆ . ನಾವು ಗೆದ್ದೆವು ಎಂದು ತೊಡೆ ತಟ್ಟಿ ಬೀಗಿದ ಎಡ ಎಕ್ಕಡಾಗಳೆಲ್ಲಾ ಮಣ್ಣು ಮುಕ್ಕುವ ಕಾಲ ಬರುತ್ತಲಿದೆ. ಹಿಂದೂಗಳ ಒಗ್ಗಟ್ಟು ಹೀಗೆ ಮುಂದುವರಿಯಬೇಕು ಹಿಂದೂ ದ್ವೇಷಿಗಳೆಲ್ಲ ಹೇಳ ಹೆಸರಿಲ್ಲದಂತೆ ನಾಶವಾಗಬೇಕು.

–ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close