ಅಂಕಣದೇಶಪ್ರಚಲಿತ

ಬದ್ಧ ಶತ್ರು ರಾಷ್ಟ್ರವಾಗಿದ್ದ ಪ್ಯಾಲೆಸ್ತೇನ್ – ಇಸ್ರೇಲ್ ಮೋದಿಯಿಂದ ಸ್ನೇಹಿತರಾಗುತ್ತಿದ್ದಾರಾ..?! ಯಶಸ್ವಿಯಾದ ಮೋದಿಯ ಮತ್ತೊಂದು ರಾಜತಾಂತ್ರಿಕ ನಡೆ!!

ನರೇಂದ್ರ ಮೋದಿಯೇ ಹೀಗೆ. ತಾವೇನೇ ಮಾಡಿದರು ಅದರಲ್ಲಿ ನಾನಾ ರೀತಿಯ ವಿಶೇಷತೆಗಳು ಇರುತ್ತವೆ. ಇಡೀ ಜಗತ್ತೇ ಇಂದು ಭಾರತದ ಪ್ರಧಾನಿಯೊಬ್ಬರಿಗೆ ಈ ರೀತಿಯ ಗೌರವ ನೀಡುತ್ತಿದೆ ಎಂದರೆ ಭಾರತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ನಮಗೆ ತಿಳಿಯುತ್ತದೆ. ಅಧಿಕಾರ ಸ್ವೀಕರಿಸಿದ ದಿನದಿಂದ ಈವರೆಗೆ ಒಂದೇ ಒಂದು ವೈಯಕ್ತಿಕ ರಜೆ‌ ಪಡೆಯದೆ ಇಳಿ ವಯಸ್ಸಿನ ತರುಣರಂತೆ ದೇಶಕ್ಕಾಗಿ ದುಡಿಯುತ್ತಿರುವ ನರೇಂದ್ರ ಮೋದಿಗೆ ಮೋದಿಯೇ ಸಾಟಿ..!

ಹೌದು ಹೇಳುತ್ತಾ ಹೋದಂತೆ ಈ ಮಹಾನ್ ವ್ಯಕ್ತಿಯ ಬಗ್ಗೆ ಇನ್ನಷ್ಟು ಮತ್ತಷ್ಟು ಮಾತುಗಳು ಬರೆಯುತ್ತಲೇ ಹೋಗಬೇಕಾಗುತ್ತದೆ. ಯಾಕೆಂದರೆ ನರೇಂದ್ರ ಮೋದಿ ಭಾರತದ ಪ್ರಧಾನಿ ಆಗುತ್ತಲೇ ಇಡೀ ಜಗತ್ತಿನ ಜೊತೆ ಸ್ನೇಹ ಬೆಳೆಸಲು ನಾನಾ ಕಾರ್ಯಗಳನ್ನು ಮಾಡುತ್ತಲೇ ಇದ್ದಾರೆ. ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ನೋಡಿ
ಈಗಾಗಲೇ ಜಗತ್ತಿನ ಎಲ್ಲಾ ರಾಷ್ಟ್ರಗಳು ಭಾರತದ ಜೊತೆ ಸ್ನೇಹ ಸಂಬಂಧ ಬೆಳೆಸಲು ಹಾತೊರೆಯುತ್ತಿವೆ.

ಇತ್ತೀಚೆಗೆ ವಿದೇಶ ಪ್ರವಾಸ ಕೈಗೊಂಡಿದ್ದ ನರೇಂದ್ರ ಮೋದಿ ಮತ್ತೊಂದು ವಿಶೇಷ ಸಾಧನೆ ಮಾಡಿ ಭಾರತಕ್ಕೆ ವಾಪಾಸಾಗಿದ್ದಾರೆ. ನರೇಂದ್ರ ಮೋದಿಯವರ ಈ ಸಾಧನೆಗೆ ಇಂದು ಇಡೀ ವಿಶ್ವವೇ ನಿಬ್ಬೆರಗಾಗಿದೆ.

ಐತಿಹಾಸಿಕ ಭೇಟಿಗೆ ಸಾಕ್ಷಿಯಾದ  ಪ್ಯಾಲೆಸ್ತೇನ್..!

ಹೌದು ಸ್ವತಂತ್ರ ಭಾರತದ ಇತಿಹಾಸದಲ್ಲೇ  ಪ್ಯಾಲೆಸ್ತೇನ್ ದೇಶಕ್ಕೆ ಭಾರತದ ಯಾವೊಬ್ಬ ಪ್ರಧಾನಿಯೂ ಕಾಲಿಟ್ಟಿರಲಿಲ್ಲ. ಪ್ಯಾಲೆಸ್ತೇನ್ ಒಂದು ಪುಟ್ಟ ದೇಶ ಆಗಿರುವುದರಿಂದ ಜಗತ್ತಿನ ಎಲ್ಲಾ ರಾಷ್ಟ್ರಗಳು ತಾತ್ಸಾರದಿಂದಲೇ ನೋಡುತ್ತಾ ಬಂದಿವೆ. ಆದರೆ ಮೋದಿ ಪ್ಯಾಲೆಸ್ತೇನ್ ಗೆ ಭೇಟಿ ನೀಡಿ ಹೊಸ ಇತಿಹಾಸ ನಿರ್ಮಿಸಿದ್ದಾರೆ..!

ಯಾಕೆಂದರೆ ಭಾರತದ ಯಾವೊಬ್ಬ ಪ್ರಧಾನಿಯೂ  ಪ್ಯಾಲೆಸ್ತೇನ್ ಗೆ ಈವರೆಗೆ ಭೇಟಿ ನೀಡಲಿಲ್ಲ. ಈ ದೇಶದ ಜೊತೆಗೆ ಯಾವುದೇ ಸಂಬಂಧ ಬೆಳೆಸಿಕೊಂಡಿರಲಿಲ್ಲ. ಆದರೆ ನರೇಂದ್ರ ಮೋದಿಯವರು ಈ ರಾಷ್ಟ್ರಕ್ಕೆ ಭೇಟಿ ನೀಡಿ ಮಹತ್ತರವಾದ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಭಾರತ ಮತ್ತು ಪ್ಯಾಲೆಸ್ತೇನ್ ದೇಶದ ಸ್ನೇಹಕ್ಕೆ ಹೊಸ ಅಡಿಪಾಯ ಹಾಕಿದ್ದಾರೆ.

ಹೊಸ ಇತಿಹಾಸ ನಿರ್ಮಿಸಿದ ಮೋದಿ ಭೇಟಿ..!

ಹೌದು ನರೇಂದ್ರ ಮೋದಿಯವರು ಪ್ಯಾಲೆಸ್ತೇನ್ ಭೇಟಿ ಕೇವಲ ಎರಡು ದೇಶಗಳ ಸಂಬಂಧ ಬೆಳೆಸಿರುವುದು ಮಾತ್ರವಲ್ಲದೆ ಮತ್ತೊಂದು ದೇಶವನ್ನು ತಮ್ಮ ಜೊತೆ ಸೇರಿಸಿಕೊಂಡಿದೆ. ಆ ದೇಶವೇ ಇಸ್ರೇಲ್ ಎಂಬ ಮತ್ತೊಂದು ಪುಟ್ಟ ದೇಶ..!

ಪ್ಯಾಲೆಸ್ತೇನ್ ಮತ್ತು ಇಸ್ರೇಲ್ ಈವರೆಗೆ ಪರಸ್ಪರ ವೈಮನಸ್ಸು ಹೊಂದಿರುವ ರಾಷ್ಟ್ರಗಳು. ! ಒಬ್ಬರನ್ನು ಕಂಡರೆ ಇನ್ನೊಬ್ಬರು ಉರಿದು ಬೀಳುವಂತಹ ದ್ವೇಷ ಈ ಎರಡೂ ದೇಶಗಳ ಮಧ್ಯೆ ಇತ್ತು. ಆದರೆ ಮೋದಿಯವರ ಒಂದೇ ಭೇಟಿಗೆ ಈ ಎರಡೂ ರಾಷ್ಟ್ರಗಳು ಜೊತೆಯಾಗಿವೆ..!

ಪ್ಯಾಲೆಸ್ತೇನ್ ಪ್ರವಾಸದಲ್ಲಿದ್ದ ನರೇಂದ್ರ ಮೋದಿ ಮೊದಲಿಗೆ ಜೋರ್ಡಾನ್ ಗೆ ತೆರಳಿದ್ದರು. ಜೋರ್ಡಾನ್ ನಿಂದ ನೇರವಾಗಿ
ಪ್ಯಾಲೆಸ್ತೇನ್ ಗೆ ಹೋಗುವ ಮೂಲಕ ವೈಮನಸ್ಸು ಹೊಂದಿರುವ ಎರಡೂ ರಾಷ್ಟ್ರಗಳನ್ನು ಮತ್ತೆ ಒಂದಾಗುವಂತೆ ಮಾಡಿದ್ದಾರೆ. ಪ್ಯಾಲೆಸ್ತೇನ್ ನ‌ ರಾಮಲ್ಲಾ ತಲುಪಿದ ನರೇಂದ್ರ ಮೋದಿಯವರ ಪ್ರವಾಸ ಇತಿಹಾಸದ ಪುಟಗಳಲ್ಲಿ ಬಲು ಅಪರೂಪದ ಕ್ಷಣ ಎನಿಸಿಕೊಂಡಿದೆ.

ನರೇಂದ್ರ ಮೋದಿಯವರಿಗೆ ಜೋರ್ಡಾನ್ ಸರಕಾರ ವಿಶೇಷ ಚಾಪರ್ ಗಳನ್ನು ಸಿದ್ದ ಪಡಿಸಿತ್ತು. ಈ ಚಾಪರ್ ಗಳಿಗೆ ಆಕಾಶದಲ್ಲೇ ಭದ್ರತೆಗಾಗಿ ನಿಂತಿದ್ದು ಮಾತ್ರ ಇಸ್ರೇಲ್ ಸೇನೆ..!

ಹೌದು, ಈ ಮಾತು ಕೇಳುವಾಗಲೇ ಮೈ ರೋಮಾಂಚನಗೊಳ್ಳುತ್ತದೆ. ಇಡೀ ವಿಶ್ವವೇ ಮೆಚ್ಚಿದ ನಾಯಕನಿಗೆ ಇಸ್ರೇಲ್ ಸೇನೆ ಬಹಳ ವಿಶೇಷವಾಗಿ ಭದ್ರತೆ ಒದಗಿಸುವ ಮೂಲಕ ನರೇಂದ್ರ ಮೋದಿಯವರಿಗೆ ಗೌರವ ಸಲ್ಲಿಸಿದ್ದಾರೆ.
ಇಸ್ರೇಲ್ ಎಂಬ ಪುಟ್ಟ ರಾಷ್ಟ್ರ ಭಾರತ ಮತ್ತು ನರೇಂದ್ರ ಮೋದಿಯವರನ್ನು ಎಷ್ಟು ಪ್ರೀತಿಸುತ್ತದೆ ಎಂಬುವುದಕ್ಕೆ ಈ ಘಟನೆಯೇ ಉದಾಹರಣೆ.

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸುಮಾರು 150 ಕಿಲೋಮೀಟರ್ ಜೋರ್ಡಾನ್ ನಿಂದ  ಪ್ಯಾಲೆಸ್ತೇನ್ ಯಾತ್ರೆಯ ಸಂಪೂರ್ಣ ಭದ್ರತೆಯನ್ನು ಇಸ್ರೇಲ್ ವಾಯುಸೇನೆಯೇ ವಹಿಸಿಕೊಂಡಿತ್ತು ಎಂಬೂದೇ ವಿಶೇಷ. ಈ ಮೂಲಕ ಭಾರತ ಮತ್ತು  ಪ್ಯಾಲೆಸ್ತೇನ್ ಅಧಿಕಾರಿಗಳನ್ನು ಒಪ್ಪಿಸಿ ತಮ್ಮ ಗೆಳೆಯ ಭಾರತದ ಪ್ರಧಾನಿಯ ರಕ್ಷಣೆಯನ್ನು ಸಂಪೂರ್ಣವಾಗಿ ನಿರ್ವಹಿಸಿದೆ.

ನರೇಂದ್ರ ಮೋದಿ ಎಲ್ಲಿಗೇ ಹೋದರು ವಿಶೇಷ ಭದ್ರತೆ ವಹಿಸಲಾಗುತ್ತದೆ. ಅದೇ ಕಾರಣಕ್ಕಾಗಿ ಇಸ್ರೇಲ್ ವಾಯುಸೇನೆ ಪ್ರಧಾನಿ ನರೇಂದ್ರ ಮೋದಿಯವರ ಆಗಸ ಯಾತ್ರೆಗೆ ರಕ್ಷಣಾ ಕವಚ ಒದಗಿಸಿ ಭಾರತದ ಮನಗೆದ್ದಿದೆ..!

ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಇಸ್ರೇಲ್ ನ ಈ ನಡೆ ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ. ತನ್ನ ಶತ್ರು ರಾಷ್ಟ್ರಕ್ಕೆ ಭಾರತದ ಪ್ರಧಾನಿ ಮೋದಿಯವರು ಹೋಗುತ್ತಿದ್ದಾರೆ ಎಂಬೂದು ತಿಳಿದಿದ್ದರು , ಮೋದಿಯವರ ರಕ್ಷಣೆಗೆ ತಮ್ಮ ಸೇನೆ ತಾಯಾರಾಗಿದೆ ಎಂದು ತೋರಿಸಿ ಕೊಟ್ಟಿದ್ದಾರೆ.

ಪ್ಯಾಲೆಸ್ತೇನ್ – ಇಸ್ರೇಲ್ ಮಧ್ಯೆ ಸೇತುವೆಯಾದ ಮೋದಿ..!

ನರೇಂದ್ರ ಮೋದಿಯವರು  ಪ್ಯಾಲೆಸ್ತೇನ್ ಗೆ ಭೇಟಿ ನೀಡುವ ಪ್ರಯಾಣದ ರಕ್ಷಣೆಗೆ ಧಾವಿಸಿದ ಇಸ್ರೇಲ್ ಇಂದು ಇಡೀ ಭಾರತೀಯರ ಹ್ರದಯ ಮಾತ್ರವಲ್ಲದೆ ತನ್ನ ಶತ್ರು ರಾಷ್ಟ್ರ ಪ್ಯಾಲೆಸ್ಟೈನ್ ನ ಜೊತೆಯೂ ಸ್ನೇಹ ಬೆಳೆಸುವ ಮುನ್ಸೂಚನೆ ನೀಡಿದೆ.

ಪ್ಯಾಲೆಸ್ತೇನ್ ಅಧ್ಯಕ್ಷರಾದ ಮಹಮ್ಮದ್ ಅಬ್ಬಾಸ , ಪ್ರಧಾನಿ ಮೋದಿಯವರಿಗೆ ‘ಗ್ರ್ಯಾಂಡ್ ಕಾಲರ್ ಆಫ್
ಪ್ಯಾಲೆಸ್ತೇನ್ ಎನ್ನುವ ಪ್ರಶಸ್ತಿ ನೀಡಿ ಗೌರವಿಸಿದೆ. ಜಗತ್ತಿನ ಪ್ರಮುಖ ನಾಯಕರಿಗೆ ನೀಡುವ ವಿಶೇಷ ಗೌರವ ಪ್ರಶಸ್ತಿ ಇದಾಗಿದ್ದು , ಭಾರತದ ಪ್ರಧಾನಿಗೆ ಈ ಪ್ರಶಸ್ತಿ ನೀಡಿದ್ದು, ಶತ್ರು ರಾಷ್ಟ್ರಗಳಿಗೆ ನಡುಕ ಉಂಟು ಮಾಡಿದೆ ಎಂದರೆ ತಪ್ಪಾಗದು..!

ನರೇಂದ್ರ ಮೋದಿಯವರ ರಾಜತಾಂತ್ರಿಕ ನೀತಿಗೆ ಚೀನಾದಂತಹ ಬಲಿಷ್ಠ ರಾಷ್ಟ್ರಗಳೇ ಇಂದು ಶರಣಾಗುತ್ತಿವೆ. ಏಷ್ಯಾದ ರಾಷ್ಟ್ರಗಳ ಪೈಕಿ ನರೇಂದ್ರ ಮೋದಿಯೇ ಅಗ್ರ ಸ್ಥಾನದಲ್ಲಿದ್ದು ಜಗತ್ತಿನ ಇತರ ರಾಷ್ಟ್ರಗಳು ನರೇಂದ್ರ ಮೋದಿಯವರನ್ನು ಓಲೈಸುವುದಕ್ಕಾಗಿ ಪೈಪೋಟಿ ನಡೆಸುತ್ತಿವೆ.

ಏನೇ ಹೇಳಿ, ನರೇಂದ್ರ ಮೋದಿಯಂತಹ ಬಲಿಷ್ಠ ನಾಯಕನ ಮುಂದೆ ಇಂದು ಇಡೀ ಜಗತ್ತೇ ತಲೆ ಬಾಗುತ್ತಿದೆ ಎಂದರೆ ಇದು ಭಾರತೀಯರಾದ ನಮಗೆಲ್ಲರಿಗೂ ಹೆಮ್ಮೆಯ ವಿಷಯವಲ್ಲವೇ..?

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close