ಕ್ರೀಡೆಪ್ರಚಲಿತ

ಕೂಲ್ ಕ್ಯಾಪ್ಟನ್ ಬೆನ್ನಿಗೆ ನಿಂತ ಬಿಸಿಸಿಐ.! ದೇಶಪ್ರೇಮಿಗಳ ಒತ್ತಡಕ್ಕೆ ಮಣಿದು ಮತ್ತೆ ಗ್ಲೌಸ್ ಧರಿಸುತ್ತಾರಂತೆ ಗೇಮ್ ಫಿನಿಷರ್.!

ದೇಶಪ್ರೇಮ ಹೊಂದಿರುವ ಪ್ರತಿಯೊಬ್ಬ ದೇಶಭಕ್ತನೂ ಒಂದಲ್ಲ ಒಂದು ರೀತಿಯಲ್ಲಿ ದೇಶಪ್ರೇಮ‌ ಮೆರೆಯುತ್ತಾನೆ ಎಂಬುದಕ್ಕೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ತಂಡದ ಸಮರ್ಥ ನಾಯಕ, ಹೊಸ ಹೊಸ ದಾಖಲೆಗಳನ್ನು ನಿರ್ಮಿಸಿ ಕ್ರಿಕೆಟ್ ಜಗತ್ತಿನಲ್ಲೇ ಕ್ಯಾಪ್ಟನ್ ಕೂಲ್ ಎಂಬ ಬಿರುದು ಪಡೆದ ಮಹೇಂದ್ರ ಸಿಂಗ್ ಧೋನಿ, ಅದೆಷ್ಟೋ ಬಾರಿ ದೇಶಪ್ರೇಮ ಪ್ರದರ್ಶಿಸಿದ್ದಾರೆ. ಧೋನಿ ತನ್ನ ಕ್ರಿಕೆಟ್ ಜೀವನದಲ್ಲಿ ಯಾವ ರೀತಿ ಇತರರಿಗೆ ಮಾದರಿಯಾಗಿದ್ದಾರೋ ಅದೇ ರೀತಿ ತಮ್ಮ ದೇಶಪ್ರೇಮದ ವಿಚಾರದಲ್ಲೂ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗದು. ಇದೀಗ ಹೊಸ ಸುದ್ಧಿಯಲ್ಲಿರುವ ಎಮ್ ಎಸ್ ಧೋನಿ, ಈ ಬಾರಿಯ ವಿಶ್ವಕಪ್‌ ಪಂದ್ಯಾವಳಿಯ ಮೊದಲ ಪಂದ್ಯದಲ್ಲೇ ಮತ್ತೊಮ್ಮೆ ದೇಶಪ್ರೇಮ ಪ್ರದರ್ಶಿಸಿದ್ದಾರೆ. ತಮ್ಮ ಆಟದ ಸಂದರ್ಭದಲ್ಲಿ ವಿಕೆಟ್ ಕೀಪರ್ ಆಗಿ ಉಪಯೋಗಿಸುವ ಗ್ಲೌಸ್‌ನಲ್ಲಿ ಭಾರತೀಯ ಸೇನೆಯ ಸ್ಪೆಷಲ್ ಫ್ಯಾರಾ ಫೋರ್ಸ್‌ನ ಚಿಹ್ನೆ ಬಳಸಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ ಎಮ್ ಎಸ್ ಧೋನಿ.!

ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವೆ ನಡೆದ ಮೊದಲ ಪಂದ್ಯದಲ್ಲಿ ಧೋನಿ ತಮ್ಮ ವಿಕೆಟ್ ಕೀಪಿಂಗ್ ವೇಳೆ ಬಳಸಿದ ಗ್ಲೌಸ್‌ನಲ್ಲಿ ಭಾರತೀಯ ಸೇನೆಯ ಸ್ಪೆಷಲ್ ಫ್ಯಾರಾ ಫೋರ್ಸ್‌ನ ಚಿಹ್ನೆ ಇರುವ ಗ್ಲೌಸ್ ಬಳಸಿದ್ದು, ಸದ್ಯ ದೇಶಾದ್ಯಂತ ಭಾರೀ ಸದ್ದು ಮಾಡಿದೆ. ಯಾಕೆಂದರೆ ಒಂದೆಡೆ ಧೋನಿ ಈ ರೀತಿಯ ಗ್ಲೌಸ್ ಬಳಸಿದ್ದು ವಿವಾದ ಉಂಟು ಮಾಡಿದೆ ಎಂದು ಐಸಿಸಿ ಸಂಸ್ಥೆ ಬಿಸಿಸಿಐ’ಗೆ ಸೂಚಿಸಿದ್ದು, ಮುಂದಿನ ಪಂದ್ಯಗಳಲ್ಲಿ ಈ ರೀತಿಯ ಗ್ಲೌಸ್ ಬಳಸದಂತೆ ಸೂಚಿಸಿದೆ. ಆದರೆ ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ಪರ ಭಾರೀ ಬೆಂಬಲ ವ್ಯಕ್ತವಾಗಿದ್ದು, ಧೋನಿ ಮತ್ತೊಮ್ಮೆ ದೇಶಪ್ರೇಮ ಪ್ರದರ್ಶಿಸಿದ್ದಾರೆ ಎಂದು ಭಾರೀ ಬೆಂಬಲ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ ಬಿಸಿಸಿಐ ಕೂಡ ಧೋನಿ ಪರ ಬ್ಯಾಟಿಂಗ್ ಮಾಡಿದ್ದು, ಭಾರತೀಯ ಕ್ರಿಕೆಟ್ ತಂಡದ ಆಟಗಾರನಾಗಿ ಭಾರತೀಯ ಸೇನೆಗೆ ಸಂಬಂಧಿಸಿದ ಚಿಹ್ನೆ ಬಳಸಿರುವುದು ತಪ್ಪಲ್ಲ, ಮಾತ್ರವಲ್ಲದೆ ಕ್ರಿಕೆಟ್ ನಿಯಮದ ಪ್ರಕಾರ ಕೂಡ ಇದು ತಪ್ಪಲ್ಲ ಎಂದು ಸ್ಪಷ್ಟಪಡಿಸಿದೆ.!

ಎಮ್ ಎಸ್ ಧೋನಿ ಕೇವಲ ಒಬ್ಬ ಕ್ರಿಕೆಟ್ ಆಟಗಾರ ಮಾತ್ರವಲ್ಲದೆ ಸೇನೆಗೆ ಕೂಡ ಸೇರಿದ್ದಾರೆ. ಈ ಹಿಂದೆ ಪಂದ್ಯದ ಮಧ್ಯೆ ಧೋನಿ ಅಭಿಮಾನಿಯೋರ್ವ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಮೈದಾನದೊಳಕ್ಕೆ ಬಂದು ಧೋನಿಯ ಕಾಲಿಗೆ ಬಿದ್ದು ನಮಸ್ಕರಿಸಿ ತಮ್ಮ ಅಭಿಮಾನ ವ್ಯಕ್ತಪಡಿಸಿದ ಸಂದರ್ಭದಲ್ಲಿ ಅಭಿಮಾನಿಯ ಕೈಯಲ್ಲಿದ್ದ ಧ್ವಜ ನೆಲಕ್ಕೆ ಬೀಳುವ ಸಂದರ್ಭದಲ್ಲಿ ತಕ್ಷಣ ಧ್ವಜ ಎತ್ತಿಕೊಂಡ‌ ಧೋನಿ ಧ್ವಜವನ್ನು ಕೆಳಗೆ ಬೀಳದಂತೆ ನೋಡಿಕೊಂಡಿದ್ದರು. ಧೋನಿಯ ಈ ನಡವಳಿಕೆ ದೇಶಾದ್ಯಂತ ಭಾರೀ ಪ್ರಶಂಸೆಗೆ ಪಾತ್ರವಾಗಿತ್ತು. ಧೋನಿ ಈ ಹಿಂದೆ ಅನೇಕ ಬಾರಿ ಇಂತಹ ದೇಶಪ್ರೇಮದ ಘಟನೆಗಳಿಗೆ ಸಾಕ್ಷಿಯಾಗಿದ್ದು, ಈ ಬಾರಿ ಹೊಸ ರೀತಿಯಲ್ಲಿ ಸುದ್ಧಿಯಾಗಿದ್ದಾರೆ. ಧೋನಿಯವರ ಈ ಕಾರ್ಯಕ್ಕೆ ಐಸಿಸಿಐ ವಿರೋಧ ವ್ಯಕ್ತಪಡಿಸಿದಾಗ ಸ್ವತಃ ಮಾಜಿ ಸೈನಿಕರೋರ್ವರು ಬೆಂಬಲ ನೀಡಿದ್ದು, ಸೇನೆಯಲ್ಲಿ ಇಂತಹ ನಿಯಮಗಳು ಇಲ್ಲ ಎಂದು ಹೇಳಿಕೊಂಡಿದ್ದಾರೆ.!

ಅದೇನೇ ಇರಲಿ, ಧೋನಿಯವರ ಈ ನಡೆ ನಿಜಕ್ಕೂ ಅಚ್ಚರಿಯಾದರೂ ಕೂಡ ದೇಶಭಕ್ತಿ ಪ್ರದರ್ಶಿಸಿದ್ದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close