ದೇಶಪ್ರಚಲಿತ

ಎಚ್ಚರಿಕೆ!! ಯುಪಿಎ-3 ಮತ್ತೆ ಗದ್ದುಗೆ ಏರಿದರೆ ನಡೆಯುವುದು ಹಿಂದೂಗಳ ಮಾರಣ ಹೋಮ!! ಮತ್ತೊಮ್ಮೆ ದೇಶ ವಿಭಜನೆಯಾಗುವುದು ಖಚಿತ!!

2019 ರ ಲೋಕಸಭಾ ಚುನಾವಣೆಗೆ ಈಗಾಗಲೇ ರಣ ಕಹಳೆ ಮೊಳಗಿದೆ. ಮೋದಿಜಿಯನ್ನು ಹಣಿಯಲು ಕಾಂಗ್ರೆಸ್ ಶತಾಯ ಗತಾಯ ಪ್ರಯತ್ನಿಸುತ್ತಿದೆ. ಐವತ್ತು ವರುಷ ಅಧಿಕಾರದ ರುಚಿ ತಿಂದು, ಭಾರತದ ಬಡಜನರ ರಕ್ತ ಕುಡಿದು, ತಿಂದು ತೇಗಿ ಮೆರೆದ “ರಾಜ ಪರಿವಾರ” ಕಳೆದ ಬಾರಿಯ ಸೋಲಿಗೆ ಪ್ರತೀಕಾರವಾಗಿ ಹಿಂದಿಗಿಂತಲೂ ಹೆಚ್ಚು ಆಕ್ರಾಮಕ ರಣತಂತ್ರವನ್ನು ಹೆಣೆಯುತ್ತಿದೆ.

ಕಾಂಗ್ರೆಸ್ ಒಂದರಿಂದಲೇ ಮೋದಿಜಿಯವರನ್ನು ಸೋಲಿಸುವುದು ಅಸಾಧ್ಯವೆಂದು ಮನಗಂಡ “ರಾಜಮಾತೆ” ಮತ್ತವರ ಭಟ್ಟಂಗಿಗಳ ತಂಡ ದೇಶದ ಎಲ್ಲಾ ಠಕ್ಕ ಪಕ್ಷ ಗಳ ಕೈ ಕಾಲು ಹಿಡಿಯುತ್ತಿದೆ. ದೇಶವನ್ನು ಒಡೆಯುವ ಮತ್ತು ಹಿಂದೂಗಳ ಮಾರಣ ಹೋಮ ನಡೆಸುವ ಈ ಖದೀಮ ಪಕ್ಷ ಗಳೂ ಪುಂಗಿಯ ನಾದಕ್ಕೆ ತಲೆಯಾಡಿಸುವಂತ ಹಾವಿನಂತೆ “ರಾಜಮಾತೆ ಗೆ ಜೈ”, “ಯುವರಾಜನಿಗೆ ಜೈ”ಯೆನ್ನುತ್ತಾ ಬೂಟು ನೆಕ್ಕುತ್ತಿವೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯೂಪಿಎ-3 ಅನೈತಿಕ ಬಂಧನದೊಂದಿಗೆ ಮೋದಿಜೀ ಯನ್ನು ಹಣಿಯಲು ಈಗಾಗಲೇ ರಣತಂತ್ರ ರಚಿಸಲಾಗಿದೆ. ಒಂದು ವೇಳೆ ಮೋದಿಜೀ ಏನಾದರೂ ಸೋತು ಯೂಪಿಎ-3ನೇದಾರೂ ಅಧಿಕಾರಕ್ಕೆ ಬಂದರೆ, ನಿಶ್ಚಿತವಾಗಿಯೂ ಹಿಂದೂಗಳ ಮಾರಣ ಹೋಮ ನಡೆಯುವುದು. ಘೋರ ಹಿಂದೂ ವಿರೋಧೀ ಮೇಡಮ್ ಜೀ ತನ್ನ ಕಳೆದ ಬಾರಿಯ ಹೀನಾಯ ಸೋಲಿನ ಪ್ರತಿಶೋಧವನ್ನು ತೆಗೆದುಕೊಳ್ಳದೆ ಬಿಡಲಾರಳು.

ಆಕೆಯ ಜೊತೆಗೆ “ಕೆಂಪು ರಕ್ತ” ಪಿಪಾಸುಗಳು ಉಘೇ ಉಘೇ ಎನ್ನುತ್ತಾ ಆಕೆಯ ಪ್ರತಿಯೊಂದು ಅನೈತಿಕ ಕೆಲಸಗಳಲ್ಲೂ ಆಕೆಗೆ ಬೆಂಬಲವಾಗಿ ನಿಲ್ಲುವರು. ಹಲವಾರು ಶತಮಾನಗಳ ನಂತರ ದೇಶದ ಉದ್ದಗಲಗಳಲ್ಲಿ “ಹಿಂದೂ ರಾಷ್ಟ್ರವಾದದ” ಉದ್ಗೋಷವಾಗಿದೆ. ಗದ್ದುಗೆ ಏರುತ್ತಿದ್ದಂತೇ ಯೂಪಿಎ-3 ಮಾಡುವ ಮೊದಲ ಕೆಲಸವೇ ಹಿಂದೂ ರಾಷ್ಟ್ರವಾದದ ಕತ್ತು ಹಿಸುಕುವುದು ಮತ್ತು ದೇಶದೆಲ್ಲೆಡೆ ಸಾಂಪ್ರದಾಯಿಕ ದಂಗೆ ಎಬ್ಬಿಸಿ ಹಿಂದೂಗಳ ಮಾರಣ ಹೋಮ ನಡೆಸುವುದು.

ಈಗಾಗಲೇ ಬಿರುಕು ಬಿಟ್ಟಿರುವ ಮನಸುಗಳಲ್ಲಿ ಜಾತಿ ದ್ವೇಷದ ಕಿಚ್ಚನ್ನು ಇನ್ನಷ್ಟು ಹಚ್ಚಿ ದೇಶವನ್ನು ಮತ್ತೊಮ್ಮೆ ಜಾತಿಯ ಆಧಾರದ ಮೇಲೆ ವಿಭಾಜಿಸುವ ಕೆಲಸವನ್ನು ಯೂಪಿಎ-3 ಖಂಡಿತ ಮಾಡೇ ಮಾಡುತ್ತದೆ. ಯೂಪಿಎ-3 ಎಂಬ ಹಿಂದೂ ರಕ್ತ ಪಿಪಾಸು, ರಾಷ್ಟ್ರವಾದಿಗಳ ನೆತ್ತರು ಕುಡಿಯುವುದು ಖಚಿತ.

ತನ್ನ ವೈಚಾರಿಕ ಪ್ರತಿದ್ವಂದಿಯನ್ನು ಹಣಿಯಲು ‘ಹಿಂದೂ ವಿರೋಧಿ ಕಾನೂನು’ಗಳನ್ನು ಜಾರಿಗೆ ತಂದು ರಾಷ್ಟ್ರವಾದಿಗಳ ಬೆನ್ನು ಮೂಳೆಯನ್ನು ಮುರಿಯಲಾಗುವುದು. ಯೂಪಿಎ-3 ಅಧಿಕಾರಕ್ಕೆ ಬಂದರೆ, ಹಿಂದೂ ಪುನರುತ್ಥಾನವನ್ನು ಕಡಿಮೆ ಎಂದರೂ ಮುಂದಿನ ಎರಡು ದಶಕಗಳ ಕಾಲ ಮುನ್ನೆಲೆಗೆ ಬರಲು ಬಿಡಲಾರದು. ಹಿಂದೂಗಳೇ ಇಲ್ಲವೆಂದಾದಲ್ಲಿ ಹಿಂದುತ್ವದ ಪುನರುತ್ಥಾನವಾಗುವುದಾದರೂ ಹೇಗೆ!?

ಯೂಪಿಎ-1, ಯೂಪಿಎ-2 ರ ಆಡಳಿತಾವಧಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ಹತ್ತು ವರ್ಷಗಳ ಕಾಲ ಅದು ಹಿಂದುಗಳನ್ನು ನಡೆಸಿಕೊಂಡ ರೀತಿಯನ್ನು ನೆನಪಿಸಿಕೊಳ್ಳಿ. ಸ್ವಾಭಿಮಾನವಿರುವ ಯಾವೊಬ್ಬ ಹಿಂದುವೂ ಯೂಪಿಎಗೆ ಯಾವುದೇ ಕಾರಣಕ್ಕೂ ಮತ ನೀಡಲಾರ. ವಿಡಂಬನೆಯಂದರೆ ಹಿಂದೂಗಳು ಸ್ವಾಭಿಮಾನ ಶೂನ್ಯರು, ತನ್ನ ತಮ್ಮ-ತಂಗಿಯಂದರ ಮಾರಣ ಹೋಮಕ್ಕೆ ಕಾರಣರಾದವರನ್ನು ಮತ್ತೆ ಮತ್ತೆ ಗೆಲ್ಲಿಸಿ ಗದ್ದುಗೆಗೆ ಏರಿಸುತ್ತಿರುತ್ತಾರೆ. ತಮ್ಮವರ ಮಾರಣಹೋಮಕ್ಕೆ ತಾವೇ ಮುನ್ನುಡಿ ಬರೆಯುತ್ತಿರುತ್ತಾರೆ. ತನ್ನ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ತಂದ ತರಹೇವಾರಿ ಯೋಜನೆಗಳಾದ ಆರ್.ಟಿ.ಇ, ಎನ್.ಸಿ.ಎಮ್.ಇ.ಐ, ಪ್ರತ್ಯೇಕ ಅಲ್ಪಸಂಖ್ಯಾತ ಮಂತ್ರಾಲಯ, ಸಚ್ಚಾರ್ ಸಮಿತಿ, ಹಿಂದೂ ಮಂದಿರಗಳ ಸರಕಾರೀಕರಣ, ಇವೆಲ್ಲವೂ ಹಿಂದೂ ವಿರೋಧೀ ಯೋಜನೆಗಳು.

93 ನೇ ಸಾಂವಿಧಾನಿಕ ತಿದ್ದುಪಡಿಯಲ್ಲಿ ತಂದಂತಹ ಆರ್.ಟಿ.ಇ ಮತ್ತು ಎನ್.ಸಿ.ಎಮ್.ಇ.ಐ ಯೋಜನೆಗಳು ಶಿಕ್ಷಣ ಕ್ಷೇತ್ರವನ್ನು ನಖಶಿಖಾಂತ ಕಲುಷಿತಗೊಳಿಸಿ ಜಾತಿ-ಜಾತಿಗಳ ಮಧ್ಯೆ ತಂದಿಟ್ಟು ದೇಶ ವಿಭಾಜನೆ ನಡೆಸುವ ಹುನ್ನಾರಗಳಲ್ಲದೆ ಮತ್ತೇನಲ್ಲ. ಇನ್ನು 2010 ರಲ್ಲಿ ತಂದಂತಹ “ಶೈಕ್ಷಣಿಕ ನ್ಯಾಯಾಧಿಕರಣ ವಿಧೇಯಕ” ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳಿಗೆ ಸಂಪೂರ್ಣ ಸ್ವಾಯತ್ತೆ ಕೊಟ್ಟು, ಹಿಂದೂ ಶೈಕ್ಷಣಿಕ ಸಂಸ್ಥೆಗಳಿಗೆ ಮೂಗುದಾರ ಹಾಕುವ ಕಾನೂನಾಗಿತ್ತು. ಈಗಾಗಲೇ ದೇಶದಲ್ಲಿ ಅಸ್ತಿತ್ವದಲ್ಲಿರುವ ಪೇಟಾ ಮತ್ತು ಎನ್.ಜಿ.ಟಿ ಗಳು ಕೂಡಾ ಇಂಥವೇ ನ್ಯಾಯಾಧಿಕರಣ ಪ್ರಾಧಿಕಾರಗಳು. ಅವು ಯಾವ ರೀತಿ ಹಿಂದೂ ವಿರೋಧೀ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿವೆ ಎಂಬುದನ್ನು ಮತ್ತೊಮ್ಮೆ ಬಿಡಿಸಿ ಹೇಳಬೇಕಾಗಿಲ್ಲ.

ಇದೇ ತೆರನಾಗಿ ಯೂಪಿಎ ತಂದಂತಹ “ಹಿಂಸೆ ನಿರೋಧಕ ವಿಧೇಯಕ”, “ಮೂಢನಂಬಿಕೆ ವಿರೋಧೀ ಕಾನೂನು”, ಗೋ ಕಳ್ಳ ಸಾಗಣಿಕೆ ಮತ್ತು ಗೋಹತ್ಯೆಯನ್ನು ಪ್ರತಿಪಾದಿಸುವಂತಹ ” ಮಸೂಕಾ” ಕಾನೂನು ಇವೆಲ್ಲವೂ ಹಿಂದೂ ವಿರೋಧೀ ಕಾನೂನುಗಳೆ. ಅದೃಷ್ಟವಶಾತ್ ಕಳೆದ ಬಾರಿ ಈ ಎಲ್ಲಾ ಕಾನೂನುಗಳು ಸಂಸತ್ ನಿಂದ ಅನುಮೋದನೆಯನ್ನು ಪಡೆಯದೆ ಕಸದ ಬುಟ್ಟಿಗೆ ಸೇರಿವೆ.

ಆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯೂಪಿಎ-3 ಗದ್ದುಗೆ ಏರಿದರೆ ಈ ಎಲ್ಲಾ ಕಾನೂನುಗಳಿಗೆ ಮತ್ತೆ ಜೀವ ತುಂಬಿ ಹಿಂದಿಗಿಂತಲೂ ಹೆಚ್ಚು ಕಠೋರತಮ ಕಾನೂನುಗಳನ್ನು ತಂದು “ರಾಷ್ಟ್ರವಾದಿ”ಗಳ ಸಾಮೂಹಿಕ ಶ್ಮಶಾನ ಯಾತ್ರೆಯನ್ನು ನಡೆಸುವುದು ಎಚ್ಚರಿಕೆ. ಹಿಂದೂವಾದಿ “ಸಂಘಟನೆ”ಗಳನ್ನು ಹತ್ತಿಕ್ಕಲೆಂದೇ ಹಿಂಸೆ ನಿರೋಧಕ ವಿಧೇಯಕವನ್ನು ತರುವ ಪ್ರಯತ್ನವನ್ನು ಮಾಡಲಾಗಿತ್ತು ಎನ್ನುವುದು ನಿಮಗೆ ತಿಳಿದಿರಲಿ. ಮುಂದಿನ ಬಾರಿ ಮತ ಚಲಾಯಿಸುವಾಗ ಈ ಎಲ್ಲಾ ಅಂಶಗಳನ್ನೊಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಕೈಯಾರೆ ನಿಮ್ಮ ಶವಯಾತ್ರೆ ನಡೆಸುವ “ಭಾಗ್ಯ” ಬೇಕೆಂದಾದಲ್ಲಿ ದೇಶ ದ್ರೋಹಿಗಳಿಗೆ ಮತ ನೀಡಿ.

ರಾಷ್ಟ್ರವೇ ಪ್ರಥಮವೆನ್ನುವ ರಾಷ್ಟ್ರವಾದಿಗಳೇ, ರಾಷ್ಟ್ರದ ಅಸ್ತಿತ್ವಕ್ಕೇ ಕುಂದು ತರುವಂತಹ ರಾಷ್ಟ್ರದ್ರೋಹಿಗಳನ್ನು ಗದ್ದುಗೆಗೆ ಏರಲು ಬಿಡದಿರಿ. ಮುಂಬರುವ ಚುನಾವಣೆಗಳು ಮೋದಿಜಿಯವರಿಗೆ ಅಗ್ನಿಪರೀಕ್ಷೆಯಲ್ಲ ಬದಲಾಗಿ ನಮಗೆಲ್ಲರಿಗೂ ಪರೀಕ್ಷೆಯ ಸಮಯ. ಈ ಪರೀಕ್ಷೆಯಲ್ಲಿ “ನಾವು” ಗೆದ್ದರೆ ಮಾತ್ರ ಮೋದಿಜಿ ಯವರು ಗೆಲ್ಲುವರು. ಮೋದಿಜೀ ಗೆದ್ದರೆ ಮಾತ್ರ ದೇಶ ಗೆಲ್ಲುವುದು. ಹಿಂದುತ್ವದ ಉಳಿವಿಗಾಗಿ, ದೇಶದ ಸುರಕ್ಷತೆಗಾಗಿ ದೇಶ ದ್ರೋಹಿಗಳನ್ನು ಗದ್ದುಗೆ ಏರಲು ಬಿಡದಿರಿ. ಹಿಂದೂ ರಾಷ್ಟವಾದಕ್ಕೆ ಜೀವ ತುಂಬಿ ವಿವೇಕಾನಂದರ ಹಿಂದೂ ಪುನರುತ್ಥಾನದ ಕನಸನ್ನು ನನಸಾಗಿಸಿ….

ಭಾರತ ಮಾತೆಗೆ ಜಯವಾಗಲಿ…ಹಿಂದುತ್ವಕ್ಕೆ ಜಯವಾಗಲಿ…

ಶನ್ನು

Tags

Related Articles

Close