ಅಂಕಣಪ್ರಚಲಿತ

ಲೋಕಸಭಾ ಚುನಾವಣೆ ಮುಗಿಯುವ ಹೊತ್ತಲ್ಲೇ ದೇಶಾದ್ಯಂತ ಕೋಲಾಹಲ ಎಬ್ಬಿಸಿದ ಮೋದಿಯ “ಆ ಒಂದು” ಮಾತು! ಅರಚಾಡುತ್ತಿದ್ದ ಕಾಂಗ್ರೆಸಿಗರು ತಬ್ಬಿಬ್ಬಾಗಿದ್ದೇಕೆ?

ಮೋದಿ…ಮೋದಿ…ಮೋದಿ… ಈ ಒಂದು ಹೆಸರು ದೇಶಾದ್ಯಂತ ಯಾವ ರೀತಿಯ ಒಂದು ಹವಾ ಸೃಷ್ಟಿಸಿದೆ ಎಂದರೆ ಬೆಂಬಲಿಗರ ಬಾಯಲ್ಲೂ ಮೋದಿ ವಿರೋಧಿಗಳ ಬಾಯಲ್ಲೂ ಮೋದಿ. ಒಂದರ್ಥದಲ್ಲಿ ಹೇಳುವುದಾದರೆ ದಿನದ ೨೪ ಗಂಟೆಯೂ ಈ ಒಂದು ಹೆಸರು ಚಾಲ್ತಿಯಲ್ಲಿದೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರದಲ್ಲಿ ದೇಶದಲ್ಲಾದ ಬದಲಾವಣೆ ಒಂದಲ್ಲ ಎರಡಲ್ಲ, ಯಾರೂ ಊಹಿಸದ ರೀತಿಯಲ್ಲಿ ದೇಶದಲ್ಲಿ ಬದಲಾವಣೆ ಉಂಟಾಯಿತು. ಇದನ್ನು ಕಂಡು ದೇಶವಾಸಿಗಳು ಸಂತಸ ವ್ಯಕ್ತಪಡಿಸಿದರೆ, ಇತ್ತ ವಿರೋಧಿಗಳು ಮೋದಿಯವರ ಜನಪ್ರಿಯತೆ ಕಂಡು ಹೊಟ್ಟೆಗೆ ಬೆಂಕಿ ಬಿದ್ದಂತಾಗಿ ನರಳಾಡತೊಡಗಿದರು. ಇದು ಅಂತಿಂತ ನರಳಾಟ ಅಲ್ಲ, ತಮ್ಮ ಅಸ್ತಿತ್ವವೇ ಕಳೆದುಹೋಗುತ್ತಿದೆ ಎಂಬ ಭಯದಿಂದ‌ ಹೊರಳಾಡಿದರು.‌ ಅಷ್ಟೇ ಅಲ್ಲದೆ ಮೋದಿ ವಿರೋಧಿಗಳು ಎಲ್ಲಾ ಸೌಜನ್ಯವನ್ನೂ ಮೀರಿ ಪ್ರಧಾನಿ ನರೇಂದ್ರ ಮೋದಿ ಒಬ್ಬ ಕಳ್ಳ ಎಂದು ಹೇಳಿ ಟೀಕೆ ಮಾಡಲು ಆರಂಭಿಸಿದರು. ‌ಇದು ಕಾಂಗ್ರೆಸಿಗರ ಅಸಲಿಯತ್ತು ಏನೆಂಬುದನ್ನು ಬಯಲು ಮಾಡಿತ್ತು. ಯಾಕೆಂದರೆ ಮೋದಿ ತನ್ನ ಮೇಲೆ ಯಾವುದೇ ಟೀಕೆ ಬಂದರು ಅದಕ್ಕೆ ಪ್ರತಿಕ್ರಿಯೆ ನೀಡಿ ಸಮಯ ವ್ಯರ್ಥ ಮಾಡಿದವರಲ್ಲ. ಟೀಕೆಗಳನ್ನೇ ತನ್ನ ಯಶಸ್ವಿನ ಮೆಟ್ಟಿಲನ್ನಾಗಿ ನಿರ್ಮಿಸಿ ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸಲು ಪಣತೊಟ್ಟಿದ್ದಾರೆ. ಆದರೆ ವಿರೋಧಿಗಳ ಆಟ ನಿಲ್ಲಲೇ ಇಲ್ಲ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಂತೂ ಹೋದಲ್ಲಿ ಬಂದಲ್ಲಿ ಹೇಳಿದ ಮಾತು ಒಂದೇ “ಚೌಕಿದಾರ್ ಚೋರ್ ಹೈ”. ಇದು ಮೋದಿ ಅಭಿಮಾನಿಗಳಲ್ಲಿ ಹೊಸ ಕಿಚ್ಚು ಹಚ್ಚಿದಂತಾಗಿತ್ತು.‌ ಸಾಮಾಜಿಕ‌ ಜಾಲತಾಣಗಳಲ್ಲಿ ರಾಹುಲ್ ಗಾಂಧಿ ವಿರುದ್ಧ ಟೀಕೆಗಳ ಸುರಿಮಳೆಯೇ ಬರಲಾರಂಭಿಸಿತ್ತು. ಆದರೂ ನಾಯಿ ಬಾಲ ಡೊಂಕು ಎಂಬಂತೆ ರಾಹುಲ್ ಗಾಂಧಿ ಮತ್ತಷ್ಟು ಹೆಚ್ಚು ಟೀಕೆ ಮುಂದುವರಿಸಿದರು. ಆದರೆ ಇದ್ಯಾವುದಕ್ಕೂ ಕ್ಯಾರೇ ಅನ್ನದ ಮೋದಿ ಭಾರತವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದರು. ಆದರೆ ಇತ್ತೀಚೆಗೆ ಪ್ರಧಾನಿ ಮೋದಿ ಹೇಳಿದ ಒಂದೇ ಒಂದು ಹೇಳಿಕೆ ಇಡೀ ದೇಶದಲ್ಲೇ ಹೊಸ ಕೋಲಾಹಲ ಎಬ್ಬಿಸಿದೆ, ಕಾಂಗ್ರೆಸ್ ಪಾಳಯದಲ್ಲಿ ಸುಂಟರಗಾಳಿ ಎಬ್ಬಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅಂತೂ ಏನೂ ಮಾತನಾಡಲಾಗದೆ ವಿಲವಿಲ ಒದ್ದಾಡುತ್ತಿದ್ದಾರೆ. ಮೋದಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಭಿಯಾನವನ್ನೇ ಆರಂಭಿಸಿ ಮೋದಿ ವಿರೋಧಿಗಳ ಕಾಲೆಳೆಯುತ್ತಿದ್ದಾರೆ.!

ಹೌದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮಾತು ಯಾವ ರೀತಿ ಸಂಚಲನ ಸೃಷ್ಟಿಸುತ್ತಿದೆ ಎಂದರೆ ಅದು ಊಹಿಸಲು ಸಾಧ್ಯವಿಲ್ಲ. ಯಾಕೆಂದರೆ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಮಾತನಾಡುತ್ತಾ ಮೋದಿ, ತನಗೆ ರಾಹುಲ್ ಗಾಂಧಿ ಕಳ್ಳ ಎಂದು ಟೀಕೆ ಮಾಡುತ್ತಾರೆ, ಆದರೆ ನಿಜವಾದ ಕಳ್ಳ ರಾಹುಲ್‌ನ ಅಪ್ಪ ರಾಜೀವ್ ಗಾಂಧಿ ಎಂದು ಖಾರವಾಗಿ ತಿರುಗೇಟು ನೀಡಿದ್ದರು. ರಾಜೀವ್ ಗಾಂಧಿ ತನ್ನ ಆಡಳಿತದ ಅವಧಿಯಲ್ಲಿ ಕೇವಲ ತಮ್ಮ ಕುಟುಂಬದ ಸದಸ್ಯರಿಂದ ಮಾತ್ರ ” ಮಿಸ್ಟರ್ ಕ್ಲೀನ್” ಎಂದು ಕರೆಸಿಕೊಂಡಿದ್ದರು, ಆದರೆ ತಮ್ಮ ಕೊನೆಯ ಹೊತ್ತಿಗೆ ನಂ1 ಭ್ರಷ್ಟನಾಗಿ ಸಾಯುವಂತಾಗಿತ್ತು ಎಂದು ರಾಹುಲ್‌ಗೆ ತಿರುಗೇಟು ನೀಡಿದ್ದರು. ಮೋದಿ ಹೇಳಿದ ಈ ಒಂದು ಮಾತು ಯಾವ ರೀತಿ ದೇಶಾದ್ಯಂತ ಸಂಚಲನ ಮೂಡಿಸಿದೆ ಎಂದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಂತೂ ಕಕ್ಕಾಬಿಕ್ಕಿಯಾಗಿದ್ದಾರೆ. ಮೋದಿ ಈ ಮಟ್ಟದ ಹೇಳಿಕೆ ನೀಡುತ್ತಾರೆ ಎಂದು ಸ್ವತಃ ಯಾರೂ ಊಹಿಸಿರಲಿಲ್ಲ. ಯಾಕೆಂದರೆ ತಮ್ಮ ಮೇಲೆ ಎಷ್ಟೇ ಟೀಕೆ ಮಾಡಿದರು ಅದನ್ನು ಕ್ಯಾರೇ ಅನ್ನದ ಮೋದಿ ಏಕಾಏಕಿ ರಾಹುಲ್ ವಿರುದ್ಧ ಹರಿಹಾಯ್ದಿದ್ದರು. ಟ್ವಿಟರ್ ನಲ್ಲಿ ಅಂತೂ ಮೋದಿ ಹೇಳಿದ ಈ ಮಾತು ಹೊಸ ಟ್ರೆಂಡ್ ಆಗಿ ಮಾರ್ಪಟ್ಟಿತು. ರಾಜೀವ್ ಗಾಂಧಿ ಚೋರ್ ಹೈ – ರಾಹುಲ್ ನ ಅಪ್ಪ ಚೋರ್ ಹೈ ಎಂದು ಮೋದಿ ಅಭಿಮಾನಿಗಳು ಕಾಂಗ್ರೆಸಿಗರ ವಿರುದ್ಧ ಟೀಕೆ ಮಾಡಲು ಆರಂಭಿಸಿದರು.!

ಅಷ್ಟೇ ಅಲ್ಲದೆ ಕಾಂಗ್ರೆಸ್ ಈಗ ಮೋದಿ ಇಂತಹ ಹೇಳಿಕೆ ನೀಡಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದೆ, ಒಬ್ಬ ಮಾಜಿ ಪ್ರಧಾನಮಂತ್ರಿಗೆ ಈಗಿನ ಪ್ರಧಾನಿ ಈ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ ಎಂದರೆ ಮೋದಿಯ ಮನಸ್ಥಿತಿ ಏನು ಎಂಬುದನ್ನು ಸೂಚಿಸುತ್ತದೆ ಎಂದು ಕಾಂಗ್ರೆಸ್ ಮೋದಿಯನ್ನು ಟೀಕಿಸುತ್ತಿದೆ. ಆದರೆ ಕಾಂಗ್ರೆಸ್ ಈ ಮೊದಲು ಮೋದಿಯನ್ನು ಕಳ್ಳ ಎನ್ನುತ್ತಿದ್ದ ಕಾಂಗ್ರೆಸಿಗರು ಮೋದಿ ಇಂತಹ ಒಂದು ಹೇಳಿಕೆ ನೀಡುತ್ತಾರೆ ಎಂದು ಕನಸಲ್ಲೂ ಊಹಿಸಿರಲಿಲ್ಲ. ಇತ್ತ ರಾಹುಲ್‌ನ ಆರ್ಭಟ ಒಂದೇ ಬಾರಿಗೆ ಕಡಿಮೆಯಾಗಿದೆ. ಮೋದಿಯ ಈ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಕೋಲಾಹಲ ಎಬ್ಬಿಸಿದೆ. ಇತ್ತ ಬಿಜೆಪಿಗರು ಮೋದಿಯವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು ರಾಜೀವ್ ಗಾಂಧಿ ಬೋಫೋರ್ಸ್ ಹಗರಣದಲ್ಲಿ ಭಾಗಿಯಾಗಿದ್ದರು ಎಂದು ಹೇಳಿಕೊಂಡಿದೆ. ಅದೇನೇ ಇರಲಿ ಪ್ರಧಾನಿ ಮೋದಿಯವರ ಒಂದು ಮಾತು ದೇಶಾದ್ಯಂತ ಸಂಚಲನ ಮೂಡಿಸುತ್ತಿದೆ ಎಂದರೆ ಅವರ ಮಾತಿಗಿರುವ ಮೌಲ್ಯ ಏನೆಂಬುದನ್ನು ತಿಳಿಯಬಹುದು.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close