ಪ್ರಚಲಿತ

ರಾಜ್ಯ ಮೈತ್ರಿ ಸರಕಾರದ ವಿರುದ್ಧ ಮೂರು ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾದ ಬಿಜೆಪಿ! ರಾಜ್ಯ ಸರಕಾರಕ್ಕೆ ಮುಳುವಾಗುತ್ತಾ ಬಿಜೆಪಿಯ ಅಸ್ತ್ರ?

ಸದ್ಯ ರಾಜ್ಯ ರಾಜಕಾರಣದಲ್ಲಿ ಯಾವ ರೀತಿಯ ಬದಲಾವಣೆ ಆಗುತ್ತಿದೆ ಎಂದರೆ ಬಿಜೆಪಿ ನಾಯಕರು ನೀಡಿರುವ ಎಚ್ಚರಿಕೆಗೆ ಮೈತ್ರಿ ಕೂಟ ದಂಗಾಗಿ ಹೋಗಿದೆ. ಯಾಕೆಂದರೆ ಒಂದೆಡೆ ರಾಜ್ಯ ಬಿಜೆಪಿ ನಾಯಕರು ಆಪರೇಷನ್ ಕಮಲ ನಡೆಸುತ್ತಿದ್ದಾರೆ ಎಂಬ ಸುದ್ಧಿ, ಮತ್ತೊಂದೆಡೆ ಕಾಂಗ್ರೆಸ್‌ನ ಅತೃಪ್ತ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ, ಹೀಗೆ ಇಂದಲ್ಲಾ ನಾಳೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಪಟ್ಟ ಕಳೆದುಕೊಳ್ಳುತ್ತಾರೆ, ರಾಜ್ಯದ ಮೈತ್ರಿ ಸರಕಾರ ಅಂತ್ಯ ಕಾಣಲಿದೆ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಭಾರತೀಯ ಜನತಾ ಪಕ್ಷ ಮತ್ತೆ ಅಧಿಕಾರ ನಡೆಸಲಿದೆ ಎಂಬ ಮಾತು ಕೇಳಿ ಇದೀಗ ಒಂದು ಹಂತಕ್ಕೆ ಬಂದು ತಲುಪಿದ ಜನರಿಗೆ ಇದೀಗ ರಾಜ್ಯ ಬಿಜೆಪಿ ನಾಯಕರು ಮತ್ತೊಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅದೇನೆಂದರೆ ಕುಮಾರಸ್ವಾಮಿ ಅವರು ಈ ಬಾರಿ ಬಜೆಟ್ ಮಂಡನೆ ಮಾಡುವುದೇ ಇಲ್ಲ, ರಾಜ್ಯ ರಾಜಕಾರಣದಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಿ ಎಂದು ಹೇಳಿಕೊಂಡಿದ್ದ ಬಿಜೆಪಿ, ಇದೀಗ ಅಧಿವೇಶನದಲ್ಲಿ ಹೊಸ ಮೂರು ಅಸ್ತ್ರ ಪ್ರಯೋಗ ಇಣುಕು ಮುಂದಾಗಿದೆ.!

ಬಿಜೆಪಿಯಿಂದ ಪ್ರಯೋಗವಾಗಲಿದೆ ಹೊಸ ಮೂರು ಅಸ್ತ್ರ!

ಇಂದು ಬೆಂಗಳೂರಿನಲ್ಲಿ ಬಜೆಟ್ ಅಧಿವೇಶನ ನಡೆಯಲಿದ್ದು ಈ ಸಂದರ್ಭದಲ್ಲೇ ರಾಜ್ಯ ಬಿಜೆಪಿ ತನ್ನ ಹೊಸ ಮೂರು ಅಸ್ತ್ರ ಪ್ರಯೋಗಿಸಲಿದೆ. ಪ್ರಮುಖವಾಗಿ ಪ್ರಸ್ತಾಪಿಸುವ ವಿಚಾರವೆಂದರೆ, ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಪದೇ ಪದೇ ಸಿದ್ದರಾಮಯ್ಯನವರ ನಮ್ಮ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದು ಕಾಂಗ್ರೆಸ್‌ನ ಅಸಲಿ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು, ಇನ್ನೊಂದು ಅಂಶವೆಂದರೆ ವಿಧಾನಸೌಧದಲ್ಲಿ ಸಿಕ್ಕಿಬಿದ್ದ ಕೋಟಿ ಕೋಟಿ ಹಣದ ಆರೋಪಿ ಪುಟ್ಟರಂಗ ಶೆಟ್ಟಿ ಅವರ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಮತ್ತು ಕಂಪ್ಲಿ ಶಾಸಕ ಗಣೇಶ್ ಅವರು ಇನ್ನೊಬ್ಬ ಶಾಸಕನಾದ ಆನಂದ್ ಸಿಂಗ್ ಅವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಇದರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ವಿಚಾರವನ್ನು ಪ್ರಮುಖವಾಗಿ ಎತ್ತಿ ಹಿಡಿಯಲಿರುವ ಬಿಜೆಪಿ, ರಾಜ್ಯ ಸರ್ಕಾರವು ಇಕ್ಕಟ್ಟಿನ ಸ್ಥಿತಿಗೆ ಎಳೆಯಲು ಪ್ರಯತ್ನಿಸುತ್ತದೆ.

ಈಗಾಗಲೇ ಬಿಜೆಪಿ ನಾಯಕರು ಹೇಳುವ ಪ್ರಕಾರ, ನಾವು ಯಾವುದೇ ರೀತಿಯ ಆಪರೇಷನ್ ನಡೆಸುತ್ತಿಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕಿತ್ತಾಟಕ್ಕೆ ಬೇಸತ್ತ ಶಾಸಕರು ಬಿಜೆಪಿ ಕಡೆ ಒಲವು ತೋರಿಸಿದ್ದಾರೆ ಅಷ್ಟೇ ಎಂದು ಹೇಳಿಕೊಂಡಿದ್ದಾರೆ. ಆದರೆ ಇಂದು ಅಧಿವೇಶನದಲ್ಲಿ ಭಾರೀ ಕುತೂಹಲ ಕೆರಳಿಸುವ ವಿಚಾರಗಳು ಬಹಿರಂಗವಾಗಲಿದೆ ಎಂಬುದಂತು ಸ್ಪಷ್ಟ.!

ಕಾಂಗ್ರೆಸ್ – ಜೆಡಿಎಸ್‌ನ ಒಟ್ಟು 11 ಶಾಸಕರು ಗೈರು?

ಅಧಿವೇಶನದಲ್ಲಿ ಎಲ್ಲಾ ಶಾಸಕರು ಹಾಜರಾಗಲೇಬೇಕು ಮತ್ತು ಇದು ನಿಯಮ ಕೂಡ. ಆದರೆ ಇಂದು ನಡೆಯಲಿರುವ ಅಧಿವೇಶನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ೧೧ ಶಾಸಕರು ಗೈರಾಗಲಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ. ಶಾಸಕರಾದ ಪ್ರತಾಪ್ ಗೌಡ, ರಮೇಶ್ ಜಾರಕಿಹೊಳಿ, ಬಸವರಾಜ್ ದದ್ದಲ್, ಬಿಸಿ ಪಾಟೀಲ್, ಮಹೇಶ್ ಕುಮಟಳ್ಳಿ, ಕಂಪ್ಲಿ ಶಾಸಕ ಗಣೇಶ್, ಆರ್ ಶಂಕರ್, ಉಮೇಶ್ ಜಾಧವ್, ನಾರಾಯಣ ಗೌಡ ಹಾಗೂ ನಾಗೇಂದ್ರ ಅವರು ಬಹುತೇಕ ಗೈರಾಗುವುದು ಖಚಿತವಾಗಿದೆ. ಇತ್ತ ರಾಜ್ಯ ಸರಕಾರದ ವಿರುದ್ಧ ತೊಡೆತಟ್ಟಿರುವ ಬಿಜೆಪಿ ಯಾವ ರೀತಿಯ ಪ್ಲಾನ್ ರೂಪಿಸಿದೆ ಎಂಬುದು ಅರಿವಾಗದೆ ರಾಜ್ಯ ಸರಕಾರ ಕಂಗಾಲಾಗಿದೆ. ಯಾಕೆಂದರೆ ಈಗಾಗಲೇ ಕುಮಾರಸ್ವಾಮಿ ಅವರು ಈ ಬಾರಿಯ ಬಜೆಟ್ ಮಂಡನೆ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದು ಭಾರೀ ಕುತೂಹಲ ಕೆರಳಿಸಿದೆ.

ಕಾಂಗ್ರೆಸ್ ಮಾತ್ರವಲ್ಲದೆ ಜೆಡಿಎಸ್ ಮತ್ತು ಪಕ್ಷೇತರ ಶಾಸಕರು ಕೂಡ ಅಧಿವೇಶನಕ್ಕೆ ಹಾಜರಾಗದೆ ನಾಪತ್ತೆಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಯಾವ ರೀತಿಯ ಬಿರುಗಾಳಿ ಬೀಸಲಿದೆ ಎಂಬುದು ಕಾದು ನೋಡಬೇಕಾಗಿದೆ.!

-ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close