ಪ್ರಚಲಿತರಾಜಕೀಯ

ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಸ್ಥಾನದಲ್ಲಿ ಬಿಜೆಪಿ ಗೆಲುವು! ಮೈತ್ರಿ ಪಕ್ಷಗಳ ತಂತ್ರವನ್ನು ವಿಫಲ ಮಾಡಿದ ಕೇಸರಿ ಪಡೆ!

ದೇಶಾದ್ಯಂತ ನರೇಂದ್ರ ಮೋದಿ ಪರ ಅಲೆ ಯಾವ ರೀತಿ ಎಂದರೆ ದೇಶದ ಯಾವ ಮೂಲೆಗೇ ಹೋದರೂ ಅಲ್ಲಿ ಕೇಳಿ ಬರುವ ಒಂದೇ ಒಂದು ಘೋಷಣೆ ‘ಮೋದಿ ಮತ್ತೊಮ್ಮೆ’. ಹೌದು ಕಳೆದ ಐದು ವರ್ಷಗಳ ಹಿಂದೆ ದೇಶದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿಯವರು ಯಾರೂ ಊಹಿಸದ ರೀತಿಯಲ್ಲಿ ದೇಶದಲ್ಲಿ ಬದಲಾವಣೆ ಮಾಡಿದ್ದಾರೆ. ಈ ಬದಲಾವಣೆಯ ಪ್ರತಿಫಲವಾಗಿ ಇಂದು ದೇಶಾದ್ಯಂತ ಭಾರತೀಯ ಜನತಾ ಪಕ್ಷದ ಪರ ಜನರ ಒಲವು ಹೆಚ್ಚಾಗಿದೆ. ಈಗಾಗಲೇ ಲೋಕಸಭಾ ಚುನಾವಣೆಯ ಫಲಿತಾಂಶದ ಸಮೀಕ್ಷೆಗಳು ನಡೆದಿದ್ದು, ನರೇಂದ್ರ ಮೋದಿಯವರು ಮತ್ತೊಮ್ಮೆ ಬಹುಮತದಿಂದ ಗೆದ್ದು ಪ್ರಧಾನಮಂತ್ರಿ ಆಗುತ್ತಾರೆ ಎಂದು ಹೇಳಿಕೊಂಡಿದ್ದು ಇದೀಗ ಕರ್ನಾಟಕದಲ್ಲೂ ಬಿಜೆಪಿ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದು ಮೈತ್ರಿ ಸರಕಾರಕ್ಕೆ ಖೆಡ್ಡಾ ತೋಡುವಲ್ಲಿ ಯಶಸ್ವಿಯಾಗಲಿದೆ ಎಂದು ಹೇಳಲಾಗಿದೆ.!

ಹೌದು ಕರ್ನಾಟಕದ ಒಟ್ಟು 28 ಕ್ಷೇತ್ರಗಳ ಪೈಕಿ ಬಿಜೆಪಿ ಬರೋಬ್ಬರಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸ್ವತಃ ಬಿಜೆಪಿ ನಾಯಕರು ಮಾತ್ರವಲ್ಲದೆ ಕೆಲವು ಸಮೀಕ್ಷೆಗಳು ಕೂಡ ಹೇಳಿಕೊಂಡಿದೆ. ಇದೀಗ ರಾಜ್ಯ ಬಿಜೆಪಿ ನಾಯಕರು ನಡೆಸಿದ ಸಭೆಯಲ್ಲೂ ಇಂತಹುದೇ ಅಭಿಪ್ರಾಯ ವ್ಯಕ್ತವಾಗಿದ್ದು, ಮತದಾನದ ನಂತರದಲ್ಲಿ ನಡೆದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದು ಹೇಳಲಾಗಿದೆ. ರಾಜ್ಯ ಮೈತ್ರಿ ಸರಕಾರದ ಜನವಿರೋಧಿ ನೀತಿಗೆ ಈ ಬಾರಿ ಜನರೇ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಪರ ದೇಶದಲ್ಲಿ ಜನರ ಒಲವು ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿಕೊಂಡಿದ್ದಾರೆ.!

2014ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಗೆದ್ದಿತ್ತು. ಆದರೆ ಈ ಬಾರಿ ಚುನಾವಣೆಗೂ ಮೊದಲೇ ಬಿಜೆಪಿ ನಾಯಕರು ಹೇಳಿಕೊಂಡಿರುವ ಪ್ರಕಾರ 22 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ನರೇಂದ್ರ ಮೋದಿಯವರು ರಾಜ್ಯದಲ್ಲಿ ಸಾಲು ಸಾಲು ಸಮಾವೇಶಗಳನ್ನು ನಡೆಸಿದ ನಂತರ ರಾಜ್ಯ ರಾಜಕಾರಣದ ದಿಕ್ಕು ಕೂಡ ಬದಲಾಗಿತ್ತು. ಎಲ್ಲಾ ಸಮಾವೇಶಗಳಲ್ಲೂ ಲಕ್ಷ ಲಕ್ಷ ಕಾರ್ಯಕರ್ತರು ಸೇರಿ ರಾಜ್ಯದಲ್ಲೂ ಬದಲಾವಣೆ ಅಗತ್ಯ ಎಂದು ಸಾರಿ ಸಾರಿ ಹೇಳಿದ್ದರು. ಇದೀಗ ಸಮೀಕ್ಷೆಗಳು ಕೂಡ ಬಿಜೆಪಿ ಪರ ಬಂದಿದ್ದು ದೇಶದಲ್ಲಿ ಮೋದಿ ಮತ್ತೊಮ್ಮೆ ಅಧಿಕಾರ ಹಿಡಿಯುತ್ತಾರೆ ಎಂದು ಕೂಡ ಹೇಳಿಕೊಂಡಿದೆ.!

-ರಂಜನ್ ಶರ್ಮ

Tags

Related Articles

FOR DAILY ALERTS
 
FOR DAILY ALERTS
 
Close