ಪ್ರಚಲಿತ

ಸಲ್ಮಾನ್ ಖಾನ್‍ಗೆ ಶಾಕ್ ನೀಡಿದ ಹೈಕೋರ್ಟ್! ಹಿಂದೂ ಭಾವನೆಗೆ ಧಕ್ಕೆ ತಂದ ನಟನ ಮೇಲೆ ಕೇಸ್ ದಾಖಲಿಸುವಂತೆ ಆದೇಶ…!

ಲ್ಮಾನ್ ಖಾನ್, ಬಾಲಿವುಡ್ ನಟ. ಕಲಾವಿದನಾಗಿ ನೆಟ್ಟಗೆ ತನ್ನ ವೃತ್ತಿ ಜೀವನವನ್ನು ನಡೆಸೋದು ಬಿಟ್ಟು ಇಲ್ಲ ಸಲ್ಲದ ಕೆಲಸಗಳಿಗೆ ಕೈ ಹಾಕಿ ಕೈ ಸುಟ್ಟುಕೊಂಡ ಇತಿಹಾಸ ದೊಡ್ಡದಿದೆ. ಕೃಷ್ಣ ಮೃಗ ಪೇಟೆ ಪ್ರಕರಣ, ಹಿಟ್ ಆಂಡ್ ರನ್ ಕೇಸ್ ಸಹಿತ ಅನೇಕ ಪ್ರಕರಣಗಳನ್ನು ಮೈಗೆ ಮೆತ್ತಿಕೊಂಡಿರುವ ವಿವಾದಾತ್ಮಕ ನಟ. ಹಲವಾರು ಬಾರಿ ಜೈಲಿನ ರುಚಿಯನ್ನೂ ನೋಡಿ ಬಂದ ನಟ ಸಲ್ಮಾನ್ ಖಾನ್. ಈ ನಟನಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅದು ಹಿಂದೂ ಧರ್ಮವನ್ನು ಅವಹೇಳನ ಮಾಡಿ ಸಿನಿಮಾ ನಿರ್ಮಿಸಿದ ಪ್ರಕರಣ…

ಲವ್ ರಾತ್ರಿ ವಿರುದ್ಧ ಕೆಂಡ ಕಾರಿದ್ದ ಹಿಂದೂಗಳು..!

ಸಲ್ಮಾನ್ ಖಾನ್ ಅಭಿನಯದ ಲವ್ ರಾತ್ರಿ ಎಂಬ ಸಿನಿಮಾ ಬೆಳ್ಳಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಈ ಚಿತ್ರಗಳಲ್ಲಿ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುವಂತಹಾ ಹಾಗೂ ಅಶ್ಲೀಲತೆಗೆ ಒತ್ತು ನೀಡಿದಂತಹಾ ದೃಶ್ಯಗಳೇ ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ವಿರುದ್ಧ ಕೇಸ್ ದಾಖಲಿಸುವಂತೆ ಬಿಹಾರ ಹೈಕೋರ್ಟ್ ಆದೇಶ ನೀಡಿದೆ.

Image result for salman khan loveratri

“ಲವ್ ರಾತ್ರಿ” ಎಂಬ ಸಿನಿಮಾ ಟೈಟಲ್ ಹಿಂದೂಗಳ ಪವಿತ್ರ ಹಬ್ಬವಾಗಿರುವ ನವರಾತ್ರಿಗೆ ವ್ಯಂಗ್ಯವಾಗಿದ್ದಾಗಿದೆ. ಮಾತ್ರವಲ್ಲದೆ ಇದರಲ್ಲಿ ಹಿಂದೂಗಳ ಭಾವನೆಯನ್ನು ಕೆರಳಿಸುವಂತಹಾ ದೃಶ್ಯಗಳಿವೆ. ಹೀಗಾಗಿ ಈ ಚಿತ್ರವನ್ನೇ ನಿಷೇಧಿಸಬೇಕೆಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾವೆ. ಸಾಮಾಜಿಕ ಜಾಲತಾಣಗಳಲ್ಲಿ ಸಲ್ಮಾನ್ ಖಾನ್ ಮೇಲಿರುವ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ಮುಸ್ಲಿಂ ನಟರಿಗೇಕೆ ಹಿಂದೂ ಧರ್ಮದ ಉಸಾಬರಿ ಎಂದು ಕೆಂಡ ಕಾರುತ್ತಿದ್ದಾರೆ.

ಈ ಮಧ್ಯೆ ಲವ್ ರಾತ್ರಿ ಎಂಬ ಸಿನಿಮಾದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿರುವ ಬಗ್ಗೆ ಆರೋಪಿಸಿ ಸ್ಥಳೀಯ ವಕೀಲರಾದ ಸುಧೀರ್ ಓಝಾ ಎಂಬವರು ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಮುಜಾಫರ್ ಪುರದ ಸಬ್ ಡಿವಿಜನಲ್ ಜ್ಯೂಡಿಶಿಯಲ್ ಮ್ಯಾಜಿಸ್ಟೇಟ್ ಶೈಲೇಂದ್ರ ರಾಯ್ ಅವರು ನಾಯಕ ನಟ ಸಲ್ಮಾನ್ ಖಾನ್ ಹಾಗೂ ಆಯುಶ್ ಶರ್ಮಾ, ವಾರಿನಾ ಹುಸೈನ್ ವಿರುದ್ಧ ಎಫ್.ಐ.ಆರ್. ದಾಖಲಿಸುವಂತೆ ಆದೇಶಿಸಿದ್ದಾರೆ. ಈ ಬಗ್ಗೆ ಬಿಹಾರದ ಮೀಠಾನ್ ಪುರ ಪೊಲೀಸ್ ಠಾಣೆಗೆ ನಿರ್ಧೇಶನ ನೀಡಿದ್ದಾರೆ.

Image result for bihara high court

ಹಿಂದೂ ಧರ್ಮದ ಸಹಿಷ್ಣುತೆಯನ್ನೇ ಬಂಡವಾಳವನ್ನಾಗಿರಿಸಿಕೊಂಡಿರುವ ಕೆಲ ಸಿನಿಮಾ ನಟರು ಹಾಗೂ ಬುದ್ಧಿ ಜೀವಿಗಳು ಹಿಂದೂ ಧರ್ಮವನ್ನು ಹಾಗೂ ಹಿಂದೂ ದೇವರುಗಳನ್ನು ಯಾವ ರೀತಿ ಬೇಕಾದರೂ ನಿಂದಿಸಿ ಚಿತ್ರೀಕರಿಸಬಹುದು ಎಂದುಕೊಂಡಿದ್ದಾರೆ. ಹಿಂದೂ ಧರ್ಮವನ್ನು ಅವಹೇಳನ ಮಾಡುವ ಯಾರೇ ಆಗಿರಲಿ ಅಂತವರ ಮೇಲೆ ಕಠಿಣ ಕ್ರಮ ಕೈಗೊಂಡರೆ ಮಾತ್ರ ಮುಂದೊಂದು ದಿನ ನಡೆಯುವ ಅನಾಹುತಗಳಿಗೆ ಪೂರ್ಣ ವಿರಾಮ ನೀಡಬಹುದಷ್ಟೆ…

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close