ದೇಶಪ್ರಚಲಿತ

ಕರ್ನಾಟಕದಲ್ಲಿ ರಾಹುಲ್‍ಗೆ ಬಿಗ್ ಶಾಕ್!! ರಸ್ತೆಯಲ್ಲೇ ಬೆಂಕಿ ಹಚ್ಚಿ ವಿರೋಧ!! ರಾಹುಲ್‍ಗೆ ಬೆಂಕಿಯ ಸ್ವಾಗತ ಕೋರಿದ್ಯಾಕೆ?!

ರಾಹುಲ್ ಗಾಂಧಿ ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರದ ಗದ್ದುಗೆಯಲ್ಲಿ ಕೂರಿಸಬೇಕೆಂದು ಪಣ ತೊಟ್ಟು, ಅಕ್ರಮವಾಗಿ ಯಾವೆಲ್ಲ ಚಟುವಟಿಕೆಗಳನ್ನು ಬಳಸಬಹುದೋ ಅಷ್ಟು ತಂತ್ರಗಾರಿಕೆಗಳನ್ನು ಉಪಯೋಗಿಸಿಕೊಂಡು ತನ್ನ ವರ್ಚಸ್ಸನ್ನು ವೃದ್ಧಿಸಲು ಹೊರಟಿದ್ದಾರೆ. ಆದರೆ ಈವರೆಗೂ ಇತರೆ ರಾಜ್ಯಗಳಲ್ಲಿ ರಾಹುಲ್ ಗಾಂಧಿಯವರಿಗೆ ಯಾವ ರೀತಿಯ ಮರ್ಯಾದೆ ಸಿಗುತ್ತಿತ್ತೋ ಕರ್ನಾಟಕದಲ್ಲೂ ಅದೇ ಮರ್ಯಾದೆ ದೊರೆಯುತ್ತಿದೆ. ಕರುನಾಡಿನಲ್ಲೂ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿರುವ ರಾಹುಲ್ ಗಾಂಧಿ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷರಾದರೂ ತನ್ನ ವರ್ಚಸ್ಸನ್ನು ವೃದ್ಧಿಸಿಕೊಳ್ಳಲು ಪರದಾಡುತ್ತಿದ್ದಾರೆ.

ರಾಹುಲ್‍ಗೆ ಬೆಂಕಿಯ ಸ್ವಾಗತ ಕೋರಿದ ಕನ್ನಡ ಮಂದಿ..!

ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುತ್ತಲೇ ಇಂದು ಬೆಂಕಿಯ ದರ್ಶನವಾಗಿದೆ. ರಾಜ್ಯದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಎದುರಾಗಲಿರುವ ರಾಜ್ಯ ವಿಧಾನ ಸಭಾ ಚುನಾವಣೆಗೆ ಸಜ್ಜಾಗಲು ಮೇಲಿಂದ ಮೇಲೆ ಕರ್ನಾಟಕಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ರಾಹುಲ್ ಗಾಂಧಿ ಇಂದು ಕೂಡಾ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಈವರೆಗೂ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷರಿಗೆ ಕೆಲವು ಕಾಂಗ್ರೆಸ್ ನಾಯಕರೇ ಮಾಡುವಂತಹಾ ಚಟುವಟಿಕೆಗಳಿಂದ ಅವಮಾನವಾಗುತ್ತಿತ್ತು. ಆದರೆ ಈ ಬಾರಿ ಕರ್ನಾಟಕದ ಜನತೆಯೇ ರಾಹುಲ್ ಗಾಂಧಿ ಅವರ ಕರ್ನಾಟಕ ಪ್ರವೇಶಕ್ಕೆ ಭಾರೀ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕಕ್ಕೆ ಪ್ರವೇಶಿಸಿದ್ದ ರಾಹುಲ್‍ಗೆ ಇಂದು ಬೆಂಕಿಯ ದರ್ಶನವಾಗಿದೆ.

ರಸ್ತೆ ಮಧ್ಯೆ ಬೆಂಕಿ ಹಚ್ಚಿದ ಉದ್ರಿಕ್ತರು…

ರಾಹುಲ್ ಗಾಂಧಿ ಇಂದು ಕಾಂಗ್ರೆಸ್ ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿಮಿತ್ತ ಇಂದು ಬೆಳಗಾವಿ ಜಿಲ್ಲೆಯ ಅಥಣಿಗೆ ಆಗಮಿಸಿದ್ದರು. ವಿಜಯಪುರದ ಅಥಣಿಯಲ್ಲಿ ಸಮಾವೇಶವನ್ನು ಮುಗಿಸಿ ಅಲ್ಲಿಂದ ಅದೇ ಜಿಲ್ಲೆಯ ತಿಕೋಟ ಎಂಬ ಪ್ರದೇಶಕ್ಕೆ ಕಾಂಗ್ರೆಸ್‍ನ ಮಹಿಳಾ ಸಮಾವೇಶವನ್ನು ಉದ್ಧೇಶಿಸಲು ಹೊರಟಿದ್ದಾರೆ. ಈ ವೇಳೆ ತಿಕೋಟಕ್ಕೆ ತೆರಳುವ ದಾರಿ ಮಧ್ಯೆಯಲ್ಲಿ ರಾಹುಲ್ ಗಾಂಧಿ ಬರುವ ರಸ್ತೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ರಾಹುಲ್ ಗಾಂಧಿ ಆಗಮಿಸುವಷ್ಟರಲ್ಲಿ ಬೆಂಕಿ ಹಚ್ಚಿ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದ್ದಾರೆ.

ದಟ್ಟವಾಗಿ ಆವರಿಸಿದ ಹೊಗೆ…

ರಾಹುಲ್ ಗಾಂಧಿಯ ಕರ್ನಾಟಕ ಯಾತ್ರೆಯನ್ನು ವಿರೋಧಿಸಿ ಪ್ರತಿಭಟನಾಕಾರರು ದಾರಿ ಮಧ್ಯೆಯಲ್ಲಿಯೇ ಬೆಂಕಿ ಹಚ್ಚಿದ್ದು, ಇದು ಕೆಲ ಹೊತ್ತು ಆತಂಕಕ್ಕೆ ಕಾರಣವಾಗಿತ್ತು. ಮಾತ್ರವಲ್ಲದೆ ಬೆಂಕಿ ಹಚ್ಚಿದ ಪರಿಣಾಮವಾಗಿ ಸುತ್ತ ಮುತ್ತಲಿನ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿದ್ದು, ಬೆಂಕಿಯ ತೀವ್ರತೆಯನ್ನು ತೋರಿಸುತ್ತಿತ್ತು.

ಕಾರಣ ಏನು..?

ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುತ್ತಲೇ ಇಂದು ಅವರಿಗೆ ಬೆಂಕಿಯ ಸ್ವಾಗತವಾಗಿದ್ದು, ಪ್ರತಿಭಟನಾಕಾರರು ರಾಹುಲ್ ಗಾಂಧಿಯ ಆಗಮನವನ್ನು ವಿರೋಧಿಸಿದ್ದರು. ಆದರೆ ಈವರೆಗೂ ಈ ಬಗ್ಗೆ ಪ್ರಮುಖ ಮಾಹಿತಿಗಳು ಏನು ಎಂಬುವುದು ತಿಳಿದು ಬಂದಿಲ್ಲ.ಆದರೆ ಮಹದಾಯಿ ನದಿ ನೀರಿನ ಯೋಜನೆಯ ಬಗ್ಗೆ ರಾಹುಲ್ ಗಾಂಧಿ ವಹಿಸಿಕೊಂಡ ತಾತ್ಸಾರವೇ ಈ ಘಟನೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಮಹದಾಯಿ ನದಿ ನೀರಿನ ಹಂಚಿಕೆ ಬಗ್ಗೆ ಭಾರತೀಯ ಜನತಾ ಪಕ್ಷದ ನಾಯಕರು, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಭೇಟಿಯಗಿ ಮಾತುಕತೆ ನಡೆಸಿದ್ದರು. ಮಹದಾಯಿ ನೀರನ್ನು ಕರ್ನಾಟಕಕ್ಕೆ ಹರಿಸುವ ಭಾರತೀಯ ಜನತಾ ಪಕ್ಷ ಕೊಂಚ ಮಟ್ಟಿಗೆ ಯಶಸ್ವಿಯಾಗಿತ್ತು. ಆದರೆ ಈ ವಿಚಾರ ಗೋವಾ ಕಾಂಗ್ರೆಸ್ಸಿಗರ ನಿದ್ದೆಗೆಡಿಸಿತ್ತು. ಪರಿಣಾಮ ಗೋವಾ ಕಾಂಗ್ರೆಸ್ ನಾಯಕರು ಪ್ರತಿಭಟನೆಯನ್ನೇ ಮಾಡುತ್ತಾರೆ. ಈ ಕಾರಣದಿಂದ ಕರ್ನಾಟಕಕ್ಕೆ ಇನ್ನೇನು ಮಹದಾಯಿ ನೀರು ಬಂದೇ ಬಿಡ್ತು ಎನ್ನುವಷ್ಟರಲ್ಲಿ ಗೋವಾ ಕಾಂಗ್ರೆಸ್ ನಾಯಕರು ಅಡ್ಡಗಾಲಿಡುತ್ತಾರೆ.

ಆದರೂ ಕರ್ನಾಟಕದಲ್ಲಿ ಮಾತ್ರ ಬಹುದೊಡ್ಡ ಡ್ರಾಮವೇ ನಡೆದುಹೋಗುತ್ತದೆ. ಕಾಂಗ್ರೆಸ್ ಪರ ಧ್ವನಿ ಎತ್ತಿದ ನಕಲಿ ಕನ್ನಡ ಪರ ಸಂಘಟನೆಯ ಹೋರಾಟಗಾರರು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕರ್ನಾಟಕ ಪ್ರವೇಶಕ್ಕೆ ವಿರುದ್ಧವಾಗಿ ಹೋರಾಟ ನಡೆಸಿ ಬಂದ್ ಆಚರಿಸುತ್ತಾರೆ.

ಆದರೆ ಗೋವಾದ ಚುನಾವಣೆ ಸಂದರ್ಭದಲ್ಲಿ ತನ್ನ ಜೀವ ಹೋದರೂ ಕರ್ನಾಟಕಕ್ಕೆ ಒಂದು ಹನಿ ನೀರು ಹರಿಸಲೂ ಬಿಡೋದಿಲ್ಲ ಎಂದಿದ್ದ ಸೋನಿಯಾ ಗಾಂಧಿಯ ಬಗ್ಗೆ ಹಾಗೂ ಅದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಬಗ್ಗೆ ಈ ಕನ್ನಡ ಪರ ಸಂಘಟನೆಗಳು ತುಟಿ ಬಿಚ್ಚಲಿಲ್ಲ. ಮಹದಾಯಿ ಹೋರಾಟಗಾರರೂ ಕನ್ನಡ ಪರ ಸಂಘಟನೆಗಳನ್ನು ನಿಮ್ಮನ್ನು ಬಂದ್ ಮಾಡಲು ಹೇಳಿದವರು ಯಾರು ಎಂದು ಪ್ರಶ್ನಿಸಿದ್ದರು.

ಈಗ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಲೇ ಅವರು ತೆರಳುತ್ತಿರುವ ಮಾರ್ಗಕ್ಕೆ ಬೆಂಕಿ ಹಚ್ಚಿ ಆಕ್ರೋಷವನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ರಾಜ್ಯಕ್ಕೆ ನಿಜವಾಗಿಯೂ ಅನ್ಯಾಯವನ್ನು ಬಗೆದವರು ಯಾರು ಎಂಬುವುದನ್ನು ನಿರೂಪಿಸಲು ಮುಂದಾಗಿದ್ದಾರೆ. ಸದ್ಯ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಈವರೆಗೂ ನಡೆದ ಎಲ್ಲಾ ಚುನಾವಣೆಗಳಲ್ಲೂ ಸೋತು ಸುಣ್ಣವಾಗಿದ್ದು, ಈ ಚುನಾವಣೆಯಲ್ಲಾದರೂ ಗೆಲ್ಲುತ್ತೇನೆ ಎಂಬ ಹಠಕ್ಕೆ ಬಿದ್ದು ಹೋರಾಡುತ್ತಿದ್ದಾರೆ. ಆದರೆ ಅದು ವರ್ಕೌಟ್ ಆಗುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close