ಪ್ರಚಲಿತರಾಜ್ಯ

ಬ್ರೇಕಿಂಗ್: ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಡಾ.ರಾಜ್ ಕುಟುಂಬ!! ಶಿವಣ್ಣನ ಕಾಲಿಗೆ ಬಿದ್ದ ಶ್ರೀರಾಮುಲುರಿಂದ ನಲಪಾಡ್ ವಿರುದ್ಧ ಗಂಭೀರ ಆರೋಪ!!

ಕಾಂಗ್ರೆಸ್‍ನ ಗೂಂಡಾಗಿರಿ ಈ ಬಾರಿ ಸರ್ಕಾರಕ್ಕೆ ಸರಿಯಾದ ಪೆಟ್ಟನ್ನೇ ನೀಡಿದೆ. ಪ್ರತಿ ಬಾರಿಯೂ ಒಂದೊಂದು ಹಗರಣ ಹಾಗೂ ಗೂಂಡಾಗಿರಿಯನ್ನು ಸಮರ್ಥಿಸಿಕೊಳ್ಳುತ್ತಾ ದರ್ಪದ ಅಧಿಕಾರ ನಡೆಸುತ್ತಾ ರಾಜ್ಯವನ್ನು ಅಶಾಂತಿಯ ಗೂಡಿಗೆ ದೂಡಿಬಿಟ್ಟಿದ್ದರು ರಾಜ್ಯ ಕಾಂಗ್ರೆಸ್ ಸರ್ಕಾರದ ದೊರೆಗಳು. ಆದರೆ ಈ ಬಾರಿಯ ಕೆಲವು ಪ್ರಕರಣಗಳು ಕಾಂಗ್ರೆಸ್‍ಗೆ ನುಂಗಲಾರದ ತುತ್ತಾಗಿದ್ದು, ಅಮಾನತಿನ ಮೇಲೆ ಅಮಾನತು ಆಗುತ್ತಿದ್ದಾರೆ ಕಾಂಗ್ರೆಸ್‍ನ ಕೆಲವು ಗೂಂಡಾಗಳು.

ಶಾಸಕ ಹ್ಯಾರಿಸ್ ಮಗ ಕಾಂಗ್ರೆಸ್‍ಗೆ ಕೊಟ್ಟಿದ್ದ ಭಾರೀ ಪೆಟ್ಟು..!

ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ನ ಮಗ ಗೂಂಡಾ ನಲಪಾಡ್ ನ ಅವಾಂತರ ರಾಜ್ಯ ಮಟ್ಟದಲ್ಲಿಯೇ ಸುದ್ಧಿಯಾಗುತ್ತಿದೆ. ನಟ ಸಾರ್ವಭೌಮ ದಿವಂಗತ ಡಾ.ರಾಜ್ ಕುಮಾರ್ ಅವರ ಮೊಮ್ಮಗ ಅಂದರೆ, ರಾಘವೇಂದ್ರ ರಾಜ್ ಕುಮಾರ್ ಅವರ ಮಗ ಗುರು ರಾಜ್ ಕುಮಾರ್ ಅವರ ಸ್ನೇಹಿತ ವಿದ್ವತ್ ಎಂಬಾತನಿಗೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಹಾಗೂ ಆತನ ಗ್ಯಾಂಗ್ ಮನಬಂದಂತೆ ಹಲ್ಲೆ ಮಾಡಿತ್ತು. ರೆಸ್ಟೋರೆಂಟ್‍ವೊಂದರಲ್ಲಿ ಊಟ ಮಾಡುತ್ತಿದ್ದ ವೇಳೆ ವಿದ್ವತ್ ಕಾಲು ತಾಗಿತ್ತು ಎಂಬ ಕ್ಷುಲ್ಲಕ ಕಾರಣಕ್ಕಾಗಿ ವಿದ್ವತ್ ಎಂಬಾತನನ್ನು ಮನಬಂದಂತೆ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು.

ವಿದ್ವತ್ ಕಾಲು ನಲಪಾಡ್‍ಗೆ ತಾಗಿದಾಗ ಕೆಲವೊಂದು ಹುಡುಗಿಯರು ಆತನನ್ನು ನೋಡುತ್ತಿದ್ದರು. ಈ ವೇಳೆ ಲಲನೆಯರ ಮುಂದಿನ ಪ್ರತಿಷ್ಟೆಗೆ ತನ್ನ ಗೂಂಡಾ ತಂಡದೊಂದಿಗೆ ಮನಬಂದಂತೆ ಹಲ್ಲೆ ಮಾಡಿ ಬಿಯರ್ ಬಾಟಲಿಯಿಂದ ಮುಖಕ್ಕೆ ಅಮಾನವೀಯವಾಗಿ ಹಲ್ಲೆ ಮಾಡಿದ್ದಾನೆ. ಇದನ್ನು ತಡೆಯಲು ಹೋಗಿದ್ದ ವಿದ್ವತ್ ಸ್ನೇಹಿತ, ರಾಘವೇಂದ್ರ ರಾಜ್ ಕುಮಾರ್ ಅವರ ಮಗ ಗುರು ರಾಜ್ ಕುಮಾರ್ ಅವರಿಗೂ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ತಾನು ಡಾ.ರಾಜ್ ಕುಮಾರ್ ಅವರ ಕುಟುಂಬಸ್ಥ ಎಂದು ಹೇಳಿದ ನಂತರ ಅವರನ್ನು ಬಿಟ್ಟು ಬಿಟ್ಟಿದ್ದಾರೆ.

ಕಾಂಗ್ರೆಸ್ ವಿರುದ್ಧ ಕೆಂಡ ಕಾರಿದ ರಾಜ್ ಕುಟುಂಬಸ್ಥರು…!

ಬಹುಷಃ ಈ ಪ್ರಕರಣ ಡಾ.ರಾಜ್ ಕುಟುಂಬದ ಸ್ನೇಹಿತ ಎನ್ನುವ ಕಾರಣಕ್ಕೆ ಭಾರೀ ಸುದ್ಧಿಯಾಗಿ ನಲಪಾಡ್ ಎಂಬಾತನ ಮೇಲೆ ಕಠಿಣ ಶಿಕ್ಷೆಯೂ ಆಗುವಂತೆ ಒಂದು ಹಂತದಲ್ಲಿ ಮಾಡಲಾಯಿತು. ಘಟನೆ ನಡೆಯುತ್ತಿದ್ದಂತೆಯೇ ರಾಜ್ ಕುಟುಂಬದ ಸದಸ್ಯರೆಲ್ಲರೂ ಆಸ್ಪತ್ರೆಗೆ ದೌಢಾಯಿಸುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಅವರ ಪತ್ನಿ, ಶಿವರಾಜ್ ಕುಮಾರ್ ಸಹಿತ ರಾಜ್ ಕುಟುಂಬದ ಸದಸ್ಯರು ಆಗಮಿಸಿ ವಿದ್ವತ್ ಆರೋಗ್ಯವನ್ನು ವಿಚಾರಿಸುತ್ತಾರೆ.

ಶಾಂತಿ ನಗರನಾ ಇದು? ನಾಚಿಗೆ ಆಗ್ಬೇಕು-ಶಿವಣ್ಣ..!

“ದಾಳಿ ನಡೆದ ನಗರ ಶಾಂತಿನಗರನಾ? ಅಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ಬೆಂಗಳೂರು ಶಾಂತಿ ಪ್ರಿಯ ನಗರ ಅಂತಾರೆ. ಆದರೆ ಇಲ್ಲಿ ನಡೆಯುತ್ತಿರುವುದಾರು ಏನು? ಇಲ್ಲಿ ಕಾನೂನು ಕೈತಪ್ಪಿದೆ. ಗೂಂಡಾಗಿರಿ ಮುಗಿಲು ಮುಟ್ಟಿದೆ. ಕಾನೂನಿನ ಯಾವುದೇ ವ್ಯವಸ್ಥೆಯೂ ಇಲ್ಲಿ ಕಾರ್ಯನಿರ್ವಹಿಸುತ್ತಿಲ್ಲ” ಎಂದು ಕಿಡಿ ಕಾರಿದ್ದಾರೆ. “ವಿದ್ವತ್ ನಮ್ಮ ಕುಟುಂಬದ ಸ್ನೇಹಿತ. ನಮ್ಮ ಮನೆಯ ಪೂಜೆಯ ಸಂದರ್ಭ ನಾನು ಆತನನ್ನು ನೋಡಿದ್ದೆ. ಆತನ ಈ ಪರಿಸ್ಥಿತಿ ನೋಡಿ ತುಂಬಾನೆ ಬೇಜಾರಾಯ್ತು. ಆತನ ಪೋಷಕರಿಗೆ ಸಮಾಧಾನ ಹೇಳಿದ್ದೇನೆ. ಆತ ಐಸಿಯುನಲ್ಲಿ ಇರುವ ಕಾರಣ ಆತನನ್ನು ನೋಡಲು ಸಾಧ್ಯವಾಗಿಲ್ಲ” ಎಂದು ಹೇಳಿದ್ದಾರೆ.

ಫೇಸ್ ಬುಕ್ ಪೋಸ್ಟ್ ಮಾಡಿದ ಗುರುರಾಜ್ ಕುಮಾರ್…

ಇನ್ನು ಸರ್ಕಾರದ ವಿರುದ್ಧ ಪರೋಕ್ಷವಾಗಿ ಅಸಮಧಾನ ವ್ಯಕ್ತಪಡಿಸಿದ ರಾಘವೇಂದ್ರ ರಾಜ್ ಕುಮಾರ್ ತನ್ನ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ. “ತಪ್ಪು ಮಾಡಿದವರಿಗೆ ಶಿಕ್ಷೆ ತಪ್ಪಿದ್ದಲ್ಲ, ಸುರಕ್ಷತೆಗೆ ಮೊದಲ ಆದ್ಯತೆ ಇರಬೇಕು. ಆದರೆ ಇಲ್ಲಿ ಸುಕ್ಷತೆನೇ ಇಲ್ಲ. ಕರ್ನಾಟಕದಲ್ಲಿ ಇದ್ದೀಯ ಎಂದರೆ ಒಳ್ಳೆಯ ಕನ್ನಡಿಗನಾಗಿ ಇರಬೇಕು” ಎಂದು ಫೇಸ್ ಬುಕ್ ಪೋಸ್ಟ್ ಹಾಕಿಕೊಂಡು ಪರೋಕ್ಷವಾಗಿ ಕೇರಳ ಮೂಲದ ಕರ್ನಾಟಕ ಕಾಂಗ್ರೆಸ್ ಶಾಸಕ ಹ್ಯಾರಿಸ್ ಹಾಗೂ ಆತನ ಪುತ್ರ ನಲಪಾಡ್‍ಗೆ ಟಾಂಗ್ ನೀಡಿದ್ದಾರೆ.

ಕಣ್ಣೀರು ಹಾಕಿದ್ದ ಪವರ್ ಸ್ಟಾರ್…

ಘಟನೆಯ ಮಾಹಿತಿಯನ್ನು ತಿಳಿದ ತಕ್ಷಣವೇ ಆಸ್ಪತ್ರೆಗೆ ದೌಢಾಯಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿದ್ವತ್‍ನನ್ನು ನೋಡಿ ಕಣ್ಣೀರು ಹಾಕಿದ್ದಾರೆ. “ಇಂತ ಸ್ಥಿತಿ ಯಾರಿಗೂ ಬರಬಾರದು. ಯಾರಿಗೂ ಹೊಡೆಯುವ ಅಧಿಕಾರ ಇಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇ ಬೇಕು. ಇಲ್ಲಿ ಏನಾಗ್ತಿದೆ ಎಂದು ನೋಡುವಾಗಲೇ ಬೇಜಾರಾಗುತ್ತಿದೆ. ಬೆಂಗಳೂರು ಹಾದಿ ತಪ್ಪುತ್ತಿದೆಯಾ ಎನ್ನುವ ಆತಂಕವೂ ಎದುರಾಗ್ತಿದೆ. ವಿದ್ವತ್ ನನ್ನ ಕಿರಿತ ಸಹೋದರ ಇದ್ದ ಹಾಗೆ. ಆದಷ್ಟು ಬೇಗ ಗುಣಮುಖನಾಗಿ ಹೊರಬರಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿ ಕಣ್ಣೀರು ಹಾಕಿದ್ದರು.

ನಲಪಾಡ್ ಡ್ರಗ್ಸ್ ಎಡಿಕ್ಟರ್-ಶ್ರೀ ರಾಮುಲು.

ನಟ ಶಿವರಾಜ್ ಕುಮಾರ್ ಮಲ್ಯ ಆಸ್ಪತ್ರೆಗೆ ಆಗಮಿಸುವಾಗ ಬಳ್ಳಾರಿ ಸಂಸದ ಶ್ರೀ ರಾಮುಲು ಎದುರಾಗುತ್ತಾರೆ. ಭಾರತೀಯ ಜನತಾ ಪಕ್ಷದ ನಾಯಕ ಗಾಲಿ ಜನಾರ್ಧನ ರೆಡ್ಡಿ ಹಾಗೂ ಸಂಸದ ಶ್ರೀ ರಾಮುಲು ಒಟ್ಟಾಗಿ ಮಲ್ಯ ಆಸ್ಪತ್ರೆಗೆ ವಿದ್ವತ್ ಆರೋಗ್ಯವನ್ನು ವಿಚಾರಿಸಲು ಆಗಮಿಸುತ್ತಾರೆ. ಈ ವೇಳೆ ಸಂಸದ ಶ್ರೀ ರಾಮುಲು ನಟ ಶಿವರಾಜ್‍ಕುಮಾರ್ ಅವರ ಕಾಲಿಗೆರಗುತ್ತಾರೆ. ಈ ವೇಳೆ ನಟ ಶಿವರಾಜ್ ಕುಮಾರ್ ಅವರನ್ನು ತಡೆಯುತ್ತಾರೆ. ವಯಸ್ಸಿನಲ್ಲಿ 9 ವರ್ಷ ಕಿರಿಯನಾಗಿರುವ ಶ್ರೀ ರಾಮುಲು ಸಹಜವಾಗಿಯೇ ಶಿವರಾಜ್ ಕುಮಾರ್ ಅವರ ಕಾಲಿಗೆರಗಿದ್ದಾರೆ. ನಂತರ ನಟ ಹಾಗೂ ಬಿಜೆಪಿ ನಾಯಕರು ಕುಶಲೋಪರಿ ಮಾತನಾಡಿಕೊಂಡು ಅಲ್ಲಿಂದ ತೆರಳಿದ್ದಾರೆ.

ಈ ವೇಳೆ ಮಾತನಾಡಿದ ಬಳ್ಳಾರಿ ಸಂಸದ ಶ್ರೀ ರಾಮುಲು ನಲಪಾಡ್ ವಿರುದ್ಧ ಗಂಭೀರ ಆರೋಪವನ್ನೇ ಮಾಡುತ್ತಾರೆ. “ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಗೂಂಡಾ ನಲಪಾಡ್ ಓರ್ವ ಡ್ರಗ್ ಎಡಿಕ್ಟರ್. ಆತನಿಗೆ ಮಾದಕ ಚಟ ಹಿಡಿದು ಹೋಗಿದೆ. ಅರ್ಧ ರಾತ್ರಿಯಿಂದಲೇ ಆತನ ದಿನ ಆರಂಭವಾಗುತ್ತೆ. ಆತ ಓರ್ವ ಸೈಕೋ” ಎಂದು ಶ್ರೀ ರಾಮುಲು ಗಂಭೀರ ಆರೋಪವನ್ನೇ ಮಾಡುತ್ತಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣೆಯ ದಿನಗಳನ್ನು ಎನಿಸುತ್ತಿರುವಾಗಲೇ ಇಂತಹ ಘಟನೆಗಳು ಮಾರಕವಾಗುತ್ತಿರುವುದು ಭಾರೀ ಹಿನ್ನೆಡೆಗೆ ಕಾರಣವಾಗಿದೆ. ಮಾತ್ರವಲ್ಲದೆ ಸ್ವತಃ ಕನ್ನಡ ಚಿತ್ರರಂಗದ ಬಹುದೊಡ್ಡ ಕುಟುಂಬ ಡಾ.ರಾಜ್ ಕುಟುಂಬವೇ ಈಗ ಸರ್ಕಾರದ ವಿರುದ್ಧ ತೊಡೆ ತಟ್ಟಿರುವುದು ಕಾಂಗ್ರೆಸ್‍ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

-ಸುನಿಲ್ ಪಣಪಿಲ

Tags

Related Articles

Close