ಪ್ರಚಲಿತ

ಕಾಂಗ್ರೆಸ್‍ಗೆ ಬಿಗ್ ಶಾಕ್! ಕಾಂಗ್ರೆಸ್‍ನ ೧೩ ಶಾಸಕರು ನಾಪತ್ತೆ..! ರಾಜ್ಯ ರಾಜಕೀಯದಲ್ಲಿ ಮಿಂಚಿನ ಸಂಚಲನ!

ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯ ಫಲಿತಾಂಶ ರಾಜ್ಯ ಮಾತ್ರವಲ್ಲದೆ ರಾಷ್ಟ್ರವನ್ನೇ ಭಾರೀ ಕುತೂಹಲಕ್ಕೆ ದೂಡುವಂತೆ ಮಾಡಿದೆ. ಭಾರತೀಯ ಜನತಾ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಹುಮತ ಸಿಗಲೇ ಇಲ್ಲ. ಬಹುಮತಕ್ಕೆ 114 ಸ್ಥಾನಗಳು ಸಿಗಬೇಕು. ಆದರೆ 104ಕ್ಕೆ ಕುಸಿದ ಭಾರತೀಯ ಜನತಾ ಪಕ್ಷದ ಸಂಖ್ಯಾಬಲದಿಂದಾಗಿ ಸುಲಭವಾಗಿ ಸರ್ಕಾರ ರಚಿಸಲು ಭಾರತೀಯ ಜನತಾ ಪಕ್ಷ ವಿಫಲವಾಗಿದೆ.

ಯಾವಾಗ ಭಾರತೀಯ ಜನತಾ ಪಕ್ಷದ ಸಂಖ್ಯಾಬಲ ಕುಸಿಯಿತೋ ಆ ಕ್ಷಣದಿಂದ ಕಾಂಗ್ರೆಸ್ ಹಾಗೂ ಜನತಾ ದಳದ ಮೈತ್ರಿ ಮಾತುಕತೆ ಕುದುರಿತ್ತು. ಕಾಂಗ್ರೆಸ್ ಹಾಗೂ ಜನತಾ ದಳ ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿಕೊಂಡಿತ್ತು. ಆಧರೆ ಇದಕ್ಕೆ ಭಾರತೀಯ ಜನತಾ ಪಕ್ಷ ನೇರ ಸವಾಲನ್ನು ಹಾಕಿ ರಾಜ್ಯಪಾಲರ ಬಳಿ ನಾವೇ ಸರ್ಕಾರ ನಡೆಸುವುದಾಗಿ ಹೇಳಿಕೊಂಡಿತ್ತು. ಇದಕ್ಕೆ ರಾಜ್ಯಪಾಲರೇ ಅಸ್ತು ಎಂದಿದ್ದರು.

Related image

ಈ ಮಧ್ಯೆ ಕಾಂಗ್ರೆಸ್ ಹಾಗೂ ಜನತಾ ದಳದ ನಾಯಕರೂ ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದವು. ಆಧರೆ ಭಾರತೀಯ ಜನತಾ ಪಕ್ಷ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಕಾರಣ ರಾಜ್ಯಪಾಲರು ಕಾಂಗ್ರೆಸ್ ಹಾಗೂ ಜನತಾ ದಳದ ನಾಯಕರಿಗೆ ಮಣೆ ಹಾಕಲಿಲ್ಲ.

13 ಕಾಂಗ್ರೆಸ್ ಶಾಸಕರು ಗೈರು..!

ಇನ್ನು ಕಾಂಗ್ರೆಸ್ ರಾಜಕೀಯ ರಣತಂತ್ರ ರೂಪಿಸಿದರ ಮಧ್ಯೆಯೇ ಕಾಂಗ್ರೆಸ್‍ಗೆ ಅತಿದೊಡ್ಡ ಆಘಾತವುಂಟಾಗಿದೆ. ಕಾಂಗ್ರೆಸ್‍ನ 13 ಶಾಸಕರು ನಾಪತ್ತೆಯಾಗಿದ್ದಾರೆ. ಅರ್ಥಾತ್ ಕಾಂಗ್ರೆಸ್ ಪಕ್ಷ ಕರೆದಿರುವ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ ಸರ್ಕಾರ ರಚಿಸಲು ಇನ್ನೂ 10 ಶಾಸಕರ ಅಗತ್ಯ ಇದೆ. ಅದರಲ್ಲಿ 2 ವಿಧಾನ ಸಭಾ ಕ್ಷೇತ್ರದ ಚುನಾವಣೆ ಇನ್ನೂ ಬಾಕಿ ಇದ್ದ ಕಾರಣ 112 ಶಾಸಕರ ಬಲ ಬಹುಮತಕ್ಕೆ ಬೇಕಾಗಿದೆ.

ಆದರೆ ಕಾಂಗ್ರೆಸ್ ಹಾಗೂ ಜನತಾ ದಳದ ಮೈತ್ರಿ ಘೋಷಣೆಯಿಂದಾಗಿ 118 ಶಾಸಕರ ಸಂಖ್ಯೆಯಾಗಿತ್ತು. ಆದರೆ ಇದೀಗ ಕಾಂಗ್ರೆಸ್‍ನ 13 ಶಾಸಕರು ಕಾಣೆಯಾಗಿದ್ದು ಕಾಂಗ್ರೆಸ್ ಪಾಳಯದಲ್ಲಿ ಭಾರೀ ತಳಮಳ ಉಂಟಾಗಿದೆ. 

ಚುನಾವಣಾ ಪೂರ್ವದಲ್ಲಿ ಭಾರತೀಯ ಜನತಾ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿದ್ದ ಆನಂದ್ ಸಿಂಗ್, ನಾಗೇಂದ್ರ, ಅಖಂಡ ಶ್ರೀ ನಿವಾಸ್, ಹಾಗೂ ಜನತಾ ದಳ ಬಿಟ್ಟು ಕಾಂಗ್ರೆಸ್ ಸೇರಿದ್ದ ಜಮೀರ್ ಅಹ್ಮದ್ ಮತ್ತು ಭೀಮಾ ನಾಯಕ್ ಸಹಿತ 13 ಶಾಸಕರು ಕಾಂಗ್ರೆಸ್ ಹಿಡಿತದಿಂದ ಕೈ ತಪ್ಪಿದ್ದಾರೆ. ಇದು ಭಾರತೀಯ ಜನತಾ ಪಕ್ಷವನ್ನು ದೂರವಿಟ್ಟು ಜನತಾ ದಳದೊಂದಿಗೆ ಸರ್ಕಾರ ರಚಿಸಲು ಮುಂದಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಆಘಾತವನ್ನೇ ಉಂಟು ಮಾಡಿದೆ.

ಬಿಜೆಪಿ ರಣತಂತ್ರಕ್ಕೆ ಬೆದರಿದ ಕಾಂಗ್ರೆಸ್..!

ಇನ್ನು ಭಾರತೀಯ ಜನತಾ ಪಕ್ಷದ ರಣತಂತ್ರಕ್ಕೆ ಕಾಂಗ್ರೆಸ್ ಬೆದರಿ ಹೋಗಿದೆ. ಕಾಂಗ್ರೆಸ್ ಶಾಸಕರನ್ನು ತನ್ನಿಂದ ದೂರವಾಗದಂತೆ ತಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಕಾಂಗ್ರೆಸ್ ಶಾಸಕರನ್ನು ಕೇರಳದ ರೆಸಾರ್ಟ್‍ಗೆ ಕರೆದೊಯ್ಯಲು ಯತ್ನ ನಡೆಸುತ್ತಿದೆ. ನಸದ್ಯ ಬೆಂಗಳೂರಿನ ಈಗಲ್ ಟನ್ ರೆಸಾರ್ಟ್‍ನಲ್ಲಿ ಕಾಂಗ್ರೆಸ್ ಶಾಸಕರನ್ನು ಕೂಡಿ ಹಾಕಲಾಗಿದ್ದು ಅಲ್ಲಿನ ಶಾಸಕಾಂಗ ಪಕ್ಷದ ನಾಯಕರ ಸಭೆ ಮುಗಿದ ನಂತರ ಕಾಂಗ್ರೆಸ್ ನಿರ್ಧಾರ ಬಯಲಾಗಲಿದೆ.

Image result for prakash javadekar

ಈ ಬಾರಿ ಅಧಿಕಾರ ಹಿಡಿಯಲೇ ಬೇಕು ಎಂಬ ಹಠದಲ್ಲಿರುವ ಭಾರತೀಯ ಜನತಾ ಪಕ್ಷ ಆಪರೇಷನ್ ಕಮಲಕ್ಕೆ ಇಳಿದಿತ್ತು. ಆದರೆ ತನ್ನ ಯೋಜನೆಯನ್ನೇ ಬದಲಾಯಿಸಿದ ಭಾರತೀಯ ಜನತಾ ಪಕ್ಷ ಆಪರೇಷನ್ ಫ್ಲವರ್ ಎಂದು ಕಣಕ್ಕಿಳಿದಿದೆ. ಕರ್ನಾಟಕ ಭಾರತೀಯ ಜನತಾ ಪಕ್ಷದ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಜೆಪಿ ನಡ್ಡಾ ಸಹಿತ 3 ರಾಜ್ಯಗಳ ತಂಡವು ಕರ್ನಾಟಕ ಸರ್ಕಾರ ರಚಿಸುವ ಅಖಾಡಕ್ಕೆ ಇಳಿದಿದೆ. ಇದು ಕಾಂಗ್ರೆಸ್ ಹಾಗೂ ಜನತಾ ದಳವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬಂತಾಗಿದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close