ಪ್ರಚಲಿತ

ಸ್ತಬ್ಧವಾದ ಕೆಂಪು ಬಾವುಟ.! 2ನೇ ದಿನ ನೋ ಬಂದ್.! ಮೋದಿ ಪರವಾದ ವೀಡಿಯೋಗಳು ಸಖತ್ ವೈರಲ್.!

ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಮ್ಯುನಿಷ್ಟರು ಕರೆ ಕೊಟ್ಟಿರುವ ಭಾರತ್ ಬಂದ್ ಬಹುತೇಕ ವಿಫಲವಾಗಿದೆ. ಕೇಂದ್ರ ಸರ್ಕಾರದ ಕಾರ್ಮಿಕರ ವಿರೋಧಿ ನೀತಿ ಹಾಗೂ ಮೋಟಾರು ವಾಹನಗಳ ಕಾಯ್ದೆಯನ್ನು ಖಂಡಿಸಿ ಎರಡು ದಿನಗಳ ಭಾರತ್ ಬಂದ್ ಗೆ ಕರೆ ನೀಡಿತ್ತು. ಆದರೆ ಪ್ರಥಮ ದಿನ ಅಷ್ಟೊಂದು ಸಫಲವಾಗದ ಭಾರತ್ ಬಂದ್ ಎರಡನೇ ದಿನ ಸಂಪೂರ್ಣವಾಗಿ ವಿಫಲವಾಗಿದೆ.

ಪ್ರಥಮ ದಿನದ ಭಾರತ್ ಬಂದ್ ಗೆ ಹೆಚ್ಚಿನ ಕಡೆಗಳಲ್ಲಿ ಕಮ್ಯುನಿಷ್ಟರಿಗೆ ಅವಮಾನ ಎದುರಾಗಿದೆ. ಈ ಮಧ್ಯೆ ಕುಂದಾಪುರ ಹಾಗೂ ಉಡುಪಿ ಭಾಗದಲ್ಲಿ ನಡೆದಿದ್ದ ಕೆಲ ಘಟನೆಗಳ ವೀಡಿಯೋ ವೈರಲ್ ಆಗಿದೆ. ಮೋದಿ ವಿರುದ್ಧ ಭಾರತ್ ಬಂದ್ ಮಾಡಲುದ್ದೇಶಿಸಿ ಅಂಗಡಿಗಳನ್ನು ಬಂದ್ ಮಾಡಿ ಎಂದು ಹೇಳಿಕೊಂಡು ಬಂದ ಕೆಂಪು ಬಾವುಟ ಪ್ರಿಯರಿಗೆ ಶಾಕ್ ಎದುರಾಗಿತ್ತು. ಅಂಗಡಿ ಮಾಲೀಕರೋರ್ವರು ಕಮ್ಯುನಿಷ್ಟರಿಗೆ ಸರಿಯಾಗಿ ಪಾಠ ಕಲಿಸಿದ್ದು ಬಂದ್ ಪ್ರಿಯರನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. “ತಾಕತ್ತಿದ್ದರೆ 2014ರ ಮುಂಚಿನ ಬೆಲೆ ಪಟ್ಟಿಯನ್ನು ಮತ್ತು ನಂತರದ ಬೆಲೆ ಪಟ್ಟಿಯನ್ನು ಎದುರಿಗಿಟ್ಟು ಚರ್ಚೆಗೆ ಬನ್ನಿ” ಎಂದು ಕಮ್ಯುನಿಷ್ಟರಿಗೆ ಚಾಲೆಂಜ್ ಹಾಕಿರುವ ವೀಡಿಯೋ ವೈರಲ್ ಆಗಿದ್ದು ಕೇಂದ್ರ ಸಚಿವರುಗಳೂ ಈ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ.

ಇನ್ನು 8ನೇ ತರಗತಿಯ ಮೌನಿಕಾ ಎಂಬ ಬಾಲಕಿ ಕೂಡಾ ವೀಡಿಯೋ ಮಾಡಿದ್ದು ಬಂದ್ ನಿಂದ ಯಾರಿಗೂ ಲಾಭವಿಲ್ಲ. ಹಬ್ಬಕ್ಕೂ ರಜೆ, ಬಂದಿಗೂ ರಜೆ ಎಂದರೆ ನಾವು ಶಾಲೆಗೆ ಹೋಗೋದು ಯಾವಾಗ. ಬಂದ್ ಮಾಡೋದು ದೇಶಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾಳೆ. ಹೀಗೆ ಅನೇಕ ವೀಡಿಯೋಗಳು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬೆಂಬಲವನ್ನು ಸೂಚಿಸಿದೆ.

ಇನ್ನು ಎರಡನೇ ದಿನ ಭಾರತ್ ಬಂದ್ ಗಿಮಿಕ್ ನಡೆಯಲೇ ಇಲ್ಲ. ಇಂದು ಯಾವುದೇ ಬಂದ್ ಗೆ ಸಾರ್ವಜನಿಕರು ಬೆಂಬಲ ನೀಡದ ಕಾರಣ ಕೇವಲ ಪ್ರತಿಭಟನೆಗಷ್ಟೇ ಸೀಮಿತಗೊಳಿಸಿದ್ದಾರೆ. ಮೊದಲ ದಿನವೇ ಉತ್ತಮ ಪ್ರತಿಕ್ರಿಯೆಯನ್ನು ಕಾಣದ ಸಂಘಟನೆಗಳು ಇಂದು ಬಂದ್ ಗೆ ಅಷ್ಟೊಂದು ಹಠ ಬೀಳದೆ ತಮ್ಮ ಅಸಹಾಯಕ ಸ್ಥಿತಿಯನ್ನು ತೋರ್ಪಡಿಸಿದ್ದಾರೆ. ಈ ಮೂಲಕ ಕೆಲವು ಕಡೆಗಳಲ್ಲಿ ಕೇವಲ ಪ್ರತಿಭಟನೆಗಷ್ಟೇ ಸೀಮಿತಗೊಳಿಸಿದ್ದಾರೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close