ಪ್ರಚಲಿತ

ಬಿಗ್ ಬ್ರೇಕಿಂಗ್!! ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆಗೆ ಸ್ಫೋಟಕ ತಿರುವು!! ಕೊಲೆ ಮಾಡಿದ್ದು ಸ್ಕ್ರೂಡ್ರೈವ್ ನಿಂದ ಅಲ್ಲ!! ಗೃಹ ಸಚಿವರಿಗೆ ಬಾರೀ ಮುಖಭಂಗ!!

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದಲ್ಲದೇ, ಆರ್.ಎಸ್.ಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಕೊಲೆ ನಿರಂತರವಾಗಿ ನಡೆಯುತ್ತಿದೆ. ಆದರೆ ಇತ್ತೀಚೆಗೆ ನಗರದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿಯ ಬ್ಯಾನರ್ ಕಟ್ಟುವ ವೇಳೆ ಬಿಜೆಪಿ ಕಾರ್ಯಕರ್ತ ಸಂತೋಷನ್ನು ಸ್ಕ್ರೂ ಡ್ರೈವರ್ ನಿಂದ ಕೊಲೆ ಮಾಡಲಾಗಿತ್ತು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರ ಬೆನ್ನಲ್ಲೇ ಇದೀಗ ರೋಚಕ ಟ್ವೀಸ್ಟ್ ಹೊರಬಿದ್ದಿದೆ.

ಹೌದು… ರಾಜ್ಯವನ್ನು ಬೆಚ್ಚಿಬೀಳಿಸಿರುವ ಬಿಜೆಪಿ ಕಾರ್ಯಕರ್ತ ಸಂತೋಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಮೌನ ಮುರಿದಿದ್ದರ ಜೊತೆಗೆ ಬಿಜೆಪಿ ನಾಯಕರು ಚುನಾವಣೆಗಾಗಿ ರಾಜಕೀಯ ಹೇಳಿಕೆ ನೀಡುವುದನ್ನು ಖಯಾಲಿ ಮಾಡಿಕೊಂಡಿದ್ದಾರೆ ಎಂದು ಸಚಿವರು ಬಿಜೆಪಿಯನ್ನು ಟೀಕಿಸಿದ್ದರು. ಈ ಬಗ್ಗೆ ಬೆಂಗಳೂರಿನ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಸಂತೋಷ ಹತ್ಯೆ ವೈಯಕ್ತಿಕ ಕಾರಣಕ್ಕೆ ನಡೆದಿದೆ. ವಾಸೀಂ ಹಾಗೂ ಸಂತೋಷ ಇಬ್ಬರು ಸ್ನೇಹಿತರು. ಒಂದೇ ರಸ್ತೆಯಲ್ಲಿ ವಾಸವಾಗಿದ್ದವರು. ವೈಯಕ್ತಿಕ ವಿಚಾರದಿಂದ ಇಬ್ಬರ ನಡುವೆ ಗಲಾಟೆ ಆಗಿದೆ. ಬಳಿಕ ವಾಸೀಂ ಸ್ಕ್ರೂಡ್ರೈವ್ ನಿಂದ ಸಂತೋಷ ಕಾಲಿಗೆ ಚುಚ್ಚಿದ್ದಾನೆ. ವಾಸೀಂ ಲಾಂಗ್ ಮಚ್ಚು ಬಳಕೆ ಮಾಡಿ ಹತ್ಯೆ ಮಾಡಿಲ್ಲ ಎಂದು ಹೇಳಿದ್ದರು.

ಆದರೆ ಇದೀಗ ಪೆÇಲೀಸರು ಗೃಹ ಸಚಿವರ ಹೇಳಿಕೆಗೆ ತದ್ವಿರುದ್ಧವಾದ ಮಾಹಿತಿ ಹೊರಹಾಕಿದ್ದು, ಸಂತೋಷ ಅವರನ್ನು ಕೊಲೆ ಮಾಡಿದ್ದು ಚಾಕುವಿನಿಂದ, ಕೊಲೆ ಮಾಡಲಾದ ಚಾಕುವನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೆÇಲೀಸರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಅಧಿಕಾರದ ಗದ್ದುಗೆಯನ್ನು ಏರಿದಂದಿನಿಂದಲೂ ಹಗರಣಗಳ ಮೇಲೆ ಹಗರಣಗಳು ನಡೆಯುತ್ತಿರುವ ಜೊತೆಗೆ ಹಿಂದೂ ಯುವಕರ ಸರಣಿ ಕೊಲೆಗಳು ನಡೆಯುತ್ತಿದೆ. ಆದರೆ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನದ ರಾಜ್ಯ ಸರ್ಕಾರ ಕೊಲೆಗಟುಕರನ್ನು ರಕ್ಷಿಸುತ್ತಲೇ ಬರುತ್ತಿರುವುದು ಮಾತ್ರ ಬೇಸರದ ಸಂಗತಿ. ಅಷ್ಟೇ ಅಲ್ಲದೇ, ಯಾವುದೇ ಪ್ರಕರಣಗಳ ಬಗ್ಗೆ ಸೂಕ್ತ ತನಿಖೆ ನಡೆಸದೆ, ನಿಷ್ಠಾವಂತ ಅಧಿಕಾರಿಗಳನ್ನು ವರ್ಗಾ ಮಾಡುತ್ತಾ ಅನ್ಯಾಯ ವೆಸಗುತ್ತಿರುವ ಸರ್ಕಾರ ಇದೀಗ ಸಂತೋಷ್ ಹತ್ಯೆಯಲ್ಲೂ ತನ್ನ ನರಿಬುದ್ದಿಯನ್ನು ತೋರಿಸಿದೆ.

ಜ.31 ರಂದು ಬಿಜೆಪಿ ಕಾರ್ಯಕರ್ತ ಸಂತೋಷ್ ಅವರನ್ನು ಬ್ಯಾನರ್ ಕಟ್ಟುವ ವೇಳೆ ಜೆ.ಸಿ.ನಗರದಲ್ಲಿ ನಾಲ್ವರು ಆರೋಪಿಗಳು ಹತ್ಯೆಗೈದಿದ್ದರು. ಪ್ರಕರಣದ ಸಂಬಂಧ ಕೊಲೆ ಆರೋಪಿಗಳಾದ ಜೆ.ಸಿ.ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದರ್ ಪುತ್ರ ವಾಸಿಂ, ಸಹಚರರಾದ ಫಿಲಿಪ್ಸ್, ಇರ್ಫಾನ್ ಮತ್ತು ಉಮ್ಮರ್ ಎಂಬುವವರನ್ನು ಬಂಧಿಸಲಾಗಿತ್ತು.

 

ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ನಗರ ಪೆÇಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಸಿಸಿಬಿಗೆ ವರ್ಗಾಯಿಸಿದ್ದರು. ಸಿಸಿಬಿ ತನಿಖೆ ವೇಳೆ ಆರೋಪಿಗಳು ಸ್ಕ್ರೂಡ್ರೈವರ್ ಬಳಸಿದ್ದಾಗಿ ಹೇಳಿದ್ದು, ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಚಾಕು ಬಳಸಿರುವುದು ತಿಳಿದು ಬಂದಿತ್ತು. ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದಾಗ ಚಾಕು ಬಳಸಿದ್ದಾಗಿ ಬಾಯ್ಬಿಟ್ಟಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ಅಲ್ಲಿಯೇ ಕಟ್ಟಡದ ಮೇಲೆ ಎಸೆದಿದ್ದಾಗಿ ತಪೆÇ್ಪಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಆದರೆ, “ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಸ್ಕ್ರೂ ಡ್ರೈವರ್‍ನಿಂದ ಸಂತೋಷ್ ಕಾಲಿಗೆ ಚುಚ್ಚಿದ್ದಾಗ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದ ಎಂದು ಹೇಳಿಕೆ ನೀಡಿದ್ದಾರೆ. ಅವರು ಕೊಲೆ ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ವಿಚಾರಣೆ ವೇಳೆ ಗೊತ್ತಾಗಿತ್ತು” ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದರು. ಇಡೀ ಕೊಲೆ ತಮ್ಮ ಕಣ್ಣೆದುರೆ ಆಗಿದೆ ಎಂಬಂತೆ ಬಿಂಬಿಸಿ ಕಥೆ ಕಟ್ಟಿದ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಹೇಳಿಕೆ ಇದೀಗ ಅವರಿಗೆ ತಿರುಗುಬಾಣವಾಗಿದೆ.

ಹೌದು… ಸಂತೋಷ್ ಹತ್ಯೆಯಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಮೌನ ಮುರಿದಿದ್ದರ ಜೊತೆಗೆ ಬಿಜೆಪಿ ನಾಯಕರು ಚುನಾವಣೆಗಾಗಿ ರಾಜಕೀಯ ಹೇಳಿಕೆ ನೀಡುವುದನ್ನು ಖಯಾಲಿ ಮಾಡಿಕೊಂಡಿದ್ದಾರೆ ಎಂದು ಸಚಿವರು ಬಿಜೆಪಿಯನ್ನು ಟೀಕಿಸಿದ್ದರು. ಅಷ್ಟೇ ಅಲ್ಲದೇ, ಈ ಹತ್ಯೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿರುವ ಸಚಿವರು ಸ್ಕ್ರೂ ಡ್ರೈವರ್ ನಿಂದ ಕೊಲೆ ಗೈಯಲಾಗಿದೆ ಎನ್ನುವ ಮಾಹಿತಿಯನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿನ ಒದರಿದ್ದರು.

ಆದರೆ ಇದೀಗ ಬಿಜೆಪಿ ಕಾರ್ಯಕರ್ತ ಸಂತೋಷ ಹತ್ಯೆಗೆ ಬಳಸಿದ್ದು ಸ್ಕ್ರೂ ಡ್ರೈವರ್ ಅಲ್ಲ ಚಾಕು ಎನ್ನುವ ಸುದ್ದಿ ಹೊರಬಿದ್ದಿದ್ದು, ತಾವು ಹೇಳಿರುವ ಕಟ್ಟುಕಥೆ ಇದೀಗ ರಟ್ಟಾಗಿದೆ!! ಎಲ್ಲಿದ್ದೀರಿ ಗೃಹ ಸಚಿವರೇ … ಇದಕ್ಕೇನು ಉತ್ತರ ನೀಡುತ್ತೀರಿ??

– ಅಲೋಖಾ

Tags

Related Articles

Close