ಪ್ರಚಲಿತ

ಬ್ರೇಕಿಂಗ್.! ಹೈಕಮಾಂಡ್ ಗೆ ಡೋಂಟ್ ಕೇರ್! ಡಿಕೆಶಿ ಬಂದರೆ ನೇಣುಬಿಗಿದುಕೊಳ್ಳುವೆ, ಮೈತ್ರಿಯಾದರೆ ನನ್ನ ಹೆಣವೂ ಪ್ರಚಾರ ಮಾಡೋದಿಲ್ಲವೆಂದ ಕಾಂಗ್ರೆಸ್ ಶಾಸಕ.! ರಾಮನಗರದಲ್ಲಿ ತಲೆಮೇಲೆ ಕೈಇಟ್ಟುಕೊಂಡ ಕುಮಾರಸ್ವಾಮಿ.!

ಭಾರತೀಯ ಜನತಾ ಪಕ್ಷವನ್ನು ಏಕಾಂಗಿಯಾಗಿ ಸೋಲಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅರಿತಿರುವ ಕಾಂಗ್ರೆಸ್ ಹಾಗೂ ಜನತಾದಳ ಉಪಚುನಾವಣೆಯಲ್ಲಿ ಮೈತ್ರಿಯ ಮಂತ್ರವನ್ನು ಜಪಿಸುತ್ತಿದೆ. ಕಾಂಗ್ರೆಸ್ ಹಾಗೂ ಜನತಾದಳ ಒಟ್ಟಾಗಿ ಚುನಾವಣೆ ಎದುರಿಸಿ ಬಿಜೆಪಿಯನ್ನು ಮಣಿಸುವ ತಂತ್ರವನ್ನು ಹೂಡುತ್ತಿದೆ. ಆದರೆ ಆರಂಭದಲ್ಲೇ ಗೊಂದಲ ಏರ್ಪಟ್ಟಿದ್ದು ಮಂಡ್ಯ, ರಾಮ ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಮೈತ್ರಿಗೆ ಮೈತ್ರಿ ಪಕ್ಷಗಳಿಂದಲೇ ಅಪಸ್ವರ ಕೇಳಿಬರುತ್ತಿದೆ.

ನಿನ್ನೆ ತಾನೇ ಕಾಂಗ್ರೆಸ್ ವಿಧಾನ ಪರಿಷತ್ ಶಾಸಕ ಸಿಎಂ ಲಿಂಗಪ್ಪನವರ ಪುತ್ರ ಚಂದ್ರಶೇಖರ್ ಹಾಗೂ ರಾಮನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ 25ಕ್ಕೂ ಅಧಿಕ ಮಂದಿ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದರು. ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದ ಮೈತ್ರಿ ಪಕ್ಷಗಳಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ.

Related image

ರಾಮನಗರ ಕಾಂಗ್ರೆಸ್ ನಾಯಕ ಹಾಗೂ ವಿಧಾನ ಪರಿಷತ್ ಶಾಸಕ ಸಿಎಂ ಲಿಂಗಪ್ಪ ಸ್ವಪಕ್ಷದ ವಿರುದ್ಧವೇ ಕೆಂಡ ಕಾರಿದ್ದಾರೆ. ರಾಮನಗರ ವಿಧಾನಸಭಾ ಉಪಚುನಾವಣೆಯಲ್ಲೂ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾನು ಈ ಹಿಂದಿನಿಂದಲೂ ಹೇಳುತ್ತಿದ್ದೇನೆ, ಈಗಲೂ ಹೇಳುತ್ತೇನೆ. ಮೈತ್ರಿ ಬೇಡ, ಕಾಂಗ್ರೆಸ್ಸಿನಿಂದ ಪ್ರತ್ಯೇಕ ಅಭ್ಯರ್ಥಿಯನ್ನು ಕಣಕ್ಕಿಳಿಸೋಣ. ಜನತಾದಳಕ್ಕೆ ನಾವ್ಯಾಕೆ ತಲೆಬಾಗಬೇಕು. ಒಂದು ವೇಳೆ ಕಾಂಗೆಸ್ಸಿನಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ನನ್ನ ಹೆಣವೂ ಪ್ರಚಾರಕ್ಕೆ ಹೋಗೋದಿಲ್ಲ. ಮಾತ್ರವಲ್ಲದೆ ನನ್ನ ಮುಂದಿನ ನಿರ್ಧಾರವನ್ನು ಕಾರ್ಯಕರ್ತರ ಜೊತೆ ಸಮಾಲೋಚಿಸಿ ಕೈಗೊಳ್ಳಬೇಕಾಗುತ್ತದೆ” ಎಂದು ಮಾರ್ಮಿಕವಾಗಿ ಹೇಳಿಕೆ ನೀಡಿದ್ದಾರೆ.

ಇಷ್ಟಕ್ಕೇ ನಿಲ್ಲಿಸದ ಸಿಎಂ ಲಿಂಗಪ್ಪ ಡಿಕೆ ಶಿವಕುಮಾರ್ ವಿರುದ್ಧವೂ ಕೆಂಡ ಕಾರಿದ್ದಾರೆ. “ಮೈತ್ರಿ ಸರ್ಕಾರ ರಚನೆಯಾಗಿದ್ದು ಡಿಕೆಶಿ ಕಾರಣದಿಂದಲ್ಲ. ಡಿಕೆಶಿ ಜನತಾದಳದ ಜೊತೆ ಹೋಗಿದ್ದಾರೆ ಅಷ್ಟೇ. ಅವರ ಪವರ್ ಇಲ್ಲಿ ನಡೆಯೋದಿಲ್ಲ. ಡಿಕೆಶಿ ಪ್ರಚಾರಕ್ಕೆ ಬಂದರೆ ನಾನೇ ನೇಣು ಬಿಗಿದುಕೊಳ್ಳುವೆ. ರಾಮನಗರದಲ್ಲಿ ಜೆಡಿಎಸ್ ಜೊತೆ ಸಹಕರಿಸಿ ಎಂದು ಹೈಕಮಾಂಡ್ ಹೇಳಿದೆ. ಆದರೆ ನಾನು ಹೈಕಮಾಂಡ್ ಹೇಳಿದ್ರೂ ಜೆಡಿಎಸ್ ಗೆ ಸಹಕರಿಸಲ್ಲ. ನನಗೆ ನನ್ನ ಕಾರ್ಯಕರ್ತರ ಭಾವನೆಯೇ ಮುಖ್ಯ” ಎಂದು ಹೇಳಿದ್ದಾರೆ.

ಚುನಾವಣೆಗೆ ದಿನಾಂಕ ನಿಗಧಿಯಾಗಿದ್ದು ಇದೀಗ 3 ಪಕ್ಷಗಳಿಗೆ ಪ್ರತಿಷ್ಟೆಯ ಕಣವಾಗಿದೆ. ಜನತಾದಳಕ್ಕೆ ಸುಲಭದ ತುತ್ತಾಗಿದ್ದ ರಾಮನಗರ ವಿಧಾನಸಭಾ ಕ್ಷೇತ್ರ ಇದೀಗ ಭಾರತೀಯ ಜನತಾ ಪಕ್ಷ ಪಾಲಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close