ಪ್ರಚಲಿತ

ತನ್ನದೇ ಸ್ವಂತ ಪಕ್ಷ ಇಟ್ಟುಕೊಂಡಿರುವ ಕುಮಾರಸ್ವಾಮಿ ಕುಟುಂಬ ಓಟ್ ಮಾಡಿದ್ದು ಯಾವ ಪಕ್ಷಕ್ಕೆ ಗೊತ್ತಾ.?

ವಿಧಾನಸಭಾ ಚುನಾವಣೆಯಲ್ಲಿ 37 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ನಾಯಕ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮತ್ತೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ತನ್ನ ಕುಟುಂಬವನ್ನು ಸಂಸತ್ತಿಗೆ ಕಳಿಸುವ ಕನಸನ್ನು ಕಾಣುತ್ತಿದ್ದಾರೆ. ಮಂಡ್ಯದಲ್ಲಿ ರಣರೋಚಕ ಚುನಾವಣಾ ಕಾವಿಗೆ ಕಾರಣವಾದ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿಯನ್ನು ಶತಾಯ ಗತಾಯ ಗೆಲ್ಲಿಸಲೇಬೇಕೆಂಬ ಹಠ ತೊಟ್ಟಿರುವ ಗೌಡರ ಕುಟುಂಬ ಮಂಡ್ಯ ನಮ್ಮದೇ ಊರು ಎಂದೇ ಮತ ಕೇಳುತ್ತಿತ್ತು.

“ನಾನು ಹಾಗೂ ನನ್ನ ಮಗ ಮಂಡ್ಯದ ಮಕ್ಕಳು. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ರವರು ಮಂಡ್ಯದವರಲ್ಲ” ಎಂದು ನಿಖಿಲ್ ಗೆ ಮತ ಕೇಳುತ್ತಿದ್ದರು. ಆದರೆ ಮಂಡ್ಯದ ಮಕ್ಕಳು ಎನ್ನುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅವರ ಮಗ ನಿಖಿಲ್ ಸಹಿತ ಕುಟುಂಬ ಓಟ್ ಹಾಕಿದ್ದು ಮಾತ್ರ ಬೆಂಗಳೂರಿನಲ್ಲಿ. ಸುಮಲತಾ ಅಂಬರೀಶ್ ಅವರು ಮಂಡ್ಯದವರಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದ್ದರೂ ಕೂಡಾ ಅವರು ಮಂಡ್ಯದಲ್ಲೇ ಓಟ್ ಮಾಡುವ ಮೂಲಕ ಕುಮಾರ ಸ್ವಾಮಿ ಕುಟುಂಬಕ್ಕೆ ಕೃತಿಯ ಮೂಲಕವೇ ಟಾಂಗ್ ನೀಡಿದ್ದರು.

ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂದರೆ ಅವರ ಕುಟುಂಬ ಅನೇಕ ವರ್ಷಗಳಿಂದ ಜೆಡಿಎಸ್ ಎಂಬ ಕುಟುಂಬವನ್ನು ಪೋಷಿಸಿಕೊಂಡು ಬರುತ್ತಿದ್ದರೂ ಕೂಡಾ ಈ ಚುನಾವಣೆಯಲ್ಲಿ ಅವರು ಮತ ಹಾಕಿದ್ದು ಮಾತ್ರ ಕಾಂಗ್ರೆಸ್ ಅಭ್ಯರ್ಥಿಗೆ. ತನ್ನ ಕ್ಷೇತ್ರದಲ್ಲಿ ಅಂದರೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇದ್ದ ಕಾರಣ ಅನಿವಾರ್ಯವಾಗಿ ತನ್ನ ಪಕ್ಷ ಬಿಟ್ಟು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಬೇಕಾಯ್ತು.

ಮಂಡ್ಯ ನನ್ನ ಊರು, ನನಗೆ ಮತ ಹಾಕಿ ಎನ್ನುತ್ತಿದ್ದ ನಿಖಿಲ್ ಕುಮಾರಸ್ವಾಮಿ ಕೂಡಾ ಮತ್ತೊಂದು ಊರಿಗೆ ಹೋಗಿ ಮತಚಲಾವಣೆ ಮಾಡಿದ್ದೂ ವಿಪರ್ಯಾಸವೇ ಸರಿ…

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close