ಪ್ರಚಲಿತ

ಸೇನಾ ಪದ್ಧತಿಗಳಲ್ಲಿ ಬದಲಾವಣೆಯ ಶಕೆ ಆರಂಭ!! ಭ್ರಷ್ಟಾಚಾರ, ಹೊಗಳುಭಟ್ಟತನಕ್ಕೆ ಬ್ರೇಕ್ ಹಾಕಲಿದ್ದಾರೆ ಬಿಪಿನ್ ರಾವತ್!!

ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ಸೇನಾ ಕ್ಷೇತ್ರದಲ್ಲಿ ನಾನಾ ಬದಲಾವಣೆಗಳು ನಡೆಯುತ್ತಲೇ ಇದ್ದು, ದೇಶದ ರಕ್ಷಣಾ ಕ್ಷೇತ್ರದಲ್ಲಿ ಬದಲಾವಣೆಯ ಶಕೆ ಆರಂಭವಾಗುತ್ತಿರುವುದಂತೂ ಅಕ್ಷರಶಃ ನಿಜ!! ಶತ್ರುಗಳ ಉಪಟಳದಿಂದ ಭಾರತವನ್ನು ರಕ್ಷಿಸಿ ಶತ್ರುಗಳ ಹೆಡೆಮುರಿ ಕಟ್ಟುತ್ತಿರುವ ಭಾರತದ ರಕ್ಷಣಾ ಕ್ಷೇತ್ರವು ವಿಶ್ವದಲ್ಲೆ ಪ್ರಬಲ ಸೇನೆ ಎನ್ನುವ ಖ್ಯಾತಿಗೆ ಪಾತ್ರವಾಗುತ್ತಿರುವ ಬೆನ್ನಲ್ಲೇ ಸೇನೆಯಲ್ಲಿ ತೀವ್ರ ಬದಲಾವಣೆ ತರಲು ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ನಿರ್ಧರಿಸಿದ್ದಾರೆ. 

ಹೌದು…. ಈಗಾಗಲೇ ಭಾರತೀಯ ಸೇನೆಯ ಕದನ ಸಾಮರ್ಥ್ಯ ಹಾಗೂ ಸೇನೆಯ ವಿಸ್ತರಣೆ ಮತ್ತು ಸೇನೆಯ ವೆಚ್ಚದ ಸಮತೋಲನ, ಸೇನೆಯಲ್ಲಿ ಸಾಮಾಗ್ರಿ ಪೂರೈಕೆ ಹಾಗೂ ಸಹಾಯಕ ಸಿಬ್ಬಂದಿ ಮತ್ತು ಕದನಕ್ಕೆ ಸಿದ್ಧವಿರುವ ಸೈನಿಕರ ಪ್ರಮಾಣ ಸುಧಾರಣೆ, ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಸೇನೆಯ ಕಟ್ಟುವ ಕುರಿತಾಗಿ ಅಧ್ಯಯನ ನಡೆಸಲು ಕೇಂದ್ರ ಸರಕಾರವು ಮಾಜಿ ಲೆಫ್ಟಿನೆಂಟ್ ಜೆನರಲ್ ಶೇಖಟ್ಕರ್ ನೇತೃತ್ವದಲ್ಲಿ ಮಿಲಿಟರಿ ತಜ್ಞರ ಸಮಿತಿಯನ್ನು ರಚಿಸಿತ್ತು. ಅಷ್ಟೇ ಅಲ್ಲದೇ, ಈ ಸಮಿತಿಯು ತನ್ನ ಅಧ್ಯಯನ ಮುಗಿಸಿ ಸರಕಾರಕ್ಕೆ ವರದಿಯನ್ನು ಸಲ್ಲಿಸಿತ್ತೂ ಕೂಡ!!

Image result for modi

ಆದರೆ ಇದೀಗ ಸೇನೆಯಲ್ಲಿ ತೀವ್ರ ಬದಲಾವಣೆ ತರಲು ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ನಿರ್ಧರಿಸಿದ್ದು, ಈ ಹಿನ್ನೆಲೆ ದೇಶದಲ್ಲಿರುವ 12 ಲಕ್ಷಕ್ಕೂ ಅಧಿಕ ಸೈನಿಕರಿಗೆ ಭೂ ಸೇನಾ ಮುಖ್ಯಸ್ಥ ಅನೇಕ ನಿರ್ದೇಶನಗಳನ್ನು ನೀಡಿದ್ದಾರೆ!! ಅಷ್ಟೇ ಅಲ್ಲದೇ, ಇವುಗಳನ್ನು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ಈಗಾಗಲೇ ಲೆಫ್ಟಿನೆಂಟ್ ಜನರಲ್ ಡಿ.ಬಿ. ಶೇಕಾತ್ಕಾರ್ ಸಮಿತಿ 2016ರ ಡಿಸೆಂಬರ್ ನಲ್ಲಿ ವರದಿ ರಚಿಸಿ ಸರಕಾರಕ್ಕೆ ಸಲ್ಲಿಸಿದ್ದು 99 ಶಿಫಾರಸುಗಳನ್ನು ರಕ್ಷಣಾ ಸಚಿವಾಲಯ ಪರಿಶೀಲನೆಗೆ ತೆಗೆದುಕೊಂಡಿದೆ. ಇವುಗಳಲ್ಲಿ 65ಕ್ಕೆ ಮಾಜಿ ರಕ್ಷಣಾ ಸಚಿವ ಜೇಟ್ಲಿ ಅಭಯ ಸೂಚಿಸಿದ್ದು, ಡಿಸೆಂಬರ್ 2019ರ ವೇಳೆಗೆ ಈ ಸುಧಾರಣೆ ಜಾರಿಗೆ ತರಬೇಕು ಎಂದು ಸಚಿವಾಲಯ ತಿಳಿಸಿತ್ತು!!

ಆದರೆ ಇದೀಗ ಸೇನಾ ಪದ್ಧತಿಗಳಲ್ಲಿ ತೀವ್ರ ಬದಲಾವಣೆ ತರಲು ನಿರ್ಧರಿಸಿರುವ ಬಿಪಿನ್ ರಾವತ್ ಸೇನಾ ಕ್ಯಾಂಟೀನಿನ ದುರ್ಬಳಕೆ ತಡೆಯುವುದು, ಆಡಂಬರದ ಕಾರ್ಯಗಳನ್ನು ತಡೆಯುವುದು, ಭಟ್ಟಂಗಿತನ ತಡೆಯುವಿಕೆ, ಹಿರಿಯ ಸೇನಾಧಿಕಾರಿಗಳಿಗಿರುವ ಆರ್ಡಲಿ ಪದ್ಧತಿ ನಿಲ್ಲಿಸುವುದು ಹಾಗೂ ನೈತಿಕ ಪರಿಭಾಷಿಕರಿಗೆ ಅನುಕರಣೀಯ ಶಿಕ್ಷೆಯನ್ನು ನೀಡುವುದು ಸೇರಿದಂತೆ ಅನೇಕ ಪದ್ಧತಿಗಳಲ್ಲಿ ಬದಲಾವಣೆ ತರಲು ಮುಂದಾಗಿದ್ದಾರೆ!!

ಇನ್ನು ಈ ಬಗ್ಗೆ ಕೆಲವರು ಸೇನೆಯ ಆಂತರಿಕ ಆರೋಗ್ಯವನ್ನು ಕಾಪಾಡಲು ಇದು ಅಗತ್ಯ ಎಂದು ಒಪ್ಪಿಕೊಂಡರೆ, ಸೇನಾ ಸಮುದಾಯದ ಹಲವು ವಿಚಾರಗಳಲ್ಲಿ ಬಿಪಿನ್ ರಾವತ್ ತೀವ್ರ ಟೀಕೆಗಳನ್ನು ಎದುರಿಸುತ್ತಿರುವ ಹಿನ್ನೆಲೆ ಈ ರೀತಿಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಅಷ್ಟೇ ಅಲ್ಲದೇ, ಮುಚ್ಚಿರುವ ರಸ್ತೆಗಳನ್ನು ತೆರೆಯಲು ಸೇನೆಯ ಬಳಕೆ, ನಗರಗಳಲ್ಲಿ ಸೇತುವೆಗಳ ನಿರ್ಮಾಣ ಹಾಗೂ ಹಲವು ಎತ್ತರದ ಪ್ರದೇಶಗಳಲ್ಲಿ ತ್ಯಾಜ್ಯದ ನಿರ್ಮೂಲನೆ ಮಾಡುವುದು ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಿಸುತ್ತಿರುವ ಬಗ್ಗೆ ರಾವತ್ ವಿರುದ್ಧ ತೀವ್ರ ಟೀಕೆಗಳು ಕೇಳಿ ಬರುತ್ತಿತ್ತು.

ಆದರೆ ಹಲವು ದಶಕಗಳಿಂದಲೂ ಈ ರೀತಿಯ ಅನೇಕ ನಿಯಮಗಳು ಜಾರಿಯಲ್ಲಿದ್ದರೂ ಕೂಡ ಇದು ಕಟ್ಟುನಿಟ್ಟಾಗಿ ಜಾರಿಯಾಗಿರಲಿಲ್ಲ. ಈ ಹಿನ್ನೆಲೆ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ರಾವತ್ ಪ್ರಯತ್ನ ಪಡುತ್ತಿರುವುದೇ ಹೆಮ್ಮೆಯ ವಿಚಾರವಾಗಿದೆ!! ಅಲ್ಲದೆ, ಹೊಸ ಶಸ್ತ್ರಾಸ್ತ್ರ ಖರೀದಿ ಸೇರಿದಂತೆ ಸೇನೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಖರ್ಚು, ಪಿಂಚಣಿ ಹಣವನ್ನು ಸರಿದೂಗಿಸಲು ಇದು ಸಹಾಯಕಾರಿಯಾಗಲಿದೆ. ಜತೆಗೆ, ಸೇನಾ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತಡೆಯಲು ಪಿಂಚಣಿ ಕಡಿತ, ಕೆಲಸದಿಂದ ತೆಗೆದು ಹಾಕುವುದು ಸೇರಿದಂತೆ ಅನೇಕ ಶಿಸ್ತು ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ರಾವತ್ ಎಚ್ಚರಿಕೆ ನೀಡಿದ್ದಾರೆ.

Image result for bipin ravath

ದೇಶದ ರಕ್ಷಣಾ ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆಯ ಶಕೆ ಈಗಾಗಲೇ ಆರಂಭವಾಗಿದ್ದು, ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್, ವಾಯುಪಡೆಗೆ ರಫಾಲೆ ಪೈಟರ್ ಜೆಟ್ ನಂತಹ ಯುದ್ದ ವಿಮಾನಗಳಿಗೆ ಮೋದಿ ಸರಕಾರ ಅನುಮೋದನೆ ನೀಡಿದ್ದಲ್ಲದೇ, ಭಾರತ ಸಹ ತನ್ನ ಸೇನಾ ಸಾಮರ್ಥ್ಯ ಹೆಚ್ಚಿಸಲು ಒತ್ತು ನೀಡಿದ್ದು, 6 ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಗಳ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದೆ. ಆದರೆ ಇದೀಗ ಸೇನಾ ಪದ್ಧತಿಗಳಲ್ಲಿಯೇ ಬದಲಾವಣೆಯನ್ನು ತರಲು ಮುಂದಾಗಿರುವ ಬಿಪಿನ್ ರಾವತ್ ಭ್ರಷ್ಟಾಚಾರ, ಹೊಗಳು ಭಟ್ಟತನಕ್ಕೆ ಬ್ರೇಕ್ ಹಾಕಲಿದ್ದಾರೆಯಲ್ಲದೇ, ಈ ಬಗ್ಗೆ ಕಟ್ಟು ನಿಟ್ಟಾಗಿ ಕ್ರಮ ಜಾರಿಗೊಳಿಸಲು ನಿರ್ಧರಿಸಿರುವುದೇ ಹೆಮ್ಮೆಯ ವಿಚಾರವಾಗಿದೆ!!

ಮೂಲ:
https://timesofindia.indiatimes.com/

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close