ಪ್ರಚಲಿತ

300 ರ ಗಡಿ ದಾಟಲಿದೆ ಕೇಸರಿ ಪಡೆ! ಸ್ಫೋಟಕ ಸುದ್ಧಿ ಕೇಳಿ ದಂಗಾದ ವಿಪಕ್ಷಗಳು!

ಕಳೆದ ಐದು ವರ್ಷಗಳಿಂದ ಪ್ರಧಾನಿ ಸ್ಥಾನದಲ್ಲಿರುವ ಶ್ರೀ ನರೇಂದ್ರ ಮೋದಿಯವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕು ಎಂದು ಪಣತೊಟ್ಟಿರುವ ಮೋದಿ ವಿರೋಧಿಗಳಿಗೆ ಮತ್ತು ವಿಪಕ್ಷಗಳಿಗೆ ಇದೀಗ ಒಂದೊಂದು ಸುದ್ದಿ ಕೇಳಿ ಆಘಾತವಾಗಿದೆ. ಈಗಾಗಲೇ ದೇಶಾದ್ಯಂತ 6 ಹಂತದ ಚುನಾವಣೆ ಮುಗಿದ್ದಿದ್ದು ಇನ್ನೂ ಒಂದು ಹಂತದ ಚುನಾವಣೆ ಮೇ 19ರಂದು ನಡೆಯಲಿದೆ ಮತ್ತು ಅದು ಈ ಬಾರಿಯ ಕೊನೆಯ ಲೋಕಸಭಾ ಚುನಾವಣೆ ಆಗಲಿದೆ. ಆದರೆ ಇನ್ನೂ ಒಂದು ಹಂತದ ಚುನಾವಣೆ ಬಾಕಿ ಇರುವಾಗಲೇ ಭವಿಷ್ಯ ಹೊರ ಬಿದ್ದಿದ್ದು ವಿಪಕ್ಷಗಳು ಹಾಗೂ ಯಾರೂ ಊಹಿಸದ ರೀತಿಯಲ್ಲಿ ಕೇಸರಿ ಪಡೆ ಮತ್ತೊಮ್ಮೆ ದಿಗ್ವಿಜಯ ಸಾಧಿಸಲಿದೆ ಮತ್ತು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ನಡೆದ ಕೆಲ ಸಮೀಕ್ಷೆಗಳು ಎನ್‌‌ಡಿಎ ನೇತೃತ್ವದಲ್ಲಿ ಬಿಜೆಪಿ ಬಹುಮತ ಸಾಧಿಸುತ್ತದೆ ಎಂದು ಹೇಳಿದರೆ ಇನ್ನೂ ಕೆಲವು ಸಮೀಕ್ಷೆಗಳು ಕೇವಲ ಭಾರತೀಯ ಜನತಾ ಪಕ್ಷ ಒಂದೇ ಬಹುಮತದಿಂದ ಸರಕಾರ ರಚಿಸಲಿದೆ ಎಂದು ಹೇಳಿಕೊಂಡಿವೆ. ಇದರಲ್ಲಿ ಯಾವುದು ನಿಜವಾಗಲಿದೆ ಯಾವುದು ಸುಳ್ಳಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.!

ಬಿಜೆಪಿ 300 ರ ಗಡಿ ದಾಟಿದರೆ ವಿಪಕ್ಷಗಳ ಸ್ಥಿತಿ ಏನು?

ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ಬಹುಮತದಿಂದ ಗೆದ್ದು ಸರಕಾರ ರಚನೆ ಮಾಡಿತ್ತು. ಬಿಜೆಪಿ ಇಷ್ಟು ದೊಡ್ಡ ಮಟ್ಟದ ಗೆಲುವು ಸಾಧಿಸಲಿದೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ಆಡಳಿತದಲ್ಲಿದ್ದ ಕಾಂಗ್ರೆಸ್ ತಬ್ಬಿಬ್ಬಾಗಿತ್ತು, ವಿಪಕ್ಷಗಳು ಮೋದಿಯವರ ಗೆಲುವು ಕಂಡು ದಂಗಾಗಿದ್ದವು.‌ ಒಬ್ಬ ಗುಜರಾತ್ ಮುಖ್ಯಮಂತ್ರಿ ಆಗಿದ್ದ ಮೋದಿಯವರ ಹೆಸರಿನಲ್ಲಿ ಬಿಜೆಪಿ ಗೆದ್ದು ಕೇಸರಿ ಪತಾಕೆ ಹಾರಿಸಿತ್ತು. ಇದೀಗ ಮತ್ತೊಮ್ಮೆ ಆ ದಿನ ಬಂದಿದೆ, ಈ‌ ಬಾರಿಯ ಚುನಾವಣೆಯಲ್ಲಿ ಮತ್ತೆ ಬಿಜೆಪಿ 300 ರ ಗಡಿ ದಾಟಲಿದೆ ಮತ್ತು ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭವಿಷ್ಯ ನುಡಿದಿದ್ದಾರೆ.

ಹೌದು, ಇತ್ತೀಚೆಗೆ ಮಾತನಾಡಿದ ಅಮಿತ್ ಶಾ, ನಾನು ಈಗಾಗಲೇ 6 ಹಂತದ ಚುನಾವಣೆಗಾಗಿ ದೇಶಾದ್ಯಂತ ಸಂಚರಿಸಿದ್ದು ಕಾರ್ಯಕರ್ತರ ಶ್ರಮ‌ ಮತ್ತು ನಮ್ಮ ಸರಕಾರದ ಯಶಸ್ವಿ ಯೋಜನೆಗಳಿಂದ ಜನರು ಸಂತೋಷಗೊಂಡಿದ್ದಾರೆ. ಇದು ನಮಗೆ ವರದಾನವಾಗಲಿದೆ ಮತ್ತು ನಮ್ಮ ಗೆಲುವಿಗೆ ಮುಖ್ಯ ಕಾರಣವಾಗಲಿದೆ ಎಂದು ಅಮಿತ್ ಶಾ ಹೇಳಿಕೊಂಡಿದ್ದಾರೆ. ಮೋದಿ ಸರಕಾರವನ್ನು ದೇಶದ ಜನರು ಒಪ್ಪಿಕೊಂಡಿದ್ದಾರೆ, ಆದರೆ ವಿಪಕ್ಷಗಳು ಸುಳ್ಳು ಆರೋಪ ಹೊರಿಸಿ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ ಶಾ, ಮೋದಿಜೀ ಪ್ರಧಾನಿಯಾದ ನಂತರ ದೇಶದಲ್ಲಿ ಯಾವ ರೀತಿ ಬದಲಾವಣೆ ಕಂಡು ಬರುತ್ತಿದೆ ಎಂಬುದನ್ನು ಜನರು ಗಮನಿಸುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.!

ಬಿಜೆಪಿ 300 ರ ಗಡಿ ದಾಟಿದರೆ ವಿಪಕ್ಷಗಳ ಸ್ಥಿತಿ ಯಾರೂ ಊಹಿಸಲು ಸಾಧ್ಯವಿಲ್ಲ, ಯಾಕೆಂದರೆ ಈಗಾಗಲೇ ಮೋದಿಯನ್ನು‌ ಸೋಲಿಸಲು ಒಂದಾಗಿರುವ ವಿಪಕ್ಷಗಳು ಮಹಾಘಟಬಂಧನ ನಿರ್ಮಿಸಿ ತಂತ್ರ ರೂಪಿಸಿದರೆ ಇತ್ತ ಕೇಸರಿ ಪಡೆಯೊಂದೇ ಬಹುಮತದತ್ತ ಮುನ್ನುಗ್ಗುತ್ತಿದೆ. ಬಿಜೆಪಿ ಪ್ರಚಂಡ ಬಹುಮತ ಸಾಧಿಸಿದರೆ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳು ಮತ್ತೆಂದೂ ಮೇಲೇಳಲಾಗದ ಸ್ಥಿತಿಗೆ ತಲುಪುತ್ತದೆ ಎಂಬುದರಲ್ಲಿ ಸಂಶಯವಿಲ್ಲ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close