ಅಂಕಣ

ಸೋಲಿನ ಹತಾಶೆಯಲ್ಲಿದ್ದ ಈ ಕ್ರೈಸ್ತ ವ್ಯಕ್ತಿಗೆ ದಾರಿದೀಪವಾದ ಭಗವದ್ಗೀತೆ! ಆರಂಭದಲ್ಲಿ ಹಿಂಸಾತ್ಮಕನಂತೆ ಕಂಡ ಕೃಷ್ಣ ನಂತರ ಶಾಂತಿದೂತನಾಗಿದ್ದೇಗೆ?

ಗತ್ತಿನ ಅನೇಕ ವಿಜ್ಞಾನಿಗಳು, ಅನೇಕ ತತ್ವಜ್ಞಾನಿಗಳು ಭಗವದ್ಗೀತೆಗೆ ಮರುಳಾಗಿದ್ದಲ್ಲದೇ ತಮ್ಮ ಸಾಧನೆಗೆ ಭಗವದ್ಗೀತೆಯೇ ಕಾರಣವೆಂದು ಹೇಳಿಕೊಂಡಿರುವುದು ಗೌಪ್ಯವಾಗಿ ಉಳಿದಿಲ್ಲ. ಅನೇಕ ರಾಷ್ಟ್ರಗಳಲ್ಲಿ ಭಗವದ್ಗೀತೆಯನ್ನು ತಮ್ಮ ಪಠ್ಯಪುಸ್ತಕದಲ್ಲಿ ಅಳವಡಿಸಿಕೊಂಡಿದ್ದಲ್ಲದೇ, ಭಗವದ್ಗೀತೆ ಜಗತ್ತಿನ ಶ್ರೇಷ್ಟ ಗ್ರಂಥವೆಂದು ಹೇಳಿದ್ದಾರೆ. ಜಗತ್ತಿನ ಶ್ರೇಷ್ಟ ವಿಜ್ಞಾನಿ ಅಲ್ಬರ್ಟ್ ಐನ್ ಸ್ಟೀನ್, “ಈ ಜಗತ್ತು ಭಗವಂತನ ಸೃಷ್ಟಿ ಎನ್ನುವ ವಿಚಾರವು ಭಗವದ್ಗೀತೆಯನ್ನು ಓದಿದಾಗ ಅರಿವಾಯಿತು. ಈ ವಿಚಾರದ ಮುಂದೆ ಇನ್ನೆಲ್ಲಾ ಆಲೋಚನೆಗಳೂ ಗೌಣವೆನಿಸಿತು” ಎಂದು ಹೇಳಿದ್ದರು”!! ಆದರೆ ಆಧ್ಯಾತ್ಮ ಚಿಂತಕರಾದ ಮೋ ಇಸ್ಸಾ ಭಗವದ್ಗೀತೆಯ ಬಗ್ಗೆ ಹೇಳಿದ್ದಾದರೂ ಏನು ಗೊತ್ತೇ???

ಈಗಾಗಲೇ ಅನೇಕ ರಾಷ್ಟ್ರಗಳಲ್ಲಿ ಭಗವದ್ಗೀತೆಯನ್ನು ತಮ್ಮ ಪಠ್ಯಪುಸ್ತಕದಲ್ಲಿ ಅಳವಡಿಸಿಕೊಂಡಿದ್ದಲ್ಲದೇ, ಭಗವದ್ಗೀತೆ ಜಗತ್ತಿನ ಶ್ರೇಷ್ಟ ಗ್ರಂಥವೆಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಭಗವದ್ಗೀತೆಯಂಥ ಶ್ರೇಷ್ಟ ಮ್ಯಾನೆಜ್ ಮೆಂಟ್ ಬುಕ್ ಇನ್ನೊಂದಿಲ್ಲವೆಂದು ಹೇಳುತ್ತಾರೆ. ಮನುಷ್ಯ ತಾನು ಕುಗ್ಗಿ ಹೋಗುವಾಗ, ಜೀವನವೇ ಸಾಕು ಎಂದೆನಿಸಿದಾಗ, ಹೇಡಿಯ ಮನಸ್ಥಿತಿ ರೂಪುಗೊಂಡಾಗ ಭಗವದ್ಗೀತೆಯನ್ನು ಓದಿದರೆ ಪುಟಿದೆದ್ದು ಸಾಧಿಸಲು ನಿಲ್ಲತ್ತಾನೆ. ಹೀಗಾಗಿಯೇ ಅನೇಕರು ಭಗವದ್ಗೀತೆಯನ್ನು ಜಗತ್ತಿನ ಶ್ರೇಷ್ಟ ಮ್ಯಾನ್ಯಾಜ್ಮೆಂಟ್ ಬುಕ್ ಎಂತಲೂ ಕರೆಯುತ್ತಾರೆ.

Image result for bhagavad gita book

“ನಾನು ಭಗವದ್ಗೀತೆಯಿಂದಲೇ ಪ್ರೇರಿತನಾಗಿದ್ದೇನೆ ಎಂದು ಬ್ರಿಟನ್ನಿನ ಖ್ಯಾತ ತತ್ವಶಾಸ್ತ್ರಜ್ಞ ಆಲ್ಡಸ್ ಹಕ್ಸ್ ತನ್ನ ಕೃತಿಯಲ್ಲಿ ಬರೆದುಕೊಂಡಿದ್ದ. ಅಷ್ಟೇ ಅಲ್ಲ ನಾಝಿ ಜರ್ಮನಿಯ ಪ್ರಭಾವಶಾಲಿ ವ್ಯಕ್ತಿತ್ವವಾಗಿದ್ದ ಹೆನ್ರಿಚ್ ಹಿಮ್ಲರ್ ಕೂಡ ತಾನು ಗೀತೆಯೆ ಉಪದೇಶಗಳಿಂದ ಪ್ರಭಾವಿತನಾಗಿದ್ದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದ. ಆದರೆ ಘಾನಾ ದೇಶದ ಒರ್ವ ಕ್ರೈಸ್ತನಾಗಿರುವ ಮೋ ಇಸ್ಸಾ ಭಗವದ್ಗೀತೆಯ ಬಗ್ಗೆ ತನ್ನ ಅನುಭವವನ್ನು ಹಂಚಿಕೊಂಡಿದ್ದಾನಲ್ಲದೇ ಜೀವನದಲ್ಲಿ ಒಮ್ಮೆಯಾದರೂ ಭಗವದ್ಗೀತೆಯನ್ನು ಓದಿ ಎಂದಿದ್ದಾರೆ!!

ಹೌದು…. ನಾನು ಯೋಗ ಮಾಡೋದಿಲ್ಲ, ಧ್ಯಾನವೂ ನನಗೆ ಕಷ್ಟ. ಆದರೆ ದಿನಾ ಮುಂಜಾನೆ ಬಹಳ ಬೇಗ ಏಳುತ್ತೇನೆ. ನನ್ನ ಆತ್ಮಕ್ಕೆ ಸಣ್ಣ ಸೇತುವೆಯೊಂದನ್ನು ಕಟ್ಟಲು ಪ್ರಯತ್ನಿಸುತ್ತೇನೆ ಎಂದು ತಮ್ಮ ಪರಿಚಯ ಮಾಡಿಕೊಳ್ಳುವ ಆಧ್ಯಾತ್ಮ ಚಿಂತಕ ಮೋ ಇಸ್ಸಾ ಘಾನಾ ದೇಶದವರು. “ನಾನು  ಧರ್ಮ ವಿರೋಧಿ, ಆಧ್ಯಾತ್ಮ ಪ್ರಿಯ” ಎನ್ನುವ ಇವರು ಭಗವದ್ಗೀತೆಯಿಂದ ತನಗೆ ಪ್ರೇರಣೆ ಸಿಕ್ಕಿದ್ದನ್ನು ಹೇಳಿಕೊಂಡಿದ್ದಾರೆ.

“ನಾನು ಮೂಲತಃ ವರ್ತಕ, ಲೇಖಕ. ನನ್ನದು ಪ್ರಾಕ್ಟಿಕಲ್ ಆಧ್ಯಾತ್ಮ. ವೆಬ್‍ಸೈಟ್ ಹಾಗೂ ಬ್ಲಾಗ್‍ನಲ್ಲಿ ಬರೀತೀನಿ. ಅದು ಹೆಚ್ಚು ಜನಕ್ಕೆ ತಲುಪಬೇಕು ಎಂಬ ಆಸೆ ಇತ್ತು, ಈಗಿಲ್ಲ ಬಿಡಿ. ಬಹುಶಃ ನನ್ನ ಬರಹ ಅಷ್ಟಾಗಿ ಆಕರ್ಷಕವಾಗಿಲ್ಲದೇ ಹೋಯ್ತೋ ಅಥವಾ ಬಹಳ ಯಾಂತ್ರಿಕವಾಯ್ತೋ ಏನೋ ಗೊತ್ತಿಲ್ಲ. ಆದರೆ ಬ್ಲಾಗ್ ಓದುಗರ ಸಂಖ್ಯೆ ಮೊದಲೆಷ್ಟಿತ್ತೋ ಅಷ್ಟೇ ಇತ್ತು. ಯಾರೊಬ್ಬರೂ ನನ್ನ ಬ್ಲಾಗ್ ಬರಹವನ್ನು ಗಂಭೀರವಾಗಿ ಪರಿಗಣಿಸಿದಂತಿರಲಿಲ್ಲ, ಕಮೆಂಟ್‍ಗಳೂ ತೀರಾ ಸಾಮಾನ್ಯವಾಗಿದ್ದವು. ನನ್ನೊಳಗೇ ಕೀಳರಿಮೆ ಶುರುವಾಯ್ತು, ನನಗೆ ಉಳಿದವರಂತೆ ಅದ್ಭುತವಾಗಿ ಬರೆಯಲು ಬರುವುದಿಲ್ಲ, ಹೀಗೆಲ್ಲ ಲಘುವಾಗಿ ಗೀಚೋದರಿಂದ ಏನು ಪ್ರಯೋಜನ, ಬರವಣಿಗೆಯನ್ನೇ ನಿಲ್ಲಿಸಿಬಿಡೋದು ಒಳ್ಳೆಯದೇನೊ? ಅಂತೆಲ್ಲ ಅನಿಸತೊಡಗಿತು. ಹಾಗೆ ನಿದ್ದೆ ಹೋದೆ.

Image result for mo issa ghana

ಮಾರನೆಯ ದಿನ ಬಹಳ ಬೇಗ ಎದ್ದೆ. ಭಗವದ್ಗೀತೆ ಕೈಗೆತ್ತಿಕೊಂಡೆ. ಶಸ್ತ್ರಸಜ್ಜಿತ ಬೃಹತ್ ಕೌರವ ಸೇನೆ ಕಂಡು ಉಭಯಸಂಕಟದಲ್ಲಿದ್ದ ಅರ್ಜುನ. ಕೃಷ್ಣ ಅವನಿಗೆ ಯುದ್ಧ ಮಾಡುವಂತೆ ಪ್ರೇರೇಪಿಸುತ್ತಾ ಅವನ ಕರ್ತವ್ಯ ನೆನಪಿಸುತ್ತಿದ್ದ. ಯುದ್ಧಭೂಮಿಯಲ್ಲಿ ಹಿಂಸೆಯಿಂದ ಹಿಂದೆ ಸರಿಯುತ್ತೇನೆ ಎಂದವ ಅರ್ಜುನ. ಇಲ್ಲ, ನೀನು ಯುದ್ಧ ಮಾಡಲೇ ಬೇಕು ಎಂದು ಹಿಂಸೆಯತ್ತ ನಡೆಸಿದವ ಕೃಷ್ಣ.

ಅಂದರೆ ಭಗವದ್ಗೀತೆ ಹಿಂಸೆಗೆ ಪ್ರಚೋದನೆಯೇ? ಮೊದ ಮೊದಲಿಗೆ ಭಗವದ್ಗೀತೆ ಓದುವಾಗ ಈ ಪ್ರಶ್ನೆ ಬರುತ್ತಿತ್ತು. ಬಳಿಕ ಗೀತೆಯ ಅಂತರಾರ್ಥ ತಿಳಿಯಿತು. ಭಾರತ ಅಹಿಂಸೆಯ ನಾಡು. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧಿಯ ಮೂಲಮಂತ್ರ ಅಹಿಂಸೆ. ಅವರ ಮನಸ್ಸಿಗೆ ಹತ್ತಿರವಾದದ್ದು ಭಗವದ್ಗೀತೆ. ಜಗತ್ತಿಗೆ ಅಹಿಂಸೆಯ ಸಂದೇಶ ಸಾರಿದ ಅನೇಕ ಮಹಾತ್ಮರು ಭಗವದ್ಗೀತೆಯನ್ನು ಇಷ್ಟಪಡುತ್ತಾರೆ. ನಾನು ಕವಿ ರಾಲ್ಫ್ ವಾಲ್ಟೊ ಎಮರ್ಸನ್ ಸೇರಿದಂತೆ ಹಲವರು ಭಗವದ್ಗೀತೆ ಬಗ್ಗೆ ಬರೆದ ವ್ಯಾಖ್ಯಾನಗಳನ್ನು ಓದಿದ್ದೇನೆ. ನನ್ನ ಗೊಂದಲಗಳಿಗೆ ಅಲ್ಲಿ ಪರಿಹಾರ ಸಿಕ್ಕಿದೆ. ಜಗತ್ತಿನಲ್ಲಿ ಇನ್ನೂ ನಾಗರಿಕತೆ ಆರಂಭವಾಗುತ್ತಿದ್ದ ಹೊತ್ತಿನಲ್ಲಿ ಪ್ರಚಂಡ ಬುದ್ಧಿವಂತನೊಬ್ಬ ಎಷ್ಟೋ ಸಹಸ್ರ ವರ್ಷಗಳ ನಂತರವೂ ಮನುಷ್ಯನಿಗೆ ಬರಬಹುದಾದ ಸಂದೇಹಗಳಿಗೆ ಉತ್ತರಿಸಿದ್ದು ಅದ್ಭುತ ಅನಿಸುತ್ತದೆ.

ಅಂದು ಅರ್ಜುನನಿಗೆ ಬಂದ ಸಂದಿಗ್ಧತೆ ಅನ್ಯರೂಪದಲ್ಲಿ ನಮಗೂ ಬರುತ್ತದೆ. ಅರ್ಜುನನಿಗೆ ಕೃಷ್ಣ ನೀಡಿದ ಉತ್ತರ ನನ್ನ ಸಂದೇಹಗಳನ್ನೂ ಪರಿಹರಿಸುತ್ತದೆ! ಹಿಂದಿನ ದಿನದ ನನ್ನ ಗೊಂದಲಕ್ಕೆ ಉತ್ತರ ಭಗವದ್ಗೀತೆಯಲ್ಲಿ ಸಿಕ್ಕಿತು. ನಾನು ಮುಖ್ಯವಾಹಿನಿಯ ಬ್ಲಾಗರ್ ಆಗ್ತಿಲ್ಲ ಅಂತ ಹತಾಶೆಯಾಗಿತ್ತು. ಫಾಲೋವರ್ಸ್ ಇಷ್ಟು ಕಡಿಮೆ ಇರುವಾಗ ಬರೀಬೇಕಾ ಬೇಡ್ವಾ ಅನ್ನುವ ಗೊಂದಲವಿತ್ತು. ಗೀತೆಯಲ್ಲಿ ಬಹಳ ಸ್ಟ್ರಾಂಗ್ ಆದ ಒಂದು ವಾಕ್ಯವಿತ್ತು, “ಪ್ರೀತಿಯಿಂದ ಕೆಲಸ ಮಾಡು. ಗುರಿಯತ್ತ ಚಿತ್ತನೆಡು” ಇಷ್ಟೇ ಅಲ್ಲ, ಆ ವಾಕ್ಯ ಮುಂದುವರಿದಿತ್ತು, “ಮಾಡುವ ಕೆಲಸದಲ್ಲಷ್ಟೇ ನಿನಗೆ ಅಧಿಕಾರ, ಪ್ರತಿಫಲದಲ್ಲಲ್ಲ” ನಾನೊಬ್ಬ ಲೇಖಕ. ಬರೆಯೋದು ನನ್ನ ಪ್ರೀತಿಯ ಕೆಲಸ. ಬಹಳ ಆಳವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು. ಆತ್ಮಕ್ಕೆ ಹತ್ತಿರವಾಗಿ ಬರೀಬೇಕು. ಹಾಗೆ ಬರೆದು ಮುಗಿಸಿದ ಮೇಲೆ ವರ್ಣಿಸಲಾಗದ ಖುಷಿ ನನ್ನೊಳಗೆ. ಈ ಬರಹ ಓದಿದ ಓದುಗರಲ್ಲೂ ಆ ಖುಷಿ ಇರುತ್ತದೆ. ಉಳಿದಂತೆ ಬೇರೆಲ್ಲ ಲೆಕ್ಕಾಚಾರಗಳು ನನಗೆ ಸಂಬಂಧಿಸಿದ್ದಲ್ಲ.

ನಾವು ಹೊಟ್ಟೆಪಾಡಿಗಾಗಿ ಮಾಡುವ ಕೆಲಸವನ್ನೇ ತಗೊಳ್ಳಿ, ಟಾರ್ಗೆಟ್, ರಿಸಲ್ಟ್ ಗಳ ಹಂಗಿಲ್ಲದೇ ಕೆಲಸದಲ್ಲಿ ತೊಡಗಿಸಿದರೆ ಉದ್ಯೋಗದಲ್ಲಿ ಪ್ರೀತಿ ಹುಟ್ಟುತ್ತದೆ. ಅದರಲ್ಲೊಂದು ಸಿಂಪಲ್ ಬ್ಯೂಟಿ ಇದೆ. ನಾವು ರಿಸಲ್ಟ್ ನ್ನೇ ಮುಖ್ಯವಾಗಿ ತೆಗೆದುಕೊಂಡರೆ ಆ ಬ್ಯೂಟಿ, ಪ್ರೀತಿ ಮಾಯವಾಗುತ್ತದೆ. ನಾನು ಬ್ಲಾಗ್ ಬರೆಯೋದನ್ನು ಮುಂದುವರಿಸಿದೆ. ಜನಪ್ರಿಯತೆಗೆ ಹಪಿಹಪಿ ಇರಲಿಲ್ಲ, ಯಾಂತ್ರಿಕತೆಯ ಲವಲೇಶವೂ ಇರಲಿಲ್ಲ, ನನ್ನ ಬರಹದೊಳಗೆ ಜೀವಂತಿಕೆ ಇತ್ತು. ಅದು ಇನ್ನೊಬ್ಬನೊಳಗೂ ಇಳಿಯುವಂತಿತ್ತು. ಭಗವದ್ಗೀತೆಯನ್ನು ಆಗಾಗ ಓದುತ್ತಿದ್ದೆ. ಬದುಕಿನ ಬಗ್ಗೆ ನನ್ನ ದೃಷ್ಟಿಕೋನ ಬದಲಾಯಿತು. ಗೊಂದಲಗಳ ಜಾಗದಲ್ಲಿ ನಿಖರತೆ ಮೂಡಲಾರಂಭಿಸಿತು. ನೀವು ಯಾವುದೇ ಉದ್ಯೋಗ ಮಾಡುತ್ತಿರಿ, ಆದರೆ ಒಮ್ಮೆ ಭಗವದ್ಗೀತೆ ಓದಿ”! ಎಂದು ಹೇಳಿದ್ದಾರೆ!!

ಒಟ್ಟಿನಲ್ಲಿ, ಅಮೇರಿಕಾದ ನೌಕಾದಳದಲ್ಲಿ ಅಧಿಕಾರಿಯಾಗಿದ್ದು ನ್ಯಾಸಾದ ಗಗನಯಾತ್ರಿಯಾಗಿ ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಏರ್ಪಡಿಸಿದ್ದ ಎಕ್ಸಪೆಡಿಷನ್-14ರ ಗಗನಯಾತ್ರಿ ಸುನೀತಾ ವಿಲಿಯಂಸ್ ಬಾಹ್ಯಾಕಾಶ ನೌಕೆಯಲ್ಲಿ ಅತಿ ಹೆಚ್ಚು ಸಮಯ ಕಳೆದು ದಾಖಲೆ ನಿರ್ಮಿಸಿದರು. ಇಂತಹ ಭಾರತೀಯ ಮೂಲದ ಹೆಮ್ಮೆಯ ಪುತ್ರಿ ಬಾಹ್ಯಾಕಾಶಕ್ಕೆ ಹೊರಟಾಗ ಮರೆಯದೆ ಹೊತ್ತೊಯ್ದದ್ದು ತಾನು ಅಧ್ಯಯನ ಮಾಡುವ ಭಗವದ್ಗೀತೆಯನ್ನೇ!! ಇಂತಹ ಭಗವದ್ಗೀತೆಯನ್ನು ಭಾರತದಲ್ಲಿರುವ ಕೆಲ ಸೋ ಕಾಲ್ಡ್ ಬುದ್ಧಿ ಜೀವಿಗಳು, ಕೋಮುವಾದಿಗಳ ಗ್ರಂಥವೆಂದು ಕರೆಯುತ್ತಾರಲ್ಲ ಇವರಿಗೆ ಅದೇನು ಹೇಳಬೇಕೋ ನಾ ಕಾಣೆ!!

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close