ಪ್ರಚಲಿತ

ಕಾಂಗ್ರೆಸ್ ಉಸ್ತುವಾರಿಗೆ ಸವಾಲೆಸೆದ ಬಿ.ಎಸ್.ವೈ.! ತಾಕತ್ತಿದ್ದರೆ ನಮ್ಮ ಶಾಸಕರನ್ನು ಮುಟ್ಟಿ ನೋಡಿ ಎಂದ ಯಡಿಯೂರಪ್ಪ..!

ರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋತು ಮಖಾಡೆ ಮಲಗಿದ್ದ ಎರಡು ರಾಜಕೀಯ ಪಕ್ಷಗಳು ಮೈತ್ರಿ ಸರಕಾರವನ್ನು ರಚಿಸಿ ಈಗ ಇಂದೋ ನಾಳೆನೋ ಬೀಳೋ ಹಂತದಲ್ಲಿದೆ ಎಂಬ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಮೈತ್ರಿ ಸರಕಾರ ರಚಿಸಿದ್ದ ಆರಂಭದಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಪೋಟಗೊಂಡು ಪರಿಸ್ಥಿತಿ ಡೋಲಾಯಮಾನವಾಗಿತ್ತು. ಇದೀಗ ಮತ್ತೆ ಕಾಂಗ್ರೆಸ್ ಪಕ್ಷದೊಳಗೆ ಆಕ್ರೋಶ ಭುಗಿಲೆದ್ದಿದ್ದು ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿದೆ ಎನ್ನಲಾಗಿದೆ.

ಮೈತ್ರಿ ಸರಕಾರ ಹಾಗೂ ಸ್ವಪಕ್ಷೀಯ ನಾಯಕ ಡಿಕೆ ಶಿವಕುಮಾರ್ ವಿರುದ್ಧ ಮುನಿಸಿಕೊಂಡಿರುವ ಬೆಳಗಾವಿ ಬ್ರದರ್ಸ್ ಸತೀಶ್ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ ಭಿನ್ನಮತ ಸ್ಪೋಟಗೊಂಡ ಬೆನ್ನಲ್ಲೇ ಬಳ್ಳಾರಿಯಿಂದ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತದ ಧೂಳು ಆರಂಭವಾಗಿದೆ. ಮಾತ್ರವಲ್ಲದೆ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಕೂಡಾ ಕಾಂಗ್ರೆಸ್ ಹಾಗೂ ಮೈತ್ರಿ ಸರಕಾರದ ವಿರುದ್ಧ ತೊಡೆ ತಟ್ಟಿದ್ದಾರೆ. ಈ ಮೂಲಕ ಭದ್ರವಾಗಿ 5 ವರ್ಷ ಈ ಕುರ್ಚಿಯಲ್ಲೇ ಕುಳಿತುಕೊಳ್ಳುತ್ತೇನೆ ಎಂಬ ಕನಸು ಕಾಣುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಆತಂಕ ಶುರುವಾಗಿದೆ. ಭಿನ್ನಮತೀಯ ಶಾಸಕರು ಭಾರತೀಯ ಜನತಾ ಪಕ್ಷ ಸೇರುವ ಸಾಧ್ಯತೆಗಳು ಇದ್ದು ಇವರನ್ನು ತಡೆಯಲು ಕಾಂಗ್ರೆಸ್ಸಿನ ನಾಯಕರುಗಳು ಬಿಜೆಪಿ ನಾಯಕರ ಮೇಲೆ ಆರೋಪ ಗೈದಿದ್ದಾರೆ.

Image result for kc venu with dk shivakumar

ಪರಮೇಶ್ವರ್, ಡಿಕೆ ಶಿವಕುಮಾರ್ ಹಾಗೂ ಸಾರಾ ಮಹೇಶ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡೂರಾವ್ ಹಾಗೂ ಸಾರಾ ಮಹೇಶ್ ನಮ್ಮ ಬಳಿ 10 ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದರು. ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕೂಡಾ ಬಿಜೆಪಿ ಶಾಸಕರು ನಮ್ಮ ಜೊತೆಯಲ್ಲಿದ್ದಾರೆ ಎಂಬ ಬಾಂಬ್ ಹಾಕಿದ್ದರು.

ಸವಾಲೆಸೆದ ಯಡಿಯೂರಪ್ಪ..!

ಇನ್ನು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಗೆ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸವಾಲೆಸೆದಿದ್ದಾರೆ. 10, 20 ಎಂದು ನೀವು ಲೆಕ್ಕ ಹೇಳೋದು ಬೇಡ. ನಿಮಗೆ ತಾಕತ್ತಿದ್ದರೆ ನಮ್ಮ ಒಬ್ಬ ಶಾಸಕನನ್ನು ಮುಟ್ಟಿ ನೋಡಿ ಎಂದು ಸವಾಲೆಸೆದಿದ್ದಾರೆ. 104 ಶಾಸಕರು ನಮ್ಮಲ್ಲಿದ್ದಾರೆ. ಇಂದಲ್ಲ ನಾಳೆ ನಾವು ಸರಕಾರ ರಚಿಸುತ್ತೇವೆ. ನಮ್ಮ ಒಬ್ಬನೇ ಒಬ್ಬ ಶಾಸಕರನ್ನು ನಿಮ್ಮಿಂದ ಟಚ್ ಮಾಡೋಕ್ಕೆ ಆಗೋದಿಲ್ಲ ಎಂದು ಸವಾಲೆಸೆದಿದ್ದಾರೆ.

Image result for bsy

ಈ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ್ದ ಯಡಿಯೂರಪ್ಪ “ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರೆಮಾಡಿ ಯಾವುದೇ ಬಹಿರಂಗ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರ ಸೂಚನೆಯನ್ನು ನಾನು ನಮ್ಮ ರಾಜ್ಯದ ನಾಯಕರಿಗೆ ನೀಡಿದ್ದೇನೆ” ಎಂದು ಹೇಳಿದ್ದಾರೆ. ಒಟ್ಟಾರೆ ಸರಕಾರ ಬೀಳುವ ಭಯದಲ್ಲಿ ನಂಬರ್ ಗೇಮ್ ಆಟದಂತೆ ಸುಳ್ಳು ಹೇಳುತ್ತಿದ್ದ ಕಾಂಗ್ರೆಸ್ ಪಕ್ಷದ ನಾಯಕರಿಗೆ ಬಿ.ಎಸ್.ವೈ. ಸರಿಯಾದ ಪಾಠವನ್ನೇ ಮಾಡಿದ್ದಾರೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close