ಪ್ರಚಲಿತ

ಅಡ್ವಾಣಿ ಬಳಿ ಮೋದಿಯವರನ್ನು ಟೈಗರ್ ಎಂದಿದ್ದರು ಬಾಳಾ ಠಾಕ್ರೆ.! ಮೋದಿಯನ್ನು ಅಧಿಕಾರದಿಂದ ಇಳಿಸಿದಂತೆ ಅಂದೇ ಸೂಚಿಸಿದ್ದ ಹಿಂದೂ ಹುಲಿ.!

ದೊಂದು ಕಾಲವಿತ್ತು. ಬಾಳಾ ಠಾಕ್ರೆ ಎಂದರೆ ಸಾಕು ಹಿಂದೂ ವಿರೋಧಿಗಳ ಮೈನಲ್ಲಿ ನಡುಕ ಉಂಟಾಗುತ್ತಿತ್ತು. ಸರ್ಕಾರ ಇಲ್ಲದಿದ್ದರೂ ಮಹಾರಾಷ್ಟ್ರವನ್ನು ತನ್ನದೇ ಶೈಲಿಯಲ್ಲಿ ಮುನ್ನಡೆಸಿಕೊಂಡು ಅಬಲರಿಗೆ ಊರುಗೋಲಾಗಿದ್ದರು ಠಾಕ್ರೆಯವರು. ಇವರ ಒಂದು ಮಾತು ದೇಶದಲ್ಲಿ ಸಂಚಲನವನ್ನೇ ಮೂಡಿಸುತ್ತಿತ್ತು. ಇವರೇ ಹುಟ್ಟುಹಾಕಿದ್ದ ಶಿವಸೇನೆಯನ್ನು ಭಾರತೀಯ ಜನತಾ ಪಕ್ಷದೊಂದಿಗೆ ಅನ್ಯೋನ್ಯವಾಗಿ ಕೊಂಡೊಯ್ಯುತ್ತಿದ್ದರು. ಒಂದು ದಿನ ಇವರು ಕೊನೆಯುಸಿರೆಳೆದಾಗ ಸೇರಿದ್ದ ಜನಸ್ತೋಮ ಇವರ ಮೇಲಿದ್ದ ಅಭಿಮಾನ ಹಾಗೂ ಭಕ್ತಿಯನ್ನು ಜಗತ್ತಿಗೆ ಸಾರಿತ್ತು. ಬಾಳಾ ಕೇಶವ ಠಾಕ್ರೆ ಅಮರರಾಗಿದ್ದರು.

ಆದರೆ ಅವರು ಹುಟ್ಟುಹಾಕಿದ್ದ ಕನಸು ಮಾತ್ರ ಕನಸಾಗಿಯೇ ಉಳಿದಿತ್ತು. “ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಶೀವಸೇನೆ ಅಧಿಕಾರಕ್ಕೆ ಬರುವವರೆಗೆ ತಾನು ಗಡ್ಡ ತೆಗೆಯೋದಿಲ್ಲ” ಎಂದಿದ್ದರು ಠಾಕ್ರೆಯವರು. ಆದರೆ ಈ ಕನಸು ನನಸಾಗುವ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದರು. ನಂತರ ನಡೆದಿದ್ದೇ ರಾಜಕೀಯ ಮೇಲಾಟಗಳು. ಕೇಂದ್ರದಲ್ಲಿ ಮೋದಿ ಸರ್ಕಾರ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನಾ ಮೈತ್ರಿ ಸರ್ಕಾರವೇನೂ ಬಂತು. ಆದರೆ ಮೋದಿಯವರ ವೇಗದ ಆಡಳಿತವನ್ನು ಕಂಡು ಮೂಕವಿಸ್ಮಿತರಾಗಿದ್ದ ಶಿವಸೇನೆಯ ನಾಯಕರು ಪ್ರಧಾನಿ ಮೋದಿಯವರನ್ನು ಹೆಜ್ಜೆ ಹೆಜ್ಜೆಗೂ ಟೀಕಿಸಲು ಆರಂಭಿಸಿದರು. ಬಿಜೆಪಿಯೊಂದಿಗೆ ಪಾಲು ಹೊಂದಿದ್ದರೂ ಪ್ರಧಾನಿ ಮೋದಿಯವರನ್ನು ಟೀಕಿಸುತ್ತಲೇ ಬರುತ್ತಿದ್ದಾರೆ ಶಿವಸೇನೆಯ ಮುಖಂಡ ಉದ್ದವ್ ಠಾಕ್ರೆ.

Image result for modi and uddhav thackeray

ಆದರೆ ಬಾಳಾ ಠಾಕ್ರೆಯವರು ಒಂದು ಕಾಲದಲ್ಲಿ ಪ್ರಬಲವಾಗಿ ಮೋದಿಯವರನ್ನು ಬೆಂಬಲಿಸಿದ್ದರು. ಗುಜರಾತ್ ದಂಗೆಯ ಸಂದರ್ಭದಲ್ಲಿ ಮೋದಿಯವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸಬೇಕು ಎನ್ನುವ ಚಿಂತನೆಯನ್ನು ಭಾರತೀಯ ಜನತಾ ಪಕ್ಷದ ನಾಯಕರು ಮಾಡುತ್ತಿದ್ದರು. ಈ ವೇಳೆ ಕೂಡಲೇ ಬಾಳಾ ಠಾಕ್ರೆಯವರು ಬಿಜೆಪಿ ಭೀಷ್ಮ ಅಡ್ವಾಣಿಯವರನ್ನು ಭೇಟಿ ಮಾಡಿ ಮೋದಿ ಬಗ್ಗೆ ಮಾತನಾಡುತ್ತಾರೆ. “ಮೋದಿಯವರ ಬಗ್ಗೆ ಯಾವ ನಿರ್ಧಾರ ಕೈಗೊಂಡಿದ್ದೀರಿ?” ಎಂದು ಠಾಕ್ರೆ ಪ್ರಶ್ನಿಸುತ್ತಾರೆ. ಇದಕ್ಕೆ ಮರುತ್ತರಿಸಿದ ಅಡ್ವಾಣಿ “ಈ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ” ಎಂದು ಉತ್ತರಿಸುತ್ತಾರೆ. ಆ ಕೂಡಲೇ ಅಡ್ವಾಣಿಯವರಿಗೆ ಠಾಕ್ರೆಯವರು ಸಲಹೆ ನೀಡುತ್ತಾರೆ. “ಯಾವುದೇ ಕಾರಣಕ್ಕೂ ಮೋದಿಯವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸಬೇಡಿ. ಮೋದಿಯವರನ್ನು ಕುರ್ಚಿಯಿಂದ ಇಳಿಸಿದರೆ ನಾಳೆ ಗುಜರಾತ್ ಇರುವುದಿಲ್ಲ. ಮೋದಿ ಇಲ್ಲದೆ ಗುಜರಾತ್ ಇಲ್ಲ. ಅವರೋರ್ವ ಟೈಗರ್” ಎಂದು ಹೇಳುತ್ತಾರೆ.

Image result for advani with bala takraye

ಮೋದಿಯವರ ಬಗ್ಗೆ ದೂರದೃಷ್ಟಿ ಇಟ್ಟುಕೊಂಡಿದ್ದ ಠಾಕ್ರೆಯವರು ಅಂದು ಉತ್ತಮ ಸಲಹೆಯನ್ನೇ ನೀಡಿದ್ದರು. ಇಂದು ಮೋದಿಯವರನ್ನು ರಾಷ್ಟ್ರವೇ ಮೆಚ್ಚಿಕೊಂಡಿದೆ. ಆದರೆ ಶಿವಸೇನೆಯ ನಾಯಕರು ತಮಗೆ ಅಧಿಕಾರ ನಡೆಸಲು ಕಷ್ಟವಾಗುತ್ತಿದೆ ಎಂಬ ನೆಪವೊಡ್ಡಿ ಮೋದಿಯವರನ್ನು ವಿನಾಕಾರಣ ಟೀಕಿಸುತ್ತಿದ್ದಾರೆ. ಅದಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶಿವಸೇನೆಗೆ ಪರೋಕ್ಷ ಎಚ್ಚರಿಕೆಯನ್ನು ನೀಡಿದ್ದು ನಮ್ಮೊಂದಿಗೆ ಇರುವಷ್ಟು ದಿನ ಮಾತ್ರ ನಿಮಗೆ ಬೆಲೆ, ನಮ್ಮನ್ನು ಬಿಟ್ಟು ಎದುರಿಸಿ ಎಂದು ಸವಾಲು ಹಾಕಿದ್ದರು. ಮಾತ್ರವಲ್ಲದೆ ಕೆಲವೊಮ್ಮೆ ಉದ್ದವ್ ಠಾಕ್ರೆಯ ರಾಹುಲ್ ಗಾಂಧಿ ಪ್ರೇಮವೂ ಬಿಜೆಪಿಗೆ ಸಿಟ್ಟು ತರಿಸುತ್ತಿದ್ದು ಶಿವಸೇನೆಯನ್ನು ದೂರವಿಡಲು ಬಿಜೆಪಿ ಚಿಂತಿಸುತ್ತಿದೆ. ಇಂದು ಮೋದಿಯವರನ್ನು ವಿನಾಕಾರಣ ನಿಂದಿಸುತ್ತಿರುವ ಶಿವಸೇನೆಯ ನಾಯಕರು ಠಾಕ್ರೆಯವರು ಹೇಳಿರುವ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡರೆ ಮತ್ತೆ ಮೈತ್ರಿ ಹಾದಿ ಸುಗಮವಾದೀತು.

-Sunil panapila

Tags

Related Articles

FOR DAILY ALERTS
 
FOR DAILY ALERTS
 
Close