ಪ್ರಚಲಿತ

ಬಿಗ್ ಬ್ರೇಕಿಂಗ್: ಬಿಜೆಪಿ ಕಾರ್ಯಕರ್ತನ ಜುಟ್ಟು ಹಿಡಿದು ಎಳೆದ ಕಾಂಗ್ರೆಸ್ ಸರ್ಕಾರದ ಅಡಿಯಾಳುಗಳು..! ಸಿಎಂ ಆದೇಶದ ಮೇರೆಗೆ ಪೊಲೀಸರ ಕೃತ್ಯ?!

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದಲ್ಲಾ ಒಂದು ಕಾರಣದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿತ್ತು. ರಾಜ್ಯದಲ್ಲಿ ಕೋಮು ಗಲಭೆ ತಾರಕಕ್ಕೆ ಏರಿದ್ದು ಭಾರೀ ಅವಾಂತರವೇ ಸೃಷ್ಟಿಯಾಗಿತ್ತು. ಕಳ್ಳರ ಹಾವಳಿ, ಕಾಮುಕರ ಅಟ್ಟಹಾಸ, ಅತ್ಯಾಚಾರಿಗಳ ಆರ್ಭಟ, ಭ್ರಷ್ಟಾಚಾರಿ ಸಚಿವರುಗಳ ದರ್ಪ ಸಹಿತ ಅನೇಕ ಕಾರಣಗಳಿಂದ ರಾಜ್ಯದಲ್ಲಿ ಅಶಾಂತಿಯೇ ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಆಗುತ್ತಿತ್ತು. ರಾಜ್ಯದ ಯಾವೊಂದು ಅಭಿವೃದ್ಧಿಯೂ ಜನರಿಗೆ ಮುಟ್ಟಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿತ್ತು.

ರಾಜ್ಯದಲ್ಲಿ ಕೊಲೆಗಳ ಸದ್ದು, ಸಂಸತ್‍ನಲ್ಲಿ ಕೊಲೆಗಳ ಸದ್ದು, ಕರಾವಳಿಯಲ್ಲಿ ಕೊಲೆಗಳ ಸದ್ದು, ಈಗ ವಿಧಾನ ಮಂಡಲದಲ್ಲಿಯೂ ಕೊಲೆಗಳದ್ದೇ ಸದ್ದು. ಯಾವ ಸರ್ಕಾರ ತನ್ನ ನಿಸ್ವಾರ್ಥ ಹಾಗೂ ದಕ್ಷ ಆಡಳಿತದಿಂದ ಹೆಸರಾಗಬೇಕೆಂದು ಹಿರಿಯರು ಬಯಸಿದ್ದರೋ ಅದೇ ಸರ್ಕಾರದ ಕಾರ್ಯವೈಖರಿ ಕೊಲೆಗಳ ಸದ್ದುಗಳ ಮೂಲಕ ಅಲೆಯುತ್ತಿರುವುದು ಮಾತ್ರ ಖೇದಕರ. ಎತ್ತ ನೋಡಿದರತ್ತ ಕೊಲೆಗಳದ್ದೇ ಸದ್ದು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆಗೆ ಏರಿದ ನಂತರ ಬರೋಬ್ಬರಿ 25 ಹಿಂದೂ ಕಾರ್ಯಕರ್ತರ ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಕೊಲೆಗಳು ನಡೆದಿವೆ ಎಂದರೆ ಕರ್ನಾಟಕವೋ ಅಥವಾ ಇದು ಕೇರಳದ ಸುದ್ಧಿಯೋ ಎಂಬ ಅನುಮಾನ ಮೂಡದೇ ಇರದು. ಬಿಡಿ… ಇದು ಕೇವಲ ಬಲಪಂಥೀಯ ರಾಜಕೀಯ ಧ್ವೇಷದ ಕೊಲೆಗಳ ಲೆಕ್ಕ. ಆದರೆ ರಾಜ್ಯದಲ್ಲಿ ಇನ್ನಿತರ ಕಾರಣಗಳಿಂದಾಗಿ ನಡೆದ ಕೊಲೆಗಳು ಹಾಗೂ ಅಸಹಜ ಸಾವುಗಳು ಅದೆಷ್ಟೋ..!!!

ಸಂತೋಷ್ ಹತ್ಯೆಯ ಪ್ರತಿಭಟಿಸುತ್ತಿದ್ದ ಕಮಲ ಕಾರ್ಯಕರ್ತರು…

ಇಂದು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಬೆಂಗಳೂರಿನಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತ ಸಂತೋಷ್ ಎಂಬಾತನ ಹತ್ಯೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಬೆಂಗಳೂರಿನ ಜಯಮಹಲ್ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಪೊಲೀಸರು ಅಲ್ಲಿಗೆ ದೌಢಾಯಿಸಿ ಬಂಧಿಸಲು ಮುಂದಾಗುತ್ತಾರೆ. ಆದರೆ ಪ್ರತಿಭಟನಕಾರರಾದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಜಯಮಹಲ್ ಪೊಲೀಸ್ ಸಿಬ್ಬಂಧಿ ಮಧ್ಯೆ ಮಾತಿನ ಚಕಮಕಿ ನಡೆಯುತ್ತೆ.

ಆದರೆ ಈ ಮಧ್ಯೆ ಮಾತಿಗಿಳಿದ ಪ್ರತಿಭಟನಾಕಾರರು ಭಾರತೀಯ ಜನತಾ ಪಕ್ಷದ ಮುಖಂಡ ತಮ್ಮೇಗೌಡ ಎಂಬವರು ಪೊಲೀಸರನ್ನು ಪ್ರಶ್ನಿಸುತ್ತಾರೆ. “ಸಾರ್ ನಾವು ಇನ್ನೂ ಪ್ರತಿಭಟನೆಯನ್ನೇ ಆರಂಭಿಸಿಲ್ಲ. ಈಗಲೇ ಬಂಧಿಸಲು ಮುಂದಾಗುತ್ತೀರಲ್ಲಾ ಇದು ಎಷ್ಟು ಸರಿ. ಹಾಗಾದರೆ ನಮಗೆ ನ್ಯಾಯಕ್ಕಾಗಿ ಪ್ರತಿಭಟಿಸೋ ಸ್ವಾತಂತ್ರ್ಯವೂ ಇಲ್ವೇ” ಎಂದು ಪ್ರಶ್ನಿಸುತ್ತಾರೆ.

ಜುಟ್ಟು ಹಿಡಿದು ಎಳೆದ

ಪ್ರತಿಭಟನೆ ಆರಂಭಿಸುವ ಮುನ್ನವೇ ಯಾಕೆ ಬಂಧಿಸುತ್ತೀರಾ ಸಾರ್ ಎಂಬ ಪ್ರಶ್ನೆಗೆ ಕೆಂಡಾ ಮಂಡಲವಾದ ಜಯಮಹಲ್ ಪೊಲೀಸ್ ಠಾಣೆಯ ಪೊಲೀಸರು ಪ್ರತಿಭಟನಾ ನಿರತ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ತಮ್ಮೇಗೌಡ ಎಂಬವರನ್ನು ಹಿಡಿದು ಎಳೆಯುತ್ತಾರೆ. ಈ ವೇಳೆ ಅಲ್ಲಿಗೆ ಆಗಮಿಸಿದ ಎಸಿಪಿ ರವಿ ಪ್ರಸಾದ್ ಮತ್ತೆ ವಿಕೃತಿಯನ್ನು ಮೆರೆಯುತ್ತಾನೆ. ಪೊಲೀಸರು ತಮ್ಮೇಗೌಡರನ್ನು ಎಳೆಯುತ್ತಿರಬೇಕಾದರೆ ಈ ಎಸಿಪಿ ರವಿಪ್ರಸಾದ್ ತಮ್ಮೇಗೌಡರ ಜುಟ್ಟನ್ನು ಎಳೆದು ವಿಕೃತಿಯನ್ನು ಮೆರೆಯುತ್ತಾನೆ. ಈ ಮೂಲಕ ಪ್ರತಿಭಟನೆ ಆರಂಭಕ್ಕೂ ಮುನ್ನವೇ ಅದನ್ನು ಹತ್ತಿಕ್ಕುವ ಪ್ರಯತ್ನವನ್ನು ಪೊಲೀಸರು ಮಾಡಿದ್ದಾರೆ.

ಆದೇಶಿಸಿದ್ದಾರಂತೆ ಸಿದ್ದರಾಮಯ್ಯ..!

ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸರಿಗೆ ಪ್ರತಿಭಟನೆಯನ್ನು ಹತ್ತಿಕ್ಕುವಂತೆ ಆದೇಶಿಸಿದ್ದಾರಂತೆ.! ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಸಂತೋಷ್ ಹತ್ಯೆಯ ಸಂಬಂಧ ಕಾರ್ಯಕರ್ತರು ಹೆಚ್ಚಿನ ಪ್ರತಿಭಟನೆ ನಡೆಸಿದರೆ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನೆಡೆಯಾಗಬಹುದು ಎಂದು ಪ್ರತಿಭಟನೆಯನ್ನು ಹತ್ತಿಕ್ಕಲು ಆದೇಶಿಸಿದ್ದಾರಂತೆ. ಹೀಗಾಗಿಯೇ ಅಲ್ಲಿನ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ತಮ್ಮ ವಿಕೃತಿಯನ್ನು ಮೆರೆದಿದ್ದಾರೆ.

ಪ್ರತಿಭಟಿಸುವ ಸ್ವಾತಂತ್ರ್ಯವೂ ಇಲ್ವಾ..?

ಹಾಗಾದರೆ ಈ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಪ್ರತಿಭಟಿಸುವ ಯಾವುದೇ ಹಕ್ಕಿಲ್ವಾ? ಕಾಂಗ್ರೆಸ್ ಸರ್ಕಾರ ಈ ರಾಜ್ಯದಲ್ಲಿ ಎಷ್ಟೊಂದು ದುರಾಡಳಿತ ನಡೆಸುತ್ತಿದೆ ಎಂಬುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ? ಪ್ರತಿಭಟನೆ ನಡೆಸಿದರೆ ಜುಟ್ಟು ಹಿಡಿದು ಎಳೆದಾಡುವ ಪೊಲೀಸರಿಂದ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

ಒಟ್ಟಿನಲ್ಲಿ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು ಪ್ರತಿಭಟನೆಯನ್ನೂ ಹತ್ತಿಕ್ಕುವ ಕಾರ್ಯ ನಡೆಯುತ್ತಿದೆ. ಈ ಸರ್ಕಾರ ಇನ್ನೂ ಮುಂದುವರೆದರೆ ಇನ್ನಾವ ಪರಿಸ್ಥಿತಿಯನ್ನು ರಾಜ್ಯದ ಜನರು ಅನುಭವಿಸಬೇಕೋ ಎಂಬ ಜಿಜ್ನಾಸೆಯೂ ಮೂಡುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close