ಪ್ರಚಲಿತ

ಬಿಗ್ ಬ್ರೇಕಿಂಗ್: ರಾಹುಲ್ ಗಾಂಧಿಯ ಟೆಂಪಲ್ ರನ್ ಗೆ ಟಾಂಗ್ ಕೊಟ್ಟ ಕರ್ನಾಟಕದ ಬಿಜೆಪಿ ಉಸ್ತುವಾರಿ!! ರಾಹುಲ್‍ಜೀ ನಿಮ್ಮ ಆಟ ಇಲ್ಲಿ ನಡೆಯಲ್ಲ!!

ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಇಂದು ದೇಶದಲ್ಲೇ ತನ್ನ ಅಸ್ತಿತ್ವ ಕಳೆದುಕೊಳ್ಳುವ ಮಟ್ಟಕ್ಕೆ ತಲುಪಿದೆ.ನರೇಂದ್ರ ಮೋದಿಯವರ ಆಡಳಿತ ವೈಖರಿಗೆ ಇಡೀ ದೇಶವೇ ಮೋದಿಯವರನ್ನು ಬೆಂಬಲಿಸಿ ಬಿಜೆಪಿಯತ್ತ ಮುಖಮಾಡಿದೆ. ಈಗಾಗಲೇ ನಡೆದ ಎಲ್ಲಾ ರಾಜ್ಯದ ಚುನಾವಣೆಯಲ್ಲೂ ಬಿಜೆಪಿಯ ಅಬ್ಬರಕ್ಕೆ ಕಾಂಗ್ರೆಸ್ ನೆಲಕಚ್ಚಿದೆ. ಕರ್ನಾಟಕದಲ್ಲಿ ಗೆಲುವು ಸಾಧಿಸಲು ಹರಸಾಹಸ ಪಡುತ್ತಿರುವ ಕಾಂಗ್ರೆಸ್ ತನ್ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯನ್ನು ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಕರೆಸಿಕೊಂಡಿದೆ.

ಆದರೆ ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸಿ ಸತತ ಮೂರು ದಿನಗಳಲ್ಲೂ ಎಡವಟ್ಟುಗಳ ಮೇಲೆ ಎಡವಟ್ಟು ಮಾಡುತ್ತಲೇ ಇದ್ದಾರೆ.ಕೇವಲ ರಾಜಕೀಯ ಲಾಭಕ್ಕಾಗಿ ಕರ್ನಾಟಕಕ್ಕೆ ಆಗಮಿಸಿ ಹಿಂದೂಗಳ ಮತ ಗಳಿಸಲು ಪ್ರಯತ್ನಿಸುತ್ತಿರುವ ರಾಹುಲ್ ರಾಜ್ಯದ ದೇವಸ್ಥಾನಗಳಿಗೆ ಭೇಟಿ ನೀಡಿ ತನಗೂ ಹಿಂದುತ್ವದ ಒಲವಿದೆ ಎಂಬುದನ್ನೂ ಪ್ರದರ್ಶಿಸುತ್ತಿದ್ದಾರೆ.ಆದರೆ ಈಗಾಗಲೇ ಉತ್ತರ ಪ್ರದೇಶ ಮತ್ತು ಗುಜರಾತ್ ನಲ್ಲೂ ಇದೇ ರೀತಿಯ ನಾಟಕವಾಡಿದ ರಾಹುಲ್ ಗಾಂಧಿಗೆ ಸೋಲಾಗಿತ್ತು..!

ಈ ಬಾರಿ ಕರ್ನಾಟಕದಲ್ಲೂ ಕಾಂಗ್ರೆಸ್ ಸೋಲುತ್ತದೆ..!

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್ ‘ರಾಹುಲ್ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಕರ್ನಾಟಕದಲ್ಲೂ ಇದೇ ಮರುಕಳಿಸಿಸುತ್ತದೆ. ರಾಹುಲ್ ಗಾಂಧಿ ಕರ್ನಾಟಕದಲ್ಲಿ ದೇವಸ್ಥಾನ ಗಳಿಗೆ ಭೇಟಿ ನೀಡಿ ಓಲೈಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಆದರೆ ಇದ್ಯಾವುದೂ ಇಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ಯಾರು ನಿಜವಾದ ದೈವ ಭಕ್ತ… ಯಾರು ಎಲೆಕ್ಷನ್ ಭಕ್ತ ಎಂದು ರಾಜ್ಯದ ಜನತೆಗೆ ಈಗಾಗಲೇ ಅರಿವಾಗಿದೆ. ಗುಜರಾತ್ ಮಾದರಿಯಲ್ಲೇ ಕರ್ನಾಟಕದ ದೇವಾಲಯಗಳಿಗೆ ಭೇಟಿ ನೀಡುವ ರಾಹುಲ್ ನ ನಡೆ ಕೇವಲ ರಾಜಕೀಯ ಗಿಮಿಕ್’ ಎಂದು ಜಾವೇಡ್ಕರ್ ಹೇಲಿದ್ದಾರೆ.

ಚುನಾವಣೆ ನಡೆಯುವ ರಾಜ್ಯಗಳಲ್ಲಿ ದೇವಸ್ಥಾನ ಗಳಿಗೆ ಭೇಟಿ ನೀಡುತ್ತಿರುವ ರಾಹುಲ್ ದೆಹಲಿಯಲ್ಲೇಕೆ ದೇವಾಲಯಗಳ ಭೇಟಿ ಮಾಡುವುದಿಲ್ಲ ? ಎಂದು ಜಾವೇಡ್ಕರ್ ಪ್ರಶ್ನಿಸಿದ್ದಾರೆ. ಈ ಹಿಂದೆ ಉತ್ತರ ಪ್ರದೇಶ ಮತ್ತು ಗುಜರಾತ್ ನಲ್ಲೂ ಚುನಾವಣಾ ಸಂದರ್ಭದಲ್ಲಿ ರಾಹುಲ್ ಹಿಂದೂ ದೇವಾಲಯ ಮಂದಿರಗಳಿಗೆ ಭೇಟಿ ನೀಡಿ ಪೂಜೆ ಸಲಿಸುತ್ತಿದ್ದರು. ಇದು ಕೇವಲ ರಾಜಕೀಯ ಉದ್ದೇಶವೇ ಹೊರತು , ದೇವರ ಮೇಲಿರುವ ನಂಬಿಕೆಯಾಗಲಿ , ಹಿಂದುತ್ವದ ಒಲವಿನಿಂದಾಗಿಯೂ ಅಲ್ಲ ಎಂದಿದ್ದಾರೆ.


ರಾಜಕೀಯ ಲಾಭಕ್ಕಾಗಿ ರಾಹುಲ್ ನಡರಸುವ ನಾಟಕವೇ ಕಾಂಗ್ರೆಸ್ ನ ಸೋಲಿಗೆ ಕಾರಣವಾಗುತ್ತಿದೆ. ಉತ್ತರ ಪ್ರದೇಶ ಮತ್ತು ಗುಜರಾತ್ ಮಾದರಿಯಲ್ಲೇ ಕಾಂಗ್ರೆಸ್ ಕರ್ನಾಟಕದಲ್ಲೂ ಸೋಲುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಶ್ರಮಜೀವಿಗಳಿಗೆ ರಾಹುಲ್ ಅವಮಾನ..!

ದೇಶದಲ್ಲಿ ಉದ್ಯೋಗ ಸ್ರಷ್ಟಿಯಾಗಬೇಕು ಎಂದು ಹೋದಲ್ಲೆಲ್ಲಾ ಕೂಗಾಡುತ್ತಿರುವ ಕಾಂಗ್ರೆಸ್ ತನ್ನ ಆಳ್ವಿಕೆಯ ಅವಧಿಯಲ್ಲೂ ಉದ್ಯೋಗ ನಿರ್ಮಿಸುವಲ್ಲಿ ವಿಫಲವಾಗಿತ್ತು‌. ಆದರೂ ಇದೀಗ ನರೇಂದ್ರ ಮೋದಿಯವರನ್ನು ಪದೇ ಪದೇ ಪ್ರಶ್ನಿಸುವ ಕಾಂಗ್ರೆಸ್ ದೇಶದ ವಿಕಾಸವನ್ನು ತಡೆಯುತ್ತಿದೆ ಎಂದರು.

ಪಕೋಡಾ ಮಾರುವುದು ಕೂಡ ಒಂದು ರೀತಿಯ ಉದ್ಯೋಗವೇ ಎಂದು ಹೇಳಿಕೆ ನೀಡಿದ್ದ ನರೇಂದ್ರ ಮೋದಿಯವರ ಮಾತನ್ನು ತಿರುಚಿ , ನರೇಂದ್ರ ಮೋದಿಯವರು ದೇಶದ ಸದ ಪ್ರಧಾನಿಯಾಗಿ ಯುವಕರಿಗೆ ಉದ್ಯೋಗ ನಿರ್ಮಿಸುತ್ತಿಲ್ಲ , ಬದಲಾಗಿ ಪಕೋಡಾ ಮಾರಲು ಹೇಳುತ್ತಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ‘ಪಕೋಡಾ ಮಾರಿ ಜೀವನ ಸಾಗಿಸುತ್ತಿರುವ ಅದೆಷ್ಟೋ ಕುಟುಂಬಗಳಿಗೆ ಅವಮಾನ ಮಾಡಿದಂತಾಗಿದೆ’.

ಇಂದು ಅದೆಷ್ಟೋ ಕುಟುಂಬಗಳು ಪಕೋಡಾ ಮಾರಿ ಸಮಾಜದಲ್ಲಿ ಪ್ರಾಮಾಣಿಕತೆಯಿಂದ ಜೀವನ ಸಾಗಿಸುತ್ತಿವೆ. ಪಕೋಡಾ ಮಾರಿ ಶ್ರೀಮಂತವಾದ ಕುಟುಂಬಗಳು ನಮ್ಮ ಮಧ್ಯೆಯೇ ಇದೆ. ಆದರೂ ಇಂತಹ ಶ್ರಮಜೀವಿಗಳನ್ನು ಕಾಂಗ್ರೆಸ್ ಅವಮಾನಿಸುತ್ತಿದೆ ಎಂದು ಪ್ರಕಾಶ್ ಜಾವೇಡ್ಕರ್ ಕಿಡಿ ಖಾರಿದ್ದಾರೆ.

ಗ್ರಹ ಸಚಿವರ ಮಾತು ಅವರ ಸ್ಥಾನಕ್ಕೆ ಹೋಲುವಂತದ್ದಲ್ಲ..!

ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಸಂತೋಷ್ ಕೊಲೆಯಾಗಿತ್ತು. ಹಿಂದೂ ಪರ ಸಂಘಟನೆಗಳಲ್ಲಿ ತೊಡಗಿಸಿಕೋಂಡಿದ್ದ ಎಂಬ ಕಾರಣಕ್ಕೆ ಜಿಹಾದಿಗಳು ಕೊಲೆ ಮಾಡಿದ್ದರು. ಆದರೆ ಕೊಲೆಯ ಬಗ್ಗೆ ಸೂಕ್ಷ್ಮ ತನಿಖೆ ನಡೆಯುವ ಮೊದಲೇ ಗ್ರಹಸಚಿವ ರಾಮಲಿಂಗಾ ರೆಡ್ಡಿ ‘ಈ ಕೊಲೆ ಬೇಕುಬೇಕೆಂದು ನಡೆದಿದ್ದಲ್ಲ, ಕೈಯಲ್ಲಿದ್ದ ಸ್ಕ್ರೂ ಡ್ರೈವರ್ ನಿಂದ ಚುಚ್ಚಿ ಸಾಯಿಸಿದ್ದಾರೆ’ ಎಂದು ಹಗುರವಾಗಿ ಹೇಳಿಕೆ ನೀಡಿದ್ದರು.

ಆದರೆ ಇದೀಗ ತನಿಖೆಯ ವರದಿ ಪ್ರಕಾರ ಕೊಲೆ ಮಾಡಿದ್ದು ಚಾಕುವಿನಿಂದ ಇರಿದು ಎಂಬ ಸತ್ಯಾಂಶ ಹೊರಬಿದ್ದಿದೆ.
ತನಿಖೆಗೆ ಮೊದಲೇ ಕಾಂಗ್ರೆಸ್ ನಾಯಕರು ತಮಗೆ ಬೇಕಾದ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳ ಹಿಂದೆ ರಾಜ್ಯ ಸರಕಾರದ ನೇರ ಕೈವಾಡ ಇರುವುದು ಸ್ಪಷ್ಟ ಎಂದು ಜಾವೇಡ್ಕರ್ ಹೇಳಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಹಗರಣಗಳ ಮೇಲೆ ಹಗರಣ ಮಾಡಿಕೊಂಡು ಬಂದಿದ್ದು ಕರ್ನಾಟಕವನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಲಿ ಕೊಡಲು ಹೊರಟಿದೆ ಎಂದು ಆರೋಪಿಸಿದ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪ್ರಕಾಶ್ ಜಾವೇಡ್ಕರ್ ಆರೋಪಿಸಿದ್ದಾರೆ.

ಈಗಾಗಲೇ ರಾಹುಲ್ ಗಾಂಧಿ ಕಾಲಿಟ್ಟಲೆಲ್ಲಾ ಕಾಂಗ್ರೆಸ್ ಸೋಲನುಭವಿಸಿದೆ.
ಇದೇ ರೀತಿ ಕರ್ನಾಟಕದಲ್ಲೂ ಕಾಂಗ್ರೆಸ್ ಸೋಲುತ್ತದೆ ಎಂದು ಹೇಳಿಕೆ ನೀಡಿದ ಜಾವೇಡ್ಕರ್ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಮಾಡುತ್ತಿರುವ ಟೆಂಪಲ್ ರನ್ ಕೇವಲ ರಾಜಕೀಯ ಲಾಭಕ್ಕಾಗಿ ಎಂದು ದೂರಿದರು..!

–ಅರ್ಜುನ್

Tags

Related Articles

Close