ಪ್ರಚಲಿತರಾಜಕೀಯ

ಜಾತಿ ರಾಜಕಾರಣ ಬಿಟ್ಟು ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ಬನ್ನಿ! ಚುನಾವಣಾ ಹೊತ್ತಲ್ಲೇ ವಿಪಕ್ಷಗಳ ಚಳಿ ಬಿಡಿಸಿದ ನಮೋ!

ಪ್ರಧಾನಿ ನರೇಂದ್ರ ಮೋದಿಯವರು ಮಾತಿಗೆ ನಿಂತರು ಎಂದರೆ ಅಲ್ಲಿ ವಿಪಕ್ಷಗಳ ಗ್ರಹಚಾರ ಕೆಟ್ಟಿದೆ ಎಂದೇ ಅರ್ಥ. ಮೋದಿ ತಾನಾಗಿ ಯಾರ ವಿಚಾರವನ್ನು ಮಾತನಾಡುವವರಲ್ಲ, ಆದರೆ ದೇಶದ ವಿಚಾರ ಬಂದಾಗ ಸುಮ್ಮನೆ ಕೂರುವವರೂ ಅಲ್ಲ. ಅದೇ ರೀತಿ ಸದ್ಯ ಲೋಕಸಭಾ ಚುನಾವಣೆ ನಡೆಯುತ್ತಿದ್ದು ಕರ್ನಾಟಕ ಸೇರಿದಂತೆ ಅನೇಕ ಕಡೆಗಳಲ್ಲಿ ಚುನಾವಣೆ ಮುಗಿದಿದೆ. ಉತ್ತರ ಪ್ರದೇಶದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದು ದೇಶದ ಚಿತ್ತ ಉತ್ತರ ಪ್ರದೇಶದತ್ತ ಮೂಡಿದೆ. ಯಾಕೆಂದರೆ ಅತೀ ಹೆಚ್ಚು ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ ಸದ್ಯ ಬಿಜೆಪಿಯ ಪಾಳಯದಲ್ಲಿದ್ದರೂ ಎಸ್‌ಪಿ ಬಿಎಸ್‌ಪಿ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಮಣಿಸಬೇಕು ಎಂದು ತಂತ್ರ ಹೂಡಿದೆ. ಆದರೆ ಇಂದು ಉತ್ತರ ಪ್ರದೇಶದಲ್ಲಿ ಬಹಿರಂಗ ಸಮಾವೇಶದಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ, ರಾಜಕಾರಣ ಮಾಡುವುದಾದರೆ ದೇಶದ ಅಭಿವೃದ್ಧಿಯ ಆಲೋಚನೆ ಇಟ್ಟುಕಂಡು ರಾಜಕಾರಣ ಮಾಡೋಣ ಹೊರತು ಒಬ್ಬನ ಜಾತಿ ಎಳೆದು ತಂದು ರಾಜಕಾರಣ ಮಾಡಬೇಡಿ ಎನ್ನುತ್ತಾ, ಎಸ್‌ಪಿ ಮತ್ತು ಬಿಎಸ್‌ಪಿ ಪಕ್ಷಕ್ಕೆ ನೇರ ಸವಾಲು ಕೂಡ ಹಾಕಿದ್ದಾರೆ.!

ಹೌದು ಇಂದು ಉತ್ತರ ಪ್ರದೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ದೇಶದ ಜನರಿಗೆ ನನ್ನ ಜಾತಿ ಯಾವುದು ಎಂದು ಗೊತ್ತಿಲ್ಲ ಮತ್ತು ಅವರೆಂದೂ ಕೇಳಿಯೂ ಇಲ್ಲ. ಆದರೆ ತಮ್ಮ ರಾಜಕೀಯ ಲಾಭ ಗಿಟ್ಟಿಸಿಕೊಳ್ಳಲು ಕೆಲ ಪಕ್ಷಗಳು ನನ್ನ ಜಾತಿ ಎಳೆದುತಂದು ಕೀಳು ಮಟ್ಟದ ರಾಜಕೀಯ ಮಾಡಬೇಡಿ ಎಂದು ಹೇಳಿದ ಮೋದಿ, ಚರ್ಚೆ ಅಥವಾ ಸವಾಲು ಹಾಕುವುದಿದ್ದರೆ ದೇಶದ ಅಭಿವೃದ್ಧಿ ಬಗ್ಗೆ ಮಾತನಾಡಿ ಅಥವಾ ಭಯೋತ್ಪಾದನೆಯ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಿ ಎಂಬ ವಿಚಾರವಾಗಿ ಮಾತನಾಡೋಣ ಎಂದು ಮೋದಿ ವಿಪಕ್ಷಗಳಿಗೆ ಬಹಿರಂಗ ಸವಾಲು ಹಾಕಿದ್ದಾರೆ.

ಭಯೋತ್ಪಾದಕರು ಭಾರತವನ್ನು ಗುರಿಯಾಗಿಸಿಕೊಂಡಿದ್ದಾರೆ. ನೆರೆಯ ಪಾಕಿಸ್ತಾನದಲ್ಲಿ ಹಲವು ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿದೆ. ಎಸ್​ಪಿ ಮತ್ತು ಬಿಎಸ್​ಪಿ ಬಳಿ ಭಯೋತ್ಪಾದನೆಯನ್ನು ಎದುರಿಸುವ ಯೋಜನೆ ಇದೆಯೇ? ಅವರು ಒಮ್ಮೆಯಾದರೂ ಭಯೋತ್ಪಾದನೆ ಕುರಿತು ಮಾತನಾಡಿದ್ದಾರಾ? ನನ್ನ ವಿರುದ್ಧ ಅವರು ವಾಗ್ದಾಳಿ ಮಾಡುತ್ತಾರೆ ಆದರೆ ಭಯೋತ್ಪಾದನೆ ವಿರುದ್ಧ ಮಾತನಾಡುವುದೇ ಇಲ್ಲ? ಹೀಗೆ ಏಕೆ? ಎಸ್​ಪಿ ಮತ್ತು ಬಿಎಸ್​ಪಿಯ ಮುಖಂಡರು ಭಯೋತ್ಪಾದನೆಗೆ ಹೆದರುತ್ತಾರಾ ಅಥವಾ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರಾ ಎಂಬುದನ್ನು ಸ್ಪಷ್ಟಪಡಿಸಲಿ. ಪ್ರಧಾನಿಯಾಗುವ ಕನಸು ಕಾಣುತ್ತಿರುವವರು ದೇಶವನ್ನು ಬಲಪಡಿಸಲು ಮತ್ತು ನಮ್ಮ ಸೈನಿಕರ ಭದ್ರತೆಗಾಗಿ ರೂಪಿಸಿರುವ ಯೋಜನೆಗಳ ಕುರಿತು ಮಾಹಿತಿ ನೀಡಲಿ ಎಂದು ವಿರೋಧ ಪಕ್ಷಳಿಗೆ ಮೋದಿ ಸವಾಲೆಸೆದರು.

ನಮ್ಮ ಸರಕಾರ ದೇಶದ ಭದ್ರತೆ ಮತ್ತು ಇತರ ಯಾವುದೇ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಸುಭದ್ರ ಆಡಳಿತ ನೀಡಿದೆ ಎಂದು ಮತ್ತೊಮ್ಮೆ ವಿಶ್ವಾಸ ವ್ಯಕ್ಯಪಡಿಸಿದ ಪ್ರಧಾನಿ ಮೋದಿ, ನಾನು ಯಾವತ್ತೂ ನನ್ನ ಜಾತಿಯ ಹೆಸರು ಬಳಸಿಕೊಂಡು ರಾಜಕೀಯ ಮಾಡಿದವನಲ್ಲ, ಆದರೆ ವಿಪಕ್ಷಗಳು ಪದೇ ಪದೇ ನನ್ನ ಜಾತಿಯ ಬಗ್ಗೆ ಟೀಕೆ ಮಾಡುತ್ತವೆ. ಹೌದು ನಾನು ಹಿಂದುಳಿದ ಜಾತಿಯಲ್ಲಿ ಹುಟ್ಟಿರಬಹುದು, ಆದರೆ ದೇಶವನ್ನು ಮುಂದುವರಿಸಲು ಸಾಧ್ಯವಾಗದ ವಿಪಕ್ಷಗಳು ಈಗ ಹಿಂದುಳಿದ ಜಾತಿಯ ಬಗ್ಗೆ ಮಾತನಾಡುವ ಅಧಿಕಾರ ಹೊಂದಿಲ್ಲ ಎಂದು ತಿರುಗೇಟು ನೀಡಿದ್ದಾರೆ.!

ವಿಪಕ್ಷಗಳು ತನ್ನ ಮೇಲೆ ಎಸೆದ ಕಲ್ಲನ್ನೇ ತಾನು ಸಾಗುವ ಹಾದಿಗೆ ಮೆಟ್ಟಿಲುಗಳನ್ನಾಗಿ ಪರಿವರ್ತಿಸುವ ಪ್ರಧಾನಿ ಮೋದಿ, ವಿರೋಧಿಗಳ ಯಾವ ಟೀಕೆಗೂ ಕ್ಯಾರೇ ಅನ್ನದೆ ದೇಶವನ್ನು ವಿಶ್ವಗುರು ಮಾಡಲು ಹೊರಟಿದ್ದಾರೆ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close