ಪ್ರಚಲಿತ

ಬಿಗ್ ಬ್ರೇಕಿಂಗ್: ಬಾಂಬ್ ದಾಳಿಗೆ ಕಾಂಗ್ರೆಸ್ ಮುಖಂಡನ ದೇಹ ಛಿದ್ರ ಛಿದ್ರ..!! ದಾಳಿ ಮಾಡಿದ್ದು ಯಾರು ಗೊತ್ತಾ?!

ಕಾಂಗ್ರೆಸ್ ಆಡಳಿತದಲ್ಲಿ ರಾಜಕೀಯ ಲಾಭಕ್ಕಾಗಿ ಉಗ್ರ ಕ್ರತ್ಯಗಳಲ್ಲಿ ನೇರವಾಗಿ ಭಾಗಿಯಾಗಿದ್ದ ಕಾಂಗ್ರೆಸ್ ಗೆ ಇಂದು ಇದೇ ಉಗ್ರ ಸಂಘಟನೆಗಳು ಮಾರಕವಾಗಿವೆ. ರಾಜಕೀಯ ಲಾಭಕ್ಕಾಗಿ ಯಾವ ರೀತಿಯ ಚಟುವಟಿಕೆಗಳಲ್ಲೂ ಭಾಗಿಯಾಗಲು ಸಿದ್ದವಿರುವ ಕಾಂಗ್ರೆಸ್ ಗೆ ಇಂದು ಹೊಡೆತ ಬಿದ್ದಿದೆ..!

ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಗುರಿಯಾಗಿಸಿಟ್ಟುಕೊಂಡು ಹಲ್ಲೆ – ಕೊಲೆ ಮಾಡಲಾಗುತ್ತಿದೆ. ಇದರಲ್ಲಿ ಕಾಂಗ್ರೆಸ್ ನ ಕೈವಾಡವೂ ತನಿಖೆಯ ವೇಳೆ ಬಹಿರಂಗಗೊಂಡಿತ್ತು. ಆದರೆ ಇದೀಗ ಆಂದ್ರ ಪ್ರದೇಶದ ತೆಲಂಗಾಣದಲ್ಲಿ ಕಾಂಗ್ರೆಸ್ ಮುಖಂಡನನ್ನೇ ಬಾಂಬ್ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಗ್ರಾಮ ಪಂಚಾಯತ್ ಸದಸ್ಯನ ಹತ್ಯೆ..!

ತೆಲಂಗಾಣದ ನಲ್ಗೊಂಡ ಜಿಲ್ಲೆಯ ನಾಗಾರ್ಜುನ ಪೇಟೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯನಾಗಿದ್ದ ಧರ್ಮನಾಯಕ್ ಎಂಬವರನ್ನು ಮಲಗಿದ ವೇಳೆಯೇ ಬಾಂಬ್ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ತೆಲಂಗಾಣದಲ್ಲಿ ಬಾಂಬ್ ದಾಳಿ ಮಾಮೂಲಾಗಿದ್ದು ಸರಕಾರ ಕೂಡಾ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಸ್ಥಳೀಯ ಕಾಂಗ್ರೆಸ್ ಮುಖಂಡ ಧರ್ಮನಾಯಕ್ ಗ್ರಾಮ ಪಂಚಾಯತ್ ಸದಸ್ಯನಾಗಿದ್ದು ಸರ್ ಪಂಚ್ ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆಸುತ್ತಿದ್ದರು. ಅಧಿಕಾರದ ಬಲದಿಂದ ಸ್ಥಳೀಯವಾಗಿ ಗೂಂಡಾಗಿರಿ ನಡೆಸುತ್ತಿದ್ದು ಇದೇ ಕಾರಣಕ್ಕಾಗಿ ಕೊಲೆ ನಡೆಸಲಾಗಿದೆ ಎಂದು ಶಂಕಿಸಲಾಗಿದೆ.

ಮಂಚದ ಕೆಳಗೆ ಬಾಂಬ್ ಸ್ಪೋಟಿಸಿ ಹತ್ಯೆ..!

ಹಳೇ ದ್ವೇಷಗುರುತಿಸಿಕೊಂಡಿದ್ದನ್ನು ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ರಾಜಕೀಯ ಬಲದಿಂದ ಸ್ಥಳೀಯರಲ್ಲಿ ಪದೇ ಪದೇ ಜಗಳವಾಡುತ್ತಿದ್ದ ಧರ್ಮನಾಯಕ್ ಸಾಕಷ್ಟು ಜನರ ಜೊತೆ ದ್ವೇಷ ಇಟ್ಟುಕೊಂಡಿದ್ದರು. ಗ್ರಾಮ ಪಂಚಾಯತ್ ನಲ್ಲಿ ಸದಸ್ಯನಾಗಿದ್ದು ಸರ್ ಪಂಚ್ ಹುದ್ದೆಗಾಗಿ ಭಾರೀ ಪಿತೂರಿ ನಡೆಸುತ್ತಿದ್ದ ಧರ್ಮನಾಯಕ್ ಸಾಕಷ್ಟು ಬಾರಿ ತನ್ನ ಪಕ್ಷದವರ ಜೊತೆಗೇ ಗಲಾಟೆ ಮಾಡಿಕೊಂಡು ಹಲವರ ಜೊತೆ ದ್ವೇಷ ಕಟ್ಟಿಕೊಂಡಿದ್ದರು.

ರಾತ್ರಿ ಮನೆಗೆ ಬಂದು ಮಲಗಿದ ಧರ್ಮನಾಯಕ್ ನ ಮಂಚದ ಕೆಳಗೆಯೇ ಬಾಂಬ್ ಅಳವಡಿಸಿದ್ದ ದುಷ್ಕರ್ಮಿಗಳು ಅಲ್ಲೇ ಹತ್ಯೆ ಮಾಡಿದ್ದಾರೆ. ಬಾಂಬ್ ಸ್ಪೋಟದ ತೀವ್ರತೆಗೆ ಧರ್ಮನಾಯಕ್ ರವರ ದೇಹ ಛಿದ್ರ ಛಿದ್ರವಾಗಿದ್ದು ದೇಹದ ಎಲ್ಲಾ ಭಾಗಗಳು ಮನೆಯಲ್ಲಿ ಚಲ್ಲಾಪಿಲ್ಲಿಯಾಗಿವೆ..!

ರಾತ್ರಿ ಮನೆಯ ಹೊರಾಂಗಣದಲ್ಲಿ ಮಲಗಿದ್ದ ಧರ್ಮನಾಯಕ್..!

ದಿನವಿಡೀ ಏನಾದರೊಂದು ಕಿರಿಕ್ ಮಾಡುತ್ತಲೇ ಇದ್ದ ಧರ್ಮನಾಯಕ್ ತಾನು ಕಾಂಗ್ರೆಸ್ ನ ಮುಖಂಡ , ನನ್ನಲ್ಲಿ ಅಧಿಕಾರ ಇದೆ ಎಂದು ಹೇಳಿಕೊಂಡು ತಿರುಗುತ್ತಿದ್ದ ಈತ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಎಂದಿನಂತೆ ಮನೆಗೆ ಬಂದ ಧರ್ಮನಾಯಕ್ ತನ್ನ ಮನೆಯ ಹೊರಭಾಗದಲ್ಲಿ ಮಲಗಿದ್ದರು. ಆದರೆ ಮೊದಲೇ ಎಲ್ಲಾ ರೀತಿಯ ತಯಾರಿ ನಡೆಸಿದ ದುಷ್ಕರ್ಮಿಗಳು ಮಲಗುವ ಮಂಚದ ಅಡಿಯಲ್ಲೇ ಬಾಂಬ್ ಸ್ಪೋಟಿಸಿ ಹತ್ಯೆಗೈದಿದ್ದಾರೆ.


ಮನೆಯಲ್ಲಿ ಬಾಂಬ್ ಸ್ಪೋಟವಾಗುತ್ತಿದ್ದಂತೆ ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿಸಿದೆ.ಏಕಾಏಕಿ ಬಾಂಬ್ ಸ್ಪೋಟವಾಗಿದ್ದು , ಧರ್ಮನಾಯಕ್ ಅವರ ದೇಹದ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ..!

ತೆಲಂಗಾಣದಲ್ಲಿ ಈ ಹಿಂದೆಯೂ ಬಾಂಬ್ ಸ್ಪೋಟದಂತಹ ಪ್ರಕರಣಗಳು ನಡೆಯುತ್ತಲೇ ಇದ್ದು , ಬಿಜೆಪಿ ನಡೆಸಿದ ಸಮಾವೇಶಕ್ಕೂ ಬಾಂಬ್ ದಾಳಿಯ ಬೆದರಿಕೆಗಳು ಬಂದಿತ್ತು. ಇಲ್ಲಿ ಸ್ಥಳೀಯವಾಗಿ ಕಾಂಗ್ರೆಸ್ ಪ್ರೇರಿತ ಪಕ್ಷಗಳೇ ಪ್ರಾಬಲ್ಯ ಹೊಂದಿರುವುದರಿಂದ ಬಿಜೆಪಿ ನಡೆಸುವ ಸಮಾವೇಶಗಳಿಗೆ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಕರೆಗಳು ಬರುತ್ತಲೇ ಇತ್ತು. ಇಂತಹ ಸಂದರ್ಭಗಳಲ್ಲಿ ಕಾಂಗ್ರೆಸ್ ಕೂಡ ಬಿಜೆಪಿ ಗೆ ವಿರುಧ್ದವಾಗಿಯೇ ಇದ್ದುದರಿಂದ ಇದೀಗ ಸ್ವತಃ ಕಾಂಗ್ರೆಸ್ ಮುಖಂಡನನ್ನೇ ಬಾಂಬ್ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.


ಈಗಾಗಲೇ ದೇಶದಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್ ತನ್ನ ನೆಲೆ ಕಂಡುಕೊಳ್ಳಲು ಬಿಜೆಪಿಯ ವಿರುದ್ಧ ಏನಾದರೊಂದು ತಂತ್ರ ರೂಪಿಸುತ್ತಲೇ ಇದೆ. ಯಾವ ರೀತಿಯ ದುಷ್ಕ್ರತ್ಯ ನಡೆಸಲು ಸಿದ್ದವಿರುವ ಕಾಂಗ್ರೆಸ್ ನ ಮೇಲೆಯೇ ಈ ರೀತಿಯ ದಾಳಿ ನಡೆದಿದ್ದು , ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದಿದೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಪ್ರೇರಿತ ಪಕ್ಷಗಳ ಆಳ್ವಿಕೆ ನಡೆಯುತ್ತಿದ್ದು , ವಿರೋಧ ಪಕ್ಷಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಲೇ ಇತ್ತು. ಬಿಜೆಪಿಯಂತಹ ಪಕ್ಷಗಳ ಸಮಾವೇಶಕ್ಕೂ ಅಡ್ಡಿಪಡಿಸುತ್ತಿದ್ದ ಇಲ್ಲಿನ ಕಾಂಗ್ರೆಸ್ ಬಾಂಬ್ ದಾಳಿ ನಡೆಸುವುದಾಗಿಯೂ ಬೆದರಿಕೆ ಹಾಕಿತ್ತು. ಇದೀಗ ಬಾಂಬ್ ಹಾಕುವವರೇ ದಾಳಿಗೆ ತುತ್ತಾಗಿದ್ದು ಕಾಂಗ್ರೆಸ್ ಗೆ ಭಾರೀ ಹೊಡೆತ ಬಿದ್ದಿದೆ.

ಯಾಕೆಂದರೆ ಸ್ಥಳಿಯವಾಗಿ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ಧರ್ಮನಾಯಕ್ ತನ್ನ ರಾಜಕೀಯ ಬೆಳವಣಿಗೆಗಾಗಿ ಸ್ವತಃ ಕಾಂಗ್ರೆಸ್ ನಲ್ಲೇ ಪೈಪೋಟಿಗೆ ಇಳಿದಿದ್ದರು.ಆದ್ದರಿಂದಲೇ ಈತನ ಮೇಲೆ ಸ್ವತಃ ಕಾಂಗ್ರೇಸಿಗರೇ ಮುನಿಸಿಕೊಂಡಿದ್ದರು.
ಸ್ಪೋಟದ ಹಿಂದೆ ಹಳೇ ಧ್ವೇಷವೇ ಕಾರಣ ಎಂದು ಪೋಲೀಸರು ಶಂಕಿಸಿದ್ದು ಸತ್ಯಾಂಶ ತನಿಖೆಯ ನಂತರವಷ್ಟೇ ಬಯಲಾಗಲಿದೆ..!

ಅರ್ಜುನ್

Tags

Related Articles

Close