ಪ್ರಚಲಿತ

ಅರ್ಜುನ್ ಸರ್ಜಾ ಬೆಂಬಲಕ್ಕೆ ನಿಂತ ಕರ್ನಾಟಕ ಬಿಜೆಪಿ! ಎಡಪಂಥೀಯರ ವಿರುದ್ಧ ಸಮರ ಸಾರುತ್ತಾ ಬಿಜೆಪಿ???

ಲಪಂಥೀಯ ಚಿಂತನೆ ಇಟ್ಟುಕೊಂಡವರ ಮೇಲೆ ಅದ್ಯಾವ ರೀತಿಯ ದಾಳಿಗಳು ನಡೆಯುತ್ತೆ ಎಂದರೆ ಹೇಗಾದರೂ ಮಾಡಿ ಅಂತವರ ಬಲ ಕುಗ್ಗಿಸಬೇಕೆಂಬ ಉದ್ದೇಶದಿಂದ ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನ ಮಾಡಿ ವಿಫಲರಾಗುತ್ತಿದ್ದಾರೆ. ಸದ್ಯ ಮೀ ಟೂ ಅಭಿಯಾನ ಆರಂಭಿಸಿ ದೇಶಾದ್ಯಂತ ಸುದ್ಧಿ ಮಾಡುತ್ತಿರುವ ನಟಿ ಮಣಿಯರು ತಮ್ಮ ಪ್ರಚಾರಕ್ಕಾಗಿ ಸುಳ್ಳು ಆರೋಪ ಹೊರಿಸಿ ಮೆರೆಯುತ್ತಿದ್ದಾರೆ. ಜಂಟಲ್‌ಮ್ಯಾನ್ ಎಂದೇ ಹೆಸರಾದ ಅರ್ಜುನ್ ಸರ್ಜಾ ಅವರ ಮೇಲೆ ಕೇರಳ ಮೂಲದ ನಟಿ ಶೃತಿ ಹರಿಹರನ್ ಮಾಡಿರುವ ಆರೋಪಕ್ಕೆ ಯಾವುದೇ ಸಾಕ್ಷಿಗಳು ಇಲ್ಲದೆ ಸುಳ್ಳು ಆರೋಪ ಮಾಡುತ್ತಲೇ ಬಂದಿದ್ದಾರೆ. ಸರ್ಜಾ ಪ್ರಬಲ ಹಿಂದುತ್ವವಾದಿ ಮತ್ತು ಬಲಪಂಥೀಯ ಚಿಂತನೆ ಉಳ್ಳವರು, ಅದೇ ಕಾರಣಕ್ಕೆ ಶೃತಿ ಹರಿಹರನ್ ಅವರನ್ನು ಬಳಸಿಕೊಂಡು ಈ ರೀತಿ ಆರೋಪ ಮಾಡಲಾಗುತ್ತಿದೆ. ಆದರೆವ ಇದೀಗ ಸರ್ಜಾ ಅವರಿಗೆ ರಾಜ್ಯ ಬಿಜೆಪಿ ಕೂಡ ಬೆಂಬಲ ಸೂಚಿಸಿದ್ದು, ಎಡಪಂಥೀಯರ ವಿರುದ್ಧ ಹೋರಾಡಲು ಸಿದ್ಧವಾಗಿದೆ. ಯಾಕೆಂದರೆ ಸರ್ಜಾ ವಿರುದ್ಧ ಆರೋಪ ಮಾಡಿರುವ ಶೃತಿ ಹರಿಹರನ್ ಬೆಂಬಲಕ್ಕೆ ನಿಂತಿರುವುದು ಎಲ್ಲಾ ಎಡಪಂಥೀಯರೇ ಆಗಿದ್ದಾರೆ. ಅದ್ದರಿಂದಲೇ ರಾಜ್ಯ ಬಿಜೆಪಿ ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಅವರು ಸರ್ಜಾ ಅವರಿಗೆ ಬೆಂಬಲ ನೀಡಿದ್ದಾರೆ.!

ಸರ್ಜಾ ಅವರ ಬಲಪಂಥೀಯ ಚಿಂತನೆಯೇ ಆರೋಪಕ್ಕೆ ಕಾರಣ!

ಅರ್ಜುನ್ ಸರ್ಜಾ ಅವರು ಆಂಜನೇಯನ ಭಕ್ತ, ಮಾತ್ರವಲ್ಲದೆ ಭಾರೀ ಗಾತ್ರದ ಆಂಜನೇಯನ ಮೂರ್ತಿಯನ್ನು ಕೂಡ ಪ್ರತಿಷ್ಠಾಪನೆ ಮಾಡುತ್ತಿದ್ದು ಇವೆಲ್ಲವೂ ಎಡಪಂಥೀಯರ ಮತ್ತು ಮಿಷನರಿಗಳ ಕಣ್ಣು ಕೆಂಪಾಗಿಸಿದೆ. ಆದ್ದರಿಂದಲೇ ಮೀ ಟೂ ಆರೋಪ ಮಾಡಿ ಸರ್ಜಾ ಅವರ ವರ್ಚಸ್ಸು ಕಳೆಯಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ ತೇಜಸ್ವಿನಿ ಅವರು, ಸರ್ಜಾ ಬೆಂಬಲಕ್ಕೆ ನಾವಿದ್ದೇವೆ ಎಂದು ಹೇಳಿದ್ದಾರೆ. ದೇಶದಲ್ಲಿ ಎಡಪಂಥೀಯರಿಗೆ ಇನ್ನು ಉಳಿಗಾಲವಿಲ್ಲ, ತಮ್ಮ ಅಂತ್ಯ ಆಗುತ್ತಿದೆ ಎಂದು ತಿಳಿದು ಇತ್ತೀಚೆಗೆ ಭಾರೀ ಹಾರಾಡುತ್ತಿದ್ದಾರೆ. ಆದರೆ ಬಿಜೆಪಿ ಎಂದಿಗೂ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ಕೂಡ ನೀಡಿದರು.

ಇಂದು ಅರ್ಜುನ್ ಸರ್ಜಾ ಅವರನ್ನು ವಿಚಾರಣೆ ನಡೆಸಿದ ಪೊಲೀಸರು ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ಶೃತಿ ಹರಿಹರನ್ ನೀಡಿರುವ ದೂರಿನಂತೆ ವಿಚಾರಣೆ ನಡೆಸಿದ ಪೊಲೀಸರು, ಸರ್ಜಾ ಅವರ ಬಳಿಯಿಂದ ಮಹತ್ತರವಾದ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.!!

ತಾನು ಮಾಡಿರುವ ಆರೋಪವೇ ಶೃತಿಗೆ ಮುಳುವಾಗುತ್ತಾ?

ಶೃತಿ ಹರಿಹರನ್ ಅವರು ಸರ್ಜಾ ವಿರುದ್ಧ ಮಾಡಿರುವ ಆರೋಪವೇ ಶೃತಿಗೆ ಮುಳುವಾಗುವ ಸಾಧ್ಯತೆ ಇದೆ. ಯಾಕೆಂದರೆ ಯಾವುದೇ ಆಧಾರವಿಲ್ಲದೆ ಸರ್ಜಾ ಅಂತವರ ಮೇಲೆ ಆರೋಪ ಮಾಡಿದ್ದು, ಈಗಾಗಲೇ ಚಿತ್ರರಂಗದ ಪ್ರಮುಖರು ಶೃತಿ ಹರಿಹರನ್ ವಿರುದ್ಧ ತಿರುಗಿ ಬಿದ್ದಿದ್ದು, ಪ್ರಕಾಶ್ ರಾಜ್ ನಂತಹ ಎಡಪಂಥೀಯ ಚಿಂತನೆಯುಳ್ಳವರು ಶೃತಿ ಬೆಂಬಲಕ್ಕೆ ನಿಂತಿದ್ದಾರೆ. ಯಾಕೆಂದರೆ ಸರ್ಜಾ ಅವರ ವ್ಯಕ್ತಿತ್ವ ಎಂಥಹದ್ದು ಎಂಬ ವಿಚಾರ ಕರ್ನಾಟಕ ಮಾತ್ರವಲ್ಲದೆ ಇತರ ಅನೇಕ ರಾಜ್ಯದ ಜನರಿಗೆ ಗೊತ್ತಿದೆ. ಆದರೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ ಶೃತಿ ಹರಿಹರನ್ ಕೇವಲ ತನಗೆ ಪ್ರಚಾರ ಪಡೆದುಕೊಳ್ಳುವ ನಿಟ್ಟಿನಲ್ಲಿ ಈ ರೀತಿ ಮೀ ಟೂ ಆರೋಪ ಹೊರಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದ್ದರಿಂದಲೇ ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರು ಸರ್ಜಾಗೆ ಬೆಂಬಲ ಸೂಚಿಸಿದ್ದು, ಪ್ರಕರಣ ಮತ್ತಷ್ಟು ಕುತೂಹಲ ಕೆರಳಿಸಿದೆ.!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close