ಪ್ರಚಲಿತ

ಟಿಪ್ಪು ಜಯಂತಿ ವಿರುದ್ಧ ಮತ್ತೆ ಬೀದಿಗಿಳಿದ ಬಿಜೆಪಿ.! ಅಧಿಕಾರ ಕಳೆದುಕೊಳ್ಳುತ್ತಾರಂತೆ ಕುಮಾರಸ್ವಾಮಿ..!

ಟಿಪ್ಪು ಜಯಂತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಅಧಿಕಾರವನ್ನೇ ಕಸಿದಿದ್ದರೂ ಬುದ್ಧಿ ಬಾರದ ಸರ್ಕಾರ ಈ ಬಾರಿ ಮತ್ತೆ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿದೆ. ಕೊಡಗು ಸಹಿತ ಅನೇಕ ಕಡೆಗಳಲ್ಲಿ ಜನತೆ ಟಿಪ್ಪು ಜಯಂತಿಯ ವಿರುದ್ಧ ತಿರುಗಿ ಬಿದ್ದಿದ್ದರೂ ದೃತಿಗೆಡದ ಮತಿಗೆಟ್ಟ ಸರ್ಕಾರ ಈ ಬಾರಿ ಮತ್ತೆ ಮಾಡೇ ಮಾಡ್ತೀವಿ ಎಂದು ಗಂಟಾಘೋಷವಾಗಿ ಅಬ್ಬರಿಸಿದೆ.

ಆದರೆ ಎಂದಿನಂತೆ ಈ ಬಾರಿಯೂ ಭಾರತೀಯ ಜನತಾ ಪಕ್ಷ ಸರ್ಕಾರದ ವಿರುದ್ಧ ಮುಗಿಬೀಳಲು ಸಕಲ ಸಿದ್ಧತೆಯನ್ನೂ ನಡೆಸಿಕೊಳ್ಳುತ್ತಿದೆ. ನವೆಂಬರ್ 10ರಂದು ಆಚರಿಸಲಾಗುತ್ತಿದೆ ಎನ್ನಲಾಗಿರುವ ಟಿಪ್ಪು ಜಯಂತಿಯ ಮುನ್ನಾದಿನ, ಅಂದರೆ ನವೆಂಬರ್ 09ರಂದು ರಾಜ್ಯದಾದ್ಯಂತ ಪ್ರತಿಭಟನೆಯನ್ನು ನಡೆಸಲು ಭಾರತೀಯ ಜನತಾ ಪಕ್ಷ ಸಿದ್ಧವಾಗಿದೆ. ಈ ಮಧ್ಯೆ ಕೊಡಗು ಜಿಲ್ಲೆಯಲ್ಲಿ ಬಂದ್ ಆಚರಿಸುವ ಬಗ್ಗೆಯೂ ಚಿಂತಿಸಲಾಗುತ್ತಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಕದ್ದುಮುಚ್ಚಿ ಆಚರಿಸ್ತಾರಂತೆ ಟಿಪ್ಪು ಜಯಂತಿ..!

ಈ ಮಧ್ಯೆ ಕಾಂಗ್ರೆಸ್ ಹಾಗೂ ಜನತಾದಳ ಮೈತ್ರಿ ಸರ್ಕಾರವು ಕದ್ದು ಮುಚ್ಚಿ ಟಿಪ್ಪು ಜಯಂತಿಯನ್ನು ಆಚರಿಸಿಕೊಳ್ಳುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ನಾಯಕರು ಆರೋಪಿಸಿದ್ದಾರೆ. ಯಾವುದೇ ಮೆರವಣಿಗೆ ನಡೆಸುವಂತಿಲ್ಲ, ಕಾರ್ಯಕ್ರಮ ಒಂದು ಸಭಾಂಗಣದ ಒಳಗೆ ಆಚರಿಸಬೇಕು ಹಾಗೂ ಕಾರ್ಯಕ್ರಮ ನಡೆಸುವ ಹೊರತಾಗಿ ಬೇರೆಲ್ಲೂ ಟಿಪ್ಪು ಭಾವಚಿತ್ರವನ್ನು ಅಳವಡಿಸುವಂತಿಲ್ಲ ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಕರ್ಮಕ್ಕೆ ಯಾಕೆ ಟಿಪ್ಪು ಜಯಂತಿಯನ್ನು ಆಚರಿಸಬೇಕು ಎಂಬ ಪ್ರಶ್ನೆಯೂ ಮೂಡುತ್ತಿದೆ.

ಒಟ್ಟಾರೆ ಹಿಂದೂಗಳ ಭಾವನೆಯನ್ನು ಕೆಣಕಲೆಂದೇ ಆಚರಿಸಲಾಗುತ್ತಿರುವ ಟಿಪ್ಪು ಜಯಂತಿಯನ್ನು ಈ ಬಾರಿ ಮೈತ್ರಿ ಸರ್ಕಾರ ಮತ್ತೆ ಮುಂದುವರೆಸಲು ಆಲೋಚನೆ ನಡೆಸಿದ್ದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಪಕ್ಷ ಇದರ ವಿರುದ್ಧ ತಿರುಗಿ ಬಿದ್ದಿದೆ. ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡಿ ಅಧಿಕಾರ ಕಳೆದುಕೊಂಡಂತೆ ಕುಮಾರಸ್ವಾಮಿನೂ ಕಳೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ನಾಯಕರು ಶಪಿಸುತ್ತಿದ್ದಾರೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close