ಪ್ರಚಲಿತ

ಸಿಎಂ ಇದ್ದ ಹೆಲಿಪ್ಯಾಡ್ ಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು.! ಹಿಂದೂ ವಿರೋಧಿ ನೀತಿಗೆ ಸಿಡಿದೆದ್ದ ಕಮಲ ಪಡೆ.!

ಸಿದ್ದರಾಮಯ್ಯನವರ ಎಲ್ಲಾ ರಾಜಕೀಯ ಆಟಕ್ಕೂ ಕೊನೆಗಾಲ ಸಮೀಪವಾಗಿದೆ. ಯಾಕೆಂದರೆ ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚಾಗುತ್ತಿದ್ದಂತೆ ಸಿದ್ದರಾಮಯ್ಯನವರ ವಿರುದ್ದ ರಾಜ್ಯದ ಜನರ ಆಕ್ರೋಷವು ಹೆಚ್ಚಾಗುತ್ತಿದೆ. ಸಿದ್ದರಾಮಯ್ಯನವರು ಹೋದಲ್ಲೆಲ್ಲಾ ಜನರ ಕೆಂಗಣ್ಣಿಗೆ ಗುರಿಯಾಗುತ್ತಿದ್ದು, ಚುನಾವಣೆಯಲ್ಲಿ ಇದರ ಫಲಿತಾಂಶ ಹೊರಬೀಳಲಿದೆ.!

ಸಿಎಂ ವಿರುದ್ಧ ಸಿಡಿದೆದ್ದ ಕಾರ್ಯಕರ್ತರು..!

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗುತ್ತಲೇ ಹಿಂದೂ ವಿರೋಧಿ ಎಂಬೂದನ್ನು ಸಾಬೀತುಪಡಿಸಿದ್ದಾರೆ. ಸದಾ ಒಂದಿಲ್ಲೊಂದು ಹೇಳಿಕೆ ನೀಡಿ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡುತ್ತಿರುವ ಸಿದ್ದರಾಮಯ್ಯನವರ ವಿರುದ್ಧ ಆಕ್ರೋಷಗೊಂಡ ಬಿಜೆಪಿ ಕಾರ್ಯಕರ್ತರು ದಾವಣಗೆರೆಯಲ್ಲಿ ಸಿಎಂ ಹೆಲಿಪ್ಯಾಡ್ ಗೆ ನುಗ್ಗಿ ಪ್ರತಿಭಟನೆ ನಡೆಸಿದರಲ್ಲದೆ , ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರ ವಿರುದ್ಧ ಘೋಷಣೆ ಕೂಗಿದ್ದಾರೆ. ಪಕ್ಷದ ಸಮಾರಂಭವೊಂದರಲ್ಲಿ ಭಾಗವಹಿಸಲು ದಾವಣಗೆರೆಗೆ ಬಂದಿದ್ದ ಸಿಎಂ ಸಿದ್ದರಾಮಯ್ಯನವರಿಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಆಕ್ರೋಶ ನೋಡಿ ಕಂಗಾಲಾಗಿದ್ದು, ತಕ್ಷಣ ಪೊಲೀಸರ ಸಹಾಯದಿಂದ ಸ್ಥಳದಿಂದ ಪಲಾಯನಗೈದರು.

ಸಿಎಂ ಗೆ ಕಪ್ಪುಬಾವುಟ ಪ್ರದರ್ಶಿಸಿದ ಜನತೆ..!

ದಾವಣಗೆರೆಯಲ್ಲಿ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಠಾಧೀಶರ ವಿರುದ್ಧ ಹೇಳಿಕೆ ನೀಡಿದ್ದರು. ಈ ಕೆಲವು ದಿನಗಳ ಹಿಂದೆ ಚುಮಾವಣೆಯ ನಾಟಕ ಆರಂಭಿಸಿದ್ದ ಸಿದ್ದರಾಮಯ್ಯನವರು ತಾನೂ ಹಿಂದು , ನನಗೂ ಹಿಂದುತ್ವವಿದೆ , ಹಿಂದೂ ದೇವರುಗಳನ್ನು ನಂಬುತ್ತೇನೆ ಎಂದು ದೇವಾಲಯ , ಮಠ – ಮಂದಿರಗಳಿಗೆ ಭೇಟಿ ನೀಡಿದ್ದರು. ಹಿಂದೂಗಳ ಮತ ಗಳಿಸುವ ಹುನ್ನಾರ ಹೂಡಿದ್ದ ಸಿದ್ದರಾಮಯ್ಯನವರು ಹಿಂದೂಗಳ ಓಲೈಕೆಗೆ ಪ್ರಯತ್ನಿಸಿದ್ದರು. ಆದರೆ ಇದೀಗ ಹಿಂದೂ ಮಠಾಧೀಶರ ವಿರುದ್ಧ ಹೇಳಿಕೆ ನೀಡುವ ಮೂಲಕ ಮತ್ತೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.!

ಪಕ್ಷದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಕಾಂಗ್ರೆಸಿಗರ ಅಸಮಧಾನ..!

ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಚಾರ ಕಾರ್ಯ ಆರಂಭಿಸಿದ ಕಾಂಗ್ರೆಸ್ ಗೆ ತನ್ನ ಪಕ್ಷದ ಕಾರ್ಯಕ್ರಮದಲ್ಲೇ ಕಾರ್ಯಕರ್ತರಿಂದ ಅಸಮಧಾನ ವ್ಯಕ್ತವಾಗಿದೆ. ಈಗಾಗಲೇ ಟಿಕೆಟ್ ಹಂಚಿಕೆಯ ವಿಚಾರದಲ್ಲೇ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಇದೀಗ ಸಮಾವೇಶದಲ್ಲಿ ಸೇರಿದ್ದ ಕಾರ್ಯಕರ್ತರು ವೇದಿಕೆ ಮೇಲಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಇದನ್ನು ಕಂಡ ನಾಯಕರು ಕಾರ್ಯಕರ್ತರನ್ನು ಎಷ್ಟೇ ಸಮಾಧಾನಪಡಿಸಿದರು ಪ್ರಯೋಜನವಾಗಲಿಲ್ಲ.!

ಹೋದಲ್ಲೆಲ್ಲಾ ತನ್ನ ಹಾಗೂ ಪಕ್ಷದ ಮರ್ಯಾದೆಯನ್ನು ಹರಾಜು ಮಾಡಿಕೊಂಡು ಬಂದಿರುವ ಸಿದ್ದರಾಮಯ್ಯನವರಗೆ ಇಂದು ದಾವಣಗೆರೆಯಲ್ಲೂ ಮುಜುಗರ ಅನುಭವಿಸಬೇಕಾಯಿತು. ಸ್ವತಃ ಪಕ್ಷದ ಕಾರ್ಯಕರ್ತರೇ ಮುಖ್ಯಮಂತ್ರಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದು, ಚುನಾವಣೆಯಲ್ಲಿ ಭಾರೀ ಹಿನ್ನಡೆಯಾಗುವ ಮುನ್ಸೂಚನೆ ದೊರೆತಿದೆ.!

–ಅರ್ಜುನ್ ಭಾರದ್ವಾಜ್

Tags

Related Articles

FOR DAILY ALERTS
 
FOR DAILY ALERTS
 
Close