ಅಂಕಣ

ಪ್ರೇಮ ಸೌಧವನ್ನು ಕಟ್ಟಿದೆನೆನ್ನುವ ಶಹಜಾನ್ ತನ್ನ ಮಗಳನ್ನೇ ಕಾಮಕ್ಕಾಗಿ ಉಪಯೋಗಿಸಿದ್ದ! ತಾಜ್ ಮಹಲ್ ವೀರನ ವಿಕೃತ ಕಾಮದ ಸ್ಟೋರಿ ಭಯಾನಕ!

ಭಾರತಕ್ಕೆ ಅದ್ಯಾವಾಗ ಮೊಘಲರ ಆಗಮನವಾಯಿತು ಸಂಪದ್ಭರಿತವಾಗಿದ್ದ ಭಾರತದಲ್ಲಿ ಶಾಂತಿ-ಸುವ್ಯವಸ್ಥೆ ಎನ್ನುವುದೇ ದೂರದ ಮಾತಾಗಿ ಉಳಿದು ಹೋದ ವಿಚಾರವಾದದ್ದಂತೂ ಅಕ್ಷರಶಃ ನಿಜ!! ಮುಸಲ್ಮಾನ ದೊರೆಗಳು ತಾವು ವಶಪಡಿಸಿಕೊಂಡ ದೇವಾಲಯಗಳು ಮತ್ತು ಅರಮನೆಗಳನ್ನು ಸತ್ತ ಪ್ರಜೆಗಳ ಶವಸಂಸ್ಕಾರಕ್ಕೆ ಬಳಸುತ್ತಿದ್ದರಲ್ಲದೇ ಈ ಪದ್ದತಿ ಮುಸ್ಲಿಂ ಆಡಳಿತಗಾರರಲ್ಲಿ ಸಾಮಾನ್ಯವಾದ ಅಭ್ಯಾಸವಾಗಿತ್ತು ಎನ್ನುವುದನ್ನು ಅದೆಷ್ಟೋ ವಿದೇಶೀ ಪ್ರವಾಸಿಗರು ತಮ್ಮ ಪುಸ್ತಕಗಳಲ್ಲಿ ಉಲ್ಲೇಖ ಮಾಡಿದ್ದಾರೆ!! ಅದರಲ್ಲೂ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ನ್ನು ಕಟ್ಟಿಸಿದನೆಂದು ಹೇಳುತ್ತಿರುವ ಷಹ ಜಹಾನ್ ಕೂಡ ಇದಕ್ಕೆ ಹೊರತಲ್ಲ!!

ಹೌದು… ಅನೇಕ ಸಂಶೋಧಕರ ಪ್ರಕಾರ, ಷಹ ಜಹಾನ್ ಹುಟ್ಟುವ ಮೊದಲೇ ಕಟ್ಟಲ್ಪಟ್ಟಿದ್ದ ರಾಜಾ ಮಾನ್ ಸಿಂಗನ ರಾಜಮಹಲ್ ತೇಜೋಮಹಾಲಯವಾಗಿದ್ದು, ಷಹ ಜಹಾನ್ ನ ಕ್ರೂರ ದಬ್ಬಾಳಿಕೆಯ ನಂತರ ತಾಜ್ ಮಹಲ್ ಆಗಿ ಇಂದು ಪ್ರಸಿದ್ಧಿಯನ್ನು ಪಡೆದಿದೆ ಎಂದು ಹೇಳಿದ್ದಾರೆ!! ಆದರೆ ಇವನು ಕೇವಲ ಸಾಮ್ರಾಜ್ಯಗಳ ಮೇಲೆ, ದೇವಾಲಯಗಳ ಮೇಲೆ ತನ್ನ ಅಧಿಪತ್ಯ ಸಾಧಿಸಿಲ್ಲ!! ಈತ ಹೆಣ್ಣು ಮಕ್ಕಳ ಮೇಲೆ, ಹೆಂಗಸರ ಮೇಲೆ ಅಷ್ಟೇ ಯಾಕೆ ತನ್ನ ಸ್ವತಃ ಮಗಳನ್ನೇ ಅನುಭವಿಸಿದ್ದಂತಹ ವಿಕೃತ ಕಾಮಿ!!

Image result for tajmahal

 

ಇದನ್ನು ನಾವು ಹೇಳುತ್ತಿಲ್ಲ!! ವಸ್ತುನಿಷ್ಟ ಇತಿಹಾಸಕಾರ ಗ್ರಂಥಗಳನ್ನು ಆಕರವಾಗಿರಿಸಿ, ಎಲ್ಲಾ ಸ್ತ್ರೀಯರನ್ನೂ ಭೋಗದ ವಸ್ತುವಾಗಿ ಕಂಡ ಈತ ತನ್ನ ಸ್ವಂತ ಮಗಳನ್ನೇ ಕಾಮದಾಸೆಗೆ ಬಳಸಿಕೊಂಡಿದ್ದಾನೆಂದು ಹೇಳಲಾಗಿದೆ!! ಈತ ಅದು ಹೇಗೆ ಅಮರ ಪ್ರೇಮಿಯಾದನೋ ನಾ ಕಾಣೆ!! ಹೌದು… ಫ್ರಾನ್ಸಿನ ಫ್ರಾನ್ಸ್ ವಾ ಬೆರ್ನಿಯರ್ ತನ್ನ “ಟ್ರಾವೆಲ್ಸ್ ಇನ್ ದ ಮೊಘಲ್ ಎಂಪಾಯರ್” ಎನ್ನುವ ಪುಸ್ತಕದಲ್ಲಿ ಷಹ ಜಹಾನ್ ನ ಅಸಲಿ ರೂಪವನ್ನು ಬಿಡಿಬಿಡಿಯಾಗಿ ಹೇಳಿದ್ದಾನೆ!!!

ಷಾ ಜಹಾನ್ ಗೆ ನೂರ್ ಜಹಾನ್ ಎಂಬ ಸವತಿ ಮಗಳಿದ್ದು, ರಾಜಕೀಯ ತಂತ್ರದಿಂದಾಗಿ ತನ್ನ ಸೊಸೆ ಮುಮ್ತಾಜ್ ಳನ್ನು ನೂರ್ ಜಹಾನ್, ಷಹ ಜಹಾನ್ ಗೆ ಕೊಟ್ಟು ಮದುವೆ ಮಾಡಿಸಿದರು. ಹೀಗಾಗಿ ನೂರ್ ಜಹಾನ್ ಳನ್ನು ರಾಣಿಯನ್ನಾಗಿ ನೇಮಿಸಿದ ಜಹಾಂಗಿರ್!! ಆದರೆ ಮುಮ್ತಾಜ್ ಗೆ ಷಹ ಜಹಾನ್ ನನ್ನು ಮದುವೆಯಾಗುವುದಕ್ಕೂ ಮುನ್ನವೇ ಮದುವೆಯಾಗಿದ್ದರೂ ಕೂಡ ಷಹ ಜಹಾನ್ ಮುಮ್ತಾಜ್ ನ ಗಂಡನನ್ನು ಕೊಂದು ಮುಮ್ತಾಜ್ ಳನ್ನು ಮದುವೆಯಾದ. ತದನಂತರ ಮುಮ್ತಾಜ್ ಳೊಂದಿಗೆ ಸಂಸಾರ ನಡೆಸಿ, ತನ್ನ 14ನೇ ಮಗುವಿಗೆ ಜನನ ನೀಡುವಾಗ ಸಾವನ್ನಪ್ಪಿದಳು. ಹಾಗಾಗಿ ಆಕೆಯ ನೆನಪಿಗಾಗಿ ಸ್ಮಾರಕವೊಂದನ್ನು ನಿರ್ಮಿಸಲು ಷಹ ಜಹಾನ್ ಮುಂದಾದನಲ್ಲದೇ, ಮುಮ್ತಾಜ್ ನಂತರ ಆಕೆಯ ಸಹೋದರಿಯನ್ನು ಮದುವೆಯಾದ ಎಂದು ಹೇಳಲಾಗಿದೆ!!

Image result for noor jahan mughal

ಅಷ್ಟೇ ಅಲ್ಲದೇ, ಷಹ ಜಹಾನ್ ಗೆ ಒಟ್ಟು ಏಳು ಜನ ಪತ್ನಿಯರು, ಅದರಲ್ಲಿ ಮುಮ್ತಾಜ್ ನಾಲ್ಕನೆಯವಳು!! ಆದರೆ ಈತ ತನ್ನ ಪತ್ನಿಯರ ಸಹೋದರಿಯರಿಂದ ಹಿಡಿದು ಅದೆಷ್ಟೋ ಯುವತಿಯರನ್ನು ತನ್ನ ಕಾಮದಾಹಕ್ಕೋಸ್ಕರ ಬಳಸುತ್ತಿದ್ದನಲ್ಲದೇ ಕೊನೆಗೆ ತನ್ನ ಸ್ವಂತ ಮಗಳನ್ನು ಅನುಭವಿಸಿದ್ದಾನೆ ಎಂದು ಉಲ್ಲೇಖಿಸಿದ್ದಾನೆ!!

ಹೌದು… ಬೇಗಂ ಸಾಹಿಬಾ ಜಹನಾರಾ , ಷಹ ಜಹಾನನ ಹಿರಿಯ ಮಗಳು!! ಅಪ್ರತಿಮ ಸುಂದರಿ. ಆದರೆ ಅವಳ ಸೌಂದರ್ಯವೇ ಅವಳಿಗೆ ಶಾಪವಾಗಿ ಕಾಡಿತು. ತನ್ನ ಸುಂದರಾಂಗಿ ಮಗಳನ್ನು ಅಪ್ಪ ಅತಿಯಾಗಿ ಪ್ರೀತಿಸುತ್ತಿದ್ದ. ಅವರಿಬ್ಬರ ಸಂಬಂಧ ನಂಬಲಸಾಧ್ಯವಾಗಿ ಬೆಳೆದಿತ್ತು. “ಸ್ವಯಂ ತಾನೇ ನೆಟ್ಟ ಮರದಿಂದ ಹಣ್ಣುಗಳನ್ನು ಆರಿಸಿಕೊಳ್ಳುವ ಹಕ್ಕನ್ನು ರಾಜನಿಗೆ ನಿರಾಕರಿಸುವುದು ಅನ್ಯಾಯ” ಎಂಬ ಅವರ ನ್ಯಾಯಶಾಸ್ತ್ರದಲ್ಲಿ ತಜ್ಞರಾಗಿದ್ದ ಮತೀಯ ಮುಂದಾಳುಗಳ ನಿರ್ಣಯವನ್ನು ಇದಕ್ಕೆ ಸಮರ್ಥನೆಯಾಗಿ ಕೊಡುತ್ತಿದ್ದ ಎಂದು ಷಹ ಜಹಾನ್ ನಿಗೆ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ಫ್ರಾನ್ಸಿನ ಫ್ರಾನ್ಸ್ ವಾ ಬೆರ್ನಿಯರ್ ತನ್ನ “ಟ್ರಾವೆಲ್ಸ್ ಇನ್ ದ ಮೊಘಲ್ ಎಂಪಾಯರ್” ಗ್ರಂಥದಲ್ಲಿ ಈ ಸಂಗತಿಯನ್ನು ಉಲ್ಲೇಖಿಸಿದ್ದಾನೆ.

ತನ್ನ ಹದಿನೇಳನೆಯ ವಯಸ್ಸಿನಲ್ಲಿ ತಾಯಿ ತೀರಿಕೊಂಡಾಗಿನಿಂದ ಮೂವತ್ತೈದು ವರ್ಷಗಳ ಕಾಲ ತಂದೆಯ ಜೊತೆ ಜೊತೆಯಲ್ಲೇ ಇದ್ದು ಅವನ ಯೋಗ ಕ್ಷೇಮವನ್ನು, ಬೇಕು ಬೇಡಗಳನ್ನೆಲ್ಲಾ ನೋಡಿಕೊಂಡು, ಕೊನೆಗೆ ಸೆರೆಯಲ್ಲಿ ಸಹಿತ ಅವನನ್ನು ಬಿಡದೆ ಅವನ ಸಾವಿನ ಕ್ಷಣದವರೆಗೆ ಜಹನಾರಾ ತಂದೆಯ ಸೇವೆ ಮಾಡಿದಳು. ಹೆಂಡತಿ ಸತ್ತ ಮೇಲೆ ಕೋಟಿ ರೂಪಾಯಿ ಬೆಲೆ ಬಾಳುವ ಅವಳ ಆಸ್ತಿಯಲ್ಲಿ ಅರ್ಧ ಭಾಗವನ್ನು ಜಹನಾರಾಳೊಬ್ಬಳಿಗೇ ನೀಡಿ ಉಳಿದ ಅರ್ಧವನ್ನು ಮಿಕ್ಕ ಆರು ಮಂದಿ ಮಕ್ಕಳಿಗೆ ಹಂಚಿದ! ಜಹನಾರಾಳ ವಾರ್ಷಿಕ ಭತ್ತೆಯನ್ನು ಆರು ಲಕ್ಷಗಳಿಂದ ಒಮ್ಮೆಲೇ ಹತ್ತು ಲಕ್ಷಗಳಿಗೆ ಏರಿಸಿದ್ದಲ್ಲದೆ ಅಲ್ಲಿಯವರೆಗೆ ಹೆಂಡತಿಯ ಹತ್ತಿರ ಭದ್ರವಾಗಿರಿಸಿದ್ದ ರಾಜಮುದ್ರೆಯನ್ನೂ ಅವಳಿಗೆ ಒಪ್ಪಿಸಿದ.

Source: gopalwrites.com

 

ಅಷ್ಟೇ ಅಲ್ಲದೇ, ಒಂದು ಸಲ ಅಕಸ್ಮಾತ್ ಅವಳ ಮೈ ಬೆಂಕಿಯಲ್ಲಿ ತೀವ್ರವಾಗಿ ಸುಟ್ಟಾಗ ಎಲ್ಲೆಲ್ಲಿಂದಲೋ ವೈದ್ಯರನ್ನು ಕರೆಸಿ ಲಕ್ಷಗಟ್ಟಲೆ ಖರ್ಚು ಮಾಡಿ ಚಿಕಿತ್ಸೆ ಮಾಡಿಸಿ ಸನಿಹವೇ ಇದ್ದು ಶುಶ್ರೂಷೆ ಮಾಡಿ ಮತ್ತೆ ಅವಳು ಮೊದಲಿನ ರೂಪಕ್ಕೆ ಬರುವಂತೆ ಮಾಡಿದ. ಆದರೆ ಇವೆಲ್ಲವೂ ತಂದೆ ಮಗಳ ನಡುವಿನ ಅನುಬಂಧವಾಗಿರದೇ ಕೀಳು ಅಕ್ರಮ ಸಂಬಂಧವಾಗಿ ಬೆಳೆದಿತ್ತು ಎಂದು ಬೆರ್ನಿಯರ್ ತನ್ನ ಗ್ರಂಥದಲ್ಲಿ ಹೇಳಿದ್ದಾನೆ. ದಶಕಕ್ಕೂ ಮೀರಿ ರಾಜವೈದ್ಯನಾಗಿದ್ದು ಆಸ್ಥಾನದ ಆಗುಹೋಗುಗಳನ್ನು ಹತ್ತಿರದಿಂದ ವೀಕ್ಷಿಸಿದವನ ಮಾತನ್ನು ತಳ್ಳಿಹಾಕುವುದು ಅದು ಹೇಗೆ ಸಾಧ್ಯ?!!

ಇನ್ನು ಈ ಬಗ್ಗೆ ಕೇವಲ ಬೆರ್ನಿಯರ್ ಮಾತ್ರವಲ್ಲ, 1762ರಲ್ಲಿ ಪ್ರಕಟಗೊಂಡ “ಬೆಶ್ರಿವಿಂಗ್…ವಾಂಡಿ ಲೆವೆನ್ಸ್ ದೆರ್ ಗ್ರೂಟ್ ಮೊಘಲ್ಸ್” ಎಂಬ ತನ್ನ ಗ್ರಂಥದಲ್ಲಿ ವ್ಯಾಲೆಂಟೀನ್ ಕೂಡಾ ಇದೇ ವಿಷಯವನ್ನು ತಿಳಿಸಿದ್ದಾನೆ. ಅಲ್ಲದೆ, ವಿನ್ಸೆಂಟ್ ಸ್ಮಿಥ್ ಕೂಡಾ ಇದನ್ನು ಉಲ್ಲೇಖಿಸಿದ್ದಾನಲ್ಲದೇ, ಕ್ಯಾತ್ರೋ ಕೂಡಾ ತನ್ನ ಗ್ರಂಥದಲ್ಲಿ ಇದನ್ನೇ ದೃಢೀಕರಿಸಿದ್ದಾನೆ.

ನೌರೋಜ್ ಉತ್ಸವ ನಡೆದಾಗ ಪ್ರತಿವರ್ಷ “ಮೀನಾಬಜಾರ್” ಎಂಬ ಮಹಿಳೆಯರ ಉತ್ಸವ ನಡೆಯುತ್ತಿತ್ತು. ಅಲ್ಲಿ ಗಂಡು ಮಕ್ಕಳು ಹೋಗುವಂತಿರಲಿಲ್ಲ!! ಆದರೆ ಅಕ್ಬರ್ ತನ್ನ ಕಾಲದಲ್ಲಿ ಸ್ತ್ರೀವೇಷ ಧರಿಸಿ ಮನ ತೃಪ್ತಿಯಾಗುವವರೆಗೆ ತಿರುಗಾಡಿ ಇಷ್ಟಬಂದ ಹುಡುಗಿಯರನ್ನು ಆನಂತರ ತನ್ನ ಅಂತಃಪುರಕ್ಕೆ ಕರೆಸಿಕೊಳ್ಳುತ್ತಿದ್ದ. ಕೆಲವು ಮಹಿಳೆಯರು ಆತ ಕುಳಿತ ಸಿಂಹಾಸನವನ್ನು ಹೊತ್ತರೆ ವೇಶ್ಯೆಯರು ಬಂಗಾರದ ಹಿಡಿಯ ಕೋಲುಗಳನ್ನು ಹಿಡಿದು ಹಿಂದೆ ಮತ್ತು ಮುಂದೆ ಬಳುಕುತ್ತಾ ಹೆಜ್ಜೆ ಹಾಕಿದರೆ ಖೋಜಾಗಳ ಕೋಲಾಹಲ, ಸಂಗೀತಗಾರರ ವಾದ್ಯಗಳ ನಡುವೆ ಮಹಾ ವಿಜೃಂಭಣೆಯಿಂದ ಮೀನಾ ಬಜಾರಿಗೆ ಷಹ ಜಹಾನನ ಆಗಮನವಾಗುತ್ತಿತ್ತು.

 

ಅಲ್ಲಿ ಅಂಗಡಿಗಳಲ್ಲಿ ಕೂರುತ್ತಿದ್ದವರು ಅಂತಿಂಥ ಹೆಂಗಸರಲ್ಲ. ಆಸ್ಥಾನದ ಪ್ರಮುಖರ ಪತ್ನಿಯರು ಅವರ ಸಮೀಪ ಬಂಧುಗಳು!! ಯಾರ ಮೇಲಾದರೂ ಮನಸ್ಸಾದಲ್ಲಿ ಆ ಅಂಗಡಿಯಲ್ಲಿ ಯಾವುದಾದರೊಂದು ವಸ್ತುವನ್ನು ಕೊಂಡು ಮುಂದೆ ಸಾಗುವಾಗ ತನ್ನ ಸೇವಕರಿಗೆ ಕಣ್ಸನ್ನೆ ಮಾಡುತ್ತಿದ್ದ. ಉಳಿದ ಕೆಲಸವನ್ನು ಅವರು ಅಚ್ಚುಕಟ್ಟಾಗಿ ಪೂರೈಸುತ್ತಿದ್ದರು. ಸಾಯಂಕಾಲದ ಹೊತ್ತಿಗೆ ಆ ಹೆಣ್ಣುಮಗಳು ಇಷ್ಟವಿಲ್ಲದಿದ್ದರೂ ಜನಾನಾದಲ್ಲಿ ಹಾಜರಿರಬೇಕಾಗಿತ್ತು. ತಪ್ಪಿದಲ್ಲಿ ಅವಳದ್ದು ನರಕಯಾತನೆಯೇ ಸರಿ!! ಮಹಾರಾಜ ತೃಪ್ತಿಪಡುವಷ್ಟು ಸುಖ ನೀಡಿ ಕೊಟ್ಟ ಕಾಣಿಕೆಯನ್ನು ಪಡೆದು ಮರಳಬೇಕಾಗಿತ್ತು. ಕೆಲವರಂತೂ ಶಾಶ್ವತವಾಗಿ ಅಲ್ಲೇ ಉಳಿಯಬೇಕಾಗಿತ್ತು!!

Source: exoticindia.com

ಎಲ್ಲಾ ಸ್ತ್ರೀಯರನ್ನು ಭೋಗದ ವಸ್ತುವಿನಂತೆ ನೋಡುವ ಅರಸನ ಆಟಾಟೋಪವನ್ನು ಕಂಡು ಆಸ್ಥಾನಿಕರು ಅಸಹ್ಯ ಪಟ್ಟುಕೊಳ್ಳುತ್ತಿದ್ದರಂತೆ!! ಕೀಳು ದರ್ಜೆಯ ಹೆಣ್ಣುಗಳೊಂದಿಗೂ ಕೂಡಾ ಅಸಭ್ಯವಾಗಿ ಏಕೆ ಭೋಗಿಸುತ್ತೀರಿ ಎಂದು ಕೇಳಿದರೆ “ಯಾವ ಅಂಗಡಿಯಿಂದ ಬಂದರೂ ಮಿಠಾಯಿಗಳು ಚೆನ್ನಾಗಿಯೇ ಇರುತ್ತವೆ” ಎಂದು ಹೇಳಿದನೆಂದು ಆ ಕಾಲದಲ್ಲಿದ್ದ ವಿದೇಶೀ ಪ್ರವಾಸಿ ಮಾನುಸ್ಸಿ ಬರೆದಿದ್ದಾನೆ. ಈ ರಾಸಲೀಲೆಗಳ ವ್ಯವಸ್ಥೆಯಲ್ಲಿ ಜಹನಾರಾ ಎಲ್ಲ ರೀತಿಯಿಂದಲೂ ಸಹಕರಿಸುತ್ತಿದ್ದಳು. ಮಾತ್ರವಲ್ಲ ಒಂದು ಸಲವಂತೂ ತನ್ನ ಸೋದರ ಮಾವನ ಸರಿಸಮಾನನಾದ ಷಯಿಸ್ತೆಖಾನನ ಹೆಂಡತಿಯನ್ನು ತಂದೆಗೆ ವ್ಯವಸ್ಥೆ ಮಾಡಿಕೊಟ್ಟಳಂತೆ. ಮಾನುಸ್ಸಿ ಹೇಳುವಂತೆ, ತಂದೆಯ ಸೂಚನೆಯಂತೆ ಜಹನಾರಾ ಆಕೆಯನ್ನು ಔತಣ ಕೂಟಕ್ಕೆ ಆಹ್ವಾನಿಸಿದಳು. ಔತಣದ ನಂತರ ಷಹಜಾಹಾನ್ ಆಕೆಯನ್ನು ಮಾನಭಂಗ ಮಾಡಿದ. ಷಹಜಾಹಾನನ ಕಾಮೋದ್ರೇಕ ಎಷ್ಟಿತ್ತೆಂದರೆ ಎಪ್ಪತ್ತನೇ ವಯಸ್ಸಿನಲ್ಲಿ ಆಗ್ರಾ ಕೋಟೆಯಲ್ಲಿ ಖೈದಿಯಾಗಿದ್ದಾಗ ತಂದೆಯ ಶಯನ ಸುಖದ ಸಲುವಾಗಿ ಔರಂಗಜೇಬ ಅಗತ್ಯವಾದ ದಾಸಿ ಜನರನ್ನು ಕಳುಹಿಸಿಕೊಟ್ಟಿದ್ದಳು!!

Image result for shah jahan mughal king

 

ದಿನನಿತ್ಯ ತನ್ನ ಸೇವೆ ಮಾಡಿದ ಮಗಳು ಜಹನಾರಾಳಿಗೆ ಮದುವೆಯನ್ನೂ ಮಾಡಲಿಲ್ಲ ಆ ಪಾಪಿ!! ಅದರಲ್ಲೂ ಅವಳ ಒಡನಾಟ ಕಾಮುಕ ಷಹ ಜಹಾನನ ಸ್ವಚ್ಛಂದ ಶೃಂಗಾರ ಲೋಕದಲ್ಲಿ. ಗಿಡ ನೆಟ್ಟವ ಹಣ್ಣುಗಳಿಗೆ ಹಕ್ಕುದಾರ ಎಂಬಂತೆ ಷಹಾಜಹಾನ್ ತನಗೆ ಬೇಕಾದಂತೆ ಅವಳನ್ನು ಉಪಯೋಗಿಸಿಕೊಳ್ಳುತ್ತಿದ್ದ. ಮಗಳೇನಾದರೂ ಅತ್ತಿತ್ತ ಸರಿದರೆ ಸಿಡಿಮಿಡಿಗೊಳ್ಳುತ್ತಿದ್ದ. ಒಮ್ಮೆ ಜಹನಾರಾ ತನ್ನ ಮಹಲಿನಲ್ಲಿ ಮಧ್ಯರಾತ್ರಿ ವೇಳೆ ಆಕೆಯ ಗೆಳೆಯನೊಂದಿಗೆ ಸುಖಿಸುತ್ತಿದ್ದಾಗ ವಿಷಯ ಅರಿತ ಮಹಾರಾಜ ಅಲ್ಲಿಗೆ ಬಂದು ಆತನನ್ನು ನಿರ್ಮಾನುಷವಾಗಿ ಕೊಂದ!! ಇನ್ನೊಮ್ಮೆ ರಾಜಕುಮಾರನೊಬ್ಬನಿಗೆ ಮಗಳು ಮಾರುಹೋದಳೆಂದು ಅರಿತು ಅವನನ್ನು ದರ್ಬಾರಿಗೆ ಕರೆಸಿ ಉಪಚಾರ ಮಾಡಿ ವಿಷಪೂರಿತ ತಾಂಬೂಲವನ್ನು ಸ್ವಯಂ ತಿನ್ನಿಸಿ ಕಳುಹಿಸಿಕೊಟ್ಟ. ತನಗೆ ಸರಿಕಾಣದವರನ್ನು, ತನಗಾಗದವರನ್ನು ವಿಷಪೂರಿತ ಹಾವುಗಳಿಂದ ಕಚ್ಚಿಸಿ ಸಾಯಿಸುತ್ತಿದ್ದ ಎಂದು ತನ್ನ ಪುಸ್ತಕಗಳಲ್ಲಿ ವಿದೇಶಿ ಪ್ರವಾಸಿಗರು ಉಲ್ಲೇಖಿಸಿದ್ದಾರೆ!!

ಷಹ ಜಹಾನ್ ಪ್ರಕಾರ ಹೆಣ್ಣೆಂದರೆ… ಅದೊಂದು ಭೋಗದ ವಸ್ತು !! ತಾನು ಬೆಳೆದ ತೋಟದಲ್ಲಿನ ಹಣ್ಣು ತಾನು ತಿನ್ನುವುದರಲ್ಲಿ ತಪ್ಪೇನು ಎನ್ನುವ ಈ ಭೂಪ ಪ್ರೇಮ ಸ್ಮಾರಕವನ್ನು ನಿರ್ಮಿಸಲು ಅದು ಹೇಗೆ ಸಾಧ್ಯ!! ನೀವೇ ಹೇಳಿ…

ಮೂಲ: http://googleguruu.com/

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close