ಪ್ರಚಲಿತ

ಭಾರತಕ್ಕೆ ಅತಿದೊಡ್ಡ ಜಯ.! ತೆಂಗಿನ ಎಣ್ಣೆಯಲ್ಲಿ ವಿಷವಿದೆ ಎಂದಿದ್ದ ಹಾರ್ವರ್ಡ್ ಯೂನಿರ್ವಸಿಟಿಗೆ ಮಂಗಳಾರತಿ ಮಾಡಿದ ಕೇಂದ್ರ! ಕ್ಷಮೆ ಕೇಳಿದ ಫೇಮಸ್ ಯೂನಿರ್ವಸಿಟಿ..!

ಭಾರತ ಎಂದರೆ ನೆಪಾಗೋದು ವೈಭವಯುತವಾದ ಸಂಸ್ಕøತಿ, ವಿಭಿನ್ನ-ವಿಶಿಷ್ಟ ಪರಂಪರೆ, ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಸಹಿಷ್ಣು ನೀತಿ ಹಾಗೂ ಜಗತ್ತೇ ಹಿಂದಿರುಗಿ ನೋಡುವಂತೆ ಮಾಡಿದ್ದ ವೇದ, ಶಾಸ್ತ್ರ, ಉಪನಿಷತ್ತುಗಳು. ಈ ಎಲ್ಲಾ ಸಂಪ್ರದಾಯಗಳಲ್ಲಿ ಪ್ರಾಕೃತಿಕ ಸಂಪ್ರದಾಯವನ್ನೂ ನಾವು ಜಗತ್ತಿಗೆ ಸಾರಿದ್ದೇವೆ. ನಮ್ಮ ಪ್ರಕೃತಿಯಲ್ಲಿ ಸಿಗುವ ಅಥವಾ ನಾವು ಬೆಳೆಯುವ ಪ್ರಕೃತಿ ದತ್ತವಾಗಿರುವ ಕೆಲವೊಂದು ಉತ್ಪನ್ನಗಳು ಆರೋಗ್ಯಕ್ಕೆ ನಾಂದಿಯಾಗಿದೆ. ಭಾರತದಲ್ಲಿ ಇದಕ್ಕೆ ಆಯುರ್ವೇಧ ಎನ್ನುತ್ತಾರೆ. ಇಂತಹಾ ಆಯುರ್ವೇದ ಅಥವಾ ಪ್ರಕೃತಿದತ್ತವಾಗಿರುವ ಭಾರತದ ಪ್ರಮುಖ ಸಂಪತ್ತೊಂದರ ಮೇಲೆ ಹಾರ್ವರ್ಡ್ ವಿಶ್ವ ವಿದ್ಯಾಲಯದ ಕಣ್ಣು ಬಿದ್ದಿತ್ತು.

ಕಲ್ಪವೃಕ್ಷಕ್ಕೆ ಕಲ್ಲು ಹಾಕಿದ್ದ ಹಾರ್ವರ್ಡ್..!

ಭಾರತದ ವೇದಗಳು ದನವನ್ನು ಕಾಮಧೇನು ಎಂದಿದ್ದರೆ ತೆಂಗಿನ ಮರವನ್ನು ಕಲ್ಪವೃಕ್ಷ ಎಂದಿತ್ತು. ತೆಂಗಿನ ಮರ ನೀಡುವ ಪ್ರತಿಯೊಂದು ಉತ್ಪನ್ನವೂ ಉಪಯೋಗಕಾರಿ ಹಾಗೂ ಉಪಕಾರಿ ಎಂಬುವುದು ಸಾಭೀತಾಗಿತ್ತು. ತೆಂಗಿನ ಗರಿ, ತೆಂಗಿನ ಕಾಯಿ, ಸಿಯಾಳ (ತೆಂಗಿನ ನೀರು), ತೆಂಗಿನ ಸಿಪ್ಪೆ ಹೀಗೆ ಪ್ರತಿಯೊಂದು ಉತ್ಪನ್ನವೂ ಮಾನವನಿಗೆ ಉಪಕಾರಿಯಾಗಿದೆ. ತೆಂಗಿನ ಎಣ್ಣೆಯಂತೂ ಇತರೆ ಎಲ್ಲಾ ಎಣ್ಣೆಗಿಂತಲೂ ಆರೋಗ್ಯಕ್ಕೆ ರಾಮಬಾಣ ಎಂದೇ ಹೇಳಲಾಗುತ್ತಿತ್ತು. ಆದರೆ ಇತ್ತೀಚೆಗೆ ಜಗತ್ತಿನ ಫೇಮಸ್ ವಿಶ್ವ ವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ “ಹಾರ್ವರ್ಡ್ ಯೂನಿವರ್ಸಿಟಿ” ತೆಂಗಿನ ಎಣ್ಣೆ ವಿಷಕಾರಿಯಾಗಿದೆ. ಅದನ್ನು ಯಾರೂ ಉಪಯೋಗಿಸಬಾರದು ಎಂದು ಹೇಳಿತ್ತು. ಹಾರ್ವರ್ಡ್ ಯೂನಿವರ್ಸಿಟಿಯ ಈ ಹೇಳಿಕೆ ಭಾರತೀಯವರನ್ನು ಕೆರಳಿ ಕೆಂಡವಾಗುವಂತೆ ಮಾಡಿತ್ತು. ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುವ ತೆಂಗಿನ ಮರ ಹಾಗೂ ಉತ್ಪಾದಿಸುವ ಎಣ್ಣೆಗೆ ಇಂತಹಾ ಅಪಚಾರಕ್ಕೆ ಭಾರತ ಹಾರ್ವರ್ಡ್ ಯೂನಿವರ್ಸಿಟಿಯ ವಿರುದ್ಧ ಕಣ್ಣು ಕೆಂಪಗಾಗಿರಿಸಿತ್ತು.

Image result for coconut oil

ಈ ಮಧ್ಯೆ ಕೇಂದ್ರ ತೋಟಗಾರಿಕಾ ಇಲಾಖೆಯ ಆಯುಕ್ತ ಬಿ.ಎನ್.ಎಸ್. ಮೂರ್ತಿ ಈ ಬಗ್ಗೆ ಸ್ಪಷ್ಟನೆ ಕೇಳಿದ್ದರು. ಹಾರ್ವರ್ಡ್ ವಿಶ್ವ ವಿದ್ಯಾಲಯಕ್ಕೆ ಪತ್ರ ಬರೆದು ತೆಂಗಿನ ಮರ ಹಾಗೂ ತೆಂಗಿನ ಎಣ್ಣೆಯ ಮಹತ್ವ ಮತ್ತು ಅದು ನೀಡುವ ಆಯುರ್ವೇದ ಔಷಧೀಯ ಗುಣಗಳನ್ನು ವಿವರಿಸಿದ್ದರು. ಹಾರ್ವಡ್ ಯೂನಿವರ್ಸಿಟಿಯ ಉಪನ್ಯಾಸಕರು ನೀಡಿದ್ದ ವಿಷಕಾರಿ ತೆಂಗಿನ ಎಣ್ಣೆಯ ಬಗ್ಗೆ ಸ್ಪಷ್ಟನೆ ನೀಡಿ ಎಂದು ಮೂರ್ತಿ ಆಗ್ರಹಿಸಿದ್ದರು.

ಕೆಲ ದಿನಗಳ ನಂತರ ಈಗ ಹಾರ್ವರ್ಡ್ ಯೂನಿವರ್ಸಿಟಿ ಭಾರತದ ಮುಂದೆ ಮಂಡಿಯೂರಿದೆ. ತೆಂಗಿನ ಎಣ್ಣೆ ವಿಷ ಎಂದ ಬಗ್ಗೆ ವಿಷಾಧ ವ್ಯಕ್ತಪಡಿಸಿದೆ. ಮಾತ್ರವಲ್ಲದೆ ತೆಂಗಿನ ಎಣ್ಣೆ ವಿಷ ಎಂದಿದ್ದು ನಾವಲ್ಲ ಎಂದಿದೆ. “ತೆಂಗಿನ ಎಣ್ಣೆಯಲ್ಲಿ ವಿಷ ಇದೆ ಎಂದು ಹೇಳಿದ್ದರ ಬಗ್ಗೆ ನಾವು ವಿಷಾಧ ವ್ಯಕ್ತಪಡಿಸುತ್ತಿದ್ದೇವೆ. ತೆಂಗಿನ ಎಣ್ಣೆಯನ್ನು ವಿಷವೆಂದಿದ್ದು ಕೆರಿನ್ ಮಿಷಲ್ ಎಂಬ ಉಪನ್ಯಾಸಕಿ. ಈ ಉಪನ್ಯಾಕಿಗೂ ನಮ್ಮ ಹಾರ್ವರ್ಡ್ ಯೂನಿವರ್ಸಿಟಿಗೂ ಯಾವುದೇ ಸಂಬಂಧವಿಲ್ಲ. ಅವರು ನಮ್ಮ ಹೆಚ್ಚುವರಿ ಉಪನ್ಯಾಸಕಿಯಾಗಿದ್ದಾರೆ ಅಷ್ಟೇ. ಅವರ ಹೇಳಿಕೆ ನಮ್ಮ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ್ದು ಆಗೋದಿಲ್ಲ” ಎಂದು ಸ್ಪಷ್ಟನೆ ನೀಡಿದೆ.

Image result for harvard university

ತೆಂಗಿನ ಎಣ್ಣೆಯ ಬಗ್ಗೆ ವಿವಾದಾತ್ಮಕವಾಗಿ ಭಾಷಣ ಮಾಡಿದ್ದ ಹಾರ್ವರ್ಡ್ ವಿಶ್ವ ವಿದ್ಯಾಯಕ್ಕೆ ಭಾರತ ಸರಕಾರ ಸಮರ್ಪಕ ಮಾಹಿತಿ ನೀಡಿ ತಕ್ಕ ಪಾಠವನ್ನೇ ಕಳಿಸಿದೆ. ಈ ಮೂಲಕ ಭಾರತದ ಆಯುರ್ವೇಧ ಹಾಗೂ ಔಷಧೀಯ ಗುಣಗಳಲ್ಲಿ ಒಂದಾದ ತೆಂಗಿನ ಎಣ್ಣೆಯ ಮಹತ್ವ ಜಗತ್ತಿಗೆ ಸಾರಿದೆ. ಈ ಬಗ್ಗೆ ಸಮಯೋಚಿತ ಕ್ರಮಗಳನ್ನು ಕೈಗೊಂಡ ಕೇಂದ್ರ ಸರಕಾರಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close