ಪ್ರಚಲಿತ

ಬಿಗ್ ಬ್ರೇಕಿಂಗ್: ಮತ್ತೆ ರಾಜ್ಯಕ್ಕೆ ಲಗ್ಗೆಯಿಡಲಿದ್ದಾರೆ ಮೋದಿ!! 19ರಂದು ಹೆಲಿಕಾಫ್ಟರ್‍ನಲ್ಲಿ ಮೋದಿ ಮಾಡುವ ಮ್ಯಾಜಿಕ್ ಏನು ಗೊತ್ತಾ..?!

ಪ್ರಧಾನಿ ನರೇಂದ್ರ ಮೋದಿ ಬರ್ತಾರಂತೆ. ಈ ಮಾತು ಎಲ್ಲೋ ಒಂದು ಮೂಲೆಯಲ್ಲಿ ಕೇಳಿದರೆ ಸಾಕು ಅದು ಅದೆಷ್ಟು ಬೇಗ ಪ್ರಚಾರ ಪಡೆಯುತ್ತೆ ಎಂದರೆ ಅದಕ್ಕೆ ಕಾಲಮಿತಿ ಅನ್ನೋದೆ ಇಲ್ಲ. ಮೋದಿ ಅಂದ್ರೆ ಹಾಗೇನೆ. ಅದೊಂದು ಭಾರತದ ಶಕ್ತಿ. ಈ ಬಾರಿ ಮೋದಿ ಬರೋದು ಯಾವುದೇ ಚುನಾವಣಾ ಪ್ರಚಾರಕ್ಕಾಗಿ ಅಲ್ಲವೇ ಅಲ್ಲ. ಸರ್ಕಾರಿ ಕಾರ್ಯಕ್ರಮಕ್ಕೂ ಅಲ್ಲ. ಬದಲಾಗಿ ಈ ಬಾರಿ ಮೋದಿ ರಾಜ್ಯಕ್ಕೆ ಆಗಮಿಸೋದು ಒಂದು ವಿಶೇಷ ಕಾರ್ಯಕ್ರಮಕ್ಕಾಗಿ.

ಮಹಾಮಜ್ಜನದಲ್ಲಿ ಭಾಗವಹಿಸಲಿದ್ದಾರೆ ಮಹಾನಾಯಕ…

ಹೌದು. ವಿಶ್ವ ವಿಖ್ಯಾತ ಶ್ರವಣ ಬೆಳಗೊಳದ ಗೋಮಟೇಶ್ವರನ ಪ್ರತಿಮೆಗೆ ನಡೆಯುವ ಮಹಾ ಮಜ್ಜನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. 12 ವರ್ಷಕ್ಕೊಮ್ಮೆ ನಡೆಯುವ ಈ ಮಹಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಆಗಮಿಸಿ ತ್ಯಾಗ ಮೂರ್ತಿ ಗೋಮಟೇಶ್ವರನ ಮೂರ್ತಿಗೆ ನಮನವನ್ನು ಸಲ್ಲಿಸಲಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಂದು ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಇತಿಹಾಸ ಸೃಷ್ಟಿಸಲಿದ್ದಾರೆ.

ಯಾವಾಗ?

ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಶ್ರವಣಬೆಳಗೊಳದಲ್ಲಿ ನಡೆಯುವ ಗೋಮಟೇಶ್ವರನ ಮೂರ್ತಿಗೆ ಮಸ್ತಕಾಭಿಶೇಕ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಫೆಬ್ರವರಿ 19ರಂದು ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಫೆಬ್ರವರಿ 19ರ ಮಧ್ಯಾಹ್ನ 12.45ರಿಂದ 1.30ರ ನಡುವೆ ಪ್ರಧಾನಿ ನರೇಂದ್ರ ಮೋದಿಯವರ ಶ್ರವಣಬೆಳಗೊಳದ ಪ್ರವಾಸ ನಿಗಧಿಯಾಗಿದ್ದು, ಈ ವೇಳೆ ಗೋಮಟೇಶ್ವರನಿಗೆ ನಮೋ ಎನ್ನಲಿದ್ದರೆ ಪ್ರಧಾನಿ ನರೇಂದ್ರ ಮೋದಿ.

ಫೆಬ್ರವರಿ 17ರಿಂದ ಹಾಸನದ ಶ್ರವಣಬೆಳಗೊಳದಲ್ಲಿ ಈ ಮಹಾ ಮಜ್ಜನ ಕಾರ್ಯಕ್ರಮ ಆರಂಭವಾಗಲಿದ್ದು, ಭಾರೀ ಜನ ಸೇರುವ ನಿರೀಕ್ಷೆಯಿದೆ. ಸುಮಾರು 12 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದಾರೆ. ಹಾಸನದ ಶ್ರವಣಬೆಳಗೊಳದಲ್ಲಿ ನಡೆಯುವ 88ನೇ ಮಹಾ ಮಸ್ತಾಕಾಭಿಶೇಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ಕೇವಲ ಮೋದಿ ಆಗಮನವನ್ನು ವೀಕ್ಷಿಸಲು ಲಕ್ಷಾಂತರ ಸಂಖ್ಯೆಯ ಜನರು ಸೇರುವ ನಿರೀಕ್ಷೆ ಇದೆ.

ಹೆಲಿಕಾಫ್ಟರ್‍ನಲ್ಲಿ ಮಾಡಲಿದ್ದಾರೆ “ನಮೋ”…

ನರೇಂದ್ರ ಮೋದಿಯವರು ಶ್ರವಣಬೆಳಗೊಳದಲ್ಲಿ ನಡೆಯುವ ಈ ಮಹಾ ಮಜ್ಜನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಹೆಲಿಕಾಫ್ಟರ್‍ನಲ್ಲಿ ಮ್ಯಾಜಿಕ್ ಮಾಡಲಿದ್ದಾರೆ. ಶ್ರವಣಬೆಳಗೊಳದ ಗೋಮಟೇಶ್ವರನ ಪ್ರತಿಮೆ ಅತಿ ಎತ್ತರದಲ್ಲಿ ಇರುವುದರಿಂದ ಅಲ್ಲಿ ಹೆಲಿಕಾಫ್ಟರ್ ಮೂಲಕವೇ ನಮೋ ಎನ್ನಲಿದ್ದಾರೆ ಪ್ರಧಾನಿ ಮೋದಿ. ಹೆಲಿಕಾಫ್ಟರ್‍ನಲ್ಲಿ ಗೋಮಟೇಶ್ವರನ ಮೇಲೆ ಹಾರಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದಲೇ ತ್ಯಾಗ ಮೂರ್ತಿ, ವಿಶ್ವ ವಿಖ್ಯಾತ ಶ್ರೀ ಗೋಮಟೇಶ್ವರನ ಮಹಾ ಮೂರ್ತಿಗೆ ಪುಷ್ಪ ವೃಷ್ಟಿಗೈಯಲಿದ್ದಾರೆ. ಹೆಲಿಕಾಫ್ಟರ್ ಮೂಲಕವೇ ಪುಷ್ಪಾರ್ಚನೆಗೆ ನಿರ್ಧಾರ ಮಾಡಿರುವ ಜಿಲ್ಲಾಡಳಿತ ಅಲ್ಲಿಂದಲೇ ಮಹಾಮಜ್ಜನಗೊಂಡ ಮಹಾ ಮೂರ್ತಿಗೆ ವಿಶ್ವದ ಮಹಾ ನಾಯಕನಿಂದ ಹೂವಿನ ಅರ್ಪಣೆ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿಯವರು ತನ್ನ ಬಿಡುವಿಲ್ಲದ ಸಮಯದಲ್ಲೂ ರಾಜ್ಯದ ಮೂಲೆ ಮೂಲೆಗಳಿಗೂ ಸುತ್ತಿ ರಾಜ್ಯದ ಜನತೆಯನ್ನು ಭೇಟಿಯಾಗುತ್ತಲೇ ಬರುತ್ತಿದ್ದಾರೆ. ಪ್ರಧಾನಿಯಾದ ನಂತರ ಸುಮಾರು 10ಕ್ಕೂ ಅಧಿಕ ಬಾರಿ ಕರ್ನಾಟಕಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರು ಈಗ ಮತ್ತೆ ಆಗಮಿಸಿ ನಮೋ ಎನ್ನಲಿದ್ದಾರೆ. ಈ ಬಾರಿಯ ಕಾರ್ಯಕ್ರಮ ಮತ್ತಷ್ಟು ವಿಭಿನ್ನತೆಗಳಿಂದ ಕೂಡಿದ್ದು ಇದು ಕೇವಲ ಭಕ್ತಿ ಪೂರ್ವಕವಾಗಿ ಮಾತ್ರವಲ್ಲದೆ ತ್ಯಾಗ ಮೂರ್ತಿಗಳಿಬ್ಬರ ಸಾಹಸವನ್ನು ಜಗತ್ತಿಗೆ ಪರಿಚಯಿಸುವಂತಹ ವಿಚಾರವಾಗಿದೆ.

ಒಟ್ಟಿನಲ್ಲಿ ನರೇಂದ್ರ ಮೋದಿಯವರ ಈ ಕಾರ್ಯಕ್ರಮ ಕರ್ನಾಟಕದಲ್ಲಿ ಮತ್ತಷ್ಟು ಸಂಚಲನವನ್ನೇ ಮೂಡಿಸಲಿದ್ದು ಹೊಸ ಇತಿಹಾಸಕ್ಕೆ ನಾಂದಿಯಾಗಲಿದೆ. ಮಾತ್ರವಲ್ಲದೆ ಕರ್ನಾಟಕದಲ್ಲಿ ರಾಜ್ಯ ವಿಧಾನ ಸಭೆಯ ಕಾವೂ ಜೋರಾಗಿದ್ದು, ಈ ಸಮಯದಲ್ಲೇ ಮೋದಿ ರಾಜ್ಯಕ್ಕೆ ಆಗಮಿಸಿ ಮಹಾಮಜ್ಜನದಲ್ಲಿ ಭಾಗವಹಿಸುವುದು ತೀವ್ರ ಕುತೂಹಲ ಕೆರಳಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಈ ಕಾರ್ಯಕ್ರಮದ ಹಿಂದೆ ಹಲವಾರು ಲೆಕ್ಕಾಚಾರಗಳೂ ಇದೆ ಎನ್ನಲಾಗಿದ್ದು, ಎಲ್ಲರ ಚಿತ್ತ ಪ್ರಧಾನಿ ನರೇಂದ್ರ ಮೋದಿಯವರತ್ತ ಬೀರಿರುವುದಂತು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close