ಪ್ರಚಲಿತ

ರಾಷ್ಟ್ರೀಯ ಭದ್ರತಾ ಇಲಾಖೆಗೆ ಮತ್ತೊಂದು ಗೆಲುವು! ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳ ಹೆಡೆಮುರಿಕಟ್ಟಿದ ಮೋದಿ ಸರಕಾರ!

ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬರುತ್ತಿದ್ದಂತೆ ದೇಶಾದ್ಯಂತ ಯಾವ ರೀತಿಯ ಬದಲಾವಣೆ ಕಂಡು ಬರುತ್ತಿದೆ ಎಂದರೆ ಕಾಶ್ಮೀರ ಸೇರಿದಂತೆ ದೇಶದ ಅನೇಕ ಕಡೆಗಳಲ್ಲಿ ನಕ್ಸಲರು, ಪ್ರತ್ಯೇಕವಾದಿಗಳ ಅಟ್ಟಹಾಸ ಕಡಿಮೆಯಾಗಿದೆ.‌ ಇತ್ತ ಬಿಜೆಪಿ ಚಾಣಕ್ಯ ಅಮಿತ್ ಶಾ ಗೃಹ ಸಚಿವರಾಗಿ ನೇಮಕವಾಗುತ್ತಿದ್ದಂತೆ ದೇಶಾದ್ಯಂತ ಹೊಸ ಸಂಚಲನ ಸೃಷ್ಟಿಯಾಗಿದೆ. ಯಾಕೆಂದರೆ ಅಮಿತ್ ಶಾ ಅವರು ಗೃಹ ಸಚಿವರಾಗಿ ಆಯ್ಕೆಯಾಗುತ್ತಿದ್ದಂತೆ ಕಾಶ್ಮೀರದ ಮೇಲೆ ಕಣ್ಣಿಟ್ಟಿದ್ದಾರೆ. ಸೇನೆಯ ಮೇಲೆ ಕಲ್ಲು ತೂರಾಟ ನಡೆಸುವ ದೇಶದ್ರೋಹಿಗಳ ಜೊತೆ ಯಾವುದೇ ರಾಜಿ ಮಾಡಿಕೊಳ್ಳದೆ ಕ್ರಮ‌ ಕೈಗೊಳ್ಳಿ ಎಂದು ಈಗಾಗಲೇ ಆದೇಶ ನೀಡಿರುವ ಶಾ, ಕಾಶ್ಮೀರದಲ್ಲಿ ಹಿಂಸಾಚಾರ ಸಂಪೂರ್ಣ ನಿಲ್ಲಿಸಲು ಪಣತೊಟ್ಟಿದ್ದಾರೆ. ದೇಶ ವಿರೋಧಿ ಚಟುವಟಿಕೆ ಅಥವಾ ದೇಶ ವಿರೋಧಿ ಘೋಷಣೆ ಕೂಗುವವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲ ಸೂಚನೆ ನೀಡಿರುವ ಶಾ, ಇಂದು ಉನ್ನತ ಅಧಿಕಾರಿಗಳ ಜೊತೆ ಮತ್ತೊಂದು ಸಭೆ ನಡೆಸಿ ಹೊಸ ವರದಿ ತಯಾರಿಸಿದ್ದಾರೆ.!

ರಕ್ಷಣಾ ಪಡೆಗಳ ಮುಖ್ಯಸ್ಥರ ಜೊತೆ ಸಭೆ ನಡಸಿದ ಶಾ, ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಇಂದು ಕಾಶ್ಮೀರದ ಪ್ರತ್ಯೇಕವಾದಿ ಸಂಘಟನೆಗಳ ನಾಯಕರನ್ನು ಬಂಧಿಸಿದ ಸೇನೆ, ತಮ್ಮ ಕಾರ್ಯಾಚರಣೆ ಮುಂದುವರಿಸಿದೆ. ಕಳೆದ ಕೆಲವು ವರ್ಷಗಳಿಂದ ಕಾಶ್ಮೀರದಲ್ಲೇ ಇದ್ದು ಪಾಕಿಸ್ತಾನದ ಪರ ಘೋಷಣೆ ಕೂಗಿ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಮಸರತ್ ಆಲಂ, ಶಬ್ಬೀರ್, ಅಶಿಯಾ ಎಂಬ ಮೂವರನ್ನು ಬಂಧಿಸಿರುವ ಸೇನೆ, ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರಿಸಿದೆ. ಈ ಮೂವರು ಕೂಡ ಕಾಶ್ಮೀರದಲ್ಲಿ ಸೇನಾ ಯೋಧರ ಮೇಲೆ ಕಲ್ಲು ತೂರಾಟ, ಹಿಂಸಾ ಕೃತ್ಯಗಳನ್ನು ನಡೆಸಿ ಮತ್ತಷ್ಟು ಪ್ರಚೋದನೆ ನೀಡಿ ಕಾಶ್ಮೀರದ ಜನರು ಭಾರತಕ್ಕೆ ವಿರೋಧಿಯಾಗಿ ನಿಲ್ಲುವಂತೆ ಮಾಡುತ್ತಿದ್ದರು. ಆದರೆ ಇದೀಗ ಇವರನ್ನು ಸೇನೆ ಬಂಧಿಸಿದ್ದು, ರಾಷ್ಟ್ರೀಯ ಭದ್ರತಾ ಸಂಸ್ಥೆಗೆ ಬಹು ದೊಡ್ಡ ಗೆಲುವು ಸಿಕ್ಕಂತಾಗಿದೆ.!

ಅಮರನಾಥ ಯಾತ್ರೆಗೂ ಮುನ್ನವೇ ಸಂಪೂರ್ಣ ಕಾಶ್ಮೀರ ಕೇಂದ್ರದ ಸುಪರ್ದಿಗೆ?

ಯಾವ ಸರಕಾರ ಬಂದರೂ ಕಾಶ್ಮೀರದಲ್ಲಿ ನಡೆಯುವ ಹಿಂಸಾತ್ಮಕ ಘರ್ಷಣೆಗಳು ಕಡಿಮೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಕಳೆದ ಐದು ವರ್ಷಗಳಲ್ಲಿ ಮೋದಿ ಸರಕಾರ ಸಾಕಷ್ಟು ಪ್ರಮಾಣದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡಿದ್ದು, ಕಾಶ್ಮೀರದಲ್ಲಿ ಸೇನಾ ಯೋಧರನ್ನು ಹೆಚ್ಚು ಹೆಚ್ಚು ನೇಮಕ ಮಾಡಿ ಕಾಶ್ಮೀರವನ್ನು ಹತೋಟಿಗೆ ತರಲು ಪ್ರಯತ್ನಿಸಿದ್ದ ಕೇಂದ್ಸುಪರ್ದಿಗೆಕಳೆದ ಬಾರಿ ಅಮರನಾಥ ಯಾತ್ರೆಯನ್ನು ಕೂಡ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡಿತ್ತು. ಉಗ್ರರ ದಾಳಿಯ ಬೆದರಿಕೆಗಳಿದ್ದರೂ ಕೂಡ ವಿಶೇಷ ಭದ್ರತೆ ಒದಗಿಸಿ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಿಕೊಂಡಿತ್ತು ಮೋದಿ‌ ಸರಕಾರ. ಇದೀಗ ಎರಡನೇ ಬಾರಿಗೆ ಸರಕಾರ ರಚನೆಯಾಗುತ್ತಿದ್ದಂತೆ ಕಾಶ್ಮೀರದ ಮೇಲೆ ನೇರವಾಗಿ ಕಣ್ಣಿಟ್ಟ ಮೋದಿ ಸರಕಾರ ಈ ಬಾರಿ ಸಂಪೂರ್ಣ ಕಾಶ್ಮೀರವನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಲು ಮಾಸ್ಟರ್ ಪ್ಲಾನ್ ರೂಪಿಸಿದೆ. ಹೌದು ಇಂದು ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದು, ಮುಂದಿನ ಅಮರನಾಥ ಯಾತ್ರೆಗೂ ಮುನ್ನವೇ ಕಾಶ್ಮೀರವನ್ನು ಸಂಪೂರ್ಣ ಸುಪರ್ದಿಗೆ ಪಡೆದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ನಿರ್ಧರಿಸಿದೆ. ಗೆಡಿಯಲ್ಲೂ ಹೆಚ್ಚಿನ ಭದ್ರತೆ ನೀಡಿ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದ ಮೋದಿ ಸರಕಾರ ಇದೀಗ ಕಾಶ್ಮೀರದತ್ತ ಕಣ್ಣಿಟ್ಟಿದೆ.!

ಒಟ್ಟಾರೆಯಾಗಿ ನರೇಂದ್ರ ಮೋದಿಯವರು ಎರಡನೇ ಬಾರಿಗೆ ಪ್ರಧಾನಿಯಾಗುತ್ತಿದ್ದಂತೆ‌ ಮೊದಲು ಮಾಡಿದ ಕೆಲಸವೇ ದೇಶದ ಭದ್ರತೆಯನ್ನು ಹೆಚ್ಚಿಸುವುದಾಗಿದೆ. ಯಾಕೆಂದರೆ ದೇಶದಲ್ಲಿ ಅತೀ ಹೆಚ್ಚು ಹಿಂಸಾಚಾರ ನಡೆಯುವುದು ಕಾಶ್ಮೀರದಲ್ಲಿ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಇದರಿಂದಾಗಿ ಕಾಶ್ಮೀರವನ್ನು ನಿಯಂತ್ರಿಸಿದರೆ ಮಾತ್ರ ದೇಶವಿರೋಧಿ ಚಟುವಟಿಕೆ ಮತ್ತು ದೇಶದ್ರೋಹಿಗಳ ಕೈಕಟ್ಟಿ ಹಾಕಬಹುದು ಎಂಬುದು ಸ್ಪಷ್ಟ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close