ಪ್ರಚಲಿತ

ಮೇಕ್ ಇನ್ ಇಂಡಿಯಾ ಯೋಜನೆಯಿಂದ ಲಕ್ಷಾಂತರ ಡಾಲರ್ ಪೋಲಾಗದಂತೆ ಮಾಡಿದೆ ಮೋದಿ ಸರಕಾರ! ಭಾರತದಲ್ಲಿ ದೇಶೀ ನಿರ್ಮಿತ ಮಿಲಿಟರಿ ಸಾಧನಗಳದ್ದೇ ದರ್ಬಾರ್!

ಪ್ರಧಾನಿ ನರೇಂದ್ರ ಮೋದಿಯವರು ಏನೇ ಮಾಡಿದರೂ ಅದು ಭಾರತದ ಹಿತಕ್ಕಾಗಿಯೇ ಆಗಿರುತ್ತದೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಅಷ್ಟೇ ಅಲ್ಲದೆ ಮೋದಿ ಪ್ರಧಾನಿಯಾದ ಬಳಿಕ ಭಾರತೀಯ ಸೇನಾ ವ್ಯವಸ್ಥೆ ಯಾವ ರೀತಿ ಬಲಿಷ್ಟಗೊಂಡಿದೆ ಎಂದರೆ ಸ್ವದೇಶಿ ನಿರ್ಮಿತ ತಂತ್ರಜ್ಞಾನದಿಂದಲೇ ಜಗತ್ತಿನ ಬಲಿಷ್ಟ ರಾಷ್ಟ್ರಗಳ ಗಮನ ಸೆಳೆದಿದೆ. ಮೋದಿ ಸರಕಾರದ ಪ್ರತಿಯೊಂದು ಯೋಜನೆಯನ್ನೂ ಕೂಡ ವಿರೋಧಿಸುವ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಾದ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಕೂಡ ವಿರೋಧಿಸಿತ್ತು. ಇದೊಂದು ಅನವಶ್ಯಕ ಯೋಜನೆ , ಇದರಿಂದ ಯಾವುದೇ ಉಪಯೋಗ ಇಲ್ಲ, ಮೇಕ್ ಇನ್ ಇಂಡಿಯಾ ಯೋಜನೆ ವಿಫಲ ಎಂದು ಹೇಳಿದ ಎಲ್ಲಾ ವಿರೋಧಿಗಳಿಗೂ ಇದೀಗ ಕಪಾಳಮೋಕ್ಷ ಮಾಡಿದಂತಾಗಿದೆ. ಯಾಕೆಂದರೆ ಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆಯಿಂದ ಭಾರತದಲ್ಲಿ ಉತ್ಪಾದನಾ ಸಾಮಾರ್ಥ್ಯ ಹೆಚ್ಚಾಗಿತ್ತು ಮಾತ್ರವಲ್ಲದೆ ಸೇನೆಗೆ ಬೇಕಾದ ತಂತ್ರಜ್ಞಾನ, ಸಾಧನಗಳು ಕೂಡ ಈ ಯೋಜನೆಯಡಿಯಲ್ಲಿ ಭಾರತದಲ್ಲೇ ಉತ್ಪಾದನೆಯಾಗತೊಡಗಿತ್ತು. ಇದರಿಂದ ಇದೀಗ ವರದಿಯ ಪ್ರಕಾರ ಭಾರತ ವಿದೇಶಗಳಿಗೆ ನೀಡುವ ಲಕ್ಷಾಂತರ ಡಾಲರ್‌ಗಳು ಉಳಿತಾಯವಾಗಿದೆ ಮತ್ತು ಭಾರತದಲ್ಲಿ ನಿರ್ಮಿಸಲಾದ ಮಿಲಿಟರಿ ಉಪಕರಣಗಳು ಕೂಡ ಉತ್ತಮವಾಗಿದೆ ಎಂಬುದಾಗಿ ಹೇಳಲಾಗಿದೆ.!

ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಉತ್ಪಾದನಾ ವಲಯ ವೃದ್ಧಿ!

ಈ ಹಿಂದೆ ಭಾರತ ಪ್ರತಿಯೊಂದು ಸೇನಾ ಸಲಕರೆಣೆಗಳನ್ನು ಕೂಡ ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಬೇಕಿತ್ತು. ಆದರೆ ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆಯಿಂದಾಗಿ ಇದೀಗ ಭಾರತ ಸ್ವಾವಲಂಬಿ ದೇಶವಾಗಿ ಬದಲಾಗಿದೆ. ಯಾಕೆಂದರೆ ಸೇನೆಗೆ ಸಂಬಂಧಿಸಿದ ಸಲಕರಣೆಗಳನ್ನು ಇದೀಗ ಭಾರತದಲ್ಲೇ ಉತ್ಪಾದನೆ ಮಾಡಲಾಗುತ್ತಿದೆ ಮತ್ತು ಭಾರತೀಯ ಸೇನೆಯನ್ನು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ಸೇನಾ ತಂತ್ರಜ್ಞಾನಗಳು ಭಾರತದಲ್ಲೇ ತಯಾರಾಗುತ್ತಿದೆ. ದೇಶೀಯ ಕಂಪನಿಗಳು ಮತ್ತು ಸಂಶೋಧನಾ ಸಂಸ್ಥೆಗಳಾದ ಡಿಆರ್‌ಡಿಓ ಮತ್ತು ರಿಲಯನ್ಸ್ ಕಂಪನಿಗಳ ಮೂಲಕ ಸೇನೆಗೆ ಸಂಬಂಧಿಸಿದ ಸಲಕರಣೆಗಳು ಇದೀಗ ಭಾರತದಲ್ಲೇ ಉತ್ಪಾದನೆಯಾಗುತ್ತಿದೆ. ಸೈನ್ಯಕ್ಕೆ ಬೇಕಾದ ಹೆಲಿಕಾಪ್ಟರ್ ವಿರೋಧಿ ಕ್ಷಿಪಣಿ, ಟ್ಯಾಂಕ್ ವಿರೋಧಿ ನಿರ್ದೇಶಿತ ಕ್ಷಿಪಣಿಗಳು, ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ ಮತ್ತು ಇತರ ಪ್ರಮುಖ ಶಸ್ತ್ರಾಸ್ತ್ರಗಳು ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಭಾರತದಲ್ಲೇ ಉತ್ಪಾದನೆ ಮಾಡಲಾಗುತ್ತಿದೆ. ಇದರಿಂದ ಭಾರತ ವಿದೇಶಕ್ಕೆ ನೀಡಬೇಕಾದ ಲಕ್ಷಾಂತರ ಕೋಟಿ ರೂಪಾಯಿ ಉಳಿತಾಯವಾಗಿದ್ದು, ಭಾರತದ ಕಂಪನಿಗಳಿಂದಲೇ ಉತ್ಪಾದನೆ ಮಾಡುವ ಮೂಲಕ ಭಾರತ ಸ್ವಾವಲಂಬಿ ರಾಷ್ಟ್ರವಾಗಿ ಬೆಳೆಯುತ್ತಿದೆ.!

ವಿದೇಶಕ್ಕೆ ಸೆಡ್ಡುಹೊಡೆಯಲಿದೆ ಭಾರತದ ಉತ್ಪಾದನಾ ವಲಯ!

ರಕ್ಷಣಾ ವಲಯದಲ್ಲಿ ದೇಶೀಯ ನಿರ್ಮಿತ ಉತ್ಪಾದನೆಯನ್ನು ಅಭಿವೃದ್ಧಿಪಡಿಸಲು ಮೋದಿ ಸರಕಾರ ನಡೆಸುತ್ತಿರುವ ಪ್ರಯತ್ನಗಳು ದೇಶಕ್ಕೆ ಲಕ್ಷಾಂತರ ಡಾಲರ್ ಉಳಿತಾಯ ಮಾಡುತ್ತಿದೆ ಎಂದರೆ ತಪ್ಪಾಗದು. ಈ ಹಿಂದೆ ಆಮದು ಮಾಡಿಕೊಳ್ಳುತ್ತಿದ್ದ ಘನ ರಕ್ಷಣಾ ಉಪಕರಣಗಳು ಈಗ ದೇಶದ ಸಾರ್ವಜನಿಕ ಮತ್ತು ಖಾಸಗಿ ಕಂಪನಿಗಳ ಮೂಲಕ ಉತ್ಪಾದನೆಯಾಗುತ್ತಿದೆ. ಅಷ್ಟೇ ಅಲ್ಲದೆ ಭಾರತದ ಸೇನಾ ಸಲಕರಣೆಗಳು ಈ ಹಿಂದಿಗಿಂತಲೂ ಉತ್ತಮವಾಗಿದ್ದು ದೇಶೀಯ ನಿರ್ಮಿತ ಎಂಬ ಹೆಮ್ಮೆ ಕೂಡ ಭಾರತಕ್ಕಿದೆ. ಮೋದಿ ಸರಕಾರದ ಒಂದೊಂದು ಯೋಜನೆಗಳು ಕೂಡ ಇಂದು ಭಾರತವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ. ಯಾಕೆಂದರೆ ಸೇನೆ ಬಲಿಷ್ಟವಾದರೆ ದೇಶ ಸುರಕ್ಷಿತವಾಗಿರುತ್ತದೆ, ಅದೇ ರೀತಿ ದೇಶ ಸುಭದ್ರವಾಗಿರಬೇಕಾದರೆ ಸ್ವದೇಶಿ ನಿರ್ಮಿತ ವಸ್ತುಗಳು ಹೆಚ್ಚಾಗಬೇಕು ಮತ್ತು ಅವುಗಳನ್ನು ರಫ್ತು ಮಾಡುವ ಮೂಲಕ ಭಾರತಕ್ಕೆ ಲಾಭ ಪಡೆಯಲು ಸಾಧ್ಯವಾಗುತ್ತದೆ ಮತ್ತು ಇದು ಸದ್ಯ ಮೋದಿ ಆಡಳಿತದಲ್ಲಿ ನಡೆಯುತ್ತಿದೆ.

ಅದೇನೇ ಇರಲಿ ಮೋದಿ ಆಡಳಿತವನ್ನು ವಿರೋಧಿಸುವ ವಿಪಕ್ಷಗಳು ದೇಶದ ರಕ್ಷಣಾ ವ್ಯವಸ್ಥೆಯನ್ನು ಕೂಡ ವಿರೋಧಿಸುತ್ತಿದೆ ಎಂಬುದು ಸ್ಪಷ್ಟವಾಗಿ ಕಾಣಬಹುದು. ಯಾಕೆಂದರೆ ದೇಶದ ರಕ್ಷಣಾ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಮೋದಿ ಸರಕಾರದ ಮೇಕ್ ಇನ್ ಇಂಡಿಯಾ ಯೋಜನೆಯಿಂದ ಭಾರತ ಲಕ್ಷಾಂತರ ಡಾಲರ್ ಉಳಿಸುವಲ್ಲಿ ಯಶಸ್ವಿಯಾಗಿದೆ ಎಂಬುದಂತೂ ಸತ್ಯ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close