ಪ್ರಚಲಿತ

ಲೋಕಸಭಾ ಚುನಾವಣೆಗೂ ಮೊದಲೇ ಕಳಚಿಬಿದ್ದ ಮಹಾಘಟಬಂಧನದ ಕೈಗಳು! ಟಿಎಂಸಿ ಬಿಟ್ಟು ಬಿಜೆಪಿ ಸೇರಿದ ಮುಸ್ಲಿಂ ಸಂಸದ!

ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಬೇಕೆಂಬ ಉದ್ದೇಶದಿಂದ ಒಂದಾಗಿರುವ ವಿಪಕ್ಷಗಳು ಮಹಾಘಟಬಂಧನ ನಿರ್ಮಿಸಿ ನಾವೆಲ್ಲರೂ ಒಟ್ಟಾಗಿ ಮೋದಿಯನ್ನು ಸೋಲಿಸುತ್ತೇವೆ ಎಂದು ಶಪಥ ಮಾಡಿಕೊಂಡಿದ್ದರು. ಆದರೆ ದಿನದಿಂದ ದಿನಕ್ಕೆ ಮಹಾಘಟಬಂಧನದಲ್ಲಿ ಬಿರುಕು ಉಂಟಾಗುತ್ತಿದ್ದು ಮಿತ್ರಪಕ್ಷಗಳ ನಡುವೆ ಕಿತ್ತಾಟ ಆರಂಭವಾಗಿದೆ. ಯಾಕೆಂದರೆ ಈಗಾಗಲೇ ಕೆಲ ಪಕ್ಷಗಳು ರಾಹುಲ್ ಗಾಂಧಿಯನ್ನು ಪ್ರಧಾನಿ ಪಟ್ಟದಲ್ಲಿ ಕೂರಿಸಲು ತಮ್ಮ ಬೆಂಬಲ ಇಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದು, ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷದ ಸಂಸದರೊಬ್ಬರು ಬಿಜೆಪಿ ಸೇರ್ಪಡೆಗೊಂಡಿದ್ದು, ಮಹಾಘಟಬಂಧನದಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದೆ. ಯಾಕೆಂದರೆ ಮಹಾಘಟಬಂಧನದಲ್ಲಿ ಮಮತಾ ಬ್ಯಾನರ್ಜಿಯವರ ಪಕ್ಷದ ಪ್ರಾಬಲ್ಯ ಹೆಚ್ಚಿದ್ದು, ಆ ಪಕ್ಷದ ಓರ್ವ ಮುಸ್ಲಿಂ ಸಂಸದ ಟಿಎಂಸಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಮಲ ಹಿಡಿದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.!

ಈಗಾಗಲೇ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಮುಂದಿನ ಪ್ರಧಾನಿ ಎಂದು ಬಿಂಬಿಸುತ್ತಿದ್ದು, ಇದಕ್ಕೆ ಮಿತ್ರಪಕ್ಷಗಳು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿವೆ. ಆದರೂ ಕೂಡ ರಾಹುಲ್ ತಾನೇ ಮುಂದಿನ ಪ್ರಧಾನಿ ಎಂದು ನಂಬಿದ್ದಾರೆ. ಇತ್ತ ಪ್ರಧಾನಿ ಪಟ್ಟಕ್ಕಾಗಿ ನಾ ಮುಂದು ಹೆಚ್ಚು ಆ ಮುಂದು ಎಂದು ಮಹಾಘಟಬಂಧನದ ಪಕ್ಷಗಳ ನಾಯಕರೇ ಕಿತ್ತಾಟ ಆರಂಭಿಸಿದ್ದಾರೆ. ಅದರ ನಡುವೆಯೇ ಸಂಸದ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡಿದ್ದಾರೆ.!

ಮಮತಾ ಬ್ಯಾನರ್ಜಿ ಸರಕಾರಕ್ಕೆ ಭಾರೀ ಹೊಡೆತ!

ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷ ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಅಶಾಂತಿಯನ್ನೇ ಸೃಷ್ಟಿಸಿ ಇಡೀ ರಾಜ್ಯದಲ್ಲಿ ನರಕದ ವಾತಾವರಣ ನಿರ್ಮಿಸಿದ್ದಾರೆ. ಬಿಜೆಪಿಯ ವಿರುದ್ಧ ಪದೇ ಪದೇ ಒಂದಲ್ಲ ಒಂದು ಕಾರಣಕ್ಕೆ ವಾಗ್ದಾಳಿ ನಡೆಸುವ ಮಮತಾ ಬ್ಯಾನರ್ಜಿಯವರ ಪಕ್ಷಕ್ಕೆ ಇದೀಗ ಭಾರೀ ಹೊಡೆತ ಉಂಟಾಗಿದೆ. ಯಾಕೆಂದರೆ ಟಿಎಂಸಿ ಪಕ್ಷದ ಸಂಸದರಾದಂತಹ ಸೌಮಿತ್ರಾ ಖಾನ್ ಎಂಬವರು ರಾಜೀನಾಮೆ ನೀಡಿದ್ದು, ಬಿಜೆಪಿ ಸೇರ್ಪಡೆಗೊಳ್ಳುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಟಿಎಂಸಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಖಾನ್, ತನ್ನ ರಾಜೀನಾಮೆ ಪತ್ರವನ್ನು ನೇರವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಕಳುಹಿಸಿದ್ದಾರೆ. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಮುಂದಿನ ಲೋಕಸಭಾ ಚುನಾವಣೆಗೂ ಭಾರೀ ಹೊಡೆತ ನೀಡಲಿದೆ. ಒಂದೆಡೆ ರಾಹುಲ್ ಪ್ರಧಾನಮಂತ್ರಿ ಅಭ್ಯರ್ಥಿಯಾದರೆ ನಮ್ಮ ಬೆಂಬಲ ಇಲ್ಲ ಎಂದಿರುವ ಮಮತಾ ಸರಕಾರಕ್ಕೆ ಇದೀಗ ತನ್ನದೇ ಪಕ್ಷದ ಸಂಸದ ರಾಜೀನಾಮೆ ನೀಡಿದ್ದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಯಾಕೆಂದರೆ ತಮ್ಮದೇ ಪಕ್ಷದಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದೆ ಸಚಿವ, ಸಂಸದರು ರಾಜೀನಾಮೆ ನೀಡಿ ಬಿಜೆಪಿ ಸೇರುತ್ತಿದ್ದು ಇದು ಮುಂದಿನ ಲೋಕಸಭಾ ಚುನಾವಣೆಗೂ ಪ್ರಭಾವ ಬೀರುವ ಸಾಧ್ಯತೆ ಇದೆ.!

ಲೋಕಸಭಾ ಚುನಾವಣೆಗೂ ಮೊದಲೇ ಕಳಚಿಬೀಳುತ್ತಾ ಮಹಾಘಟಬಂಧನ!

ಮಹಾಘಟಬಂಧನದಲ್ಲಿ ಯಾವ ಕ್ಷಣದಲ್ಲಿ ಏನಾಗಬಹದು ಎಂಬುದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದ ಒಂದಾಗಿರುವ ವಿಪಕ್ಷಗಳು ಈಗ ತಮ್ಮ ತಮ್ಮಲ್ಲೇ ಕಿತ್ತಾಟ ಆರಂಭಿಸಿಕೊಂಡಿದೆ. ತಮ್ಮ ಸ್ವಂತ ಲಾಭ ನೋಡಿಕೊಳ್ಳಲು ಪಕ್ಷಗಳೇ ತುಂಬಿರುವ ಮಹಾಘಟಬಂಧನದಲ್ಲಿ ಯಾರೂ ಕೂಡ ಇನ್ನೊಬ್ಬರಿಗೆ ಅಧಿಕಾರ ನೀಡಲು ಸಿದ್ದರಿಲ್ಲ. ಇದೇ ಕಾರಣದಿಂದ ಮಹಾಘಟಬಂಧನ ಯಾವ ಕ್ಷಣದಲ್ಲಿ ಬೇಕಾದರೂ ಮುರಿದು ಬೀಳುವ ಸಾಧ್ಯತೆ ಇದೆ. ಇತ್ತ ಮೋದಿ ಅಲೆ ಹೆಚ್ಚಾಗುತ್ತಿದ್ದು ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳಿಗೂ ತಲೆನೋವಾಗಿ ಪರಿಣಮಿಸಿದೆ. ಈ ಸಂದರ್ಭದಲ್ಲೇ ಸಂಸದನೊಬ್ಬ ಕೈ ಕೊಟ್ಟು ಬಿಜೆಪಿ ಸೇರ್ಪಡೆಗೊಂಡಿದ್ದು ಮತ್ತೊಂದು ಹೊಡೆತ ನೀಡಿದಂತಾಗಿದೆ. ಅದೇನೇ ಆದರೂ ಕೂಡ ಮಹಾಘಟಬಂಧನ ಲೋಕಸಭಾ ಚುನಾವಣೆಗೂ ಮೊದಲೇ ಕಳಚಿ ಬೀಳುವ ಮುನ್ಸೂಚನೆ ಸಿಕ್ಕಿದ್ದು, ಯಶಸ್ವಿಯಾಗಿ ಮುಂದುವರಿಯುತ್ತೋ ಅಥವಾ ವಿಫಲವಾಗಿ ಕಳಚಿ ಬೀಳುತ್ತೋ ನೋಡಬೇಕಾಗಿದೆ.!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close