ದೇಶ

ಕಮ್ಯೂನಿಷ್ಟ್ ಲೆನಿನ್ ಗೆ ವಿದಾಯ ಹೇಳಿ ರಾಜ್ಯವನ್ನು ನಿರ್ಮಿಸಿದ ಮಹಾನಾಯಕ ಮಹಾರಾಜ ಬೀರ್ ಬಿಕ್ರಮ್ ಮಾಣಿಕ್ಯನನ್ನು ಆದರದಿಂದ ಬರಮಾಡಿಕೊಂಡ ತ್ರಿಪುರಾ ಸರಕಾರ! ತ್ರಿಪುರಾದಲ್ಲಿ ಬಿಕ್ರಮ್ ಮಾಣಿಕ್ಯರ ಪ್ರತಿಮೆ ಅನಾವರಣ

 

ತ್ರಿಪುರಾದಲ್ಲಿ ಲೆನಿನ್ ನ ಪ್ರತಿಮೆಗಳಿಗೆ ಮಾತ್ರವಲ್ಲ ಆತನ ಸಿದ್ದಾಂತಗಳಿಗೂ ತಿಲಾಂಜಲಿ ಇಡಲಾಗಿದೆ. ರಾಷ್ಟ್ರೀಯವಾದಿ ಚಿಂತನೆಗಳುಳ್ಳ ಸರಕಾರಗಳು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಎನ್ನುವುದಕ್ಕೆ ಉತ್ತರ ಪ್ರದೇಶ-ತ್ರಿಪುರಾಗಳೆ ಸಾಕ್ಷಿ. ಕಾಂಗ್ರೆಸ್ ಮತ್ತು ಕಮ್ಯೂನಿಷ್ಟರ ಆಡಳಿತದ ಕಾಲದಲ್ಲಿ ಮೂಲೆಗುಂಪಾಗಿ ಮೂಕ ರೋದನ ಮಾಡುತ್ತಿದ್ದ ದೇಶದ ಮಹಾನಾಯಕರಿಗೆ ತಡವಾಗಿಯಾದರೂ ಸರಿ ನ್ಯಾಯ ಒದಗಿಸಿಕೊಡಲಾಗುತ್ತಿದೆ.

ತ್ರಿಪುರಾದಲ್ಲಿ ಮಣ್ಣು ಮುಕ್ಕಿದ ಲೆನಿನ್

ಅಕ್ಟೋಬರ್ 16 ರಂದು ತ್ರಿಪುರಾದ ಧರ್ಮನಗರದಲ್ಲಿ,ಮುಖ್ಯಮಂತ್ರಿ ಬಿಪ್ಲಬ್ ದೇಬ್, ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಬಹದ್ದೂರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಮಾಣಿಕ್ಯ ಸಾಮ್ರಾಜ್ಯವು ತ್ರಿಪುರಾ ರಾಜ್ಯವನ್ನು 800 ವರ್ಷಗಳ ಕಾಲ ಆಳ್ವಿಕೆ ಮಾಡಿತ್ತು. ಕಮ್ಯೂನಿಷ್ಟರ ಆಡಳಿತದಲ್ಲಿ ತ್ರಿಪುರಾದ ವಾಸ್ತುಶಿಲ್ಪಿಯಾಗಿದ್ದಂತಹ ಬಿಕ್ರಮ ಮಾಣಿಕ್ಯನನ್ನು ಬದಿಗೆ ಸರಿಸಿ ನರಹಂತಕನಾದಂತಹ, ಭಾರತಕ್ಕೆ ಸಂಬಂಧವೆ ಪಡದ ಲೆನಿನ್ ನ ಪ್ರತಿಮೆಗಳನ್ನು ಅಳವಡಿಸಲಾಗಿತ್ತು.

ಈ ಬಾರಿ ತ್ರಿಪುರಾದಲ್ಲಿ ನಡೆದ ವಿಧಾನಸಭೆಯಲ್ಲಿ ಇಪ್ಪತ್ತೈದು ವರ್ಷಗಳ ಕಮ್ಯೂನಿಷ್ಟ್ ದುರಾಡಳಿತವನ್ನು ಕೊನೆಗಾಣಿಸಿ ಗದ್ದುಗೆ ಏರಿದ್ದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೆ ಲೆನಿನ್ ಪ್ರತಿಮೆಗಳು ಧರಾಶಾಹಿಯಾಗಿ ಮಣ್ಣು ಮುಕ್ಕಿದ್ದವು. ಈಗ ಲೆನಿನ್ ಜಾಗದಲ್ಲಿ ಬಿಕ್ರಮ್ ಮಾಣಿಕ್ಯರ ಪ್ರತಿಮೆ ರಾರಾಜಿಸುತ್ತಿದೆ! ಈ ವರ್ಷದ ಆರಂಭದಲ್ಲಿ, ಅಗರ್ತಲಾ ವಿಮಾನ ನಿಲ್ದಾಣವನ್ನು ತ್ರಿಪುರಾದ ಕೊನೆಯ ರಾಜ ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಬಹದ್ದೂರ್ ಅವರಿಗೆ ಸಮರ್ಪಿಸಿ ನಾಮಕರಣ ಮಾಡಲಾಗುವುದೆಂದು ಘೋಷಣೆ ಮಾಡಿತ್ತು ಬಿಪ್ಲಬ್ ಸರಕಾರ. ಕುತೂಹಲಕರ ವಿಷಯವೆಂದರೆ, ಮುಖ್ಯಮಂತ್ರಿಯವರ ಈ ನಡೆಯನ್ನು ಕಾಂಗ್ರೆಸಿನ ಕಾರ್ಯಕಾರಿ ಅಧ್ಯಕ್ಷ, ಬಿಕ್ರಮ ದೇವನ ವಂಶಸ್ಥ ಪ್ರದ್ಯೋತ್ ಕಿಶೋರ್ ಮಾಣಿಕ್ಯ ಪ್ರಶಂಸಿಸಿದ್ದಾರೆ!

ವಿಧಿ ನೋಡಿ, ಸ್ವತಃ ಬಿಕ್ರಮ ದೇವನ ವಂಶಸ್ಥ, ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷನಿಂದ ಮಾಡಲಾಗದ್ದನ್ನು ಬಿಪ್ಲವ್ ದೇವ್ ಕೆಲವೇ ತಿಂಗಳೊಳಗೆ ಮಾಡಿ ತೋರಿಸಿದರು!! ಈಗಾಲಾದರೂ ಗೊತ್ತಾಯಿತೆ, ದೇಶದ ಬಗ್ಗೆ, ದೇಶದ ಮಹಾನಾಯಕರ ಬಗ್ಗೆ ನಿಜವಾದ ಕಾಳಜಿ ಯಾರಿಗಿದೆ ಎಂದು? ಭಾರತದ ನಿಜ ಇತಿಹಾಸವನ್ನು ತಿಳಿಸುವ ಕೆಲಸಗಳನ್ನು ಬಿಜೆಪಿ ಸರಕಾರಗಳು ಮಾಡುತ್ತಿವೆ ಎನ್ನುವುದನ್ನು ಯಾರಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ.

ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಆಧುನಿಕ ತ್ರಿಪುರದ ವಾಸ್ತುಶಿಲ್ಪಿಯಾಗಿದ್ದಾರೆ, ಮತ್ತು1949 ರಲ್ಲಿ ರಾಜ್ಯವು ಭಾರತದ ಒಕ್ಕೂಟಕ್ಕೆ ಸೇರ್ಪಡೆಗೊಳ್ಳುವ ಮೊದಲು ರಾಜ್ಯದ ಮೊದಲ ವಿಮಾನ ನಿಲ್ದಾಣವನ್ನು ನಿರ್ಮಿಸಿದ ಖ್ಯಾತಿ ಹೊಂದಿದ್ದಾರೆ. ಅವರು ತ್ರಿಪುರಾ ರಾಜ್ಯದಲ್ಲಿ ಭೂ ಸುಧಾರಣೆಗಳ ಪ್ರವರ್ತಕರಾಗಿಯೂ ಗುರುತಿಸಿಕೊಂಡಿದ್ದರು. ಅಂತಹ ಮಹಾನಾಯಕನಿಗೆ ಎಪ್ಪತ್ತು ವರ್ಶಗಳ ಬಳಿಕ ಸಲ್ಲಬೇಕಾದ ಗೌರವ ಸಲ್ಲುತ್ತಿದೆ ಎನ್ನುವುದು ಭಾರತೀಯರಿಗೆ ಸಂತಸದ ವಿಚಾರ

–ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close