ಪ್ರಚಲಿತ

ವಿಶ್ವ ದಾಖಲೆ ಸೃಷ್ಟಿಸಿದ ಆಯುಷ್ಮಾನ್ ಭಾರತ ಯೋಜನೆಯಲ್ಲಿ ನಿರ್ಮಾಣವಾಗಲಿದೆ ಮತ್ತೊಂದು ದಾಖಲೆ! ಉದ್ಯೋಗ ಸಹಿತ ಅನೇಕ ಜನೋಪಕಾರಿ ಯೋಜನೆಯಾಗಲಿದೆ ಆಯುಷ್ಮಾನ್ ಭಾರತ!

ಮೋದೀಜೀ ಪ್ರಧಾನಮಂತ್ರಿಯಾದಂದಿನಿಂದ, ಅವರು ವಿವಿಧ ಅಭಿವೃದ್ಧಿಯ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ. ಅದು ಜನರ ಜೀವನದಲ್ಲಿ ಪ್ರಮುಖ ಧನಾತ್ಮಕ ಬದಲಾವಣೆಗಳನ್ನು ತಂದಿದೆ. ನೋಟ್ ಬ್ಯಾನ್ ಹಾಗೂ ಜಿಎಸ್‍ಟಿಯಂತಹ ಮಹತ್ವದ ಆದೇಶಗಳನ್ನು ಜಾರಿಗೊಳಿಸಿದ ಮೋದಿ ಸರ್ಕಾರದ ಮೇಲೆ ಭರವಸೆಯ ಮಹಾಪೂರವನ್ನೇ ಜನತೆ ಇಟ್ಟುಕೊಂಡಿದ್ದಾರೆ!! ಜನತೆಯ ಭರವಸೆಯನ್ನು ಮೋದಿಜೀ ಯಾವತ್ತೂ ಹುಸಿ ಮಾಡಿಲ್ಲ…

ಮುದ್ರ, ಗ್ರಾಮೀಣ ವಿದ್ಯುದೀಕರಣ, ಉಜ್ವಲ ಯೋಜನೆ ಹೀಗೆ ಹತ್ತು ಹಲವಾರು ಯೋಜನೆಗಳು ಕೋಟಿಗಟ್ಟಲೆ ಜನರಿಗೆ ನೇರ ಪ್ರಯೋಜನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಇದನ್ನು ಹುಸಿ ಮಾಡದ ಮೋದಿ ಸರ್ಕಾರ ಭಾರೀ ಘೋಷಣೆಗಳನ್ನೇ ಬಜೆಟ್‍ನಲ್ಲಿ ಜನತೆಗೆ ಘೋಷಿಸಿತ್ತು!! ಅಂದುಕೊಂಡಂತೆಯೇ ಮೋದಿ ಸರ್ಕಾರ ಇದೀಗ ಜನರ ಆಶೋತ್ತರಗಳನ್ನು ಈಡೇರಿಸುತ್ತಿದೆ!!

ಅದೆಷ್ಟೋ ಕಡೆಗಳಲ್ಲಿ ಬಡ ಜನರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅತಿಯಾದ ಆರೋಗ್ಯ ಸಮಸ್ಯೆಯಿಂದ ದಿಕ್ಕೇ ತೋಚದೆ ಭಿಕ್ಷೆ ಬೇಡುವ ಸ್ಥಿತಿಯನ್ನೂ ತಲುಪುವ ಸನ್ನಿವೇಶಗಳನ್ನು ನಾವು ನೋಡುತ್ತಿರುತ್ತೇವೆ. ದುಬಾರಿಯಾಗುತ್ತಿರುವ ಆಸ್ಪತ್ರೆಗಳ ಬಿಲ್‍ಗಳಿಂದ ಅದೆಷ್ಟೋ ಜೀವಗಳು ತಮ್ಮ ಜೀವವನ್ನೇ ಕಳೆದುಕೊಂಡಿದ್ದರು. ಸರ್ಕಾರ ಅದೆಷ್ಟು ಪ್ರಯತ್ನ ಪಡುತ್ತಿದ್ದರೂ ಸಹ ಈ ಸಮಸ್ಯೆಯಿಂದ ಮುಕ್ತಿ ಕಂಡುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನರೇಂದ್ರ ಮೋದಿ ಸರ್ಕಾರ ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆಯನ್ನೇ ಇಟ್ಟಿದೆ. ಯಾರೂ ನಿರೀಕ್ಷಿಸದಂತೆ ಅತಿ ದೊಡ್ಡ ಯೋಜನೆಯನ್ನು ಮೋದಿ ಸರ್ಕಾರ ಜಾರಿಗೊಳಿಸಿದ್ದು, ಬಡವರ ಪಾಲಿಗೆ ಭಾರೀ ಕೊಡುಗೆಯನ್ನೇ ನೀಡಿದ್ದಾರೆ.

Image result for modi ayushman scheme

ಒಂದು ಕುಟುಂಬಕ್ಕೆ ಬರೋಬ್ಬರಿ 5 ಲಕ್ಷ ರೂಪಾಯಿಗಳ ಉಚಿತ ಆರೋಗ್ಯ ಸೇವೆಯನ್ನು ಘೋಷಿಸಿದ್ದು, ಆ ಕುಟುಂಬದಲ್ಲಿ ಯಾವುದೇ ಅನಾರೋಗ್ಯ ಸಮಸ್ಯೆಗೆ ಯಾವುದೇ ಆಸ್ಪತ್ರೆಯಲ್ಲೂ 5 ಲಕ್ಷದವರೆಗಿನ ಚಿಕಿತ್ಸಾ ವೆಚ್ಚ ಉಚಿತವಾಗಿ ದೊರೆಯಲಿದೆ. ಈ ಯೋಜನೆ ಭಾರತದ 10 ಕೋಟಿ ಕುಟುಂಬಗಳಿಗೆ ತಲುಪಲಿದ್ದು, ಬರೋಬ್ಬರಿ 50 ಕೋಟಿ ಜನರು, ಅಂದರೆ ಭಾರತದಲ್ಲಿ ವಾಸವಿರುವ ಅರ್ಧದಷ್ಟು ಜನರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ.

10 ಕೋಟಿ ಕುಟುಂಬಗಳಿಗೆ ಈ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಭಾರತದ ಯಾವುದೇ ಕುಟುಂಬವೂ ಆರೋಗ್ಯದ ತೊಂದರೆಯಿಂದ ಹಣದ ಸಮಸ್ಯೆಯನ್ನು ಎದುರಿಸಬಾರದು ಎಂಬ ಆಶೋತ್ತರವನ್ನು ಮೋದಿ ಸರ್ಕಾರ ಈಡೇರಿಸಿದೆ ಎಂದು ಹೇಳಬಹುದು!! ಇಷ್ಟೆಲ್ಲಾ ಭಾರತ ಅಭಿವೃದ್ಧಿ ಪಡಿಸುತ್ತಿರ ನಮ್ಮ ಪ್ರಧಾನಿ ಮೋದಿಗೆ ವಿರೋಧಿಗಳು ಮೋದಿಜೀ ಯಾವುದೇ ಉದ್ಯೋಗ ಸೃಷ್ಟಿಸಿಲ್ಲ ಎಂಬ ಮಾತನ್ನು ಹೇಳುತ್ತಿದ್ದಾರೆ!! ಮೋದಿ ಪ್ರಧಾನಿಯಾದ ಬಳಿಕ ಜನರಿಗೆ ಯಾವುದೇ ಉದ್ಯೋಗ ದೊರಕಿಸಿಕೊಟ್ಟಿಲ್ಲ ಎಂದು ಹೇಳುವವರಿಗೆ ಪ್ರಧಾನಿ ಮೋದಿ ಸರಕಾರ ಈಗಾಗಲೇ ಅಂಕಿಅಂಶಗಳ ಸಮೇತ ವಿರೋಧಿಗಳ ಬಾಯಿ ಮುಚ್ಚಿಸುತ್ತನೇ ಬರುತ್ತಿದ್ದಾರೆ!!

ಆಯುಷ್ಮಾನ್  ಭಾರತ್  ಯೋಜನೆಯಿಂದ 10 ಸಾವಿರ ಉದ್ಯೋಗ ಸೃಷ್ಠಿ!!

ವಿಶ್ವದ ಬೃಹತ್ ಯೋಜನೆಯೆಂದೇ ಖ್ಯಾತಿಯಾಗಿರುವ ಆಯುಷ್ಮಾನ್ ಭಾರತ್ ಯೋಜನೆಯಿಂದ ದೇಶದ ಸುಮಾರು 10 ಕುಟುಂಬಗಳ 50 ಕೋಟಿ ಜನರು ವಾರ್ಷಿಕ 5 ಲಕ್ಷ ರೂಪಾಯಿಗಳ ವರೆಗೆ ಚಿಕಿತ್ಸೆಗೆ ಆಗಸ್ಟ್ 15ರಂದು ದೇಶದ 28 ರಾಜ್ಯಗಳಲ್ಲಿ ಯೋಜನೆಗೆ ಚಾಲನೆ ನೀಡಲಾಗುತ್ತದೆ!! ಅದಲ್ಲದೆ ಈ ಯೋಜನೆಯು ಕೇವಲ ಬಡವರಿಗೆ ಆರೋಗ್ಯ ಭದ್ರತೆ ಮಾತ್ರವಲ್ಲ, ದೇಶಾದ್ಯಂತ 10 ಸಾವಿರ ಉದ್ಯೋಗ ಸೃಷ್ಟಿಸಲಿದೆ. ಅಲ್ಲದೆ ಯೋಜನೆಯನ್ವಯ ಸೌಲಭ್ಯ ಪಡೆಯಲು ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ನೆರವಾಗಲು ಸುಮಾರು ಒಂದು ಲಕ್ಷ ಆಯುಷ್ಮಾನ್ ನೌಕರರನ್ನು ನೇಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ!!

Image result for modi ayushman scheme

ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಹಲವಾರು ಯೋಜನೆಗಳನ್ನು ತಂದಿದ್ದು ಅದರಲ್ಲಿ ಅದೆಷ್ಟೋ ಜನರಿಗೆ ಉದ್ಯೋಗ ಕೂಡಾ ಸೃಷ್ಟಿಯಾಗಿದೆ!! ಇತ್ತೀಚೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಅಂಕಿಅಂಶಗಳ ಸಮೇತ ಕೇವಲ ಸಾರಿಗೆ ಇಲಾಖೆಯಲ್ಲಿ 1 ಕೋಟಿ ಉದ್ಯೋಗ ಸೃಷ್ಠಿಯಾದ ಮಾಹಿತಿಯನ್ನು ಅಂಕಿಅಂಶಗಳ ಸಮೇತ ಬಿಚ್ಚಿಟ್ಟು ವಿರೋಧಿಗಳಿಗೆ ಕಪಾಳಮೋಕ್ಷ ಮಾಡಿದ್ದರು!! ಅದಲ್ಲದೆ ಇತ್ತೀಚೆಗೆ ಉತ್ತರಪ್ರದೇಶದ ನೋಯ್ಡಾದಲ್ಲಿ ಜಗತ್ತಿನ ಅತೀದೊಡ್ಡ ಸ್ಯಾಮ್‍ಸಂಗ್ ಸ್ಮಾರ್ಟ್‍ಫೋನ್ ಮೊಬೈಲ್ ಕಂಪನಿಯೊಂದರಲ್ಲೇ 70,000 ಉದ್ಯೋಗ ಸೃಷ್ಟಿ ಮಾಡಿದ್ದು ನಮ್ಮ ಮೋದಿ ಸರಕಾರ ಅಂತಾ ಹೇಳೋಕೆ ಹೆಮ್ಮೆ ಅನಿಸುತ್ತೆ!!

ಈವರೆಗೂ ಮೇಡ್ ಇನ್ ಚೈನಾ, ಮೇಡ್ ಇನ್ ಜಪಾನ್ ಎಂದೆಲ್ಲಾ ಉತ್ತಮ ಉತ್ಪಾದನೆಯನ್ನು ಕಂಡು ಬೇಸರಿಸುತ್ತಿದ್ದ ಭಾರತೀಯರು ಇನ್ನು ಮುಂದೆ “ಮೇಡ್ ಇನ್ ಇಂಡಿಯಾ” ಎಂಬ ಉತ್ತಮ ಉತ್ಪನ್ನವನ್ನು ಉಪಯೋಗಿಸಲಿದ್ದಾರೆ. ನೋಯ್ಡಾದಲ್ಲಿ ಆರಂಭವಾಗಿರುವ ಸ್ಯಾಮ್‍ಸಂಗ್ ಕಂಪನಿಯಲ್ಲಿ ಬರೋಬ್ಬರಿ 5.3ಕೋಟಿ ಮೇಡ್ ಇನ್ ಇಂಡಿಯಾ ಹ್ಯಾಂಡ್ ಸೆಟ್ ತಯಾರಾಗಲಿದೆ. ಈ ಮೂಲಕ ಜಗತ್ತಿನ ಅತಿದೊಡ್ಡ ಮೊಬೈಲ್ ಕಂಪನಿಯು ಮೇಡ್ ಇನ್ ಇಂಡಿಯಾದ್ದಾಗಲಿದೆ. 4,915 ಕೋಟಿ ರೂಗಳನ್ನು ಸ್ಯಾಮ್ ಸಂಗ್ ಕಂಪನಿ ಹೂಡಿಕೆ ಮಾಡಿದೆ. ಈ ಎಲ್ಲಾ ಬೆಳವಣಿಗೆಗೆ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುವಂತಾಗಿದ್ದು ಗ್ರಾಹಕರಿಗೂ ಅತೀ ಕಡಿಮೆ ಬೆಲೆಯಲ್ಲಿ ಸಾಮ್‍ಸಂಗ್ ಮೊಬೈಲ್ ಕೈಸೇರುವಂತೆ ಮಾಡಿದ್ದಾರೆ!! ಇದು ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಆಗಿದ್ದು ಭಾರತವೇ ಹೆಮ್ಮೆ ಪಡುವಂತಾಗಿದೆ.

Image result for samsung in noida

ಯುಪಿಎ ಸರಕಾರ ಅಧಿಕಾರದಲ್ಲಿದ್ದ ಸಮಯಲ್ಲಿ ಯಾವುದೇ ಉದ್ಯೋಗ ಸೃಷ್ಟಿ ಮಾಡದೆ ಕೇವಲ ಭಾರತೀಯರನ್ನು ಅವನತಿಯತ್ತ ತಳ್ಳಿಬಿಟ್ಟಿದ್ದರು!! ಆದರೆ ಭಾರತದ ಅತಿ ದೊಡ್ಡ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಮೋದಿ ಸರಕಾರ, ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಜ್ಜಾಗುತ್ತಿದೆ!! ದೇಶದ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ನೀಡುವ ಜೊತೆ ಜೊತೆಗೆ, ಅವರನ್ನು ಸ್ವಾವಲಂಬಿಗಳಾಗಿಸಿ ಸ್ವಂತ ಉದ್ಯಮ ಸ್ಥಾಪಿಸುವಂತೆಯೂ ಪ್ರೇರೇಪಿಸುತ್ತಿದೆ ಮೋದಿ ಸರಕಾರ. ದೇಶದ ಯುವಕ-ಯುವತಿಯರು ಮೋದಿ ಸರಕಾರದ ಈ ಯೋಜನೆಗಳ ಲಾಭವನ್ನು ಪಡೆದು ಭಾರತವನ್ನು ಬಲಿಷ್ಟ ಆರ್ಥಿಕ ಶಕ್ತಿಯಾಗಿ ರೂಪಿಸುವಲ್ಲಿ ಸದುಪಯೋಗ ಪಡೆದುಕೊಳ್ಳಬೇಕು!! ಭಾರತ ವಿಶ್ವ ಮಟ್ಟದಲ್ಲಿ ಹೆಸರು ಪಡೆಯುತ್ತಿದೆ ಎಂದರೆ ನಮ್ಮ ಮೋದಿಜೀಯಿಂದ….

source:
economictimes.indiatimes.com
ಪವಿತ್ರ

Tags

Related Articles

FOR DAILY ALERTS
 
FOR DAILY ALERTS
 
Close