ದೇಶಪ್ರಚಲಿತ

ದೇಶ ಬಿಟ್ಟ ನೀರವ್ ಮೋದಿಗೆ ಬಿಗ್ ಶಾಕ್!! ಮೋದಿ ಮಾವನನ್ನು ಮೋದಿ ಹೆಡೆಮುರಿಕಟ್ಟಿದ್ದು ಹೇಗೆ ಗೊತ್ತಾ?

ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಏರಿದಂದಿನಿಂದಲೂ ಭ್ರಷ್ಟರಿಗೆ ಉಳಿಗಾಲವೇ ಇಲ್ಲದಂತಾಗಿದ್ದು ಮಾತ್ರ ಅಕ್ಷರಶಃ ನಿಜ!! ಈಗಾಗಲೇ ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಮಗ ಕಾರ್ತಿ ಚಿದಂಬರಂ ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಪೊಲೀಸರ ಅತಿಥಿಯಾಗಿ ಜೈಲು ಸೇರಿದ್ದಾರೆ. ಆದರೆ ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಆಭರಣ ಉದ್ಯಮಿ ನೀರವ್ ಮೋದಿ 11,400 ಕೋಟಿ ವಂಚನೆ ಮಾಡಿದ ಬೆನ್ನಿಗೆ ಈತನ ಸೋದರ ಮಾವ ಮೆಹುಲ್ ಚೋಕ್ಸಿಯ ಕೋಟ್ಯಾಂತರ ಆಸ್ತಿ-ಪಾಸ್ತಿಗಳ ಬೃಹತ್ ಮೊತ್ತ ಅಧಿಕಾರಿಗಳ ಕೈ ಸೇರಿದೆ.

ಹೌದು… ಈಗಾಗಲೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ನಕಲಿ ಪ್ರಮಾಣ ಪತ್ರಗಳನ್ನು ನೀಡಿ ಸುಮಾರು 11,400 ಕೋಟಿ ರೂಪಾಯಿ ಮೌಲ್ಯದ ಸಾಲದ ಬಾಂಡ್ ಪಡೆದ ಆರೋಪದ ಮೇರೆಗೆ ಮೆಹುಲ್ ಚೋಕ್ಸಿ ವಿರುದ್ಧ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದ್ದಲ್ಲದೇ, ಈಗಾಗಲೇ ಸಿಬಿಐ ಅಧಿಕಾರಿಗಳು ವಜ್ರದ ಉದ್ಯಮಿ ನೀರವ್ ಮೋದಿ ಮತ್ತು ಚೋಕ್ಸಿ ವಿರುದ್ಧ ತನಿಖೆ ನಡೆಸುತ್ತಿದ್ದು, ಇದರ ನಡುವೆಯೇ ಮತ್ತೊಂದು ಎಫ್ ಐಆರ್ ದಾಖಲಾಗಿರುವುದು ಚೋಕ್ಸಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿತ್ತು!!!

ಅಷ್ಟೇ ಅಲ್ಲದೇ, ಮೂಲಗಳ ಪ್ರಕಾರ ಸಾಲದ ನಿಮಿತ್ತ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 143 ಪ್ರಮಾಣ ಪತ್ರಗಳನ್ನು ಸಲ್ಲಿಕೆ ಮಾಡಿದ್ದು, ಇದರ ಆಧಾರದ ಮೇಲೆ ಚೋಕ್ಸಿ ವಿವಿಧ ಬ್ಯಾಂಕ್ ಗಳಿಂದ ಸುಮಾರು 4, 886 ಕೋಟಿ ರೂಪಾಯಿ ಸಾಲ ಪಡೆದಿದ್ದರಂತೆ ಎನುವ ಮಾಹಿತಿಯು ಹೊರಬಿದ್ದಿತ್ತು!! ಆದರೆ ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮೆಹುಲ್ ಚೋಕ್ಸಿಗೆ ಸೇರಿದ ಆಸ್ತಿ-ಪಾಸ್ತಿಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ಜಪ್ತಿ ಮಾಡಿದ್ದಾರೆ.

Image result for choksi

ಅಷ್ಟಕ್ಕೂ ಅಧಿಕಾರಿಗಳು ಜಪ್ತಿ ಮಾಡಿರುವ ಆಸ್ತಿ- ಪಾಸ್ತಿಗಳ ಒಟ್ಟು ಮೌಲ್ಯವೆಷ್ಟು ಗೊತ್ತೇ??

ಈ ಹಿಂದೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ 11 ಸಾವಿರ ಕೋಟಿ ರೂಪಾಯಿಯಲ್ಲ ಬದಲಾಗಿ 12,723 ಕೋಟಿ ರೂಪಾಯಿ ಎಂಬ ಮಾಹಿತಿಯನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹಿರಂಗಪಡಿಸಿತ್ತು!! ಅಷ್ಟೇ ಅಲ್ಲದೇ, ವಿವಿಧ ತನಿಖಾ ಸಂಸ್ಥೆಗಳು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾಗಲೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಈ ಹಿಂದೆ ಅಂದಾಜಿಸಿದ್ದಕ್ಕಿಂತ 1,323 ಕೋಟಿ ರೂಪಾಯಿ ಹೆಚ್ಚು ಅಂದರೆ ಒಟ್ಟು 12,723 ಕೋಟಿ ರೂಪಾಯಿ ಎಂಬ ಮಾಹಿತಿ ಈ ಹಿಂದೆ ಬಹಿರಂಗವಾಗಿತ್ತು.

ಬಿಎಸ್ ಇ ಗೆ ಲಿಖಿತ ಮಾಹಿತಿ ನೀಡಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅನಧಿಕೃತ ವಹಿವಾಟುಗಳು ನಡೆದಿರುವ ಮೊತ್ತ 1,300 ಕೋಟಿಯನ್ನೂ ಮೀರಬಹುದು ಎಂದು ಹೇಳಿದ್ದಲ್ಲದೇ ಬ್ಯಾಂಕ್ ನ ಷೇರುಗಳು ಶೇ.9 ರಷ್ಟು ಕುಸಿದಿದೆ ಎಂದೂ ಹೇಳಿತ್ತು!! ಆದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಆಭರಣ ಉದ್ಯಮಿ ನೀರವ್ ಮೋದಿ 11,400 ಕೋಟಿ ವಂಚನೆ ಮಾಡಿದ ಬೆನ್ನಿಗೇ ಮೆಹುಲ್ ಚೋಕ್ಸಿ ವಂಚನೆ ಆರೋಪದ ಪ್ರಕರಣವೂ ಬಿಚ್ಚಿಕೊಂಡಿದ್ದು, ವಂಚನೆಯ ಮೇಲೆ ವಂಚನೆಗಳ ಪಟ್ಟಿಗಳು ಬೆಳೆಯುತ್ತಾ ಹೋಗಿದೆ.

ಅಷ್ಟಕ್ಕೂ ಮೆಹುಲ್ ಚೋಕ್ಸಿ ಆಸ್ತಿ- ಪಾಸ್ತಿಗಳ ಮೌಲ್ಯವನು ತಿಳಿದರೆ ಒಂದು ಕ್ಷಣ ಬೆಚ್ಚ ಬೀಳುವುದಂತೂ ಖಂಡಿತಾ……!! ಹೌದು.. ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮೆಹುಲ್ ಚೋಕ್ಸಿಗೆ ಸೇರಿದ ಒಟ್ಟು 1,217 ಕೋಟಿ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ಜಪ್ತಿ ಮಾಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ದೆಹಲಿ ಸೇರಿದಂತೆ ಮೆಹುಲ್ ಚೋಕ್ಸಿಗೆ ಸಂಬಂಧಿಸಿದ ಒಟ್ಟು 41 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಆಸ್ತಿಯ ಮೌಲ್ಯ ಸುಮಾರು 1200 ಕೋಟಿ ರೂಗಳಿಗೂ ಅಧಿಕವಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೋಕ್ಸಿ ವಿರುದ್ಧ 2015ರಲ್ಲಿ ನಾನು ದೂರು ನೀಡಿದ್ದೆ ಎಂದು ಗುಜರಾತ್ ಮೂಲದ ಉದ್ಯಮಿ!!

ಬ್ಯಾಂಕಿಂಗ್ ವಲಯದ ಅತೀ ದೊಡ್ಡ ವಂಚನೆ ಪ್ರಕರಣ ಎಂದು ಹೇಳಲಾಗುತ್ತಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಚೋಕ್ಸಿ ವಿರುದ್ಧ 2015ರಲ್ಲಿ ನಾನು ದೂರು ನೀಡಿದ್ದೆ ಎಂದು ಗುಜರಾತ್ ಮೂಲದ ಉದ್ಯಮಿಯೊಬ್ಬರು ನಿನ್ನೆಯಷ್ಟೇ ಮಾಹಿತಿ ನೀಡಿದ್ದರು. ಅಷ್ಟೇ ಅಲ್ಲದೇ, ಗುಜರಾತ್ ನ ಭಾವ್ ನಗರದ ಆಭರಣ ವ್ಯಾಪಾರಿ ದಿಗ್ವಿಜಯ್ ಸಿಂಗ್ ಜಡೇಜಾ ಅವರು ಈ ಬಗ್ಗೆ ಹೇಳಿಕೆ ನೀಡಿದ್ದು, 2015ರಲ್ಲೇ ಗೀತಾಂಜಲಿ ಸಂಸ್ಥೆಯ ನಿರ್ದೇಶಕ ಮೆಹುಲ್ ಚೋಕ್ಸಿ ವಿರುದ್ಧ ಗುಜರಾತ್ ಸರ್ಕಾರ ಮತ್ತು ಹೈಕೋರ್ಟ್ ನಲ್ಲಿ ದೂರು ದಾಖಲು ಮಾಡಿದ್ದೆ. ಆದರೆ ಅಂದು ನನ್ನ ದೂರನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಬದಲಿಗೆ ನನ್ನ ಮೇಲೆ ಒತ್ತಡ ಹೇರಿ ನನ್ನ ಬಾಯಿ ಮುಚ್ಚಿಸಿದ್ದರು. ಅಂದು ಚೋಕ್ಸಿಗೆ ಬೆಂಬಲ ನೀಡದೇ ಇದ್ದಿದ್ದರೆ ಇಂದು ಇಷ್ಟು ದೊಡ್ಡ ಹಗರಣ ನಡೆಯುತ್ತಲೇ ಇರಲಿಲ್ಲ ಎಂದು ಹೇಳಿದ್ದರು.

ಅಂದು ನಾನು ದೂರು ನೀಡುವಾಗ ಸ್ವತಃ ಗುಜರಾತ್ ಸರ್ಕಾರ ಉದ್ಯಮಿ ಮೆಹುಲ್ ಚೋಕ್ಸಿ ಬೆನ್ನಿಗೆ ನಿಂತಿತ್ತು. ಅಲ್ಲಿಗೂ ನಿರಂತರವಾಗಿ ನಾನು ಗುಜರಾತ್ ಸರ್ಕಾರಕ್ಕೆ ಮನವಿ ಮಾಡುತ್ತಾ ಬಂದಿದ್ದೆ. ಅಲ್ಲದೆ ಗುಜರಾತ್ ಹೈಕೋರ್ಟ್ ನಲ್ಲೂ ದೂರು ದಾಖಲಿಸಿದ್ದೆ. ಅಂದೇ ಮೆಹುಲ್ ಚೋಕ್ಸಿ ವಿರುದ್ಧ ದೂರು ದಾಖಲಿಸಿಕೊಂಡು, ಆತನ ಪಾಸ್ ಪೆÇೀರ್ಟ್ ಅಮಾನತು ಮಾಡಿದ್ದರೆ ಆತ ಇಂದು ದೇಶ ಬಿಟ್ಟು ಪರಾರಿಯಾಗುತ್ತಿರಲಿಲ್ಲ ಎಂದು ದಿಗ್ವಿಜಯ್ ಸಿಂಗ್ ಜಡೇಜಾ ಹೇಳಿದ್ದರು. ಅಲ್ಲದೇ, ಚೋಕ್ಸಿ ಅಂದು ತಮಗೆ ಸುಮಾರು 60 ಕೋಟಿ ರೂ.ಗಳಷ್ಟು ವಂಚನೆ ಮಾಡಿದ್ದ. ಇದೀಗ 9,872 ಕೋಟಿಗಳನ್ನು ಅಧಿಕೃತವಾಗಿ ಬ್ಯಾಂಕ್ ಗಳಿಂದ ಲೂಟಿ ಮಾಡಿದ್ದಾನೆ ಎಂದು ಜಡೇಜಾ ಆಕ್ರೋಶ ವ್ಯಕ್ತಪಡಿಸಿದ್ದರು!!

ಅಷ್ಟೇ ಅಲ್ಲದೇ, ಬೆಂಗಳೂರು ಜೆ.ಪಿ. ನಗರ ನಿವಾಸಿ ಎಸ್.ವಿ.ಹರಿಪ್ರಸಾದ್ ಸಲ್ಲಿಸಿರುವ ಕ್ರಿಮಿನಲ್ ಪ್ರಕರಣದ ವಿಚಾರಣೆ ವೇಳೆ ಹರಿಪ್ರಸಾದ್ ಪರ ವಕೀಲರು ಸೆಷನ್ಸ್ ನ್ಯಾಯಾಲಯದಲ್ಲಿ, “ಮುಂಬೈನ ವಜ್ರಾಭರಣ ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧ ಕರ್ನಾಟಕ ಸರ್ಕಾರ 2015ರಲ್ಲೇ ಸೂಕ್ತ ಕ್ರಮ ಕೈಗೊಂಡಿದ್ದರೆ ಇವತ್ತು ಆತ ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ (ಪಿಎನ್‍ಬಿ) ಕೋಟ್ಯಂತರ ರೂಪಾಯಿ ವಂಚನೆ ಎಸಗುವುದನ್ನು ತಪ್ಪಿಸಬಹುದಿತ್ತು” ಎಂದು ಹೇಳಿದ್ದರು. ಅಷ್ಟೇ ಅಲ್ಲದೇ, ಮೆಹುಲ್ ಚೋಕ್ಸಿ ನನ್ನ ಜೊತೆ ಫ್ರಾಂಚೈಸಿ ಒಪ್ಪಂದ ಮಾಡಿಕೊಂಡು 9.6 ಕೋಟಿ ವಂಚನೆ ಎಸಗಿದ್ದಾರೆ ಎಂದು ವಿವರಿಸಿದ್ದರು!!

ಒಟ್ಟು 41 ಆಸ್ತಿಗಳನ್ನು ಮುಟ್ಟುಗೋಲು ಹಾಕಿದ ಅಧಿಕಾರಿಗಳು!!

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ಮೆಹುಲ್ ಚೋಕ್ಸಿಯ ಸಮೂಹ ಸಂಸ್ಥೆಗಳಾದ ಗೀತಾಂಜಲಿ ಜೆಮ್ಸ್ ಗೆ ಸೇರಿದ ಆಸ್ತಿಗಳನ್ನು ಜಪ್ತಿ ಮಾಡಲಾಗಿದ್ದು, ಚೋಕ್ಸಿ ಸಮೂಹಕ್ಕೆ ಸೇರಿದ ಮುಂಬೈನಲ್ಲಿರುವ 15 ಫ್ಲಾಟ್ ಗಳು, 17 ಕಚೇರಿಗಳು, ಕೋಲ್ಕತ್ತಾದಲ್ಲಿರುವ ಒಂದು ಮಾಲ್, ಅಲಿಭಾಗ್ ನಲ್ಲಿರುವ ಸುಮಾರು 4 ಎಕರೆ ಪ್ರದೇಶದ ಒಂದು ಫಾರ್ಮ್ ಹೌಸ್, ನಾಸಿಕ್, ನಾಗಪುರ, ತಮಿಳು ನಾಡಿನ ಪನ್ವೆಲ್ ಮತ್ತು ವಿಳ್ಳುಪುರಂನಲ್ಲಿರುವ ಸುಮಾರು 231 ಎಕರೆ ಭೂಮಿ, ಹೈದರಾಬಾದ್ ನಲ್ಲಿರುವ ಸುಮಾರು 170 ಎಕರೆ ಪಾರ್ಕ್, ರಂಗಾರೆಡ್ಡಿಯಲ್ಲಿರುವ ಸುಮಾರು 500 ಕೋಟಿ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಇದಲ್ಲದೆ ಮಹಾರಾಷ್ಟ್ರ ರಾಜಧಾನಿ ಮುಂಬೈನ ಸಮೀಪವಿರುವ ಬೊರಿವಲಿ ಪ್ರದೇಶದಲ್ಲಿರುವ ನಾಲ್ಕು ಫ್ಲಾಟ್ ಗಳು, ಸ್ಯಾಂಟಾಕ್ರೂಜ್ ನ ಖೆಮು ಟವರ್ಸ್ ನಲ್ಲಿರುವ 9 ಫ್ಲಾಟ್ ಗಳಿಗೂ ಇಡಿ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಈ ಎಲ್ಲ ಆಸ್ತಿಗಳ ಮೌಲ್ಯ ಸುಮಾರು 1, 200 ಕೋಟಿ ಗೂ ಅಧಿಕ ಎಂದು ಅಂದಾಜಿಸಲಾಗಿದೆ ಎಂದು ತಿಳಿದು ಬಂದಿದೆ.

ಅಷ್ಟೇ ಅಲ್ಲದೇ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸುಮಾರು 11,400 ಕೋಟಿಗೂ ಅಧಿಕ ಹಣವನ್ನು ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಆಭರಣ ಉಧ್ಯಮಿಗಳಾದ ನೀರವ್ ಮೋದಿ, ಆತನ ಸೋದರ ಮಾವ ಉದ್ಯಮಿ ಮೆಹುಲ್ ಚೋಕ್ಸಿ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಸ್ತುತ ಉದ್ಯಮಿ ನೀರವ್ ಮೋದಿ ದೇಶದಿಂದ ಪರಾರಿಯಾಗಿ ವಿದೇಶದಲ್ಲಿ ನೆಲೆಸಿದ್ದರೆ, ಮೆಹುಲ್ ಚೋಕ್ಸಿ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close