ಪ್ರಚಲಿತ

ಬ್ರೇಕಿಂಗ್! ಕರ್ನಾಟಕ ವಿಧಾನಸಭೆ ವಿಸರ್ಜನೆಯೊಂದೇ ದಾರಿಯೆಂದ ಜೆಡಿಎಸ್ ನಾಯಕ! ಕರುನಾಡಿನಲ್ಲಿ ನಡೆಯಲಿದೆಯಾ ಮಧ್ಯಂತರ ಚುನಾವಣೆ?

ಅದೇಗೋ ಕುಂಟುತ್ತಾ ಕುಂಟುತ್ತಾ ಒಂದು ವರ್ಷದವರೆಗೆ ಸಾಗಿಬಂದ ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಪಕ್ಷಗಳ ಮೈತ್ರಿ ಸರ್ಕಾರ ಇದೀಗ ಪತನವಾಗುವ ಲಕ್ಷಣಗಳು ಗೋಚರಿಸುತ್ತಿದೆ. ಈವರೆಗೂ ಈ ಸರ್ಕಾರ ಪತನವಾಗುತ್ತದೆ ಎಂದು ಭಾರತೀಯ ಜನತಾ ಪಕ್ಷದ ನಾಯಕರು ಹೇಳುತ್ತಾ ಬರುತ್ತಿದ್ದರೂ ಅದಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿರಲಿಲ್ಲ. ಆದರೆ ಈ ಬಾರಿ ಸ್ವತಃ ಜೆಡಿಎಸ್ ಮುಖಂಡರೇ ಇಂತಹಾ ಹೇಳಿಕೆಯನ್ನು ನೀಡಿ ಸರ್ಕಾರದ ಪತನದ ಮುನ್ಸೂಚನೆ ನೀಡಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮುಸುಕಿನ ಗುದ್ದಾಟ ತಾರಕಕ್ಕೇರಿದ್ದು ಜೆಡಿಎಸ್ ನಾಯಕರ ಕೋಪ ನೆತ್ತಿಗೇರಿದಂತಿದೆ. “ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಇದು ಉಸಿರುಗಟ್ಟುವ ವಾತಾವರಣ ನಿರ್ಮಾಣವಾದಂತಿದೆ. ಕಾಂಗ್ರೆಸ್ ನಾಯಕರು ದಿನಕ್ಕೊಂದರಂತೆ ಹೇಳಿಕೆ ಕೊಟ್ಟು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹೀಗಾಗಿ ಇದಕ್ಕೆಲ್ಲಾ ವಿಧಾನಸಾಭೆ ವಿಸರ್ಜನೆಯೊಂದೇ ಪರಿಹಾರ. ಮೈತ್ರಿ ಮುರಿದುಕೊಂಡು ಚುನಾವಣೆಗೆ ಹೋಗುವುದು ಒಳ್ಳೆಯದು”… ಹೀಗೆಂದು ಹೇಳಿದವರು ಮತ್ಯಾರೂ ಅಲ್ಲ, ಸ್ವತಃ ಜೆಡಿಎಸ್ ಪಕ್ಷದ ಪ್ರಶ್ನಾತೀತ ನಾಯಕರಾದ ಬಸವರಾಜ ಹೊರಟ್ಟಿ.

ಸದಾ ಕಾಂಗ್ರೆಸ್ ಜೊತೆ ಕಚ್ಚಾಡುವುದಕ್ಕಿಂತ ಇದು ಉತ್ತಮ ಪರಿಹಾರ ಎಂದು ಹೇಳಿರುವ ಹೊರಟ್ಟಿ ಮಧ್ಯಂತರ ಚುನಾವಣೆಗೆ ಆಸಕ್ತಿ ವಹಿಸಿದ್ದಾರೆ. ರಾಜ್ಯಪಾಲರ ಪ್ರವೇಶಕ್ಕೂ ಮುನ್ನವೇ ವಿಧಾನಸಭೆ ವಿಸರ್ಜಿಸುವುದು ಸರ್ಕಾರದ ಪ್ಲಾನ್ ಕೂಡಾ ಆಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಖಾಸಗಿ ವಾಹಿನಿಯ ವರದಿಗಾರರ ಜೊತೆ ಮಾತನಾಡಿದ ಹೊರಟ್ಟಿಯವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

-ಏಕಲವ್ಯ

Related Articles

FOR DAILY ALERTS
 
FOR DAILY ALERTS
 
Close