ಇತಿಹಾಸಪ್ರಚಲಿತ

ಭಾರತದ ಮೊದಲ ಪ್ರಧಾನಿ ದೇಶಕ್ಕೆ ಮಾಡಿರುವ ಪ್ರಮಾದಗಳು ಏನು ಗೊತ್ತೇ?!! ಇತಿಹಾಸದ ಪುಟಗಳಲ್ಲಿ ಅಳಿಸಿಹೋಗಿರುವ ನೈಜ್ಯ ಇತಿಹಾಸದತ್ತ ಒಂದು ನೋಟ!!

ವಂಶಪಾರಂಪರ್ಯದ ರಾಜಕೀಯ ವ್ಯವಸ್ಥೆಯು ಭಾರತದಲ್ಲಿ ಅದೆಂತಹ ಹೊಸ ಆಯಾಮವನ್ನು ಕಂಡುಕೊಂಡಿತ್ತೆಂದರೆ, ಲುಟ್ಯುನ್ಸ್ ಮೀಡಿಯಾ ಮತ್ತು ಕೆಲ ಬುದ್ದಿಜೀವಿಗಳು ಜವಾಹರಲಾಲ್ ನೆಹರೂ ಅವರನ್ನು ತಮ್ಮ ನೆಚ್ಚಿನ ಐಕಾನ್ ಎಂದೇ ವ್ಯಾಖ್ಯಾನಿಸಿದ್ದರು!!! ಸ್ವಾತಂತ್ರ್ಯ ಕಾಲದಿಂದ ಶುರುವಾಗಿ ಪ್ರಸ್ತುತ ದಿನಗಳವರೆಗೆ ಭಾರತದ ಮಹಾನ್ ಪ್ರಜಾಪ್ರಭುತ್ವವಾದಿ ಮತ್ತು ಮಹಾತ್ಮ ಗಾಂಧಿಯವರ ನೆಚ್ಚಿನ ಶಿಷ್ಯ ಎನ್ನುವುದನ್ನು ಸತತವಾಗಿ ಪ್ರಚಾರ ಮಾಡಿದ್ದಾರೆ, ಅದನ್ನು ಇಂದಿಗೂ ಅವರ ಅನುಯಾಯಿಗಳು ಪ್ರಚುರ ಪಡಿಸುತ್ತಲೇ ಬರುತ್ತಿರುವುದು ಗೊತ್ತೇ ಇದೆ!!

ಇನ್ನು ಭಾರತದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದ್ದಂತಹ ಮಾಜಿ ಪ್ರಧಾನಿಗಳ ಪ್ರಮಾದಗಳನ್ನು ಲೆಕ್ಕ ಹಾಕುತ್ತಾ ಹೋದರೆ, ಅವುಗಳಿಗೆ ಕೊನೆಯೇ ಇಲ್ಲ ಎಂದನಿಸುತ್ತದೆ!!  ಅದರಲ್ಲಿ ಇಂದಿರಾಗಾಂಧಿಯವರು ತಮ್ಮ ಕರ್ತವ್ಯವನ್ನು ನಿಭಾಯಿಸುವುದರೊಂದಿಗೆ ಸ್ವಲ್ಪಮಟ್ಟಿನ ಟೀಕೆಗಳಿಗೂ ಗುರಿಯಾಗಿದ್ದರು. ಅದರಲ್ಲೂ ಮುಖ್ಯವಾಹಿನಿ ಮಾಧ್ಯಮಗಳ ಮೇಲೆ ತುರ್ತುಪರಿಸ್ಥಿತಿಯನ್ನು ತಂದಿರುವ ಬಗ್ಗೆ ಎಲ್ಲೆಡೆ ಟೀಕೆಗೆ ಒಳಗಾಗಿದ್ದರೆ, ರಾಜೀವ್ ಗಾಂಧಿ ಸಿಖ್ ನರಮೇಧದ ವಿಚಾರವಾಗಿ ಟೀಕೆಗೆ ಒಳಗಾಗಿದ್ದ ವಿಚಾರವು ಗೊತ್ತೇ ಇದೆ!! ಆದರೆ ನೆಹರೂ ಮಾತ್ರ ಭಾರತೀಯ ರಾಜಕೀಯದ ಪವಿತ್ರವಾದ ಹಸು ಎನ್ನುವ ಹೆಸರನ್ನು ಪಡೆದುಕೊಂಡಿರುವುದು ಮಾತ್ರ ದೊಡ್ಡ ವಿಪರ್ಯಾಸ!!

ಆದರೆ ಜವಾಹರಲಾಲ್ ನೆಹರೂ ಕುರಿತಂತೆ, ನಮ್ಮ ದೇಶವು ಅತೀದೊಡ್ಡ ಐತಿಹಾಸಿಕ ಸುಳ್ಳನ್ನು ಸೃಷ್ಟಿಸಿರುವುದು ನಮ್ಮ ದೌರ್ಭಾಗ್ಯವೇ ಸರಿ!! ತನ್ನ ವಂಶ ರಾಜಕೀಯವನ್ನು ಬೆಳೆಸುವಲ್ಲಿ ನೆಹರೂ ಮಾಡಿದ ಉಪಾಯ ಅಷ್ಟಿಷ್ಟಲ್ಲ. ತನ್ನ ಸ್ವಾರ್ಥರಾಜಕೀಯಕ್ಕೆ ಇಡೀ ದೇಶವನ್ನೇ ಪಣವಾಗಿಟ್ಟಿದ್ದ ನೆಹರೂರವರ ಇತಿಹಾಸದ ಬಗೆಗೆ ತಿಳಿದುಕೊಳ್ಳಬೇಕಾಗಿರುವ ವಿಷಯ ಸಾಕಷ್ಟಿದ್ದರು ಅವೆಲ್ಲವನ್ನೂ ಮರೆಮಾಚಲಾಗಿದೆ!!

ಹೌದು… ಜವಹರಲಾಲ್ ನೆಹರೂ ಅವರು ಎಲ್ಲರ ಒಮ್ಮತದ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಂತಹ ವ್ಯಕ್ತಿ ಎಂದು ಇತಿಹಾಸದ ಪುಟಗಳಲ್ಲಿ ಸಾರಿ ಸಾರಿ ಹೇಳಲಾಗುತ್ತದೆ. ಆದರೆ ನೈಜ್ಯ ಇತಿಹಾಸವು, ಸಂಪೂರ್ಣವಾಗಿ ವಿಭಿನ್ನ ಕಥೆಯನ್ನು ಹೇಳುತ್ತದೆ!! ನೆಹರು ತಮ್ಮ ಉದ್ದೇಶಗಳ ಪ್ರಕಾರವೇ ಸರಕಾರದ ವ್ಯವಹಾರಗಳನ್ನು ನಡೆಸುತ್ತಿದ್ದರಲ್ಲದೇ ಇವರಿಗಿಂತ ಹಿರಿಯರು ಹೇಳಿದ ಸಲಹೆಗಳನ್ನು ನಿರಾಕರಿಸುತ್ತಿದ್ದ ವ್ಯಕ್ತಿ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ, ಕಾಶ್ಮೀರದ ವಿಚಾರವನ್ನು ಸಚಿವ ಸಂಪುಟದಲ್ಲಿ ಮಾತುಕತೆ ನಡೆಸದೇ ಅದನ್ನು ನೇರವಾಗಿ ಯುನೈಟೆಡ್ ನೇಷನ್ಸ್‍ಗೆ ತೆಗೆದುಕೊಂಡು ಹೋಗಿದ್ದರಲ್ಲದೇ ಈ ವಿಚಾರದ ಬಗ್ಗೆಯೂ ತನ್ನ ಸರ್ವಾಧಿಕಾರತನವನ್ನು ತೋರಿದ್ದರು!!

ಅಷ್ಟೇ ಅಲ್ಲದೇ ಜವಾಹರಲಾಲ್ ನೆಹರು ಅವರ ಕ್ಯಾಬಿನೆಟ್ ಮಂತ್ರಿಗಳು, ತಮ್ಮಲ್ಲಿ ಅಧಿಕಾರವಿದ್ದರೂ ಕೂಡ ಯಾವುದೇ ರೀತಿಯ ಸ್ವಾಯುತ್ತತೆಯನ್ನು ಅನುಭವಿಸಲಿಲ್ಲ!! ಯಾಕೆಂದರೆ ನೆಹರೂ ನಿರಂತರವಾಗಿ ತಮ್ಮ ಕ್ಯಾಬಿನೆಟ್ ಮಂತ್ರಿಗಳ ವ್ಯವಹಾರಗಳಲ್ಲಿ ಮಧ್ಯಪ್ರವೇಶವನ್ನು ಮಾಡಿ ಎಲ್ಲ ವಿಚಾರಕ್ಕೂ ತಡೆಯಾಗುತ್ತಿದ್ದರು!! ಇದೇ ಕಾರಣದಿಂದಾಗಿ, ಡಿಸೆಂಬರ್ 1947ರ ಸಂದರ್ಭದಲ್ಲಿ ಸರ್ದಾರ್ ಪಟೇಲ್ ಹಾಗೂ ನೆಹರೂ ನಡುವೆಯೂ ಉದ್ವಿಗ್ನ ಪರಿಸ್ಥಿತಿಯನ್ನು ಉಂಟು ಮಾಡಿತ್ತು!! ನೆಹರು ಅವರಿಗೆ ತನ್ನ ದೇಶದ ಸುಭಿಕ್ಷೆಗಿಂತ ಪರ ದೇಶಗಳ ಸ್ನೇಹಕ್ಕೆ ಹೆಚ್ಚು ಬೆಲೆ ನೀಡುತ್ತಿದ್ದಂತಹ ವ್ಯಕ್ತಿ ಎಂದರೆ ತಪ್ಪಾಗಲಾರರು!!!!

Jawaharlal Nehru

ಯಾಕೆಂದರೆ, ಚೀನಾ ಯುದ್ದದ ಕೊನೆಯಲ್ಲಿ ಸೈನೋ-ಇಂಡಿಯನ್ ಸ್ನೇಹಕ್ಕಾಗಿ, ಯುದ್ದದ ಸಂದರ್ಭದಲ್ಲಿ ಸರ್ದಾರ್ ಪಟೇಲ್ ಹಾಗೂ ಭಾರತದ ಮೊದಲ ರಾಷ್ಟ್ರಪತಿಗಳಾದ ರಾಜೇಂದ್ರ ಪ್ರಸಾದ್ ಅವರು ನೀಡಿದ ಸಲಹೆಗಳನ್ನು ಮತ್ತು ಬುದ್ದಿವಂತ ಎಚ್ಚರಿಕೆಯ ಮಾತುಗಳನ್ನು ಜವಹರಲಾಲ್ ನೆಹರು ಕಡೆಗಣಿಸಿದ್ದಲ್ಲದೇ ಸೈನೋ-ಇಂಡಿಯಾ ಯುದ್ದಕ್ಕೆ ದಾರಿ ಮಾಡಿಕೊಟ್ಟಿದ್ದರು!! ಆ ಸಂದರ್ಭದಲ್ಲಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಪ್ರಜಾಪ್ರಭುತ್ವ ಸರಕಾರವನ್ನು ಹೇಗೆ ಚಲಾಯಿಸಬೇಕು ಎಂಬುದರ ಬಗ್ಗೆ ತಿಳುವಳಿಕೆಯಿಲ್ಲದ ನಿರ್ವಾಹಕರಂತೆ ಕಾಣಿಸಿಕೊಂಡಿದ್ದು ಮಾತ್ರ ನಿಜ!!!!

ಜವಾಹರಲಾಲ್ ನೆಹರು ಅವರು ಸರಕಾರ ಮಾಡಿರುವ ಯಾವುದೇ ನೀತಿ-ನಿರ್ಧಾರಗಳಿಗೆ ಕಿಂಚಿತ್ತೂ ಬೆಲೆ ಕೊಡದೇ, ತನ್ನ ಪಕ್ಷವನ್ನು ತಾನೇ ಸಂಘಟಿಸಿದ್ದಲ್ಲದೇ, ತನ್ನ ಸಾಮ್ರಾಜ್ಯವನ್ನು ಸ್ಥಾಪಿಸುವುದಕ್ಕೆ ಅಡಿಪಾಯವನ್ನು ಹಾಕಿದ್ದರು!!! ಹಾಗಾಗಿ ನೆಹರು ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಕಡೆಗಣಿಸುವಲ್ಲಿ ನಿಸ್ಸೀಮರಾಗಿದ್ದರಲ್ಲದೇ, ಪ್ರಮುಖ ಪಕ್ಷದ ಸ್ಥಾನಗಳಲ್ಲಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಿದ್ದರು!!! ಆರಂಭದಲ್ಲಿ ಸರ್ದಾರ್ ಪಟೇಲರು ಪಕ್ಷದ ಮುಖ್ಯಸ್ಥರನ್ನು ನೇಮಕ ಮಾಡಲು ಪುರುಷೊತ್ತಮ್ ದಾಸ್ ಟಂಡನ್ ಅವರಿಗೆ ಸಹಾಯ ಮಾಡಿದ್ದಕ್ಕೆ ನೆಹರು ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ, ಸರ್ದಾರ್ ಪಟೇಲರು ನಿಧರಾದ ಬೆನ್ನಲ್ಲೇ ನೆಹರು 1952ರ ಚುನಾವಣೆಯ ಸಂದರ್ಭದಲ್ಲಿ ಪ್ರಬಲ ನಾಯಕರನ್ನು ಪಕ್ಷದಿಂದ ಹೊರಗಟ್ಟಿದರು!!

ಟಂಡನ್ ಪಕ್ಷದಿಂದ ದೂರ ಉಳಿದಿದ್ದಾಗ ಜವಾಹರಲಾಲ್ ನೆಹರು ಪಕ್ಷದ ವ್ಯವಹಾರಗಳನ್ನು ತನ್ನ ಕೈಗೆ ತೆಗೆದುಕೊಂಡರು. ಪ್ರಬಲ ನಾಯಕನ ಕೊರತೆಯಿಂದಾಗಿ ಪಕ್ಷವನ್ನು ಅನಾರೋಗ್ಯಕರ ಬೆಳವಣಿಗೆಯತ್ತ ತರುವಲ್ಲಿ ಕಾರಣಕರ್ತರಾದರು. ಇನ್ನು, ಪಕ್ಷದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕವೂ ರಬ್ಬರ್ ಸ್ಟಾಂಪ್‍ಗಳು ಇವರದ್ದೇ ಆಗಿತ್ತು ಹಾಗೂ ಈ ಬಗ್ಗೆ ಯಾರೋ ಹೆಚ್ಚಿನ ಅಧಿಕಾರವನ್ನು ಹೊಂದಿಲ್ಲ ಎಂದು ಖಚಿತ ಪಡಿಸಿದ್ದರು. ಆದರೆ ಇದು ಅಚ್ಚರಿಯ ವಿಷಯವಲ್ಲ!!! ಯಾಕೆಂದರೆ ನಿಷ್ಠಾವಂತರಾಗಿದ್ದ ನೀಲಮ್ ಸಂಜೀವ ರೆಡ್ಡಿ(1960-63ರ ಕಾಂಗ್ರೆಸ್ ಅಧ್ಯಕ್ಷರು) ಗಮನಿಸಿರುವ ಪ್ರಕಾರ, “ಒಂದು ರಾಜ್ಯದಲ್ಲಿನ ಜೂನಿಯರ್ ಮಿಸ್ಟರ್’ಶಿಪ್ ಕಾಂಗ್ರೆಸ್‍ನ ಅಧ್ಯಕ್ಷತೆಯ ಹುದ್ದೆಗಿಂತ ಮೇಲಾಗಿ ಕಂಡಿದೆ. ಅಲ್ಲದೇ, ಆ ಸಂದರ್ಭದಲ್ಲಿ ಸಂಜೀವರೆಡ್ಡಿಯವರು ಶ್ರೀಮತಿ ಇಂದಿರಾ ಗಾಂಧಿಯವರ ಜವಾವನಂತೆ ಅವರನ್ನು ಅವರೇ ಪರಿಗಣಿಸಿದ್ದರು”!! (Source: Brecher Michael, Succession in India: A study in decision making, Oxford University Press, p-131)..

ಸದ್ಯದ ಕಾಂಗ್ರೆಸ್ ಪಕ್ಷವು ವಂಶಪಾರಂಪರ್ಯವಾಗಿಯೇ ಉತ್ತರಾಧಿಕಾರಿಯ ನೇತೃತ್ವದಲ್ಲಿ ಪಕ್ಷವನ್ನು ಮುನ್ನಡೆಸುತ್ತಿದೆ ಎಂದರೆ ಇದಕ್ಕೆಲ್ಲಾ ಕಾರಣವಾಗಿದ್ದು ಭಾರತದ ಮೊದಲ ಪ್ರಧಾನ ಮಂತ್ರಿಯವರಿಂದ ಎಂದು ಹೇಳಬಹುದು!! ಯಾಕೆಂದರೆ 1946ರ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ತನ್ನ ಸಾಮ್ರಾಜ್ಯವನ್ನು ಕಟ್ಟಲು ಆರಂಭಿಸಿದ ನೆಹರು ರಾಜಕೀಯ ಅನುಭವವನ್ನು ಹೊಂದಿದ್ದ ಸರ್ದಾರ್ ಪಟೇಲ್ ಅವರನ್ನು ಒತ್ತಾಯಪೂರ್ವಕವಾಗಿ ಅಭ್ಯರ್ಥಿ ಸ್ಥಾನದಿಂದ ಹಿಂಪಡೆಯುವಂತೆ ಮಾಡಿ ಅಧಿಕಾರವನ್ನು ತನ್ನ ಕೈಗೆತ್ತಿಕೊಂಡರು!! ಹಾಗಾಗಿ ಜವಾಹರಲಾಲ್ ನೆಹರು 1947ರ ಪೂರ್ವದಲ್ಲಿ ರಾಜವಂಶದ ರಾಜಕೀಯ ಫಲವನ್ನು ಅನುಭವಿಸಲು ಪ್ರಾರಮಭಿಸಿದ್ದಲ್ಲದೇ ಅವರೇ ಭಾರತದ ಮೊದಲ ಪ್ರಧಾನಿಯಾದರು!!!

1950ರಲ್ಲಿ ಸರ್ದಾಲ್ ಪಟೇಲರು ಮರಣ ಹೊಂದಿದ ನಂತರ ರಾಜಕೀಯದಲ್ಲಿ ತನ್ನ ಕುಟುಂಬದ ನಿಯಂತ್ರಣವನ್ನು ಬಲಪಡಿಸುವಲ್ಲಿ ಮುಂದಾದ ನೆಹರು ತನ್ನ ಅಧಿಕಾರದಿಂದ ತನ್ನ ಮಗಳನ್ನು ಉನ್ನತ ಸ್ಥಾನದ ಉತ್ತರಾಧಿಕಾರಿಯಾಗಿ ಮಾಡಿದರು. ಮೊದಲಿಗೆ ನೆಹರು ಅವರು ತನ್ನ ಮಗಳನ್ನು ರಾಜಕೀಯ ಆಪ್ತಮಿತ್ರೆಯಾಗಿ ಪರಿಗಣಿಸಿದ್ದಲ್ಲದೇ, ತದನಂತರದಲ್ಲಿ ಗಮನಾರ್ಹವಾಗಿ ಪ್ರಭಾವ ಬೀರಲು ಅವಕಾಶ ಮಾಡಿಕೊಟ್ಟರು!! ಅಷ್ಟೇ ಅಲ್ಲದೇ ಇಂದಿರಾ ಗಾಂಧಿ, ನೆಹರು ಅವರೊಂದಿಗೆ ಎಲ್ಲಾ ಪ್ರಮುಖ ಆಡಳಿತಾತ್ಮಕ ಮತ್ತು ರಾಜಕೀಯ ಸಭೆಗಳಿಗೆ ಭೇಟಿ ನೀಡಿದ್ದು ಮಾತ್ರವಲ್ಲದೇ ಅಂತರಾಷ್ಟ್ರೀಯ ಭೇಟಿಯನ್ನು ಕೈಗೊಂಡಿದ್ದರು!!!. ತನ್ನ ಉತ್ತರಾಧಿಕಾರದಿಂದ ಮಾಡಿದ ಎಲ್ಲಾ ಭೇಟಿಗಳು ತನ್ನ ವಂಶಪಾರಂಪರ್ಯವನ್ನು ಮುನ್ನಡೆಸಲು ಸಹಾಯ ಮಾಡಿದಂತಿತ್ತು!! ಹಾಗಾಗಿ ಈ ಎಲ್ಲಾ ಭೇಟಿಗಳಿಗೆ ಸಾರ್ವಜನಿಕರ ಬೊಕ್ಕಸದಿಂದಲೇ ಖರ್ಚುಗಳಾಗಿವೆ ಎಂದು ನೆಹರು ಕ್ಯಾಬಿನೆಟ್ ಖಚಿತ ಪಡಿಸಿವೆ. (Source: RNP Singh, Nehru, A Troubled Legacy, P. 30).ತದ ನಂತರದಲ್ಲಿ ಜವಾಹರಲಾಲ್ ನೆಹರು ತನ್ನ ಮಗಳನ್ನು ಭವಿಷ್ಯದಲ್ಲಿನ ಉತ್ತರಾಧಿಕಾರಿಯಾಗಿ ಮಾಡಲು ಪಟ್ಟಾಭಿಷೇಕದ ತಯಾರಿಯನ್ನು ಪ್ರಾರಂಭಿಸಿ ಬಿಟ್ಟರು!!!

1957ರಲ್ಲಿ ಕಾಂಗ್ರೆಸ್‍ನ ಕೇಂದ್ರ ಚುನಾವಣಾ ಸಮಿತಿಗೆ ಆಯ್ಕೆಯಾದ ಇಂದಿರಾ ಗಾಂಧಿ ತದನಂತರ 1958ರಲ್ಲಿ ಕಾಂಗ್ರೆಸ್‍ನ ಪ್ರಮುಖ ಅಂಗವಾಗಿದ್ದ ಕೇಂದ್ರ ಸಂಸತ್ತಿನ ಮಂಡಳಿಯ ಸದಸ್ಯ ಸ್ಥಾನಕ್ಕೆ ನೆಹರು ಅವರ ಜಾಗವನ್ನು ಇಂದಿರಾ ಪಡೆದುಕೊಂಡರು!!! ಇಲ್ಲಿ ಮುಖ್ಯ ಚುನಾವಣಾ ಸಮಿತಿಯು ಶಾಸಕಾಂಗದ ಚುನಾವಣೆಗೆ ಚುನಾವಣಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ಹೊಂದಿದ್ದಲ್ಲದೇ ಎಲ್ಲಾ ರೀತಿಯ ಹಂತಗಳಲ್ಲೂ ಇವರು ಹೆಚ್ಚಿನ ಅಧಿಕಾರವನ್ನು ಪಡೆದುಕೊಂಡಿದ್ದರು!!

Jawaharlal Nehru

ಹೀಗೆ ನಡೆದುಕೊಂಡು ಬಂದ ರಾಜವಂಶದ ರಾಜಕಾರಣವು ಆಧುನಿಕ ಭಾರತಕ್ಕೆ ಬಹುದೊಡ್ಡ ಹಾನಿಯಾಗಿದ್ದಲ್ಲದೇ, 1980ರ ದಶಕಗಳ ಅಂತ್ಯದೊಳಗೆ ಇಂದಿರಾ ಗಾಂಧಿಯು ಪಕ್ಷದ ಹಾಗೂ ರಾಷ್ಟ್ರೀಯ ವ್ಯವಹಾರಗಳನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡರು. ತನ್ನ ಕುಟುಂಬದ ಬೊಕ್ಕಸವನ್ನು ತುಂಬಿಸುವಲ್ಲಿ ಕಾರ್ಯನಿರತರಾಗಿದ್ದ ಇವರು, ತಮ್ಮ ಅಧಿಕಾರದಲ್ಲಿ ಯಶಸ್ಸನ್ನು ಕಂಡಿದ್ದಾರೆ!! ಆದರೆ…. ಈ ಎಲ್ಲಾ ಅನರ್ಥಗಳಿಗೆ ಜವಾಹರಲಾಲ್ ನೆಹರೂ ಅವರೇ ಜವಾಬ್ದಾರರಾಗಿದ್ದಾರಲ್ಲದೇ ಮುಖ್ಯವಾಹಿನಿ ಮಾಧ್ಯಮಗಳಿಗೆ ಇವರು ಮಾತ್ರ ತಮ್ಮ ನೆಚ್ಚಿನ ಐಕಾನ್ ಆಗಿಯೇ ಉಳಿದಿರುವುದು ನಿಜಕ್ಕೂ ವಿಪರ್ಯಾಸ!!!

ಮೂಲ: https://rightlog.in/

-Postcard team

Tags

Related Articles

FOR DAILY ALERTS
 
FOR DAILY ALERTS
 
Close